Shree Viraktamatha, Samshi

Shree Viraktamatha, Samshi Claimed

ಶ್ರೀ ವಿರಕ್ತಮಠ, ಸಂಶಿ

Average Reviews

Description

ಶ್ರೀ ವಿರಕ್ತಮಠ, ಸಂಶಿ

ಕರ್ತೃ ಪೂಜ್ಯ ಶ್ರೀ ಶಿವಪೂಜಪ್ಪ ಶಿವಯೋಗಿಗಳು

ಧಾರವಾಡ ಜಿಲ್ಲೆ ಕುಂದಗೋಳ ಪಟ್ಟಣದಿಂದ 15 ಕಿ.ಮೀ. ದೂರದಲ್ಲಿರುವ ಸಂಶಿಗ್ರಾಮದ ಮಧ್ಯಭಾಗದಲ್ಲಿ ಅಸ್ತಿತ್ವದಲ್ಲಿರುವ ಶ್ರೀ ವಿರಕ್ತಮಠವು ತನ್ನ ಧಾರ್ಮಿಕ ಹಾಗೂಸಾಮಾಜಿಕ ಕಾರ್ಯಕ್ರಮಗಳ ಮೂಲಕ ಪ್ರಚಲಿತದಲ್ಲಿದೆ. ಶ್ರೀಮಠದ ಕರ್ತೃಗುರುಗಳೆಂದುಪೂಜ್ಯ ಶ್ರೀ ಶಿವಪೂಜಪ್ಪ ಶಿವಯೋಗಿಗಳನ್ನು ಗುರುತಿಸಲಾಗಿದೆಯಾದರೂ ಶ್ರೀಮಠದಸ್ಥಾಪಿತ ಕಾಲಮಾನದ ಬಗ್ಗೆ ತಿಳಿದುಬರುವುದಿಲ್ಲ.ಕರ್ತೃಗುರುಗಳು ತಪೋನಿಷ್ಠರಾಗಿದ್ದು ಸಂಚಾರದಲ್ಲಿ ಅಲ್ಲಲ್ಲಿ ಅನುಷ್ಠಾನಕೈಗೊಂಡು ಆ ಭಾಗದ ಭಕ್ತರಲ್ಲಿ ಧಾರ್ಮಿಕ ಅರಿವನ್ನು ಮೂಡಿಸುತ್ತಾ ಮುಂದುವರೆಯುತ್ತಿದ್ದರು. ಹೀಗೆ ಸಂಚಾರದಲ್ಲಿ ಸಂಶಿ ಗ್ರಾಮಕ್ಕೆ ಆಗಮಿಸಿದ ಶ್ರೀಗಳು ಭಕ್ತರ ಪ್ರೀತಿಪೂರ್ವಕಒತ್ತಾಯಕ್ಕೆ ಮಣಿದು ಅವರ ಸಹಕಾರದೊಂದಿಗೆ ಶ್ರೀ ವಿರಕ್ತಮಠವನ್ನು ಸ್ಥಾಪಿಸಿ ಭಕ್ತರಶ್ರೇಯೋಭಿವೃದ್ಧಿಗೆ ಶ್ರಮಿಸಿದರು.ಕರ್ತೃಗುರುಗಳು ಹಾಗೂ ಪರಂಪರೆಯ ಬಗ್ಗೆ ದಾಖಲೆಗಳನ್ನು ದಾಖಲಿಸಿಡದೇಇರುವುದರಿಂದ ಶ್ರೀಮಠದ ಪರಂಪರೆಯ ಬಗ್ಗೆ ನಿಖರತೆಯಿಲ್ಲ. ಗದ್ದುಗೆಗಳ ಆಧಾರದಮೇಲೆ ಈಗಿನ ಶ್ರೀಗಳನ್ನು ಐದನೇ ಶ್ರೀಗಳೆಂದು ಗುರುತಿಸಬಹುದು. ಕರ್ತೃಗುರುಗಳನಂತರ ಅಧಿಕಾರ ನಡೆಸಿದ ಶ್ರೀಗಳನ್ನು ಶ್ರೀ ಅನ್ನದಾನ ಸ್ವಾಮಿಗಳು, ಶ್ರೀ ದೊಡ್ಡ ಚನ್ನಬಸವಸ್ವಾಮಿಗಳು, ಶ್ರೀ ಚನ್ನಬಸವ ಸ್ವಾಮಿಗಳು ಎಂದು ಗುರುತಿಸಲಾಗಿದೆ.ಶ್ರೀಮಠವು ಈಗಿನ ಗುರುಗಳ ಆಗಮನಕ್ಕಿಂತಲೂ ಮುಂಚೆ ಬಹುಕಾಲ ಖಾಲಿಉಳಿದಂತೆ ತೋರುತ್ತಿದ್ದು ಅಲ್ಲಲ್ಲಿ ಜೀರ್ಣಗೊಂಡಿತ್ತು. ಭಕ್ತರು ಪುರಾತನ ಪರಂಪರೆಯಶ್ರೀಮಠವು ನಶಿಸಿ ಹೋಗಬಾರದೆಂದು ಶ್ರೀ ಮ.ನಿ.ಪ್ರ. ಚನ್ನಬಸವ ಸ್ವಾಮಿಗಳನ್ನು ಅಧಿಕಾರಕ್ಕೆತಂದಿದ್ದಾರೆ. ಶ್ರೀಗಳು ಕ್ರಿಯಾಶೀಲರಾಗಿದ್ದು ಶ್ರೀಮಠವನ್ನು ಜೀರ್ಣೋದ್ಧಾರಗೊಳಿಸಿ ಭಕ್ತರಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದು ಶ್ರೀಮಠದ ಜಮೀನನ್ನು ಅಭಿವೃದ್ಧಿಗೊಳಿಸಿ ಆದಾಯಮೂಲವನ್ನಾಗಿ ಪರಿವರ್ತಿಸಿದ್ದಾರೆ. ಶ್ರೀಗಳು ಸ್ವತಃ ಈ ಸುತ್ತಮುತ್ತಲಿನ ಜನರ ಆರೋಗ್ಯಸಮಸ್ಯೆಗಳಿಗೆ ಆಯುರ್ವೇದ ಔಷಧಿಯನ್ನು ನೀಡುತ್ತಾ ಹಳ್ಳಿ ವೈದ್ಯರಾಗಿ ಹೆಸರು ಗಳಿಸಿದ್ದಾರೆ.

