ಧಾರವಾಡ ಜಿಲ್ಲೆ ಮೊರಬ ಗ್ರಾಮದಲ್ಲಿ ಪುರಾತನ ಕಾಲದಿಂದಲೂ 4 ಮಠಗಳುಅಸ್ತಿತ್ವದಲ್ಲಿದ್ದು ಪುರಾತನ ವೀರಶೈವ ಕೇಂದ್ರವಾಗಿದೆ. ಆದರೆ ಕಾಲಕ್ರಮೇಣ ಶ್ರೀ ಜಡೆಮಠದಲ್ಲಿ ಮಾತ್ರ ಗುರುಗಳಿದ್ದು ಉಳಿದ 3 ಮಠಗಳಲ್ಲಿ ಗುರುಗಳಿಲ್ಲದೇ ಗದ್ದುಗೆ ಪೂಜೆಗಷ್ಟೇಸೀಮಿತಗೊಂಡಿವೆ. ಶ್ರೀ ಜಡೆಮಠವು ಪುರಾತನವಾದರೂ ಕಾಲಮಾನದ ಬಗ್ಗೆ ಸ್ಪಷ್ಟತೆಯಿಲ್ಲ.ಪೂಜ್ಯ ಶ್ರೀ ಜಡೆ ಶಿವಯೋಗಿಗಳನ್ನು ಶ್ರೀಮಠದ ಕರ್ತೃಗುರುಗಳೆಂದು ಗುರುತಿಸಲಾಗಿದ್ದುಶ್ರೀಮಠವು ಶ್ರೀ ಕಾಶಿ ಪೀಠದ ಶಾಖಾಮಠವಾಗಿ ಪುತ್ರವರ್ಗದ ಪರಂಪರೆಯಲ್ಲಿ ಬೆಳೆದುಬಂದಿದೆ. ಶ್ರೀ ಜಡೆ ಶಿವಯೋಗಿಗಳು ಮಹಾ ತಪಸ್ವಿಗಳಾಗಿದ್ದು ತಮ್ಮ ಅನುಷ್ಠಾನಾದಿಗಳಿಂದಅಪಾರ ಸಾಧನೆ ಮಾಡಿದ್ದು ಇವರ ಪ್ರಭಾವಕ್ಕೆ ಒಳಗಾದ ಭಕ್ತರು ಮಠಕ್ಕೆ ದಾನದತ್ತಿಗಳನ್ನುನೀಡಿ ಮಠವನ್ನು ಬೆಳೆಸಿದ್ದಾರೆಂದು ತಿಳಿದು ಬರುತ್ತದೆ. ಆದರೆ ಕರ್ತೃಗುರುಗಳ ನಂತರದಪರಂಪರೆಯ ಬಗ್ಗೆ ನಿಖರವಾದ ಮಾಹಿತಿಗಳು ಲಭ್ಯವಿಲ್ಲ. ಬಹುಶಃ ಶ್ರೀಮಠವು ದೀರ್ಘಸಮಯಗಳ ಕಾಲ ಆಗಾಗ್ಗೆ ಖಾಲಿ ಉಳಿದಿರುವ ಕಾರಣ ದಾಖಲೆಗಳ ಅಲಭ್ಯತೆ ಇದೆ.ಶ್ರೀಮಠದ ಹಿಂದಿನ ಗುರುಗಳಾದ ಶ್ರೀ ಷ.ಬ್ರ. ಗಂಗಾದರ ಶಿವಾಚಾರ್ಯ ಸ್ವಾಮಿಗಳಿಂದಾಗಿ ಶ್ರೀಮಠವು ಪ್ರಸಿದ್ಧಿಗೆ ಬಂದಿದೆ. ಶ್ರೀಗಳು ಕನ್ನಡ, ಸಂಸ್ಕøತ ಹಾಗೂ ಪ್ರಾಕೃತ ಭಾಷೆಗಳಲ್ಲಿ ಅಪಾರ ಪಾಂಡಿತ್ಯ ಪಡೆದು ಅನೇಕ ಸಾಹಿತ್ಯ ರಚನೆಗಳನ್ನು ರಚಿಸಿದ್ದರು. ಶ್ರೀಗಳು’ಬಾಲಬೃಹಸ್ಪತಿ’, ‘ಕವಿವರ’ ಎಂಬ ಬಿರುದುಗಳಿಂದ ಪ್ರಖ್ಯಾತಿ ಪಡೆದಿದ್ದು “ಉಜ್ಜಯಿನಿಜಗದ್ಗುರು ಶ್ರೀ ಸಿದ್ದಲಿಂಗೇಶ್ವರ ಪುರಾಣ’ ‘ಶ್ರೀ ರಂಭಾಪುರಿ ಜಗದ್ಗುರು ಶ್ರೀ ಶಿವಾನಂದವಿಜಯ’ ‘ಭಗವತ್ಪ್ರೇಮ’ ‘ಶ್ರೀ ಸಂಗಮೇಶ್ವರ ಚರಿತ್ರೆ’ ಮುಂತಾದ ಪುರಾಣಗಳನ್ನುರಚಿಸಿದ್ದರು. ಹಾಗೂ ‘ಕನ್ನಡ ನ್ಯಾಯ ಶತಕ’ ಮತ್ತು ‘ಮಾಯಾಗರ್ವಭಂಗ’ ಎಂಬನಾಟಕಗಳನ್ನು ರಚಿಸಿದ್ದರು. ಹೀಗೆ ತಮ್ಮ ಧಾರ್ಮಿಕ, ಸಾಮಾಜಿಕ ಹಾಗೂ ಸಾಹಿತ್ಯಿಕಸಾಧನೆಗಳ ಮೂಲಕ ಶ್ರೀಗಳು ಪ್ರಖ್ಯಾತಿ ಪಡೆದಿದ್ದರು.ಪ್ರಸ್ತುತ ಶ್ರೀ ಷ.ಬ್ರ. ಸೋಮಶೇಖರ ಶಿವಾಚಾರ್ಯರು ಶ್ರೀಮಠದ ಅಧಿಕಾರವಹಿಸಿಕೊಂಡು ಶ್ರೀಮಠವನ್ನು ಮುನ್ನಡೆಸುತ್ತಿದ್ದು ಹಿಂದಿನ ಶ್ರೀಗಳ ಹಾದಿಯಲ್ಲಿಯೇಸಾಗುತ್ತಿದ್ದಾರೆ. ಶ್ರೀಗಳು ಎಡೆಯೂರಿನಲ್ಲಿ ಸಂಸ್ಕøತ, ವೇದಾಧ್ಯಯನ ಮಾಡಿದ್ದು ಭಕ್ತರಲ್ಲಿಧಾರ್ಮಿಕ ಪ್ರಜ್ಞೆಯನ್ನು ಮೂಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ಸೋಮಶೇಖರ ಶಿವಾಚಾರ್ಯ ಸ್ವಾಮಿಗಳು
Date of Birth :
1974
Photo :
Programs
ಪ್ರತಿ ಅಮವಾಸ್ಯೆ ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ.
ಪ್ರತಿ ಹಬ್ಬ ಹರಿದಿನಗಳ ಆಚರಣೆ. ಧಾರವಾಡ ವರ್ಷದ ಕಾರ್ಯಕ್ರಮಗಳು
Institutions
ಸಂಸ್ಕøತ ವೇದ ಪಾಠಶಾಲೆ
Photos
Full Address Kannada
ಶ್ರೀ ಜಡೆಮಠ
ಮೊರಬ - 580 112.
ನವಲಗುಂದ ತಾ||, ಧಾರವಾಡ ಜಿ||