Shree Muru Savira Matha

Shree Muru Savira Matha Claimed

ಶ್ರೀ ಮೂರುಸಾವಿರಮಠ

Average Reviews

Description

ಶ್ರೀ ಮೂರುಸಾವಿರಮಠ

ಕರ್ತೃ – ಪೂಜ್ಯ ಶ್ರೀ ಜಗದ್ಗುರು ಗುರುಸಿದ್ದೇಶ್ವರರು

ವಾಣಿಜ್ಯ ಕೇಂದ್ರವಾಗಿ ಹೆಸರುವಾಸಿಯಾದ ಹುಬ್ಬಳ್ಳಿಯು ಧರ್ಮ ಪರಿಪಾಲನೆಯಶ್ರದ್ಧಾ ಕೇಂದ್ರವಾಗಿಯೂ ಪ್ರಸಿದ್ಧಿಗೊಂಡಿದೆ. ನಗರದ ಹೃದಯಭಾಗದಲ್ಲಿರುವ ಶ್ರೀ ಮೂರುಸಾವಿರಮಠವು ಸುಮಾರು 8 ಶತಮಾನಗಳಿಗೂ ಅಧಿಕ ಇತಿಹಾಸವನ್ನು ಹೊಂದಿದ್ದು ಇಂದುಕರ್ನಾಟಕದ ಪ್ರಮುಖ ಧಾರ್ಮಿಕ ಕೇಂದ್ರವಾಗಿ ಗುರುತಿಸಿಕೊಂಡಿದೆ.ಕರ್ನಾಟಕದ ಧಾರ್ಮಿಕ ಇತಿಹಾಸದಲ್ಲಿ 12ನೇ ಶತಮಾನಕ್ಕೆ ತನ್ನದೇ ಆದಪ್ರಾಮುಖ್ಯತೆ ಇದೆ. ಬಸವಾದಿ ಪ್ರಥಮರು ಕಲ್ಯಾಣದಲ್ಲಿ ಮಾಡಿದ ಸಾಮಾಜಿಕ ಕ್ರಾಂತಿಯಕಾರಣದಿಂದಾಗಿ ವೀರಶೈವ ಲಿಂಗಾಯತ ಧರ್ಮವು ಸರ್ವವ್ಯಾಪಿಯಾಯಿತು. ಈ ಕಲ್ಯಾಣಕ್ರಾಂತಿಯ ನಂತರ ಸಾವಿರಾರು ಶರಣರು ವಚನಗಳ ಹೊತ್ತಿಗೆಗಳನ್ನು ಹೊತ್ತುನಾಡಿನಾದ್ಯಂತ ಚದುರಿದರು. ಹೀಗೆ ಮೂರುಸಾವಿರ ಶರಣರ ನೇತೃತ್ವವನ್ನು ವಹಿಸಿಕೊಂಡುಧರ್ಮ ಪ್ರಚಾರ ಕಾರ್ಯ ಕೈಗೊಳ್ಳುತ್ತಾ ಮುನ್ನಡೆದ ಶ್ರೀ ಗುರುಸಿದ್ದೇಶ್ವರರು ಮಾರ್ಗ ಮಧ್ಯೆಹುಬ್ಬಳ್ಳಿಯಲ್ಲಿ ನೆಲೆನಿಂತು ಅಲ್ಲಿಯೇ ಲಿಂಗೈಕ್ಯರಾದರು.