ಧಾರವಾಡ ಜಿಲ್ಲೆ ಸಂಶಿ ಗ್ರಾಮದಲ್ಲಿ ಅಸ್ತಿತ್ವದಲ್ಲಿರುವ ಶ್ರೀ ಫಕೀರೇಶ್ವರಸಂಸ್ಥಾನಮಠವು ಶಿರಹಟ್ಟಿಯ ಶ್ರೀ ಜಗದ್ಗುರು ಫಕೀರೇಶ್ವರ ಸಂಸ್ಥಾನ ಮಠದ ಶಾಖಾಮಠವಾಗಿ ಬೆಳೆದು ಬಂದಿದ್ದು ಭಾವೈಕ್ಯತೆಯ ಸಂದೇಶವನ್ನು ಸಾರುತ್ತಿದೆ. ಶ್ರೀಮಠವು ಶಿರಹಟ್ಟಿಯಗುರುಗಳ ನೇರ ಆಡಳಿತಕ್ಕೆ ಒಳಪಟ್ಟಿದ್ದು ಶ್ರೀಮಠದ 12ನೇ ಗುರುಗಳಾದ ಶ್ರೀ ಫಕೀರೇಶ್ವರರಕಾಲದಲ್ಲಿ ಸರ್ವತೋಮುಖವಾಗಿ ಅಭಿವೃದ್ಧಿ ಕಂಡಿದೆ.ಕರ್ತೃಗುರುಗಳಾದ ಜಗದ್ಗುರು ಶ್ರೀ ಫಕೀರೇಶ್ವರರು ವೀರಶೈವ ದಂಪತಿಗಳಮಗನಾಗಿ ಜನಿಸಿ ದರ್ಗಾದ ಖಾಜಿಗಳ ಬಳಿ ಬೆಳೆದು ವೀರಶೈವ, ಮುಸಲ್ಮಾನ ಎರಡೂಸಂಸ್ಕಾರಗಳನ್ನು ಪಡೆದವರು. ಚಿತ್ರದುರ್ಗದಲ್ಲಿ ಕೆಲಕಾಲ ನೆಲೆನಿಂತು ಗುರುಗಳ ಸೇವೆಗೈದಿದ್ದಶ್ರೀಗಳು ವೀರಶೈವ ಧರ್ಮ ಹಾಗೂ ಬಸವಾದಿ ಶರಣರ ರಚನೆಗಳ ಆಳ ಅರಿವನ್ನುಬಲ್ಲವರಾಗಿದ್ದರು. ಮುಂದೆ ಸರ್ವಧರ್ಮ ಸಮನ್ವತೆಯನ್ನು ಸಾರುತ್ತಾ ಸಂಶಿಗೆ ಆಗಮಿಸಿದಶ್ರೀಗಳು ಅಂಧಕಾರದಲ್ಲಿದ್ದ ಭಕ್ತರನ್ನು ಜ್ಞಾನದ ದೀವಿಗೆಯ ಮೂಲಕ ಬೆಳಕಿಗೆ ತಂದರು.ಸಂಶಿಯಿಂದ ಮತ್ತೆ ಸಂಚಾರ ಹೊರಟು ಶಿರಹಟ್ಟಿಯಲ್ಲಿ ಸ್ಥಾವರಗೊಂಡ ಶ್ರೀಗಳುತಮ್ಮ ವಿಶಿಷ್ಟ ಆಚರಣೆಗಳ ಮೂಲಕ ಸರ್ವಧರ್ಮ ಸಮನ್ವತೆಯ ಹರಿಕಾರರೆನಿಸಿದರು. ಇತ್ತಸಂಶಿ ಗ್ರಾಮಸ್ಥರು ಶ್ರೀಗಳ ತೋರುಗದ್ದುಗೆ ಸ್ಥಾಪಿಸಿ ನಿತ್ಯ ಪೂಜೆ ನಡೆಸುತ್ತಾ ಬಂದಿದ್ದುಮುಂದೆ ಶ್ರೀಮಠವು ಶಿರಹಟ್ಟಿ ಮಠದ ಶಾಖಾಮಠವಾಗಿ ಗುರುತಿಸಿಕೊಂಡಿತು.