Om Matha / Ashrama, Dharwad

Om Matha / Ashrama, Dharwad Claimed

ಓಂ ಮಠ / ಆಶ್ರಮ, ಧಾರವಾಡ

Average Reviews

Description

ಓಂ ಮಠ / ಆಶ್ರಮ, ಧಾರವಾಡ

ಕರ್ತೃ – ಪೂಜ್ಯ ಶ್ರೀ ಶಿವಯೋಗೀಶ್ವರ ಮಹಾಸ್ವಾಮಿಗಳು

ಧಾರವಾಡ ನಗರದ ಹೊರವಲಯದಲ್ಲಿ ನಗರದಿಂದ 4 ಕಿ.ಮೀ. ಅಂತರದಲ್ಲಿಅಸ್ತಿತ್ವದಲ್ಲಿರುವ ಓಂ ಮಠ ಅಥವಾ ಓಂ ಆಶ್ರಮವು ತನ್ನ ಆಧ್ಯಾತ್ಮಿಕ ಕಾರ್ಯಚಟುವಟಿಕೆಗಳ ಮುಖಾಂತರ ಈ ಭಾಗದಲ್ಲಿ ಪ್ರಸಿದ್ಧಿಗೆ ಬಂದಿದೆ. ಓಂ ಮಠದ ಸ್ಥಾಪಕರುಪೂಜ್ಯ ಶ್ರೀ ಶಿವಯೋಗೀಶ್ವರ ಸ್ವಾಮಿಗಳು.ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಆಸಂಗಿಯಲ್ಲಿ 1922ರಅಕ್ಟೋಬರ್ 22ರಂದು ಜನಿಸಿದ ಶ್ರೀ ಶಿವಯೋಗೀಶ್ವರರು ಬಾಲ್ಯದಿಂದಲೂ ಆಧ್ಯಾತ್ಮಿಕತೆಯತ್ತ ಒಲವು ಬೆಳೆಸಿಕೊಂಡವರು. ಹಿಮಾಲಯದಲ್ಲಿ ಆಧ್ಯಾತ್ಮ ಹಾಗೂ ಯೋಗ ಸಾಧನೆಯಲ್ಲಿ ಪರಿಪಕ್ವತೆಯನ್ನು ಪಡೆದು ಅಪ್ರತಿಮ ಯೋಗಸಾಧಕರಾಗಿ ಗುರುತಿಸಿಕೊಂಡರು.ಇಂತಹ ಯೋಗ ಸಾದಕರು 1968ರಲ್ಲಿ ಧಾರವಾಡ ನಗರದ ಹೊರವಲಯದಲ್ಲಿ ನೆಲೆನಿಂತುಓಂ ಆಶ್ರಮವನ್ನು ಸ್ಥಾಪಿಸಿದರು.ಶ್ರೀಗಳು ಶ್ರೀ ಸದ್ಗುರು ಯೋಗೀಶ್ವರ ಸ್ವಾಮಿಗಳ ಯೋಗ ಹಾಗೂ ಸಾಂಸ್ಕøತಿಕಅಭಿವೃದ್ಧಿ ಸ್ವಯಂ ಸೇವಾ ಸಂಸ್ಥೆ ಸ್ಥಾಪಿಸಿ ಅದರ ಮೂಲಕ ಜನರಲ್ಲಿ ಯೋಗದ ಬಗ್ಗೆಅರಿವನ್ನು ಮೂಡಿಸಿದರು. ಆಸಕ್ತರಿಗೆ ಯೋಗ ಸಾಧನೆ ಶಿಬಿರಗಳನ್ನು ಆಯೋಜಿಸುತ್ತಾಆಧ್ಯಾತ್ಮ ಹಾಗೂ ಯೋಗದ ಪ್ರಚಾರ ನಡೆಸಿದ ಶ್ರೀಗಳು ಅಪಾರ ಶಿಷ್ಯ ಬಳಗವನ್ನುಹೊಂದಿದ್ದರು. ಶ್ರೀಗಳ ಕಾಲಾನಂತರ ಅವರ ಶಿಷ್ಯೆ ಡಾ|| ನಿಜಲಿಂಗಮ್ಮ ಕೊಪ್ಪಳ ಅಮ್ಮನವರುಓಂ ಆಶ್ರಮದ ಜವಾಬ್ದಾರಿಯನ್ನು ನಿರ್ವಹಿಸಿಕೊಂಡು ಬರುತ್ತಿದ್ದಾರೆ.ಅಮ್ಮನವರು ಕರ್ನಾಟಕ ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕರಾಗಿದ್ದುಯೋಗದ ಬಗ್ಗೆ ಆಳವಾದ ಸಂಶೋಧನೆ ನಡೆಸಿದವರಾಗಿದ್ದಾರೆ. ತಮ್ಮ ಸಾಧನೆಯಮುಖಾಂತರ ಓಂ ಆಶ್ರಮದಲ್ಲಿ ನಿರಂತರ ಕಾರ್ಯ ಚಟುವಟಿಕೆಗಳನ್ನು ಮುಂದುವರೆಸಿಕೊಂಡು ಬಂದಿರುವ ಅಮ್ಮನವರು ಯೋಗದ ಕುರಿತಾಗಿ ಭಕ್ತರಿಗೆ ಪೂರ್ಣ ಅರಿವನ್ನುಮೂಡಿಸುತ್ತಿದ್ದಾರೆ. ಆಶ್ರಮದಲ್ಲಿ ಪ್ರತಿ ಶಿವರಾತ್ರಿ, ನವರಾತ್ರಿ ಹಾಗೂ ಗುರುಪೂರ್ಣಿಮೆಗಳಲ್ಲಿವಿಶೇಷ ಕಾರ್ಯಕ್ರಮಗಳು ನಡೆಯುತ್ತಿದ್ದು ದೇಶ-ವಿದೇಶಗಳ ಭಕ್ತರು ಆಗಮಿಸಿ ಯೋಗಸಾಧನೆಯ ಶಿಬಿರಗಳಲ್ಲಿ ಪಾಲ್ಗೊಳ್ಳುತ್ತಾರೆ.

