Shree Panchgraha Hirematha, Kundagol

Shree Panchgraha Hirematha, Kundagol Claimed

ಶ್ರೀ ಪಂಚಗ್ರಹ ಹಿರೇಮಠ, ಕುಂದಗೋಳ

Average Reviews

Description

ಶ್ರೀ ಪಂಚಗ್ರಹ ಹಿರೇಮಠ, ಕುಂದಗೋಳ

ಕರ್ತೃ ಪೂಜ್ಯ ಶ್ರೀ ಶಿತಿಕಂಠೇಶ್ವರ ಮಹಾಸ್ವಾಮಿಗಳು

ನರಗುಂದ, ನವಿಲಗುಂದ, ಕುಂದಗೋಳ, ಅಮ್ಮಿನಭಾವಿ ಹಾಗೂ ಸುಳ್ಳಗಳಲ್ಲಿಒಟ್ಟು ಐದು ಮುಖ್ಯ ಮಠಗಳನ್ನು ಸ್ಥಾಪಿಸಲಾಗಿ ಈ ಮಠಗಳಿಗೆ ಪಂಚಗ್ರಹ ಹಿರೇಮಠಗಳೆಂದು ಹೆಸರು ಬಂದಿದ್ದು ಅವುಗಳಲ್ಲಿ ಕುಂದಗೋಳದ ಶ್ರೀ ಪಂಚಗ್ರಹ ಹಿರೇಮಠವುಒಂದಾಗಿದೆ. ಶ್ರೀಮದ್ ಕಾಶಿ ಪೀಠದ ಶಾಖಾಮಠವಾಗಿರುವ ಶ್ರೀಮಠವನ್ನು ಪೂಜ್ಯ ಶ್ರೀಶಿತಿಕಂಠೇಶ್ವರ ಮಹಾಸ್ವಾಮಿಗಳು ಕ್ರಿ.ಶ. 1517ರಲ್ಲಿ ಸ್ಥಾಪಿಸಿದ್ದಾರೆಂದು ತಿಳಿದುಬರುತ್ತದೆ.ಶ್ರೀ ಶಿತಿಕಂಠೇಶ್ವರರು ತಪೋನುಷ್ಠಾನಿಗಳಾಗಿದ್ದು ತಮ್ಮ ಅನುಷ್ಠಾನ ಬಲದಿಂದ,ಆಚರಣೆಗಳ ಮೂಲಕ ಅಪಾರ ಭಕ್ತಬಳಗವನ್ನು ಸಂಪಾದಿಸಿಕೊಂಡಿದ್ದರು. ಇವರ ಧಾರ್ಮಿಕಹಾಗೂ ಸಾಮಾಜಿಕ ಕಾರ್ಯಕ್ರಮಗಳ ಬಗ್ಗೆ ಕೇಳಿ ತಿಳಿದಿದ್ದ ಬಿಜಾಪುರದ ಆದಿಲ್ಶಾಹಿಯುಶ್ರೀಮಠಕ್ಕೆ ಆಗಮಿಸಿ ಗುರುಗಳ ಆಶೀರ್ವಾದ ಪಡೆದು 96 ಎಕರೆ ಭೂಮಿಯನ್ನು ಇನಾಂನೀಡಿ ಗೌರವಿಸಿದ್ದನೆಂದು ತಿಳಿದುಬರುತ್ತದೆ.ಶ್ರೀಮಠದಲ್ಲಿ ಮೊದಲು ಸ್ಥಿರ ಮತ್ತು ಚರ ಪಟ್ಟಾದ್ಯಕ್ಷರೆಂಬ ಇಬ್ಬರು ಪಟ್ಟಾಧ್ಯಕ್ಷರುಅಧಿಕಾರ ನಡೆಸುತ್ತಿದ್ದು ಕ್ರಮೇಣ ಶ್ರೀ ಗುರುಪಾದ ಶಿವಾಚಾರ್ಯರ ಕಾಲದಿಂದ ಒಬ್ಬರೇಗುರುಗಳು ಅಧಿಕಾರಕ್ಕೆ ಬರುವ ಸಂಪ್ರದಾಯ ಪ್ರಾರಂಭವಾಯಿತು. ಹಿಂದಿನ ಗುರುಗಳಾದಶ್ರೀ ಸಿದ್ದಲಿಂಗೇಶ್ವರ ಶಿವಾಚಾರ್ಯರು ಪ್ರಕಾಂಡ ಪಂಡಿತರಾಗಿದ್ದು ‘ಪುರಾಣ ಕಂಠೀರವ’ಹಾಗೂ ‘ಪ್ರವಚನಾಚಾರ್ಯ’ ಎಂಬ ಬಿರುದುಗಳಿಂದ ಗೌರವಿಸಲ್ಪಟ್ಟಿದ್ದು ಇವರಪ್ರವಚನಗಳಿಗೆ ಅಪಾರ ಜನಸ್ತೋಮ ಸೇರುತ್ತಿತ್ತೆಂದು ತಿಳಿದುಬರುತ್ತದೆ.