ಹುಬ್ಬಳ್ಳಿ ನಗರದ ವೀರಾಪುರ ಓಣಿಯಲ್ಲಿ ಅಸ್ತಿತ್ವದಲ್ಲಿರುವ ಶ್ರೀ ಎರಡೆತ್ತಿನ ಮಠವುಸುಮಾರು 300 ವರ್ಷಗಳ ಇತಿಹಾಸ ಹೊಂದಿದ್ದು ಈ ಭಾಗದಲ್ಲಿ ಯಾರೂ ಸಾಕಿರದಂತಹದೊಡ್ಡದಾದ ಎರಡು ಎತ್ತುಗಳನ್ನು ಸಾಕಿ ಮಠದ ಜಮೀನನ್ನು ಉಳುಮೆ ಮಾಡಿಸುತ್ತಿದ್ದುದರಿಂದ ಶ್ರೀಮಠಕ್ಕೆ ಶ್ರೀ ಎರಡೆತ್ತಿನ ಮಠವೆಂದು ರೂಢಿಗತವಾಗಿ ಹೆಸರು ಬಂದಿದೆ ಎಂದುತಿಳಿದುಬರುತ್ತದೆ. ಶ್ರೀಮಠದ ಕರ್ತೃಗುರುಗಳೆಂದು ಶ್ರೀ ಮ.ನಿ.ಪ್ರ. ಸಿದ್ದಲಿಂಗ ಮಹಾಸ್ವಾಮಿಗಳನ್ನು ಗುರುತಿಸಲಾಗಿದ್ದು ಹೆಚ್ಚಿನ ಮಾಹಿತಿಗಳು ಲಭ್ಯವಿಲ್ಲ.ಕರ್ತೃಗುರುಗಳ ನಂತರ 1948ರಲ್ಲಿ ಶ್ರೀಮಠದ ಅಧಿಕಾರ ವಹಿಸಿಕೊಂಡ ಶ್ರೀಮ.ನಿ.ಪ್ರ. ಸಿದ್ದಲಿಂಗ ಸ್ವಾಮಿಗಳ ತನಕದ ಪರಂಪರೆಯ ಬಗ್ಗೆ ನಿಖರತೆ ಇಲ್ಲ. ಶ್ರೀ ಸಿದ್ದಲಿಂಗಸ್ವಾಮಿಗಳು ಸಂಚಾರದಲ್ಲಿ ಹಂಪಿಗೆ ಆಗಮಿಸಿ ಅನುಷ್ಠಾನಗೊಂಡು ತಮ್ಮ ಪ್ರವಚನಗಳಮೂಲಕ ಹೆಸರಾಗಿದ್ದರು. ಇವರ ವ್ಯಕ್ತಿತ್ವಕ್ಕೆ ಮಾರುಹೋದ ಮಠದ ಭಕ್ತರು ಶ್ರೀಗಳನ್ನುಹಂಪಿಯಿಂದ ಕರೆತಂದು ಮಠಕ್ಕೆ ಪಟ್ಟಾಧಿಕಾರಗೊಳಿಸಿದರು. ಇವರು ಮಠವನ್ನು ಅಭಿವೃದ್ಧಿಪಥದತ್ತ ಮುನ್ನಡೆಸಿದ್ದು ಇವರ ನಂತರ ಕೆಲಕಾಲ ಶ್ರೀ ಮರಿದೇವರು ಧಾರ್ಮಿಕಕಾರ್ಯಗಳನ್ನು ಮುನ್ನಡೆಸಿರುವುದು ತಿಳಿದುಬರುತ್ತದೆ.ಶ್ರೀಮಠದ ಹಿಂದಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಚನ್ನವೀರ ಸ್ವಾಮಿಗಳು ಶ್ರೀಮರಿದೇವರ ನಂತರ ಶ್ರೀಮಠಕ್ಕೆ ಆಗಮಿಸಿ ಅಧಿಕಾರವನ್ನು ಸ್ವೀಕರಿಸಿದರು. ಯಾದವಾಡದಶ್ರೀ ಚನ್ನವೀರ ಸ್ವಾಮಿಗಳೆಂದೇ ಹೆಸರಾಗಿದ್ದ ಶ್ರೀಗಳು ಈಗಿನ ಶ್ರೀಗಳಾದ ಶ್ರೀ ಸಿದ್ದಲಿಂಗಸ್ವಾಮಿಗಳನ್ನು ಉತ್ತರಾಧಿಕಾರಿಗಳಾಗಿ ನೇಮಿಸಿಕೊಂಡು 1972ರಲ್ಲಿ ಲಿಂಗೈಕ್ಯರಾದರು.