ಶ್ರೀಮಠದ 12ನೇ ಗುರುಗಳಾದ ಶ್ರೀ ಫಕೀರೇಶ್ವರ ಮಹಾಸ್ವಾಮಿಗಳು ಶಿರಹಟ್ಟಿಮಠದ ಜೊತೆಯಲ್ಲಿ ಶ್ರೀಮಠದ ಕಡೆಗೂ ಹೆಚ್ಚು ಗಮನ ನೀಡಿ ಮುಂಚೂಣಿಗೆ ತಂದರು.ಸದಾ ಸಂಶಿ ಭಕ್ತರ ಸಂಪರ್ಕದಲ್ಲಿದ್ದ ಶ್ರೀಗಳು ಶಿರಹಟ್ಟಿ ಮಠಕ್ಕೆ ಉತ್ತರಾಧಿಕಾರಿಗಳನ್ನಾಗಿ ಶ್ರೀಫಕೀರೇಶ್ವರ ಸಿದ್ದರಾಮ ಸ್ವಾಮಿಗಳನ್ನು ಪಟ್ಟಕ್ಕೆ ತಂದು ತಾವು ಸಂಶಿಯ ಮಠದಲ್ಲಿ ತಮ್ಮವಿಶ್ರಾಂತ ಜೀವನವನ್ನು ಕಳೆದುದು ಗಮನಾರ್ಹ.ಪ್ರಸ್ತುತ ಶಿರಹಟ್ಟಿ ಮಠದ ಈಗಿನ ಶ್ರೀಗಳಾದ ಶ್ರೀ ಮ.ನಿ.ಜ. ಫಕೀರ ಸಿದ್ದರಾಮಮಹಾಸ್ವಾಮಿಗಳು ಎರಡೂ ಮಠಗಳನ್ನು ಸರ್ವತೋಮುಖವಾಗಿ ಅಭಿವೃದ್ಧಿಗೊಳಿಸುತ್ತಿದ್ದುಭಕ್ತರ ಪ್ರೀತಿಗೆ ಪಾತ್ರರಾಗಿದ್ದಾರೆ.
Swamiji
Swamiji Name :
ಮ.ನಿ.ಜ. ಶ್ರೀ ಫಕೀರ ಸಿದ್ದರಾಮ ಮಹಾಸ್ವಾಮಿಗಳು
Date of Birth :
1-2-1948
Place :
ತೆಲಸಂಗ, ಅಥಣಿ ತಾ||
Pattadikara :
1988
Photo :
Programs
ಪ್ರತಿ ಅಮವಾಸ್ಯೆಗೆ ವಿಶೇಷ ಪೂಜೆ.
ಚೈತ್ರ ಮಾಸದಲ್ಲಿ ಶ್ರೀಮಠದ ಜಾತ್ರೆ ಶ್ರಾವಣ ಮಾಸದಲ್ಲಿ ನಿತ್ಯ ಪುರಾಣ ಮತ್ತು ಕೊನೆಯ ದಿನ ಅಡ್ಡ ಪಲ್ಲಕ್ಕಿ ಉತ್ಸವ ಹಾಗೂ ಕಾರ್ಯಕ್ರಮಗಳು.
Institutions
ಕಿರಿಯ / ಹಿರಿಯ ಪ್ರಾಥಮಿಕ ಶಾಲೆ
Photos
Full Address Kannada
ಶ್ರೀ ಫಕೀರೇಶ್ವರ ಸಂಸ್ಥಾನ ಮಠ
ಸಂಶಿ - 581 117
ಕುಂದಗೋಳ ತಾ||, ಧಾರವಾಡ ಜಿ||