Shree Madiwala Shivayogi Matha Garaga

Shree Madiwala Shivayogi Matha Garaga Claimed

ಶ್ರೀ ಮಡಿವಾಳ ಶಿವಯೋಗಿ ಮಠ ಗರಗ

Average Reviews

Description

ಶ್ರೀ ಮಡಿವಾಳ ಶಿವಯೋಗಿ ಮಠ, ಗರಗ

ಕರ್ತೃ – ಪೂಜ್ಯ ಶ್ರೀ ಮಡಿವಾಳ ಶಿವಯೋಗಿಗಳು

ಗರಗದ ಮಡಿವಾಳೇಶ್ವರರು ಎಂದರೆ ಕರ್ನಾಟಕದ ಧಾರ್ಮಿಕ ಇತಿಹಾಸದದೊಡ್ಡ ಹೆಸರು. ತಮ್ಮ ಅನುಷ್ಠಾನಗಳಿಂದ, ಲೀಲಾಮೃತಗಳಿಂದ ನಾಡಿನಾದ್ಯಂತ ಹೆಸರಾಗಿದ್ದಶ್ರೀಗಳು ಇಂದಿಗೂ ಲಕ್ಷಾಂತರ ಭಕ್ತರ ಆರಾಧ್ಯ ದೈವವಾಗಿದ್ದಾರೆ. ಬಾಲ್ಯದಲ್ಲೇ ತಮ್ಮಲೀಲೆಗಳಿಂದ ಹೆಸರಾಗಿದ್ದ ಶ್ರೀಗಳು ಕಿತ್ತೂರಿನ ಕಲ್ಮಠದಲ್ಲಿ ವಿದ್ಯಾಭ್ಯಾಸ ಮಾಡುತ್ತಾ ಗುರುಗಳಸೇವೆಗೈಯುತ್ತಾ ಪರಿಪಕ್ವಗೊಂಡರು. ತಮ್ಮ ಅನುಷ್ಠಾನ ಶಕ್ತಿಯಿಂದ ಕಿತ್ತೂರಿನ ದೊರೆಮಲ್ಲಸರ್ಜರು ಹಾಗೂ ಮಠದ ಹಿರಿಯ ಗುರುಗಳ ಬೆರಗಿಗೆ ಕಾರಣರಾಗಿದ್ದ ಶಿವಯೋಗಿಗಳು ತಮ್ಮ 18ನೇ ವಯಸ್ಸಿನಲ್ಲಿ ಲೋಕಸಂಚಾರ ಹೊರಟರು.ಹೀಗೆ ಕಿತ್ತೂರಿನಿಂದ ಹೊರಟ ಶ್ರೀಗಳು ನಾಡಿನಾದ್ಯಂತ ಸಂಚರಿಸುತ್ತಾ ಭಕ್ತರನ್ನುಹರಸಿದರು. ಅಪಾರ ಶಿಷ್ಯಬಳಗವನ್ನು ಸಂಪಾದಿಸಿಕೊಂಡಿದ್ದ ಶ್ರೀಗಳು ನೆಲೆಗೊಂಡಸ್ಥಳಗಳಲ್ಲೆಲ್ಲಾ ಮಠಗಳು ಸ್ಥಾಪನೆಯಾದವು. ಸಂಚಾರದ ಕೊನೆಯಲ್ಲಿ ಗರಗ ಗ್ರಾಮಕ್ಕೆಆಗಮಿಸಿದ ಶ್ರೀಗಳು ಇಲ್ಲಿನ ಭಕ್ತರ ಅಪೇಕ್ಷೆಯ ಮೇರೆಗೆ ಭಕ್ತರ ಸಹಕಾರದೊಂದಿಗೆಮಠವನ್ನು ಸ್ಥಾಪಿಸಿ ಗರಗದ ಮಡಿವಾಳ ಶಿವಯೋಗಿಗಳೆಂದೇ ಹೆಸರಾದರು.ಶ್ರೀ ಮಡಿವಾಳ ಶಿವಯೋಗಿಗಳ ನಂತರ ಅನೇಕ ಶ್ರೀಗಳು ಶ್ರೀಮಠವನ್ನುಮುನ್ನಡೆಸಿದ್ದಾರೆ. ಶ್ರೀ ಚನ್ನಬಸವ ಸ್ವಾಮಿಗಳು, ಶ್ರೀ ಮಡಿವಾಳ ಸ್ವಾಮಿಗಳು ಮುಂತಾದಶ್ರೀಗಳು ಭಕ್ತರಲ್ಲಿ ಧಾರ್ಮಿಕ ಅರಿವನ್ನು ಮೂಡಿಸುವಲ್ಲಿ ಶ್ರಮಿಸಿದ್ದಾರೆ. ಹಿಂದಿನ ಶ್ರೀಗಳಾದಶ್ರೀ ಮೂರನೇ ಮಡಿವಾಳ ಸ್ವಾಮಿಗಳ ನಂತರ 1981ರಲ್ಲಿ ಶ್ರೀಮಠಕ್ಕೆ ಪಟ್ಟಾಧಿಕಾರಗೊಂಡವರು ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಚನ್ನಬಸವ ಸ್ವಾಮಿಗಳು.ಶ್ರೀಗಳು ಶ್ರೀಮಠಕ್ಕೆ ವಿಶಾಲವಾದ ಭವನವನ್ನು ಹಾಗೂ ಕರ್ತೃಗುರುಗಳಗದ್ದುಗೆಗೆ ಆಕರ್ಷಣೀಯ ಕಟ್ಟಡವನ್ನು ನಿರ್ಮಿಸಿದ್ದು ಭಕ್ತರ ಸಹಕಾರದೊಂದಿಗೆ ಶ್ರೀಮಠದಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. 18ನೇ ಶತಮಾನದಲ್ಲಿ ಸ್ಥಾಪಿತಗೊಂಡಿರುವಶ್ರೀಮಠವನ್ನು ರೂಢಿಗತವಾಗಿ ಕರ್ತೃಗುರುಗಳ ಹೆಸರಿನಿಂದಲೇ ಶ್ರೀ ಮಡಿವಾಳ ಶಿವಯೋಗಿಮಠವೆಂದು ಕರೆಯಲಾಗುತ್ತಿದ್ದು ಶ್ರೀಮಠದ ರಥೋತ್ಸವವು ಭರತ ಹುಣ್ಣಿಮೆ ನಂತರದಮೂರನೇ ದಿನದಂದು ಜರುಗುತ್ತದೆ.

