Shree Sadguru Siddarudha Swami Matha

Shree Sadguru Siddarudha Swami Matha Claimed

ಶ್ರೀ ಸದ್ಗುರು ಸಿದ್ಧಾರೂಢ ಸ್ವಾಮಿ ಮಠ

Average Reviews

Description

ಶ್ರೀ ಸದ್ಗುರು ಸಿದ್ಧಾರೂಢಸ್ವಾಮಿ ಮಠ

ಶ್ರೀ ಸದ್ಗುರು ಸಿದ್ಧಾರೂಢ ಸ್ವಾಮಿಗಳು 

ಶ್ರೀ ಸದ್ಗುರು ಸಿದ್ಧಾರೂಢ ಸ್ವಾಮಿಗಳು ಕರ್ನಾಟಕ ರಾಜ್ಯದ ಬೀದರ್ ಜಿಲ್ಲೆಯಈಗಿನ ಭಾಲ್ಕಿ ತಾಲ್ಲೂಕಿನ ಚಳಕಾಪುರ ಗ್ರಾಮದಲ್ಲಿ ದಿನಾಂಕ 26-3-1836ರಂದುರಾಮನವಮಿಯ ದಿನದಂದು ಶ್ರೀ ಗುರುಶಾಂತಪ್ಪ ಹಾಗೂ ಶ್ರೀಮತಿ ದೇವಮಲ್ಲಮ್ಮ ಎಂಬಶಿವದಂಪತಿಗಳಿಗೆ ಸಿದ್ಧ ಎಂಬ ನಾಮದಿಂದ ಜನಿಸಿದರು.ಬಾಲ್ಯದಲ್ಲಿಯೇ ಸನ್ಯಾಸಿಯಾಗಿ ಮನೆಬಿಟ್ಟು ಸರ್ವಾತ್ಮಕ ಭಾವದಿಂದ ಕೂಡಿದಸಿದ್ಧರನ್ನು ಗಜದಂಡ ಶಿವಯೋಗಿಗಳು ಶ್ರೀ ಸಿದ್ಧಾರೂಢ ಭಾರತಿ ಎಂಬ ನಾಮದಿಂದ ಕರೆದುಅವಧೂತಾಶ್ರಮದ ದೀಕ್ಷೆಯನ್ನಿತ್ತರು. ಹಾಗೂ ಆತ್ಮ ಸಾಕ್ಷಾತ್ಕಾರದ ಮಾರ್ಗ ಕುರಿತು ಮತ್ತುಶಿವ ಪಂಚಾಕ್ಷರೀ ಮಂತ್ರ ಉಪದೇಶಿಸಲು ಅಪ್ಪಣೆ ಕೊಡಿಸಿದರು. ಶ್ರೀಗಳು ಆತ್ಮಜ್ಞಾನಕ್ಕೋಸ್ಕರ ದೇಶದ ಉದ್ದಗಲಕ್ಕೂ ಸಾಧುಗಳ ಸಹವಾಸದಲ್ಲಿ ಪುಣ್ಯಕ್ಷೇತ್ರಗಳನ್ನು ಸಂಚರಿಸಿ1877ರಲ್ಲಿ ಹುಬ್ಬಳ್ಳಿಗೆ ದಯಮಾಡಿಸಿದರು.ಬಡಕಲು ಶರೀರದ ಶ್ರೀಗಳು ಕೌಪೀನಧಾರಿಗಳಾಗಿ ಕರತಲ ಭಿಕ್ಷೆ ಮಾಡುತ್ತಾಮೌನದಿಂದ ಕೆಲವು ದಿನ ತೊರವಿಯವರ ಬಾವಿಯ ಮೇಲಿದ್ದು ನಂತರ ಚಿದ್ಘನಾನಂದಸ್ವಾಮಿಗಳ ಸಮಾಧಿಮಂದಿರವನ್ನು ಆಶ್ರಯಿಸಿದರು. ಶ್ರೀ ಸಿದ್ಧಾರೂಢ ಸ್ವಾಮಿಗಳವರಲ್ಲಿದ್ದಅಲೌಕಿಕ ಬ್ರಹ್ಮಜ್ಞಾನ, ವಾಕ್ಪಾಂಡಿತ್ಯ, ಜಾತ್ಯಾತೀತ ಭಾವವನ್ನು ಕಂಡು ಸರ್ವಧರ್ಮದವರೂಶಿಷ್ಯರಾದರು. ತಮ್ಮ ಲೌಕಿಕ ದುಃಖ ಅರಿಕೆ ಮಾಡಿಕೊಂಡು ಪೂಜ್ಯರ ಉಪದೇಶಾಮೃತದಿಂದ ಎಷ್ಟೋ ಜನ ಸುಖಿಗಳಾದರೆ, ಆಧ್ಯಾತ್ಮದ ವಿಚಾರದಲ್ಲಿ ತಮಗಾದ ಸಂಶಯನಿವಾರಿಸಿಕೊಂಡು ಧನ್ಯತೆ ಹೊಂದಿದವರು ಹಲವರು. ಭಕ್ತರೇ ಕಾಣಿಕೆ ಸಲ್ಲಿಸಿ ಮುಂದೆನಿಂತು ಶ್ರೀಮಠದ ಆಚರಣೆಗಳನ್ನು ಗುರುಗಳನೇತೃತ್ವದಲ್ಲಿ ನಡೆಸುತ್ತಾ ಮುಂದುವರೆದಂತೆ ಶ್ರೀಗಳು¨s Àೂಲೋಕವನ್ನೇ ಕೈಲಾಸವನ್ನಾಗಿ 1926ರಲ್ಲಿಕೈಲಾಸ ಮಂಟಪ ಕಟ್ಟಿಸಿದರು. ಜಾತಿ, ಕುಲ, ಪಂಥಯಾವುದೂ ಇಲ್ಲ, ದೇವನೊಬ್ಬನೇ ಎಂದು ಸಾರಿದಸಾರ್ವಭೌಮ ಶ್ರೀ ಸಿದ್ಧಾರೂಢರು 21-8-1929ರಲ್ಲಿತಮ್ಮ 92ನೇ ವಯಸ್ಸಿನಲ್ಲಿ ಬ್ರಹ್ಮೈಕ್ಯರಾದರು.