ಧಾರವಾಡ ಜಿಲ್ಲಾ ಕೇಂದ್ರದಿಂದ 11 ಕಿ.ಮೀ. ದೂರದಲ್ಲಿರುವ ಮನಗುಂಡಿಗ್ರಾಮದಲ್ಲಿ ಸ್ಥಾಪಿತವಾಗಿರುವ ಶ್ರೀ ಗುರು ಬಸವ ಮಹಾಮನೆಯು ಕಳೆದ 11 ವರ್ಷಗಳಿಂದಆರೋಗ್ಯ, ಯೋಗ, ಸಾಮಾಜಿಕ ಹಾಗೂ ಆಧ್ಯಾತ್ಮಿಕ ಚಟುವಟಿಕೆಗಳ ಮೂಲಕ ಬಸವಧರ್ಮವನ್ನು ಪ್ರಸಾರ ಮಾಡುವ ಕಾರ್ಯವನ್ನು ನಿರಂತರವಾಗಿ ಮುನ್ನಡೆಸಿಕೊಂಡುಬಂದಿದೆ. ಮಹಾಮನೆಯ ಸ್ಥಾಪಕರು ಪೂಜ್ಯ ಶ್ರೀ ಬಸವಾನಂದ ಸ್ವಾಮಿಗಳು.ಶ್ರೀಗಳ ಪೂರ್ವಾಶ್ರಮದ ಹೆಸರು ಪುಟ್ಟಬಸಪ್ಪ. ತಮ್ಮ ಎರಡನೇವಯಸ್ಸಿನಲ್ಲಿಯೇ ಕಾಮಾಲೆ ರೋಗಕ್ಕೆ ಸಿಲುಕಿ ಕಣ್ಣಿನ ದೃಷ್ಟಿಯನ್ನು ಕಳೆದುಕೊಂಡಪುಟ್ಟಬಸಪ್ಪ ಬೆಳೆಯುತ್ತಾ ಹೋದಂತೆ ಆಧ್ಯಾತ್ಮದತ್ತ ಒಲವು ಹೊಂದಿದರು. ಒಮ್ಮೆ ಪೂಜ್ಯಶ್ರೀ ಲಿಂಗಾನಂದ ಮಹಾಸ್ವಾಮಿಗಳ ಪ್ರವಚನ ಕೇಳಿದ ಪುಟ್ಟಬಸಪ್ಪನವರು ಅವರ ಶಿಷ್ಯರಾಗಿಆಧ್ಯಾತ್ಮದ ಆಳ ಅರಿವನ್ನು ಪಡೆದರು. ನಂತರ 5 ವರ್ಷಗಳ ಕಾಲ ತೋಂಟದಾರ್ಯಮಠದಲ್ಲಿದ್ದು ಜಗದ್ಗುರುಗಳ ಬಳಿ ತಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಂಡರು.ಪುಟ್ಟಬಸಪ್ಪನವರು ಆನಂತರವಷ್ಟೇ ಶ್ರೀ ಬಸವಾನಂದ ಸ್ವಾಮಿಗಳೆಂಬ ಅಭಿದಾನದೊಂದಿಗೆ ಮನಗುಂಡಿಗೆ ಬಂದದ್ದು. ತಮ್ಮ ಕ್ರಿಯಾಶೀಲತೆಯಿಂದ ಅಪಾರ ಶಿಷ್ಯ ಬಳಗವನ್ನುಸಂಪಾದಿಸಿದ ಶ್ರೀಗಳು ಮನಗುಂಡಿಯಲ್ಲಿ ಶ್ರೀಮಠವನ್ನು ನಿರ್ಮಿಸಿ 2005ರ ಎಪ್ರಿಲ್ಮಾಹೆಯಲ್ಲಿ ಅಲ್ಲಮ ಪ್ರಭುದೇವರ ಜಯಂತಿ ದಿವಸ ಶ್ರೀ ತೋಂಟದಾರ್ಯ ಜಗದ್ಗುರುಗಳಸಾನಿಧ್ಯದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಗದಗದ ಶ್ರೀ ವೀರಪ್ಪ ಕವತಾಳ ಅವರಅಮೃತ ಹಸ್ತದಿಂದ ಶ್ರೀ ಗುರುಬಸವ ಮಹಾಮನೆಯನ್ನು ಉದ್ಘಾಟಿಸಿದರು.