Shree Hirematha, Byahatti

Shree Hirematha, Byahatti Claimed

ಶ್ರೀ ಹಿರೇಮಠ, ಬ್ಯಾಹಟ್ಟಿ

Average Reviews

Description

ಶ್ರೀ ಹಿರೇಮಠ, ಬ್ಯಾಹಟ್ಟಿ

ಕರ್ತೃ ಲಿಂ. ಶ್ರೀಗುರು ಜಟಾಧಾರಿ ಮಹಾಸ್ವಾಮಿಗಳು

ಕಲಘಟಗಿ ತಾಲ್ಲೂಕಿನ ಬಿ. ಹುಲಿಕಟ್ಟಿ ಗ್ರಾಮದ ಹೊರಭಾಗದ ಗುಡ್ಡದ ಮೇಲೆಅಸ್ತಿತ್ವದಲ್ಲಿರುವ ಶ್ರೀ ಶೈಲೇಶ್ವರ ಮಠವು ತನ್ನ ಧಾರ್ಮಿಕ ಆಚರಣೆಗಳ ಮೂಲಕ ಈಭಾಗದಲ್ಲಿ ಧಾರ್ಮಿಕ ವಾತಾವರಣವನ್ನು ನೆಲೆಗೊಳಿಸಿದೆ. ಶ್ರೀಮದ್ ರಂಭಾಪುರಿ ಪೀಠದಶಾಖಾಮಠವಾಗಿ ಪಂಚಪೀಠಗಳ ಪರಂಪರೆಯನ್ನು ಅನುಸರಿಸಿಕೊಂಡು ಬರುತ್ತಿರುವ ಶ್ರೀಶೈಲೇಶ್ವರ ಮಠದ ಕರ್ತೃಗುರುಗಳು ಪೂಜ್ಯ ಶ್ರೀ ಗುರು ಜಟಾಧಾರಿ ಮಹಾಸ್ವಾಮಿಗಳು.ಸುಮಾರು 100 ವರ್ಷಗಳ ಹಿಂದೆ ಜೀವಿಸಿದ್ದ ಶ್ರೀ ಜಟಾಧಾರಿ ಮಹಾಸ್ವಾಮಿಗಳುಸಂಚಾರದಲ್ಲಿ ಬಿ.ಹುಲಿಕಟ್ಟಿ ಗ್ರಾಮದ ಹೊರವಲಯದಲ್ಲಿ ನೆಲೆನಿಂತು ಏಕಾಂತವಾಗಿತಪೋನುಷ್ಠಾನದಲ್ಲಿದ್ದರು. ಒಮ್ಮೆ ಭಕ್ತರನ್ನು ಕರೆದು ಸಮೀಪದ ಗುಡ್ಡವನ್ನು ಅಗೆಯಿರಿ ಅಲ್ಲಿಪರಮಾತ್ಮನಿದ್ದಾನೆ ಎಂದು ನುಡಿದು ಕ್ಷೇತ್ರ ಯಾತ್ರೆಗೆ ತೆರಳಿದರು. ಇತ್ತ ಗುರುಗಳುಹೇಳಿದಂತೆ ಭಕ್ತರು ಗುಡ್ಡವನ್ನು ಅಗೆಯುತ್ತಾ ಹೋದರು. ಆಶ್ಚರ್ಯವೆಂಬಂತೆ ಒಂದುಶಿವಲಿಂಗ ಅಲ್ಲಿ ದೊರೆಯಲಾಗಿ ಆ ಶಿವಲಿಂಗಕ್ಕೆ ಗುರುಗಳು ಶೈಲೇಶ್ವರ ಲಿಂಗವೆಂದು ಮತ್ತುಆ ಗುಡ್ಡಕ್ಕೆ ಶೈಲೇಶ್ವರ ತಪೋಭೂಮಿಯೆಂದು ಕರೆದರೆಂಬ ಪ್ರತೀತಿ ಇದೆ.ಹೀಗೆ ಪ್ರಾರಂಭವಾದ ಶ್ರೀ ಶೈಲೇಶ್ವರ ಮಠಕ್ಕೆ ಕರ್ತೃಗಳ ನಂತರ ಬಂದವರುಹಿಂದಿನ ಗುರುಗಳಾದ ಲಿಂ. ಶ್ರೀ ಶೇಷಾಚಾರ್ಯ ಮಹಾಸ್ವಾಮಿಗಳು. ಶ್ರೀಗಳು ವಾಕ್ಸಿದ್ಧಿಪುರುಷರಾಗಿದ್ದು ತಮ್ಮ ಪ್ರವಚನಗಳ ಮೂಲಕ ಪ್ರಸಿದ್ಧಿಗೊಂಡಿದ್ದರು. ಹಾಗೂ ಪ್ರಕೃತಿಪ್ರೇಮಿಗಳಾಗಿದ್ದ ಶ್ರೀಗಳು ಮಠದ ಸುತ್ತಮುತ್ತಲಲ್ಲಿ ವನಸಿರಿಯನ್ನು ಬೆಳೆಸಿ ಮಠವನ್ನುಶಾಂತಿವನವನ್ನಾಗಿ ಪರಿವರ್ತಿಸಿದರು. ಶ್ರೀಗಳು ಶ್ರೀಮಠದ ಜತೆಗೆ ಕುಂದಗೋಳತಾಲ್ಲೂಕಿನ ಜಿಗಳೂರು ಗ್ರಾಮದಲ್ಲೂ ನೆಲೆಸಿ ಭಕ್ತರನ್ನು ಸನ್ಮಾರ್ಗದಲ್ಲಿ ಮುನ್ನಡೆಸಿದ್ದರು.ಪ್ರಸ್ತುತ ಶ್ರೀ ಷ.ಬ್ರ. ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು 2002ರಮಾರ್ಚ್ 15ರಂದು ಶ್ರೀಮಠದ ಪಟ್ಟಾಧಿಕಾರ ಸ್ವೀಕರಿಸಿ ಶ್ರೀಮಠವನ್ನು ಮುನ್ನಡೆಸುತ್ತಿದ್ದುಸರ್ವಧರ್ಮ ಸಮನ್ವತೆಯ ತಾಣವನ್ನಾಗಿ ಪರಿವರ್ತಿಸಿದ್ದಾರೆ. ಶ್ರೀಮಠದ ರಥೋತ್ಸವವುಮಹಾಶಿವರಾತ್ರಿ ಅಮವಾಸ್ಯೆಗೆ ಜರುಗುತ್ತಿದ್ದು ಶ್ರಾವಣ ಮಾಸದಲ್ಲಿ ಶ್ರೀಗಳಶಿವಪೂಜಾನುಷ್ಠಾನ ಜಾರಿಯಲ್ಲಿರುತ್ತದೆ.