ಶ್ರೀ ಮ.ನಿ.ಪ್ರ. ಸಿದ್ದಲಿಂಗ ಮಹಾಸ್ವಾಮಿಗಳು ಶಿವಯೋಗಮಂದಿರ ಹಾಗೂಹುಬ್ಬಳ್ಳಿಗಳಲ್ಲಿ ವ್ಯಾಸಂಗ ಮಾಡಿ ಉನ್ನತ ವಿದ್ಯಾಭ್ಯಾಸಕ್ಕೆಂದು ಕಾಶಿಗೆ ಹೋಗಬೇಕಾಗಿತ್ತು.ಆದರೆ ಹಿರಿಯ ಶ್ರೀಗಳು ಲಿಂಗೈಕ್ಯರಾದ ಪ್ರಯುಕ್ತ ಶ್ರೀಮಠಕ್ಕೆ ಆಗಮಿಸಿ ಅಭಿವೃದ್ಧಿಕಾರ್ಯಗಳನ್ನು ಕೈಗೊಂಡು ನಂತರ 1976ರಲ್ಲಿ ಶ್ರೀಮಠಕ್ಕೆ ಪಟ್ಟಾಧಿಕಾರದ ಅನುಗ್ರಹವನ್ನುಸ್ವೀಕರಿಸಿದರು. ಅಂದಿನಿಂದ ಇಂದಿನವರೆಗೂ ಶ್ರೀಮಠದ ಸರ್ವತೋಮುಖ ಅಭಿವೃದ್ಧಿಗೆಶ್ರೀಗಳು ಶ್ರಮಿಸುತ್ತಿದ್ದಾರೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಸಿದ್ದಲಿಂಗ ಮಹಾಸ್ವಾಮಿಗಳು
Place :
ಬಾಗಲಕೋಟೆ
Photo :
Programs
ಶ್ರಾವಣ ಮಾಸದಲ್ಲಿ ನಿತ್ಯ
ವಿಶೇಷ ಪೂಜೆ ಹಾಗೂ ಕೊನೆ ಸೋಮವಾರ ಲಿಂಗಯ್ಯನ ರಥೋತ್ಸವ. ಶ್ರೀಗಳಿಂದ ಮೌನ ಅನುಷ್ಠಾನ. ಶ್ರಾವಣ ಮಾಸದ ಮಂಗಲದಲ್ಲಿ ಲಿಂ. ಶ್ರೀ ಚನ್ನವೀರ ಸ್ವಾಮಿಗಳು ಪುಣ್ಯಸ್ಮರಣೆ.
ಶಿವರಾತ್ರಿ, ದಸರಾ ಹಾಗೂ ಕಾರ್ತೀಕ ಮಾಸಗಳಲ್ಲಿ ವಿಶೇಷ ಪೂಜೆ.
Institutions
ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢ ಶಾಲೆ
Photos
Full Address Kannada
ಶ್ರೀ ಎರಡೆತ್ತಿನ ಮಠ ವೀರಾಪುರ ಓಣಿ,
ಹುಬ್ಬಳ್ಳಿ - 580 020 ಧಾರವಾಡ ಜಿ||