ಅಂದಿನಿಂದ ಅವರ ನಿರ್ವಿಕಲ್ಪ ಸಮಾಧಿಮಂದಿರದಲ್ಲಿ ಅಹೋರಾತ್ರಿ ಓಂ ನಮಃ ಶಿವಾಯಮಂತ್ರ ಅವಿರತವಾಗಿ ನಡೆಯುತ್ತಾ ಬಂದಿರುತ್ತದೆ.ಇಂದು ಶ್ರೀಮಠಕ್ಕೆ ಪೀಠಸ್ಥ ಸ್ವಾಮಿಗಳು ಇಲ್ಲದಿದ್ದರೂ ಪೂಜ್ಯರ ಸಮಾಧಿ ದರ್ಶನದಿಂದಲೇಭಕ್ತರ ಇಚ್ಛೆಗಳು ಪೂರ್ಣಗೊಳ್ಳುತ್ತವೆ. ಶ್ರೀ ಸಿದ್ಧಾರೂಢರ ಶಿಷ್ಯರಲ್ಲಿ ಅಗ್ರಗಣ್ಯರಾದ ಶ್ರೀಗುರುನಾಥಾರೂಢರು ಗುರುಗಳ ಕೃಪಾಕಟಾಕ್ಷದಲ್ಲಿ ಬೆಳೆದವರು. ಶ್ರೀ ಸಿದ್ಧಾರೂಢರುಬ್ರಹ್ಮೈಕ್ಯರಾದ ನಂತರ ಶ್ರೀಗಳು ತಮ್ಮ ಜೀವಿತಅವಧಿಯವರೆಗೂ ಮೌನವಾಗಿದ್ದರು. ಸದಾಸ್ವಾತ್ಮಾನಂದದಲ್ಲಿಯೇ ತಲ್ಲೀನರಾಗಿದ ್ದಇವರಿಗೆ ಬಾಹ್ಯ ಪ್ರಪಂಚದ ಅರಿವು ಕೂಡಾತೋರುತ್ತಿರಲಿಲ್ಲ. ದೃಷ್ಟಿ ಮಾತ್ರದಿಂದಲೇಭಕ್ತರ ಅಭೀಷ್ಟೆಗಳನ್ನು ಪೂರೈಸಿದ ಪೂಜ್ಯರುದಿ.13-5-1962ರಂದು ಬ್ರಹ್ಮೈಕ್ಯರಾದರು.ಪ್ರಸ್ತುತ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠ ಟ್ರಸ್ಟ್ ಕಮಿಟಿಯವರುಶ್ರೀಮಠವನ್ನು ಸಕಲ ಭಕ್ತರ ಸಹಕಾರದೊಂದಿಗೆ ಮುನ್ನಡೆಸುತ್ತಿದ್ದು ಸರ್ವತೋಮುಖವಾಗಿಅಭಿವೃದ್ಧಿಗೊಳಿಸಿದ್ದಾರೆ. ಪ್ರತಿದಿನ ಮುಂಜಾನೆ ಉಪಾಹಾರ ಹಾಗೂ ನಿರಂತರಅನ್ನಸಂತರ್ಪಣೆಯನ್ನು ಬಂದ ಭಕ್ತರಿಗೆ ನೀಡುತ್ತಿರುವ ಕಮಿಟಿಯು ಶ್ರೀಮಠದಲ್ಲಿ ಭಕ್ತರಿಗಾಗಿವಸತಿ ವ್ಯವಸ್ಥೆಯನ್ನು ಮಾಡಿದ್ದಾರೆ. ಹಾಗೂ ಶ್ರೀಮಠದ ಆಸ್ತಿಗಳನ್ನು ಗುರುತಿಸಿ ವಾಣಿಜ್ಯಮಳಿಗೆಗಳನ್ನು ಕಟ್ಟಿಸಿ ಶ್ರೀಮಠದ ಆದಾಯ ಮೂಲವನ್ನು ಹೆಚ್ಚಿಸಿದ್ದಾರೆ. ಕಮಿಟಿಯವರುಇನ್ನುಮುಂದೆ ಸಮುದಾಯ ಭವನ, ವೇದಾಂತಗ್ರಂಥಾಲಯ, ಸಾಧು ಭವನ ದರ್ಪಣದರ್ಶನ, ಗುರುಕುಲ, ಮಠದ ಸಿಬ್ಬಂದಿಗಳಿಗೆಮನೆಗಳನ್ನು ಕಟ್ಟಿಸುವುದು, ಭವ್ಯವಾದ ಧ್ಯಾನಮಂದಿರ ಹಾಗೂ ಪ್ರಸಾದ ನಿಲಯಗಳನ್ನುನಿರ್ಮಿಸುವ ಯೋಜನೆಯನ್ನು ಕಾರ್ಯಗತಗೊಳಿಸಲು ಶ್ರಮಿಸುತ್ತಿದ್ದಾರೆ.

