ಮಹಾತಪಸ್ವಿ ಶ್ರೀ ಕುಮಾರ ಸ್ವಾಮೀಜಿ ತಪೋವನಧಾರವಾಡ ನಗರದ ಹೊರವಲಯದ ಹಳಿಯಾಳ ರಸ್ತೆಯ ಪಕ್ಕದಲ್ಲಿ ಸ್ಥಾಪಿತಗೊಂಡಿರುವ ಮಹಾತಪಸ್ವಿ ಶ್ರೀ ಕುಮಾರ ಸ್ವಾಮೀಜಿ ತಪೋವನವು ಯೋಗ ಹಾಗೂಧರ್ಮದ ಬಗೆಗಿನ ಅರಿವನ್ನು ಜನರಿಗೆ ನೀಡುತ್ತಾ ಖ್ಯಾತಿಗಳಿಸಿದೆ. ಮಹಾತಪಸ್ವಿ ಶ್ರೀ ಕುಮಾರಸ್ವಾಮೀಜಿಗಳಿಂದ ಸೃಷ್ಠಿಯಾದ ಈ ತಪೋವನ ಸಾವಿರಾರು ಭಕ್ತರ ಜೀವನದಲ್ಲಿ ಭಾರೀಬದಲಾವಣೆಯನ್ನು ತಂದಿದೆ. ಶ್ರೀ ಕುಮಾರ ಸ್ವಾಮಿಗಳು 1909ರಲ್ಲಿ ಜನಿಸಿ 7ನೇ ವರ್ಷದಲ್ಲಿಯೇ ಶಿವಯೋಗ ಮಂದಿರಕ್ಕೆ ಶಿಕ್ಷಣಾರ್ಥಿಯಾಗಿ ಸೇರಲ್ಪಟ್ಟು ಆಧ್ಯಾತ್ಮ ಹಾಗೂ ಯೋಗಶಿಕ್ಷಣವನ್ನು ಪೂರ್ಣಗೊಳಿಸಿ ನಂತರ ಧಾರವಾಡ ನಗರದ ನವಕಲ್ಯಾಣ ಮಠದಲ್ಲಿ ನೆಲೆಸಿ,ಧಾರ್ಮಿಕ ಆಚರಣೆಗಳ ಜೊತೆಯಲ್ಲಿ ಯೋಗ ಸಾಧನೆಗೆ ಮುಂದಾದರು.ಮುಂದೆ ಧಾರವಾಡದ ಹೊರವಲಯದಲ್ಲಿ ತಪೋವನ ಸ್ಥಾಪಿಸಿದ ಶ್ರೀಗಳುಯೋಗದ ಬಗ್ಗೆ ಹೊಸ ಹೊಸ ಆಯಾಮಗಳನ್ನು ಪರಿಚಯಿಸುತ್ತಾ ಹಠಯೋಗ,ಶಿವಯೋಗ ಹಾಗೂ ಕುಂಡಲಿನೀ ಯೋಗದ ಬಗ್ಗೆ ಹೊಸ ಸಂಶೋಧನೆಗಳನ್ನು ನಡೆಸಿದರು.ಗುರುಗಳು ಕೇವಲ ಇಲ್ಲಷ್ಟೇ ಅಲ್ಲದೇ ದೇಶವಿದೇಶಗಳಲ್ಲಿ ವೀರಶೈವ ಧರ್ಮ ಹಾಗೂಇಷ್ಟಲಿಂಗದ ಬಗ್ಗೆ ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನಿಸುತ್ತಾ ಯೋಗದ ಜತೆಗೆಧರ್ಮವನ್ನು ಸಮೀಕರಿಸಿ ಹೊಸ ಆಯಾಮವನ್ನು ಸೃಷ್ಟಿಸಿದರು.ಶ್ರೀಗಳು ಅನೇಕ ದೇಶಗಳಲ್ಲಿ ಪ್ರವಾಸ ಮಾಡಿ ಯೋಗ ಹಾಗೂ ಇಷ್ಟಲಿಂಗಪೂಜೆಯ ಮಹತ್ವವನ್ನು ಸಾರಿದರು. ಯೂರೋಪ್ ಪ್ರವಾಸದಲ್ಲಿ ಕ್ರೈಸ್ತ ಧರ್ಮಗುರುಪೋಪ್ರವರ ಕೈಯಲ್ಲಿ ಇಷ್ಟಲಿಂಗವನ್ನು ಕೊಟ್ಟು ಇಷ್ಟಲಿಂಗದ ಮಹತ್ವ ಹಾಗೂ ಅದರಪರಿಕಲ್ಪನೆಯನ್ನು ವಿವರಿಸಿ ವೀರಶೈವ ಸಿದ್ಧಾಂತವನ್ನು ಬೋಧಿಸಿದರು. ಹೀಗೆ ಇಷ್ಟಲಿಂಗಹಾಗೂ ಶಿವಯೋಗವನ್ನು ಜಗತ್ತಿನಾದ್ಯಂತ ಪಸರಿಸಿದ ಶ್ರೀಗಳು 1996ರಲ್ಲಿ ಲಿಂಗೈಕ್ಯರಾದರು.ಶ್ರೀ ಕುಮಾರ ಸ್ವಾಮಿಗಳು ಲಿಂಗೈಕ್ಯರಾದ ನಂತರ ಮಹಾತಪಸ್ವಿ ಶ್ರೀ ಕುಮಾರಸ್ವಾಮೀಜಿ ಫೌಂಡೇಶನ್ ಸ್ಥಾಪಿಸಿದ ಭಕ್ತರು ಹಿರಿಯ ಗಣ್ಯರ ನೇತೃತ್ವದಲ್ಲಿ ಗುರುಗಳುಸಾಧಿಸಿದ ಸಾಧನೆಯನ್ನು ಪ್ರಚುರಪಡಿಸುತ್ತಾ, ಅವರ ತತ್ವಗಳನ್ನು ಸಾರುತ್ತಾ ತಪೋವನವನ್ನುಸರ್ವಾಂಗೀಣವಾಗಿ ಅಭಿವೃದ್ಧಿಗೊಳಿಸುತ್ತಿದ್ದಾರೆ.
ಆಶ್ರಮದಲ್ಲಿ :
ಬ್ರಹ್ಮ ವಿಹಾರ, ದಿವ್ಯ ದೇವಾಲಯ,
ಯೋಗ ಮಂದಿರ, ಸಮಾಧಿ ಮಂದಿರ,
ಸಭಾ ಭವನ ಇವೆ.
Swamiji
Swamiji Name :
ಮಹಾತಪಸ್ವಿ ಶ್ರೀ ಕುಮಾರ ಸ್ವಾಮಿಗಳು
Photo :
Programs
ಗುರುಪೂರ್ಣಿಮೆ ಮತ್ತು ನೂಲುಹುಣ್ಣಿಮೆಗಳಂದು ವಿಶೇಷ ಧಾರ್ಮಿಕ ಕಾರ್ಯಕ್ರಮಗಳು.
ಆಶ್ವೀಜ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಸ್ಮರಣೆ.
Full Address Kannada
ಶ್ರೀ ಕುಮಾರ ಸ್ವಾಮೀಜಿ
ತಪೋವನ ಹಳಿಯಾಳ ರೋಡ್,
ಧಾರವಾಡ-580 003