Shree Revana Siddeshwara Samsthana Viraktamatha

Shree Revana Siddeshwara Samsthana Viraktamatha Claimed

ಶ್ರೀ ರೇವಣ ಸಿದ್ದೇಶ್ವರ ಸಂಸ್ಥಾನ ವಿರಕ್ತಮಠ

Average Reviews

Description

ಶ್ರೀ ರೇವಣ ಸಿದ್ದೇಶ್ವರ ಸಂಸ್ಥಾನ ವಿರಕ್ತಮಠ

ಕರ್ತೃ ಶ್ರೀ ಮ.ನಿ.ಪ್ರ. ರೇವಣಸಿದ್ದ ಶಿವಯೋಗಿಗಳು

ಹುಬ್ಬಳ್ಳಿ ನಗರದಿಂದ ಕೇವಲ 5 ಕಿ.ಮೀ. ದೂರದಲ್ಲಿರುವ ರಾಯನಾಳ ಗ್ರಾಮದಲ್ಲಿಅಸ್ತಿತ್ವದಲ್ಲಿರುವ ಪುರಾತನ ಶ್ರೀ ರೇವಣಸಿದ್ದೇಶ್ವರ ಸಂಸ್ಥಾನ ವಿರಕ್ತಮಠವು ತನ್ನ ಪುರಾತನಪರಂಪರೆ ಹಾಗೂ ಕಾರ್ಯಕ್ರಮಗಳ ಮೂಲಕ ಈ ಭಾಗದಲ್ಲಿ ಹೆಚ್ಚು ಪ್ರಚಲಿತದಲ್ಲಿದೆ. ಶ್ರೀಮಠದ ಕರ್ತೃಗುರುಗಳೆಂದು ಶ್ರೀ ರೇವಣಸಿದ್ದೇಶ್ವರ ಶಿವಯೋಗಿಗಳನ್ನು ಗುರುತಿಸಲಾಗಿದ್ದುಶ್ರೀಮಠದ ಸ್ಥಾಪಿತ ಕಾಲಮಾನ 12ನೇ ಶತಮಾನವೆಂದು ಹೇಳಲಾಗುತ್ತದೆ.ಕರ್ತೃಗುರುಗಳ ನಂತರದ ಪರಂಪರೆಯಲ್ಲಿ ಶ್ರೀ ರುದ್ರಸ್ವಾಮಿಗಳು, ಶ್ರೀ ಮಡಿವಾಳಸ್ವಾಮಿಗಳು, ಶ್ರೀ ಪಟ್ಟದಯ್ಯ ಸ್ವಾಮಿಗಳು, ಶ್ರೀ ವೀರಯ್ಯ ಸ್ವಾಮಿಗಳು ಅಧಿಕಾರ ನಡೆಸಿದ್ದುಇವರುಗಳ ಬಗ್ಗೆ ಹೆಚ್ಚಿನ ಮಾಹಿತಿಗಳು ಲಭ್ಯವಿಲ್ಲ. ಆದರೆ ಇವರೆಲ್ಲರ ಮುಖಾಂತರಶ್ರೀಮಠದ ಪರಂಪರೆಯು ಶ್ರೀಮಂತಗೊಂಡಿದ್ದು ಸುಮಾರು ಎಂಟು ಶತಮಾನಗಳ ಕಾಲಅಸ್ತಿತ್ವದಲ್ಲಿರುವುದು ಗಮನಾರ್ಹ.ಹಿಂದಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ರೇವಣಸಿದ್ದ ಮಹಾಸ್ವಾಮಿಗಳಿಂದಾಗಿಶ್ರೀಮಠವು ಹೆಚ್ಚು ಪ್ರಸಿದ್ಧಿಗೆ ಬಂದಿದೆ. ಶ್ರೀಗಳು 1947ರಲ್ಲಿ ಕರ್ತೃಗುರುಗಳ ಹೆಸರನ್ನೇಅಭಿದಾನ ಪಡೆದು ಶ್ರೀಮಠಕ್ಕೆ ಪಟ್ಟಾಧಿಕಾರ ಸ್ವೀಕರಿಸಿದಾಗ ಶ್ರೀಮಠವು ಪೂರ್ಣಜೀರ್ಣಾವಸ್ಥೆಯಲ್ಲಿತ್ತು. ಅವಶ್ಯಕತೆಗನುಗುಣವಾಗಿ ಮಠದ ಕಟ್ಟಡವನ್ನು ನವೀಕರಿಸಿಕೊಂಡುಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಚಟುವಟಿಕೆಗಳನ್ನು ನಡೆಸಿದ ಶ್ರೀಗಳು 1987ರಲ್ಲಿಭಕ್ತರ ಸಹಕಾರದೊಂದಿಗೆ ನೂತನವಾಗಿ ಕಟ್ಟಡವನ್ನು ನಿರ್ಮಿಸಿದರು. ಹಾಗೂ ಮಠದಆಸ್ತಿಯನ್ನು ಅಭಿವೃದ್ಧಿಪಡಿಸಿಕೊಂಡು ಶ್ರೀಮಠವನ್ನು ಸದೃಢಗೊಳಿಸಿದರು.ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಮಹಾಂತ ಸ್ವಾಮಿಗಳು 2009ರ ಮೇ 1 ರಂದುಶ್ರೀಮಠದ ಪೀಠಾಧಿಪತಿಗಳಾಗಿ ಅಧಿಕಾರ ವಹಿಸಿಕೊಂಡು ಶ್ರೀಮಠದ ಸರ್ವತೋಮುಖಅಭಿವೃದ್ಧಿಗೆ ಯೋಜನೆ ರೂಪಿಸಿಕೊಂಡು ಅದನ್ನು ಕಾರ್ಯಗತಗೊಳಿಸಲು ಶ್ರಮಿಸುತ್ತಿದ್ದಾರೆ.ಶ್ರೀಮಠದಲ್ಲಿ ಹಾಗೂ ಮಠದ ಜಮೀನಿನಲ್ಲಿ ಒಟ್ಟು 6 ಗದ್ದುಗೆಗಳನ್ನು ಕಾಣಬಹುದಾಗಿದ್ದುನಿತ್ಯಪೂಜೆಗೊಳಪಟ್ಟಿವೆ. ಆಗಿಹುಣ್ಣಿಮೆಗೆ ಶ್ರೀ ರೇವಣಸಿದ್ದೇಶ್ವರ ರಥೋತ್ಸವವು ಜರುಗುತ್ತಿದ್ದುವಿವಿಧ ಕಾರ್ಯಕ್ರಮಗಳು ಆಯೋಜನೆಗೊಂಡಿರುತ್ತವೆ.