Swamiji

Swamiji Name :
ಮ.ನಿ.ಪ್ರ. ಶ್ರೀ ಚನ್ನಬಸವ ಸ್ವಾಮಿಗಳು
Date of Birth :
2-2-1971
Place :
ಸಂಶಿ, ಕುಂದಗೋಳ ತಾ||
Photo :

Programs

ಬಸವ ಜಯಂತಿಯಂದು ವಿಶೇಷ ಕಾರ್ಯಕ್ರಮಗಳು.
ಕಾರ್ತೀಕ ಮಾಸದಲ್ಲಿ ದೀಪೋತ್ಸವ.

Photos

Full Address Kannada

ಶ್ರೀ ವಿರಕ್ತಮಠ ಸಂಶಿ - 581 117
ಕುಂದಗೋಳ ತಾ||, ಧಾರವಾಡ ಜಿ||

Map

Near by Places

ಕುಂದಗೋಳ - 15 ಕಿ.ಮೀ.
ಹುಬ್ಬಳ್ಳಿ - 35 ಕಿ.ಮೀ.
ಲಕ್ಷ್ಮೇಶ್ವರ - 25 ಕಿ.ಮೀ.
ಧಾರವಾಡ - 55 ಕಿ.ಮೀ.

Statistic

46 Views
0 Rating
0 Favorite
0 Share
error: Content is protected !!