ಶ್ರೀಮಠದಿಂದ ಪ್ರಕಟಿತ ಗ್ರಂಥಗಳು:

ಶ್ರೀ ಸಿದ್ಧಾರೂಢ ಕಥಾಮೃತ (ಶ್ರೀ ಶಿವರಾಮ ಚಂದ್ರಗಿರಿ)
ಶ್ರೀ ಸಿದ್ಧಾರೂಢ ಚರಿತ್ರೆ (ಶ್ರೀ ಎಸ್.ಟಿ. ಕಲ್ಲಾಪುರ)
ಜ್ಞಾನ ಪ್ರತಿಪಾದನಾ ಸ್ಥಳ (ಶ್ರೀ ಶಿವಪುತ್ರಸ್ವಾಮಿಗಳು)

ಶ್ರೀ ಸಿದ್ಧಾರೂಢ ಸ್ವಾಮಿಗಳ ಕುರಿತ ಗ್ರಂಥಗಳು:

ಶ್ರೀ ಸಿದ್ಧಾರೂಢ ಭಾರತಿ ಕಲ್ಪದೃಮ (ಶ್ರೀ ಬಸವಂತಾಚಾರ್ಯ ಬೆಳ್ಳಿಗಟ್ಟಿ)
ಶ್ರೀ ಸಿದ್ಧಾರೂಢ ಸ್ವಾಮಿಗಳು (ಲೇ: ಶ್ರೀ ಮಲ್ಲಿಕಾರ್ಜುನ ಸಿಂದಗಿ)
ಶ್ರೀ ಸಿದ್ಧಾರೂಢ ಸ್ವಾಮಿಗಳು (ಶ್ರೀ ಗಿರಿಯಪ್ಪ ಗೌಡ್ರ)
ಶ್ರೀ ಸಿದ್ಧ ಮಹಿಮಾಂಬುಧಿ (ಶ್ರೀ ಕೇಶವ ಗುರಂ)
ಶ್ರೀ ಗುರು ಸಿದ್ಧಾರೂಢ ಪುರಾಣ (ಶ್ರೀ ಪ್ರಭಪ್ಪ ಬಿ.)

Swamiji

Swamiji Name :
ಶ್ರೀ ಸದ್ಗುರು ಸಿದ್ಧಾರೂಢ ಸ್ವಾಮಿಗಳು
Photo :

Programs

ಶ್ರೀ ಮಠದಲ್ಲಿ ಪ್ರತಿನಿತ್ಯ ಸುಪ್ರಭಾತ, ಭಜನೆ, ಉಭಯ ಶ್ರೀಗಳ ಸಮಾಧಿ ಪೂಜೆ, ಕಾಕಡಾರತಿ ಹಾಗೂ ಸಂಜೆ ಶಾಸ್ತ್ರ ಪ್ರವಚನ ಕಾರ್ಯಕ್ರಮ ಜರುಗುವುದು.