ಜಗದ್ಗುರು ಶ್ರೀ ಗುರುಸಿದ್ದೇಶ್ವರರು ಲಿಂಗೈಕ್ಯರಾದ ನಂತರ ಮೂರುಸಾವಿರಶರಣರು ಗುರುಗಳ ಗದ್ದುಗೆಯನ್ನು ನಿರ್ಮಿಸಿ ಆ ಗದ್ದುಗೆಯ ಮೇಲೆ ಶ್ರೀಮಠವನ್ನುಸ್ಥಾಪಿಸಿದರೆಂದೂ ಆ ಕಾರಣದಿಂದಾಗಿಯೇ ಶ್ರೀಮಠಕ್ಕೆ ಶ್ರೀ ಮೂರುಸಾವಿರ ಮಠವೆಂಬಹೆಸರು ಬಂದಿತೆಂದು ಐತಿಹ್ಯವಿದೆ. ಅಂದು ಪ್ರಾರಂಭಗೊಂಡ ಶ್ರೀಮಠದ ಪರಂಪರೆಇಂದಿನವರೆಗೂ ಸುಮಾರು ಐವತ್ತು ಜನ ಶ್ರೀಗಳ ಮುಖಾಂತರ ನಾಡಿನ ಧಾರ್ಮಿಕಪರಂಪರೆಯನ್ನು ಶ್ರೀಮಂತಗೊಳಿಸಿದೆ.ಶ್ರೀಮಠವು ಪುರಾತನ ಇತಿಹಾಸವನ್ನು ಹೊಂದಿದ್ದಾದರೂ ಪರಂಪರೆಯನ್ನುಸ್ಪಷ್ಟವಾಗಿ ದಾಖಲಿಸಡದೇ ಇರುವುದರಿಂದ ಹಾಗೂ ಪರಂಪರೆಯ ಎಲ್ಲಾ ಗುರುಗಳುಅನುಕ್ರಮಣಿಕೆಯಲ್ಲಿ ಶ್ರೀ ಗುರುಸಿದ್ದರಾಜಯೋಗೀಂದ್ರ ಸ್ವಾಮಿಗಳು ಹಾಗೂ ಶ್ರೀ ಗಂಗಾಧರರಾಜಯೋಗೀಂದ್ರ ಸ್ವಾಮಿಗಳು ಎಂಬ ಎರಡು ಹೆಸರುಗಳನ್ನೇ ಅಭಿದಾನ ಪಡೆದುಅಧಿಕಾರಕ್ಕೆ ಬಂದಿರುವುದರಿಂದಲೂ ಎಲ್ಲಾ ಗುರುಗಳ ಬಗ್ಗೆ ಮಾಹಿತಗಳ ಅಲಭ್ಯತೆಯಿದೆ.ಶ್ರೀಮಠವು ಹೆಚ್ಚಿನ ಅಭಿವೃದ್ಧಿ ಕಂಡು ಮುಂಚೂಣಿಗೆ ಬಂದಿದ್ದು ಶ್ರೀಮಠದ45ನೇ ಗುರುಗಳಾದ ಶ್ರೀ ಗಂಗಾಧರ ರಾಜಯೋಗೀಂದ್ರ ಸ್ವಾಮಿಗಳ ಕಾಲದಲ್ಲಿ. ಸುಮಾರು1820ರ ಸುಮಾರಿನಲ್ಲಿ ಅಧಿಕಾರದಲ್ಲಿದ್ದ ಶ್ರೀಗಳು ಶ್ರೀಮಠಕ್ಕೆ ಕಿತ್ತೂರಿನ ಅರಮನೆಯಿಂದಕಟ್ಟಿಗೆಯ ಕಂಬಗಳನ್ನು ತರಿಸಿ ನೂತನ ಭವ್ಯವಾದ ಕಟ್ಟಡವನ್ನು ಕಟ್ಟಿಸಿ ಧಾರ್ಮಿಕಕಾರ್ಯಗಳನ್ನು ಚುರುಕುಗೊಳಿಸಿದರು.ಪರಂಪರೆಯ 47ನೇ ಗುರುಗಳಾಗಿ 1901ರಲ್ಲಿ ಅಧಿಕಾರಕ್ಕೆ ಬಂದ ಶ್ರೀ ಗಂಗಾಧರರಾಜಯೋಗೀಂದ್ರ ಮಹಾಸ್ವಾಮಿಗಳು ತಪಸ್ವಿಗಳಾಗಿದ್ದು ಇವರ ಧಾರ್ಮಿಕ ಹಾಗೂಸಾಮಾಜಿಕ ಕಾರ್ಯಕ್ರಮಗಳಿಂದಾಗಿ ಮನೆಮಾತಾಗಿದ್ದರು. ಹಾನಗಲ್ಲ ಶ್ರೀ ಕುಮಾರಸ್ವಾಮಿಗಳು ಶಿವಯೋಗ ಮಂದಿರ ಹಾಗೂ ಅಖಿಲಭಾರತ ವೀರಶೈವ ಮಹಾಸಭೆಗಳನ್ನುಸ್ಥಾಪಿಸಿದ ಸಂದರ್ಭದಲ್ಲಿ ಶ್ರೀ ಗಂಗಾಧರ ರಾಜಯೋಗೀಂದ್ರ ಮಹಾಸ್ವಾಮಿಗಳು ಶ್ರೀಕುಮಾರಸ್ವಾಮಿಗಳಿಗೆ ಬೆನ್ನೆಲುಬಾಗಿ ನಿಂತು ಸಂಪೂರ್ಣ ಸಹಕಾರ ನೀಡಿದ್ದರು.48ನೇ ಗುರುಗಳಾಗಿ 1925ರಲ್ಲಿ ಅಧಿಕಾರಕ್ಕೆ ಬಂದ ಶ್ರೀ ಗುರು ಸಿದ್ದರಾಜಯೋಗೀಂದ್ರ ಸ್ವಾಮಿಗಳು ಶ್ರೀಮಠವನ್ನು ವಿಸ್ತರಿಸಿದರು. ಪ್ರಗತಿಪರರಾಗಿದ್ದ ಶ್ರೀಗಳು ತಮ್ಮಧಾರ್ಮಿಕ ಚಿಂತನೆ ಕಾರ್ಯಕ್ರಮಗಳ ಮೂಲಕ ಸಮಾಜದ ಅಭಿವೃದ್ಧಿಗೆ ನಾಂದಿಹಾಡಿದ್ದಲ್ಲದೇ ಶ್ರೀಮಠವನ್ನು ಸದಾ ಚಟುವಟಿಕೆಯ ಕೇಂದ್ರವನ್ನಾಗಿಸಿ ನಾಡಿನಾದ್ಯಂತಪ್ರಸಿದ್ಧಿಗೊಳಿಸಿದ್ದರು. ಇವರ ಕಾಲದಲ್ಲಿ ಶ್ರೀಮಠವು ಶೈಕ್ಷಣಿಕವಾಗಿಯೂ ತನ್ನಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡಿತು.ಡಾ. ಮೂಜಗಂ ಎಂದೇ ಪ್ರಸಿದ್ಧಗೊಂಡಿದ್ದ ಹಿಂದಿನ ಶ್ರೀಗಳಾದ ಶ್ರೀ ಗಂಗಾಧರರಾಜಯೋಗೀಂದ್ರ ಸ್ವಾಮಿಗಳು ಸಾಹಿತ್ಯ ಕ್ಷೇತ್ರದ ಬಲು ದೊಡ್ಡ ಹೆಸರಾಗಿದ್ದರು. ಡಾ.ಮೂಜಗಂ ಎಂದರೆ ಬಿಡುವಿಲ್ಲದ ಗಡಿಯಾರದಂತೆ. ಸುಮಾರು 4 ದಶಕಗಳ ಕಾಲಶ್ರೀಮಠ, ಸಮಾಜ ಹಾಗೂ ಸಾಹಿತ್ಯ ಕೃಷಿಗೈದ ಕ್ರಿಯಾಶೀಲ ಚೇತನ. ಎಲ್ಲಾ ಜಾತಿ,ಜನಸಮುದಾಯಗಳೊಂದಿಗೆ ಒಂದಾಗಿ ದ್ವೇಷ, ಅಸೂಯೆಗಳನ್ನಳಿಸಿ ಎಲ್ಲರ ಭಾವದಲ್ಲಿಪ್ರೀತಿಪ್ರೇಮ ಅರಳಿಸಿದ ಶಾಂತಿದೂತರು. ತಮ್ಮ ಬಿಡುವಿಲ್ಲದ ಬದುಕಿನಲ್ಲಿ ಸಾಹಿತ್ಯ ಕೃಷಿಗೈದುಸುಮಾರು 300ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಾಶನಗೊಳಿಸಿದ ಸಾಹಿತ್ಯ ಪ್ರೇಮಿಗಳು.