Swamiji

Swamiji Name :
ಶ್ರೀ ಮ.ನಿ.ಪ್ರ. ಮಹಾಂತ ಸ್ವಾಮಿಗಳು
Date of Birth :
26-10-1982
Place :
ಕಾಡಶೆಟ್ಟಿಹಳ್ಳಿ, ಹಾನಗಲ್ ತಾ||
Pattadikara :
1-5-2009
Photo :

Programs

ಪ್ರತಿ ನಿತ್ಯ ರುದ್ರಾಭಿಷೇಕ.
ಬಸವ ಜಯಂತಿ ಆಚರಣೆ
ವೈಶಾಖ ಮಾಸ ಆಗಿ ಹುಣ್ಣಿಮೆಗೆ
ಶ್ರೀ ರೇವಣಸಿದ್ದೇಶ್ವರ ರಥೋತ್ಸವ,
ಪ್ರವಚನ, ಸಾಮೂಹಿಕ ವಿವಾಹ, 15 ದಿನಗಳ ಕಾಲ
ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು.
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ, ವಿಶೇಷ ಪೂಜೆ.
ಮಹಾನವಮಿಗೆ 9 ದಿನ ಶ್ರೀದೇವಿ ಪುರಾಣ.
ಕಾರ್ತೀಕ ಮಾಸದಲ್ಲಿ ದೀಪೋತ್ಸವ.

Photos

Full Address Kannada

ಶ್ರೀ ರೇವಣ ಸಿದ್ದೇಶ್ವರ ಸಂಸ್ಥಾನ ವಿರಕ್ತಮಠ
ರಾಯನಾಳ - 580 024
ಹುಬ್ಬಳ್ಳಿ ತಾ||, ಧಾರವಾಡ ಜಿ||

Map

Near by Places

ಚನ್ನಮ್ಮ ವೃತ್ತ - 9 ಕಿ.ಮೀ.
ರೈಲ್ವೆ ಸ್ಟೇಷನ್ - 11 ಕಿ.ಮೀ.
ಕೆಎಸ್ಆರ್ಟಿಸಿ - 6 ಕಿ.ಮೀ.

Statistic

15 Views
0 Rating
0 Favorite
0 Share
error: Content is protected !!