ಕುಂದಗೋಳ ಪಟ್ಟಣದ ಲಕ್ಷ್ಮೇಶ್ವರ ರಸ್ತೆಯ ಕೆರೆಯ ಪಕ್ಕದಲ್ಲಿ ಅಸ್ತಿತ್ವದಲ್ಲಿರುವ ಶ್ರೀಬಸವಣ್ಣಜ್ಜ ಕಲ್ಯಾಣಪೂರ ಮಠವು ಈಗ್ಗೆ 43 ವರ್ಷಗಳ ಹಿಂದೆ 1972ರಲ್ಲಿ ಸ್ಥಾಪಿತಗೊಂಡಿದ್ದು ಶ್ರೀಮಠದ ಕರ್ತೃಗುರುಗಳು ಶ್ರೀ ಬಸವಣ್ಣಜ್ಜ ಕಲ್ಯಾಣಪೂರರವರು.ನವಲಗುಂದ ತಾಲ್ಲೂಕಿನ ಹೆಬಸೂರು ಗ್ರಾಮದ ಲಕ್ಷ್ಮವ್ವ ತಾಯಿಯವರು ಸ್ವಾತಂತ್ರ್ಯಹೋರಾಟಗಾರರು. ಮುಂದೆ ಕುಂದಗೋಳದ ಮಲ್ಲಪ್ಪನವರ ಧರ್ಮಪತ್ನಿಯಾಗಿ ಸಂಸಾರಬಂಧನಕ್ಕೆ ಕಾಲಿಟ್ಟ ತಾಯಿಯವರು ತಮ್ಮ 50ನೇ ವಯಸ್ಸಿನಲ್ಲಿ ಸಂಸಾರ ಬಂಧನದಿಂದಮುಕ್ತಿ ಹೊಂದಿ ಬಸವಣ್ಣನ ಮೂರ್ತಿ ಸ್ಥಾಪಿಸಿ ಭಕ್ತರ ಸಹಕಾರದೊಂದಿಗೆ ಗುಡಿಯನ್ನು ಕಟ್ಟಿಈ ಕ್ಷೇತ್ರವನ್ನು ಸುಕ್ಷೇತ್ರವನ್ನಾಗಿಸಿದರು. ನಂತರ ಭಕ್ತರು ಲಕ್ಷ್ಮವ್ವ ತಾಯಿಯವರನ್ನೇಕಲ್ಯಾಣಪೂರದ ಶ್ರೀ ಬಸವಣ್ಣಜ್ಜನವರು ಎಂದು ಸಂಬೋಧಿಸತೊಡಗಿದರು.ಶ್ರೀ ಬಸವಣ್ಣಜ್ಜನವರದು ಸರಳ ವ್ಯಕ್ತಿತ್ವ. ಹರಕುಬಟ್ಟೆ, ಮುರುಕು ರೊಟ್ಟಿ ಬೇಡಿತಂದು ಹಂಚಿ ತಿನ್ನಬೇಕೆಂದೂ, ಎಲ್ಲಕ್ಕಿಂತ ಭಕ್ತಿಯೇ ಮೇಲೆಂದು ಸಾರಿದ ಮಹಿಮರು.ಭಕ್ತರಿಗಾಗಿ ಕಲ್ಯಾಣಮಂಟಪ ಕಟ್ಟಿಸಿ ಉಚಿತವಾಗಿ ಬಡವರ ಕಾರ್ಯಕ್ರಮಗಳಿಗೆ ನೀಡಿದರು.ಐದು ವಿದ್ಯಾರ್ಥಿಗಳಿಂದ ಸ್ಥಾಪಿತಗೊಂಡ ಉಚಿತ ವಿದ್ಯಾರ್ಥಿನಿಲಯ ಇಂದು ಐವತ್ತುವಿದ್ಯಾರ್ಥಿಗಳವರೆಗೆ ತಲುಪಿದೆ. ಅಜ್ಜನವರು ದೇಣಿಗೆ ಬಂದ ಗೋವು, ಹೋರಿ ಇನ್ನಿತರಜಾನುವಾರುಗಳನ್ನು ಜೋಪಾನ ಮಾಡುವ ಬಡವರಿಗೆ ದಾಸೋಹ ರೂಪದಲ್ಲಿ ನೀಡಿ ಅವರಬದುಕನ್ನು ಹಸನುಗೊಳಿಸಿದರು. ಅಕ್ಕನ ಬಳಗ ಸ್ಥಾಪಿಸಿ ಸ್ತ್ರೀಯರಲ್ಲಿ ಸಂಘಟನೆಯಅರಿವನ್ನು ಮೂಡಿಸಿದ ಅಜ್ಜನವರು 2012ರ ಜೂನ್ 10ರಲ್ಲಿ ಲಿಂಗೈಕ್ಯರಾದರು.