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಶಿತಿಕಂಠೇಶ್ವರ ಶಿವಾಚಾರ್ಯರು 1997ರ ಫೆಬ್ರವರಿ17 ರಂದು ತಮ್ಮ 17ನೇ ವಯಸ್ಸಿನಲ್ಲಿಯೇ ಶ್ರೀಮಠದ ಪಟ್ಟಾಧಿಕಾರವನ್ನು ಸ್ವೀಕರಿಸಿಪರಂಪರೆಯ ಹಾದಿಯಲ್ಲಿ ಶ್ರೀಮಠವನ್ನು ಸರ್ವತೋಮುಖವಾಗಿ ಅಭಿವೃದ್ಧಿಗೊಳಿಸುವತ್ತಮುನ್ನಡೆಸಿದ್ದಾರೆ. ಶ್ರೀಗಳು ಕಾಶಿಯಲ್ಲಿ ಸಂಸ್ಕøತ ಹಾಗೂ ವೇದಾಧ್ಯಯನ ಪೂರೈಸಿದ್ದುವಾಸ್ತು ಶಾಸ್ತ್ರ ಹಾಗೂ ಜ್ಯೋತಿಷ್ಯ ಶಾಸ್ತ್ರಗಳಲ್ಲಿ ಪ್ರಾವೀಣ್ಯತೆಯನ್ನು ಪಡೆದಿದ್ದಾರೆ. ಶ್ರೀಗಳುಶ್ರೀಮಠದ ಸರ್ವಾಂಗೀಣ ಅಭಿವೃದ್ಧಿಗೆ ಯೋಜನೆ ರೂಪಿಸಿಕೊಂಡು ಆ ನಿಟ್ಟಿನಲ್ಲಿಕಾರ್ಯೋನ್ಮುಖರಾಗಿದ್ದಾರೆ.

Swamiji

Photo :

Programs

ಪ್ರತಿ ಅಮವಾಸ್ಯೆಗೆ ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ.
ಮಹಾಶಿವರಾತ್ರಿಗೆ ಜಾಗರಣೆ, ವಿಶೇಷ ಪೂಜೆ.
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ,
ಪುರಾಣ ಪ್ರವಚನ ಹಾಗೂ ಕೊನೆಯ ದಿನ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ.

Photos

Full Address Kannada

ಶ್ರೀ ಪಂಚಗ್ರಹ ಹಿರೇಮಠ
ಕುಂದಗೋಳ - 581 113
ಧಾರವಾಡ ಜಿ||

Map

Near by Places

ಹುಬ್ಬಳ್ಳಿ - 20 ಕಿ.ಮೀ.
ಲಕ್ಷ್ಮೇಶ್ವರ - 30 ಕಿ.ಮೀ.
ಧಾರವಾಡ - 40 ಕಿ.ಮೀ.

Statistic

161 Views
0 Rating
0 Favorite
0 Share
error: Content is protected !!