Swamiji

Swamiji Name :
ಡಾ|| ನಿಜಲಿಂಗಮ್ಮ ಕೊಪ್ಪಳ ಅಮ್ಮನವರು
Photo :

Programs

ಶ್ರೀ ಸದ್ಗುರು ಯೋಗೀಶ್ವರ ಸ್ವಾಮಿಗಳ “ಯೋಗ ಹಾಗೂ ಸಾಂಸ್ಕøತಿಕ ಅಭಿವೃದ್ಧಿ ಸೇವಾ ಸಂಸ್ಥೆ” ಅಡಿಯಲ್ಲಿ ವಿಶೇಷ ಕಾರ್ಯಕ್ರಮಗಳು.
ಗುರು ಪೂರ್ಣಿಮೆ, ಶಿವರಾತ್ರಿ ಹಾಗೂ ನವರಾತ್ರಿಗಳಂದು ವಿಶೇಷ ಪೂಜೆ.

Full Address Kannada

ಓಂ ಮಠ / ಓಂ ಆಶ್ರಮ
ಕರ್ನಾಟಕ ವಿಶ್ವವಿದ್ಯಾನಿಲಯದ ಪಕ್ಕ
ಧಾರವಾಡ-580 001

Map

Near by Places

ಬಸ್ನಿಲ್ದಾಣ - 7 ಕಿ.ಮೀ.
ರೈಲುನಿಲ್ದಾಣ - 4 ಕಿ.ಮೀ.
ಹುಬ್ಬಳ್ಳಿ - 21 ಕಿ.ಮೀ.

Statistic

8 Views
0 Rating
0 Favorite
0 Share
error: Content is protected !!