ಈಗಿನ ಶ್ರೀಗಳಾದ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳುಕಡೂರು ತಾಲ್ಲೂಕಿನ ಕಲ್ಕೆರೆ ಗ್ರಾಮದಲ್ಲಿ 1959ರ ಫೆಬ್ರವರಿ 17ರಂದು ಜನಿಸಿ,ಗಿರಿಯಾಪುರದ ಆಶ್ರಮದ ಪೂಜ್ಯರಾದ ಶ್ರೀ ಸದಾಶಿವ ಶಿವಾಚಾರ್ಯರ ಆತ್ಮೀಯಶಿಷ್ಯರಾಗಿ ಅವರ ಆಶೀರ್ವಾದದಿಂದ ಶಿವಯೋಗ ಮಂದಿರದಲ್ಲಿ 7 ವರ್ಷಗಳ ಕಾಲ ವೇದ,ಸಂಸ್ಕøತ, ವಚನಾಧ್ಯಯನ ವಿಷಯಗಳನ್ನು ಅಧ್ಯಯನ ಮಾಡಿದರು.ಗಿರಿಯಾಪುರದ ಶ್ರೀ ಗುರು ಕುಮಾರಾಶ್ರಮದ ಮರಿದೇವರೆಂದು ಶಿವಯೋಗಮಂದಿರದಲ್ಲಿ ಅಧ್ಯಯನಗೈದ ಶ್ರೀಗಳು ದೈವಿಚ್ಛೆಯಂತೆ ಹಾನಗಲ್ಲ ಮಠದ ಪೀಠಾಧಿಪತಿಗಳಾಗಿ 1984ರಲ್ಲಿ ಅಧಿಕಾರವಹಿಸಿಕೊಂಡು ಶ್ರೀಮಠದ ಜೀರ್ಣೋದ್ಧಾರದೊಂದಿಗೆ ಅನೇಕಶಿಕ್ಷಣ ಸಂಸ್ಥೆಗಳನ್ನು ತೆರೆದು ಗ್ರಾಮೀಣ ಭಾಗದ ಜನತೆಗೆ ಆಶಾಕಿರಣವಾಗಿದ್ದಾರೆ.ಇಂತಹ ಪೂಜ್ಯರು ಉತ್ತರ ಕರ್ನಾಟಕದ ಪ್ರತಿಷ್ಠಿತ ಮಠವಾದ ಶ್ರೀ ಮೂರುಸಾವಿರಮಠದ ಪೀಠಾಧಿಪತಿಗಳಾಗಿ 1999ರ ಮಾರ್ಚ್ 29 ರಂದು ಅಧಿಕಾರವಹಿಸಿಕೊಂಡುಲಿಂ. ಡಾ. ಗಂಗಾಧರ ರಾಜಯೋಗೀಂದ್ರ ಮಹಾಸ್ವಾಮಿಗಳವರು ಹಾಕಿಕೊಟ್ಟ ಸನ್ಮಾರ್ಗದಲ್ಲಿಅನೇಕ ಯೋಜನೆಗಳನ್ನು ಹಮ್ಮಿಕೊಂಡು ಯಶಸ್ವಿಗೊಳಿಸಿದ್ದಾರೆ. ಶ್ರೀಮಠದ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡು ಶ್ರೀಮಠವನ್ನು ನಾಡಿನಾದ್ಯಂತ ಮನೆಮಾತಾಗಿಸಿದ್ದಾರೆ.

