Shree Hirematha (Brahanmatha) Byahatti

Shree Hirematha (Brahanmatha) Byahatti Claimed

ಶ್ರೀ ಹಿರೇಮಠ (ಬೃಹನ್ಮಠ) ಬ್ಯಾಹಟ್ಟಿ

Average Reviews

Description

ಶ್ರೀ ಹಿರೇಮಠ (ಬೃಹನ್ಮಠ), ಬ್ಯಾಹಟ್ಟಿ

ಕರ್ತೃ – ಪೂಜ್ಯ ಶ್ರೀ ಬಸವಲಿಂಗ ಮಹಾಸ್ವಾಮಿಗಳು

ಹುಬ್ಬಳ್ಳಿ ನಗರದಿಂದ 16 ಕಿ.ಮೀ. ಅಂತರದಲ್ಲಿರುವ ಬ್ಯಾಹಟ್ಟಿ ಗ್ರಾಮದಮಧ್ಯಭಾಗದಲ್ಲಿ ಸುಮಾರು 800 ವರ್ಷಗಳ ಇತಿಹಾಸವನ್ನು ಹೊಂದಿರುವ ಶ್ರೀಹಿರೇಮಠವು ತನ್ನ ಧಾರ್ಮಿಕ ಆಚರಣೆಗಳ ಮೂಲಕ ಹಾಗೂ ನಾಡಿನ ನಾನಾ ಭಾಗಗಳಲ್ಲಿಆಯೋಜಿಸುವ ಜ್ಞಾನ ಯೋಗ ಶಿಬಿರಗಳ ಮೂಲಕ ಪ್ರಸಿದ್ಧಿಯಲ್ಲಿದೆ. ಪೂಜ್ಯ ಶ್ರೀಬಸವಲಿಂಗ ಮಹಾಸ್ವಾಮಿಗಳು ಸ್ಥಾಪಿಸಿದ್ದಾರೆನ್ನಲಾದ ಶ್ರೀ ಹಿರೇಮಠವು ಶ್ರೀಮದ್ ಕಾಶಿಪೀಠದ ಶಾಖಾ ಮಠವಾಗಿ ಪುತ್ರವರ್ಗದ ಪರಂಪರೆಯಲ್ಲಿ ಬೆಳೆದು ಬಂದಿದೆ.ಸುಮಾರು 800 ವರ್ಷಗಳಷ್ಟು ಪುರಾತನ ಇತಿಹಾಸವನ್ನು ಹೊಂದಿರುವಶ್ರೀಮಠವು ದೀರ್ಘಕಾಲ ಖಾಲಿ ಉಳಿದಂತೆ ತೋರುತ್ತಿದ್ದು ಶ್ರೀಮಠದ ಪರಂಪರೆ ಹಾಗೂಇತಿಹಾಸದ ಬಗ್ಗೆ ನಿಖರ ಮಾಹಿತಿಗಳು ಅಲಭ್ಯವಾಗಿವೆ. ಕರ್ತೃಗುರುಗಳಾದ ಪೂಜ್ಯ ಶ್ರೀಬಸವಲಿಂಗ ಮಹಾಸ್ವಾಮಿಗಳ ನಂತರದ ಪರಂಪರೆಯ ಬಗ್ಗೆ ಸ್ಪಷ್ಟತೆಯಿಲ್ಲವಾದ್ದರಿಂದಇಲ್ಲಿಯವರೆಗೆ ಎಷ್ಟು ಜನ ಶ್ರೀಗಳು ಶ್ರೀಮಠದ ಅಧಿಕಾರದಲ್ಲಿದ್ದರೆಂದು ತಿಳಿದುಬರುವುದಿಲ್ಲ.ಶ್ರೀಮಠದ ಆವರಣದಲ್ಲಿ ಎಂಟು ಗದ್ದುಗೆಗಳನ್ನು ಕಾಣಬಹುದಾಗಿದ್ದು ಶ್ರೀಮಠದಪರಂಪರೆಯಲ್ಲಿ ಶ್ರೀ ಜಡೆ ಶಾಂತವೀರ ಶಿವಾಚಾರ್ಯರು ಹಾಗೂ ಶತಾಯುಷಿಗಳಾಗಿಭಕ್ತರನ್ನುದ್ಧರಿಸಿದ ಶ್ರೀ ಗಂಗಾಧರ ಶಿವಾಚಾರ್ಯರು, ಶ್ರೀ ನೀಲಕಂಠ ಶಿವಾಚಾರ್ಯರಹೆಸರುಗಳು ಕೇಳಿಬರುತ್ತವೆ. ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ. ದ್ವಾರುಕಾಚಾರ್ಯಶಿವಾಚಾರ್ಯ ಸ್ವಾಮಿಗಳು ಸೊಲ್ಲಾಪುರದಲ್ಲಿ ಅಭ್ಯಸಿಸಿ 1967ರಲ್ಲಿ ಶ್ರೀಮಠದ ಪಟ್ಟಾಧಿಕಾರಸ್ವೀಕರಿಸಿ ಬಂದರು. ಶ್ರೀಗಳು ಶ್ರೀಮಠಕ್ಕೆ ಬಂದಂದಿನಿಂದ ಶ್ರೀಮಠದಲ್ಲಿ ನಿರಂತರ ಧಾರ್ಮಿಕಆಚರಣೆಗಳು ಹಾಗೂ ಪ್ರವಚನಗಳನ್ನು ನಡೆಸುತ್ತಾ ಶ್ರೀಮಠದ ಸರ್ವತೋಮುಖಅಭಿವೃದ್ಧಿಗೆ ಶ್ರಮಿಸಿದ್ದರು.ಪ್ರಸ್ತುತ ಪೂಜ್ಯ ಶ್ರೀ ಶ್ರೀಕಾರ ದೇವರನ್ನು ಶ್ರೀಮಠದ ಉತ್ತರಾಧಿಕಾರಿಗಳನ್ನಾಗಿನೇಮಿಸಲಾಗಿದ್ದು ಶ್ರೀಗಳು ವಿದ್ಯಾಭ್ಯಾಸವನ್ನು ಮುಂದುವರೆಸಿದ್ದಾರೆ. ಆದ್ದರಿಂದ ಶ್ರೀ ಸತೀಶ್ಅಷ್ಟಮೂರ್ತಿ ಹಿರೇಮಠ್ರವರು ಶ್ರೀಮಠದ ಮೇಲ್ವಿಚಾರಣೆ ನಡೆಸುತ್ತಿದ್ದು, ಶ್ರೀಮಠದಧಾರ್ಮಿಕ ಆಚರಣೆಗಳು ಸರಾಗವಾಗಿ ನಡೆಯುವಂತೆ ನೋಡಿಕೊಳ್ಳುತ್ತಿದ್ದಾರೆ.