ಪ್ರತಿ ಸೋಮವಾರ ಉಭಯ ಶ್ರೀಗಳವರ ಗದ್ದುಗೆಗಳಿಗೆ ಪಂಚಾಮೃತ ಅಭಿಷೇಕ, ಭಜನೆ,
ಕಾಕಡಾರತಿ, ಮಂಗಳಾರತಿ ಹಾಗೂ ಸಂಜೆ ಶ್ರೀ ಸಿದ್ಧಾರೂಢ ಸ್ವಾಮಿಗಳವರ ಸಮಾಧಿ ಮಂದಿರದಲ್ಲಿ
ಪಲ್ಲಕಿ ಸೇವೆ ಹಾಗೂ ಮಹಾಮಂಗಳಾರತಿ ಕಾರ್ಯಕ್ರಮ.

ಮಾಘ ಮಾಸದಲ್ಲಿ ಎಂಟು ದಿನಗಳ ಶ್ರೀ ಶಿವರಾತ್ರಿ ಮಹೋತ್ಸವ.

ಮಹಾಶಿವರಾತ್ರಿಯ ದಿನ ಮಹಾಪೂಜೆ ಹಾಗೂ ಜಾಗರಣೆ.

ಮಹಾಶಿವರಾತ್ರಿ ಮರುದಿನ ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳ ರಥೋತ್ಸವ
ಹಾಗೂ ಶಿವರಾತ್ರಿ ಅಮವಾಸ್ಯೆ ಆಚರಣೆ.

ಶ್ರೀರಾಮನವಮಿ ದಿನ ಶ್ರೀ ಸಿದ್ಧಾರೂಢರ ಜನ್ಮೋತ್ಸವ (ತೊಟ್ಟಿಲು ಕಾರ್ಯಕ್ರಮ).
ವೈಶಾಖ ಮಾಸದಲ್ಲಿ ಶ್ರೀ ಗುರುನಾಥರೂಢರ ಪುಣ್ಯ ತಿಥಿ.

ಆಷಾಢ ಶುದ್ಧ ಪೂರ್ಣಿಮೆ ದಿನ ಗುರುಪೂರ್ಣಿಮೆ ಆಚರಣೆ.

ಶ್ರಾವಣ ಮಾಸದಲ್ಲಿ ನಿತ್ಯ ವಿಶೇಷ ಕಾರ್ಯಕ್ರಮಗಳು, ಶ್ರಾವಣ ಮಹೋತ್ಸವ, ಶ್ರೀ ಸಿದ್ಧಾರೂಢರ ಪುಣ್ಯತಿಥಿ.

ನವರಾತ್ರಿಯಲ್ಲಿ ಒಂಭತ್ತು ದಿನಗಳ ಕಾಲ ಶ್ರೀದೇವಿ ಪುರಾಣ ಹಾಗೂ ವಿಶೇಷ ಕಾರ್ಯಕ್ರಮಗಳು.
ಕಾರ್ತೀಕ ಮಾಸದಲ್ಲಿ ಭಾಗವತ ಸಪ್ತಾಹ.

ಕಾರ್ತೀಕ ಮಾಸದ ಛಟ್ಟಿ ಅಮವಾಸ್ಯೆ ದಿನ ಲಕ್ಷದೀಪೋತ್ಸವ ಕಾರ್ಯಕ್ರಮ.
ಡಿಸೆಂಬರ್‍ನಲ್ಲಿ ಶ್ರೀ ನಿಜಗುಣ ಶಿವಯೋಗಿಗಳ ಜಯಂತಿ ಆಚರಣೆ.

Photos

Full Address Kannada

ಶ್ರೀ ಸದ್ಗುರು ಸಿದ್ಧಾರೂಢ ಸ್ವಾಮಿ ಮಠ
ಹುಬ್ಬಳ್ಳಿ - 580 024 ಧಾರವಾಡ ಜಿ||

Map

Near by Places

ಹುಬ್ಬಳ್ಳಿ ಸಿ.ಬಿ.ಟಿ. - 2 ಕಿ.ಮೀ.
ರೈಲು ನಿಲ್ದಾಣ - 3 ಕಿ.ಮೀ.
ಹಳೆ ಬಸ್ನಿಲ್ದಾಣ - 2 ಕಿ.ಮೀ.
ಕೆ.ಎಸ್.ಆರ್.ಟಿ.ಸಿ. - 6 ಕಿ.ಮೀ.

Statistic

22 Views
0 Rating
0 Favorite
0 Share
error: Content is protected !!