ವಿಶೇಷತೆ :

ಪ್ರತಿವರ್ಷ ಮೇ 26ರಂದು “ಡಾ. ಮೂಜಗಂ ಸಾಹಿತ್ಯ ಪ್ರಶಸ್ತಿ” ಪ್ರದಾನ

Swamiji

Swamiji Name :
ಶ್ರೀ ಮ.ನಿ.ಜ. ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು
Date of Birth :
17-2-1959
Place :
ಕಲ್ಕೆರೆ, ಕಡೂರು ತಾ||
Pattadikara :
29-3-1999
Photo :

Programs

ಬಸವಜಯಂತಿ ಆಚರಣೆ.
ದಸರಾ ಮಹೋತ್ಸವ, ಶರಣಸಂಸ್ಕøತಿ ಉತ್ಸವ.
ಕಾರ್ತೀಕ ಮಾಸದಲ್ಲಿ ಲಕ್ಷದೀಪೋತ್ಸವ.
ಶ್ರಾವಣ ಮಾಸದ ಕಾರ್ಯಕ್ರಮಗಳು, ಕೊನೆಯ ಸೋಮವಾರ ರಥೋತ್ಸವ.
ಪೂಜ್ಯ ಲಿಂ. ಗಂಗಾಧರ ಸ್ವಾಮೀಜಿಯವರ ಪುಣ್ಯತಿಥಿ.
ಉಚಿತ ದಂತ ಚಿಕಿತ್ಸಾ ಶಿಬಿರ - ಪರಿಹಾರ ಕಾರ್ಯಗಳು. ಸಾಮೂಹಿಕ ದೈಹಿಕ ರೋಗಗಳ ಪರೀಕ್ಷಾ ಶಿಬಿರ ವಿವಿಧ ಧಾರ್ಮಿಕ, ಸಾಮಾಜಿಕ, ಸಾಂಸ್ಕøತಿಕ ಗೋಷ್ಠಿಗಳು. ಸಾಮೂಹಿಕ ವಿವಾಹಗಳು.

Institutions

ಶ್ರೀ ಜಗದ್ಗುರು ಮೂರುಸಾವಿರಮಠ ವಿದ್ಯಾವರ್ಧಕ ಸಂಘ, ಹುಬ್ಬಳ್ಳಿ
ಬಾಲವಾಡಿ ಸಂಸ್ಥೆ, ಸಂಸ್ಕøತ ವೇದ ಪಾಠಶಾಲೆ
ಶ್ರೀ ಜಗದ್ಗುರು ಗಂಗಾಧರ ಬಾಲಕ ಬಾಲಕಿಯರ ಪ್ರೌಢಶಾಲೆಗಳು
ಶ್ರೀ ಜಗದ್ಗುರು ಗಂಗಾಧರ ಸಂಯುಕ್ತ ಪದವಿ ಪೂರ್ವ ಕಾಲೇಜು ಪದವಿ ಕಾಲೇಜು,
ಐ.ಟಿ.ಐ. ಕಾಲೇಜು, ಕಂಪ್ಯೂಟರ್ ಶಿಕ್ಷಣ ಸಂಸ್ಥೆ
ಮಹಿಳಾ ಕಾಲೇಜು, ಮಹಿಳಾ ವಸತಿ ವಿದ್ಯಾ ಸಂಸ್ಥೆ
ಶ್ರೀ ಜಗದ್ಗುರು ಗಂಗಾಧರ ಆಂಗ್ಲ ಮಾಧ್ಯಮ ಶಾಲೆ, ಶಿರಢಾಣ - ಘಟಪ್ರಭಾ ಬೆಳಗಾವಿ ಜಿಲ್ಲೆ
ಶುಶ್ರೂಶಕರ ತರಬೇತಿ ಶಿಕ್ಷಣ ಸಂಸ್ಥೆ - ಘಟಪ್ರಭಾ, ಬೆಳಗಾವಿ ಜಿಲ್ಲೆ

Photos

Full Address Kannada

ಶ್ರೀ ಮೂರುಸಾವಿರಮಠ
ಹುಬ್ಬಳ್ಳಿ - 580 020
ಧಾರವಾಡ ಜಿ||

Map

Near by Places

ಹುಬ್ಬಳ್ಳಿ ಸಿ.ಬಿ.ಟಿ. - 500 ಮೀ.
ರೈಲು ನಿಲ್ದಾಣ - 2 ಕಿ.ಮೀ.
ಹಳೆ ಬಸ್ನಿಲ್ದಾಣ - 3 ಕಿ.ಮೀ.
ಕೆ.ಎಸ್.ಆರ್.ಟಿ.ಸಿ. - 6 ಕಿ.ಮೀ.

Statistic

19 Views
0 Rating
0 Favorite
0 Share
error: Content is protected !!