ಧಾರವಾಡ ಜಿಲ್ಲೆ ಹುಬ್ಬಳ್ಳಿ ತಾಲ್ಲೂಕಿನ ಮಂಟೂರು ಗ್ರಾಮವು ತಾಲ್ಲೂಕುಕೇಂದ್ರದಿಂದ 14 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದಲ್ಲಿ ಒಂದು ಶತಮಾನಕ್ಕೂ ಹೆಚ್ಚಿನಇತಿಹಾಸವಿರುವ ಶ್ರೀ ಅಂಕಲಗಿ ಅಡವಿ ಸಿದ್ದೇಶ್ವರ ಮಠವು ಅಸ್ತಿತ್ವದಲ್ಲಿದ್ದು ತನ್ನ ಧಾರ್ಮಿಕಹಾಗೂ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಈ ಭಾಗದ ಜನರಲ್ಲಿ ಧಾರ್ಮಿಕಪ್ರಜ್ಞೆಯನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ.ಅಂಕಲಗಿಯ ಶ್ರೀ ಅಡವಿ ಸಿದ್ದೇಶ್ವರರು ಸಂಚಾರ ಮಾಡುತ್ತಾ ಮಂಟೂರುಭಾಗಕ್ಕೆ ಆಗಮಿಸಿ ಗ್ರಾಮದ ಹೊರವಲಯದ ಅಡವಿ ಪ್ರದೇಶದಲ್ಲಿ ಅನುಷ್ಠಾನದಲ್ಲಿದ್ದರು. ಈವಿಚಾರವನ್ನು ತಿಳಿದ ಗ್ರಾಮದ ಜನರು ತಂಡೋಪತಂಡವಾಗಿ ಶ್ರೀಗಳ ದರ್ಶನಕ್ಕೆ ಆಗಮಿಸಿ,ದರ್ಶನ ಪಡೆದು ಪುನೀತರಾಗುತ್ತಿದ್ದರು. ಹೀಗಿರುವಾಗ ಗ್ರಾಮದ ಭಕ್ತರು ಶ್ರೀಗಳನ್ನು ತಮ್ಮಗ್ರಾಮಕ್ಕೆ ಆಗಮಿಸಬೇಕೆಂದು ತಮಗಾಗಿ ಮಠ ಸ್ಥಾಪಿಸಿಕೊಡುತ್ತೇವೆಂದು ಬಿನ್ನವಿಸಿಕೊಂಡಾಗಅದಕ್ಕೊಪ್ಪದ ಶ್ರೀಗಳು ಮುಂದೆ ಸಂಚಾರ ಕೈಗೊಂಡರು.ಹೀಗೆ ಮಹಾಮಹಿಮ ಅಂಕಲಗಿಯ ಶ್ರೀ ಅಡವಿ ಸಿದ್ದೇಶ್ವರ ಮಹಾಸ್ವಾಮಿಗಳುತಪಸ್ಸನ್ನಾಚರಿಸಿ ಪಾವನಗೊಳಿಸಿದ್ದ ಸ್ಥಳದಲ್ಲಿಯೇ 1903ರಲ್ಲಿ ಶ್ರೀಮಠವನ್ನು ಸ್ಥಾಪಿಸಿದವರುಅವರ ಶಿಷ್ಯರಾದ ಅಂಕಲಗಿಯ ಶ್ರೀ ಸಿದ್ದರಾಮ ಸ್ವಾಮಿಗಳು. ಶ್ರೀಗಳು ಉತ್ತಮವಾಗ್ಮಿಗಳೂ, ಧಾರ್ಮಿಕ ಚಿಂತಕರೂ ಆಗಿದ್ದು ಭಕ್ತರ ಸಹಕಾರದೊಂದಿಗೆ ಇಲ್ಲಿ ಶ್ರೀಮಠವನ್ನುಸ್ಥಾಪಿಸಿ ಧಾರ್ಮಿಕ ಆಚರಣೆಗಳೊಂದಿಗೆ ಮುನ್ನಡೆಸಿದ್ದರು.ತದನಂತರ ಶ್ರೀ ಮ.ನಿ.ಪ್ರ. ಶಿವಲಿಂಗೇಶ್ವರ ಮಹಾಸ್ವಾಮಿಗಳು ಇಲ್ಲಿಗೆ ಆಗಮಿಸಿಶ್ರೀಮಠದ ಕಟ್ಟಡವನ್ನು ವಿಸ್ತರಿಸಿ, ಶ್ರೀ ಅಡವಿ ಸ್ವಾಮಿಗಳ ತೋರುಗದ್ದುಗೆ ಹಾಗೂ ಶ್ರೀಸಿದ್ದರಾಮಸ್ವಾಮಿಗಳ ಸಮಾಧಿ ಗದ್ದುಗೆಗಳನ್ನು ನಿರ್ಮಿಸಿ ಧಾರ್ಮಿಕ ಆಚರಣೆಗಳನ್ನುಚುರುಕುಗೊಳಿಸಿದ ನಂತರವಷ್ಟೇ 1989ರ ಏಪ್ರಿಲ್ 11ರಂದು ಅಧಿಕಾರ ವಹಿಸಿಕೊಂಡರು.ಶ್ರೀಗಳು ಶ್ರೀಮಠದಲ್ಲಿ ನಿತ್ಯ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಚಟುವಟಿಕೆಗಳೊಂದಿಗೆ ಶ್ರೀ ಅಡವಿ ಸಿದ್ದೇಶ್ವರ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಶಿಕ್ಷಣ ವಂಚಿತ ಮಕ್ಕಳಶಿಕ್ಷಣಕ್ಕೆ ನೆರವಾಗಿದ್ದಾರೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಶಿವಲಿಂಗೇಶ್ವರ ಮಹಾಸ್ವಾಮಿಗಳು
Date of Birth :
2-7-1943
Place :
ಖೇಳಗಿ ಬಿ. ಬಸವಕಲ್ಯಾಣ ತಾ||
Pattadikara :
11-4-1989
Photo :
Programs
ಪ್ರತಿ ಅಮವಾಸ್ಯೆಗೆ ವಿಶೇಷ ಪೂಜೆ.
ಶ್ರಾವಣ ಮಾಸದಲ್ಲಿ ನಿತ್ಯ ಪುರಾಣ ಪ್ರವಚನ ಹಾಗೂ ವಿಶೇಷ ಕಾರ್ಯಕ್ರಮಗಳು.
Institutions
ಪ್ರೌಢ ಶಾಲೆ
Photos
Full Address Kannada
ಶ್ರೀ ಅಂಕಲಗಿ ಅಡವಿ ಸಿದ್ದೇಶ್ವರ ಮಠ
ಮಂಟೂರು - 580 023
ಹುಬ್ಬಳ್ಳಿ ತಾ||, ಧಾರವಾಡ ಜಿ||