Swamiji

Swamiji Name :
ಶ್ರೀ ಮ.ನಿ.ಪ್ರ. ಚನ್ನಬಸವ ಸ್ವಾಮಿಗಳು
Place :
ನೇಗಿನಾಳು, ಧಾರವಾಡ ಜಿಲ್ಲೆ.
Pattadikara :
1981
Photo :

Programs

ಪ್ರತಿ ದಿನ ರುದ್ರಾಭಿಷೇಕ. ಪ್ರತಿ ಅಮವಾಸ್ಯೆಗೆ ವಿಶೇಷ ಪೂಜೆ.
ಶ್ರಾವಣ ಮಾಸದಲ್ಲಿ ಪ್ರತಿ ಸೋಮವಾರ ವಿಶೇಷ ಪೂಜೆ.
ಭರತ ಹುಣ್ಣಿಮೆ ನಂತರ ರಥೋತ್ಸವ.
ಕಾರ್ತೀಕ ಮಾಸದಲ್ಲಿ ಲಕ್ಷದೀಪೋತ್ಸವ.

Institutions

ಕಿರಿಯ / ಹಿರಿಯ ಪ್ರಾಥಮಿಕ ಶಾಲೆ

Photos

Full Address Kannada

ಶ್ರೀ ಮಡಿವಾಳ ಶಿವಯೋಗಿ ಮಠ
ಗರಗ - 581 105
ಧಾರವಾಡ ತಾ||, ಜಿ||

Map

Near by Places

ಮುಮ್ಮಿಗಟ್ಟಿ - 8 ಕಿ.ಮೀ.
ಧಾರವಾಡ - 16 ಕಿ.ಮೀ.
ಹುಬ್ಬಳ್ಳಿ - 37 ಕಿ.ಮೀ.

Statistic

14 Views
0 Rating
0 Favorite
0 Share
error: Content is protected !!