ಶೀಗಳು ಶ್ರೀಮಠದಲ್ಲಿ ಯೋಗ, ಆಧ್ಯಾತ್ಮ, ಹಾಗೂ ಪ್ರಕೃತಿ ಚಿಕಿತ್ಸಾ ಶಿಬಿರಗಳನ್ನುಆಯೋಜಿಸುತ್ತಾ ಬಂದಿದ್ದಾರೆ. ವರ್ಷದಲ್ಲಿ 11 ತಿಂಗಳು ಸಂಚಾರದಲ್ಲಿಯೇ ಕಳೆಯುವಶ್ರೀಗಳು ಭಾದ್ರಪದ ಮಾಸದಲ್ಲಿ ಮಹಾಮನೆಯಲ್ಲಿದ್ದು ಸ್ವತಃ ಉಪವಾಸ ಕೈಗೊಂಡುಶಿಬಿರಾರ್ಥಿಗಳನ್ನು ಅವರ ಸಮಸ್ಯೆಗಳಿಗನುಗುಣವಾಗಿ ಉಪವಾಸ ವ್ರತದ ಕ್ರಮವನ್ನುತಿಳಿಸಿಕೊಡುತ್ತಾ ಗುಣಪಡಿಸುತ್ತಾರೆ. ಶ್ರೀಗಳು ಶ್ರೀಮಠದಲ್ಲಿ ವೈದ್ಯ ಸಂಗಣ್ಣ ಯೋಗ ಮತ್ತುನಿಸರ್ಗೋಪಚಾರ ಕೇಂದ್ರವನ್ನು ಪ್ರಾರಂಭಿಸಿ ಅಸಂಖ್ಯಾತ ರೋಗಿಗಳನ್ನು ಗುಣಪಡಿಸಿದ್ದಾರೆ.ಹಾಗೂ ಶ್ರೀಗಳು ಸ್ವತಃ ಸಾಹಿತಿಗಳಾಗಿದ್ದು ಅಸಂಖ್ಯ ಪುಸ್ತಕಗಳನ್ನು ಪ್ರಕಟಿಸಿದ್ದಾರೆ.
ವಿಶೇಷತೆ:
ಶ್ರೀ ಬಸವಾನಂದ ಸ್ವಾಮಿಗಳು ಸ್ವತಃ ಸಾಹಿತಿಗಳು.
‘ಉಪವಾಸ ಏನಿದರ ರಹಸ್ಯ’ ಸೇರಿದಂತೆ ಅಸಂಖ್ಯ ಪುಸ್ತಕಗಳನ್ನು ಪ್ರಕಟಿಸಿದ್ದಾರೆ.
ಶ್ರೀಮಠದಲ್ಲಿ ವೈದ್ಯ ಸಂಗಣ್ಣ ಯೋಗ ಮತ್ತು ನಿಸರ್ಗೋಪಚಾರ ಕೇಂದ್ರವಿದೆ.
ಗೋಶಾಲೆ ಇದೆ.
Swamiji
Swamiji Name :
ಪೂಜ್ಯ ಶ್ರೀ ಬಸವಾನಂದ ಸ್ವಾಮಿಗಳು
Date of Birth :
13-11-1971
Place :
ಗೋಣಿ ಸೋಮನಹಳ್ಳಿ, ಬೇಲೂರು ತಾ||
Photo :
Programs
ಪ್ರತಿ ಅಮವಾಸ್ಯೆಗೆ ಶಿವಾನುಭವ ಕಾರ್ಯಕ್ರಮ. ಪ್ರತಿವರ್ಷ ಯುಗಾದಿ ಹಿಂದಿನ ದಿನ ಶ್ರೀಮಠದ ವಾರ್ಷಿಕೋತ್ಸವ. ವರ್ಷಪೂರ್ತಿ ರಾಜ್ಯದ ನಾನಾ ಸ್ಥಳಗಳಲ್ಲಿ ಅರೋಗ್ಯ ಹಾಗೂ ಯೋಗ ಸಂಬಂಧಿ ಶಿಬಿರಗಳ ಆಯೋಜನೆ.
Photos
Full Address Kannada
ಶ್ರೀ ಗುರುಬಸವ ಮಹಾಮನೆ
ಮನಗುಂಡಿ - 580 007
ಧಾರವಾಡ ತಾ||, ಜಿ||