ಅಜ್ಜನವರು ತಾವಿರುವಾಗಲೇ ತಮ್ಮದೇ ವಿದ್ಯಾರ್ಥಿನಿಲಯದ ವಿದ್ಯಾರ್ಥಿಯಾಗಿಸೇವೆ ಮಾಡಿಕೊಂಡಿದ್ದ ಬಸಯ್ಯ ಮಣ್ಣೂರು ಮಠ ಅವರಿಗೆ ಶ್ರೀ ಬಸಯ್ಯ ಅಜ್ಜನವರೆಂದುನಾಮಕರಣ ಮಾಡಿ ಶ್ರೀಮಠದ ಜವಾಬ್ದಾರಿ ನೀಡಿದ್ದರು. ಶ್ರೀ ಬಸಯ್ಯ ಅಜ್ಜನವರೂಗುರುಗಳ ಆಜ್ಞೆಯನ್ನು ಪಾಲಿಸುತ್ತಾ ಅವರ ಆಶೀರ್ವಾದದಿಂದ ಶ್ರೀಮಠವನ್ನು ಅಭಿವೃದ್ಧಿಯೆಡೆಗೆ ಮುನ್ನಡೆಸಿದ್ದು ಭಕ್ತರಲ್ಲಿ ಗುರುಗಳ ತತ್ವಗಳನ್ನು ಬಿತ್ತರಿಸುತ್ತಾ ಸಾಮಾಜಿಕ ಮೌಲ್ಯದಅರಿವನ್ನು ಮೂಡಿಸುತ್ತಿದ್ದಾರೆ.
Swamiji
Swamiji Name :
ಪೂಜ್ಯ ಶ್ರೀ ಬಸಯ್ಯ ಅಜ್ಜನವರು
Date of Birth :
5-7-1983
Place :
ಕೂಡ್ಲ, ಹಾನಗಲ್ ತಾ||
Pattadikara :
7-3-2011
Photo :
Programs
ಪ್ರತಿ ತಿಂಗಳ ಎರಡನೇ ಸೋಮವಾರ ಮನೆಯಲ್ಲಿ ಮಹಾಮನೆ ಮತ್ತು ಸಾಮೂಹಿಕ ಕಾರ್ಯಕ್ರಮ.
ಪ್ರತಿ ಹುಣ್ಣಿಮೆಗೆ ಶರಣ ಚಿಂತನಗೋಷ್ಠಿ.
ಬಸವ ಜಯಂತಿ ಆಚರಣೆ, ಕಾಯಿ ಉಡಿ ತುಂಬುವ ಕಾರ್ಯಕ್ರಮ ಮತ್ತು ಸಾಮೂಹಿಕ ವಿವಾಹಗಳು. ಭರತ ಹುಣ್ಣಿಮೆಗೆ ಶ್ರೀಮಠದ ರಥೋತ್ಸವ.
ಶ್ರಾವಣ ಮಾಸದಲ್ಲಿ ದೀಕ್ಷ ಅಯ್ಯಚಾರ, ನಿತ್ಯ ಪ್ರವಚನ, ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು.
ಜುಲೈ 29ಕ್ಕೆ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ.
ಅಧಿಕ ಮಾಸದಲ್ಲಿ ಕುಂಭಮೇಳ ಹಾಗೂ 108 ಗುರುಗಳಿಗೆ ಪಾದಪೂಜೆ.
Institutions
ಉಚಿತ ವಿದ್ಯಾರ್ಥಿ ನಿಲಯ.
Photos
Full Address Kannada
ಶ್ರೀ ಬಸವಣ್ಣಜ್ಜನವರ ಕಲ್ಯಾಣಪೂರ ಮಠ
ಹರಭಟ್ ಹೈಸ್ಕೂಲ್ ಹಿಂಭಾಗ,
ಕುಂದಗೋಳ - 581 113, ಧಾರವಾಡ ಜಿ||