ನರಗುಂದ, ನವಿಲಗುಂದ, ಅಮ್ಮೀನಭಾವಿ, ಕುಂದಗೋಳ ಹಾಗೂ ಸುಳ್ಳಗಳಲ್ಲಿಒಟ್ಟು ಐದು ಮುಖ್ಯ ಮಠಗಳು ಸ್ಥಾಪಿತಗೊಂಡಿದ್ದರಿಂದ ಈ ಐದು ಮಠಗಳಿಗೆ ಪಂಚಗ್ರಹಹಿರೇಮಠಗಳೆಂದು ಹೆಸರು ಬಂದಿತೆಂದು ಹೇಳಲಾಗಿದೆ. ಹುಬ್ಬಳ್ಳಿ ತಾಲ್ಲೂಕಿನ ಸುಳ್ಳಗ್ರಾಮದಲ್ಲಿ ಸ್ಥಾಪಿತಗೊಂಡಿರುವ ಶ್ರೀ ಪಂಚಗ್ರಹ ಹಿರೇಮಠವು ಶ್ರೀಮದ್ ರಂಭಾಪುರಿಪೀಠದ ಶಾಖಾ ಮಠವಾಗಿದ್ದು ಶ್ರೀಮಠದ ಕರ್ತೃಗುರುಗಳು ಪೂಜ್ಯ ಶ್ರೀ ಸಿದ್ಧರಾಮಶಿವಾಚಾರ್ಯ ಮಹಾಸ್ವಾಮಿಗಳು.ಕರ್ತೃಗುರುಗಳು ತಮ್ಮ ಆಚರಣೆಗಳ ಮೂಲಕ ಹಾಗೂ ತಪೋನುಷ್ಠಾನಗಳಮೂಲಕ ಈ ಭಾಗದಲ್ಲಿ ಹೆಸರಾಗಿದ್ದು ಶ್ರೀಮಠವನ್ನು ಸ್ಥಾಪಿಸಿ ಅಭಿವೃದ್ಧಿಪಡಿಸಿದರೆಂದುತಿಳಿದುಬರುತ್ತದೆ. ಆದರೆ ಇವರ ಕುರಿತಾಗಲೀ, ನಂತರದ ಪರಂಪರೆಯ ಗುರುಗಳಕುರಿತಾಗಲೀ ಹೆಚ್ಚಿನ ದಾಖಲೆಗಳು ಲಭ್ಯವಿಲ್ಲ. ಬಹುಶಃ ಪರಂಪರೆಯ ಬಹುತೇಕ ಗುರುಗಳುಕರ್ತೃಗಳ ಹೆಸರನ್ನೇ ಅಭಿದಾನ ಪಡೆದು ಅಧಿಕಾರಕ್ಕೆ ಬಂದಿರುವುದು ಇದಕ್ಕೆ ಕಾರಣವಾಗಿದೆ.ಪರಂಪರೆಯಲ್ಲಿ ಮುಖ್ಯವಾಗಿ ಕೇಳಿಬರುವ 1998ರಲ್ಲಿ ಲಿಂಗೈಕ್ಯರಾದ ಶ್ರೀ ಷ.ಬ್ರ.ಸಿದ್ದರಾಮ ಶಿವಾಚಾರ್ಯ ಸ್ವಾಮಿಗಳ ನಂತರದ ಪರಂಪರೆಯ ಬಗ್ಗೆ ತಿಳಿದುಬರುತ್ತದೆ.ಶ್ರೀಗಳು ಅಪಾರ ಭಕ್ತ ಬಳಗವನ್ನು ಹೊಂದಿ ಶ್ರೀಮಠವನ್ನು ಅಭಿವೃದ್ಧಿಪಥದತ್ತಕೊಂಡೊಯ್ದಿರುವುದು ಕಂಡುಬರುತ್ತದೆ. ಇವರಿರುವಾಗಲೇ 1985ರಲ್ಲಿ ಪಟ್ಟಾಧಿಕಾರದಅನುಗ್ರಹ ಪಡೆದಿದ್ದ ಶ್ರೀ ಷ.ಬ್ರ. ಅಭಿನವ ಸಿದ್ದರಾಮ ಶಿವಾಚಾರ್ಯ ಸ್ವಾಮಿಗಳು ಶ್ರೀಗಳಐಕ್ಯಾನಂತರ ಒಂದು ದಶಕ ಕಾಲ ಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸಿ ಅಭಿವೃದ್ಧಿಪಡಿಸಿದ್ದರು.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಶಿವಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮಿಗಳು2013ರ ಸೆಪ್ಟೆಂಬರ್ 8 ರಂದು ಶ್ರೀಮಠದ ಪಟ್ಟಾಧಿಕಾರ ಸ್ವೀಕರಿಸಿದ್ದು ಪರಂಪರೆಯಹಾದಿಯಲ್ಲಿ ಶ್ರೀಮಠವನ್ನು ಮುನ್ನಡೆಸುತ್ತಿದ್ದಾರೆ. ಶ್ರೀಮಠದಲ್ಲಿ ಶ್ರಾವಣ ಮಾಸದ ನಿತ್ಯಧಾರ್ಮಿಕ ಆಚರಣೆಗಳೊಂದಿಗೆ ಪುರಾಣ ಪ್ರವಚನಗಳು ನಡೆಯುತ್ತಿದ್ದು ಮಹಾನವಮಿಹಾಗೂ ಕಾರ್ತೀಕ ಮಾಸಗಳಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ.
Swamiji
Swamiji Name :
ಶ್ರೀ ಷ.ಬ್ರ. ಶಿವಸಿದ್ದರಾಮೇಶ್ವರ ಶಿವಾಚಾರ್ಯ
Date of Birth :
18-10-1958
Place :
ಹೂಲಿ, ಸವದತ್ತಿ ತಾ||
Pattadikara :
8-9-2013
Photo :
Programs
ಪ್ರತಿ ಅಮವಾಸ್ಯೆಗೆ ರುದ್ರಾಭಿಷೇಕ.
ಶ್ರಾವಣ ಮಾಸದಲ್ಲಿ ನಿತ್ಯ ಪುರಾಣ ಪ್ರವಚನ ಹಾಗೂ ಕಾರ್ಯಕ್ರಮಗಳು.
ಮಹಾನವಮಿಗೆ ನಿತ್ಯ ಕಾರ್ಯಕ್ರಮಗಳು.
ಕಾರ್ತೀಕ ಮಾಸದಲ್ಲಿ ಅಮವಾಸ್ಯೆಗೆ ದೀಪೋತ್ಸವ.
Photos
Full Address Kannada
ಶ್ರೀ ಪಂಚಗ್ರಹ ಹಿರೇಮಠ
ಸುಳ್ಳ - 580 023 ಹುಬ್ಬಳ್ಳಿ
ತಾ||, ಧಾರವಾಡ ಜಿ||