Swamiji

Swamiji Name :
ಶ್ರೀ ಷ.ಬ್ರ. ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು
Date of Birth :
5-6-1977
Place :
ಸನವಳ್ಳಿ, ಮುಂಡಗೋಡು ತಾ||
Pattadikara :
15-3-2002
Photo :

Programs

ಪ್ರತಿ ಅಮವಾಸ್ಯೆಗೆ ರುದ್ರಾಭಿಷೇಕ.
ಮಹಾಶಿವರಾತ್ರಿ ಅಮವಾಸ್ಯೆಗೆ ರಥೋತ್ಸವ, ಜಾಗರಣೆ ಮತ್ತು ಪ್ರವಚನ.
ಹೊಸ್ತಿಲ ಹುಣ್ಣಿಮೆಗೆ ಶ್ರೀ ಹಿರಿಯಗುರುಗಳ ಪುಣ್ಯಾರಾಧನೆ ಮತ್ತು ದೀಪೋತ್ಸವ.
ಶ್ರಾವಣಮಾಸದಲ್ಲಿ ಶ್ರೀಗಳಿಂದ ಶಿವಪೂಜಾನುಷ್ಠಾನ.

Photos

Full Address Kannada

ಶ್ರೀ ಶೈಲೇಶ್ವರ ಮಠ ಬಿ. ಹುಲಿಕಟ್ಟಿ,
ಟಿ.ಹೊನ್ನಾಳಿ ಪೋಸ್ಟ್ ಕಲಘಟಗಿ
ತಾ||, ಧಾರವಾಡ ಜಿ||

Map

Near by Places

ತಡಸ್ ಕ್ರಾಸ್ - 8 ಕಿ.ಮೀ.
ಕಲಘಟಗಿ - 14 ಕಿ.ಮೀ.
ಹುಬ್ಬಳ್ಳಿ - 30 ಕಿ.ಮೀ.

Statistic

4 Views
0 Rating
0 Favorite
0 Share
error: Content is protected !!