ವಿಶೇಷತೆ :

ಪ್ರತಿ ತಿಂಗಳು ಶ್ರೀಮಠದ ವತಿಯಿಂದ ನಾಡಿನ ನಾನಾ ಭಾಗಗಳಲ್ಲಿ

ಶ್ರೀ ಸತೀಶ್ ಅಷ್ಟಮೂರ್ತಿ ಹಿರೇಮಠ ಅವರ

ನೇತೃತ್ವದಲ್ಲಿ ಜ್ಞಾನಯೋಗ ಶಿಬಿರಗಳು ಹಾಗೂ

ವ್ಯಕ್ತಿ ವಿಕಸನ ಶಿಬಿರಗಳ ಆಯೋಜನೆ.

Swamiji

Swamiji Name :
ಪೂಜ್ಯ ಶ್ರೀಕಾರ ದೇವರು
Date of Birth :
3-9-2003
Place :
ಬ್ಯಾಹಟ್ಟಿ, ಹುಬ್ಬಳ್ಳಿ ತಾ||
Photo :

Programs

ಪ್ರತಿ ಅಮವಾಸ್ಯೆಗೆ ವಿಶೇಷ ಪೂಜೆ.
ಶಿವರಾತ್ರಿಗೆ ಜಾಗರಣೆ, ಭಜನೆ ಹಾಗೂ ಮಹಾಪೂಜೆ ಕಾರ್ತೀಕ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ ಹಾಗೂ ದೀಪೋತ್ಸವ. ದಸರಾದಲ್ಲಿ ಬನ್ನಿಮುಡಿಯುವ ಕಾರ್ಯಕ್ರಮ.

Photos

Full Address Kannada

ಶ್ರೀ ಹಿರೇಮಠ (ಬೃಹನ್ಮಠ)
ಬ್ಯಾಹಟ್ಟಿ - 580 023
ಹುಬ್ಬಳ್ಳಿ ತಾ||, ಧಾರವಾಡ ಜಿ||

Map

Near by Places

ಹೆಬ್ಸೂರು - 10 ಕಿ.ಮೀ.
ಹುಬ್ಬಳ್ಳಿ - 16 ಕಿ.ಮೀ.
ಧಾರವಾಡ - 22 ಕಿ.ಮೀ.

Statistic

10 Views
0 Rating
0 Favorite
0 Share
error: Content is protected !!