Shree Viraktamatha, Sindhanakera

Shree Viraktamatha, Sindhanakera Claimed

ಶ್ರೀ ವಿರಕ್ತಮಠ, ಸಿಂಧನಕೇರಾ

Average Reviews

Description

ಶ್ರೀ ವಿರಕ್ತಮಠ, ಸಿಂಧನಕೇರಾ

ಕರ್ತೃ ಪೂಜ್ಯ ಶ್ರೀ ರಾಚೋಟೇಶ್ವರ ಶಿವಯೋಗಿಗಳು

ಬೀದರ್ ಜಿಲ್ಲೆ ಹುಮನಾಬಾದ್ ತಾಲ್ಲೂಕಿನ ಸಿಂಧನಕೇರಾ ಗ್ರಾಮದಮzs À್ಯಭಾಗದಲ್ಲಿ ಕರ್ತೃ ಶ್ರೀ ರಾಚೋಟೇಶ ್ವರ ಮಹಾಶಿವಯೋಗಿಗಳಿಂದಸ್ಥಾಪಿತಗೊಂಡಿರುವ ಪುರಾತನ ಕಾಲದ ಶ್ರೀ ವಿರಕ್ತಮಠವು ಅಸ್ತಿತ್ವದಲ್ಲಿದ್ದು ತನ್ನ ಧಾರ್ಮಿಕಹಾಗೂ ಸಾಮಾಜಿಕ ಚಟುವಟಿಕೆಗಳ ಮೂಲಕ ಈ ಭಾಗದಲ್ಲಿ ಧಾರ್ಮಿಕ ವಾತಾವರಣವನ್ನುನೆಲೆಗೊಳಿಸುವಲ್ಲಿ ಶ್ರಮಿಸುತ್ತಿದೆ.ಶ್ರೀ ವಿರಕ್ತಮಠವು 12ನೇ ಶತಮಾನದಲ್ಲೇ ಸ್ಥಾಪಿತಗೊಂಡಿತ್ತೆಂದು ಹೇಳಲಾಗುತ್ತದೆಯಾದರೂ ಸೂಕ್ತ ಪುರಾವೆಗಳು ಲಭ್ಯವಿಲ್ಲ. ಹಾಗೂ ಶ್ರೀಮಠದಲ್ಲಿ 3 ಗದ್ದುಗೆಗಳು ಮಾತ್ರದೊರೆತಿರುವುದರಿಂದ ಶ್ರೀಮಠದ ಪರಂಪರೆ, ಇತಿಹಾಸದ ಬಗ್ಗೆ ಹೆಚ್ಚಿನ ಮಾಹಿತಿಗಳುತಿಳಿದುಬರುವುದಿಲ್ಲ. ಈಗಿನ ಶ್ರೀಗಳ ಹಿಂದೆ ಬಂದಿರಬಹುದಾದ ಶ್ರೀಗಳ ಬಗ್ಗೆಯೂಮಾಹಿತಿ ದೊರೆಯುವುದಿಲ್ಲ.2014ರ ಏಪ್ರಿಲ್ 24ರಲ್ಲಿ ಶ್ರೀ ಮ.ನಿ.ಪ್ರ. ಹೊನ್ನಲಿಂಗ ಮಹಾಸ್ವಾಮಿಗಳೆಂಬಅಭಿದಾನದೊಂದಿಗೆ ಶ್ರೀಮಠದ ಪಟ್ಟಕ್ಕೆ ಬಂದ ಈಗಿನ ಶ್ರೀಗಳು ಶ್ರೀಮಠದ ಧಾರ್ಮಿಕಆಚರಣೆಗಳನ್ನು ಚುರುಕುಗೊಳಿಸಿದ್ದಾರೆ. ಇವರು ಅಧಿಕಾರಕ್ಕೆ ಬರುವ ಪೂರ್ವದಲ್ಲಿಸುಮಾರು 30 ವರ್ಷಗಳ ಕಾಲ ಇವರ ತಂದೆ ಶ್ರೀ ರೇವಣಾರಾಧ್ಯರು ಶ್ರೀಮಠವನ್ನುನಿರ್ವಹಿಸಿದ್ದು ಈಗ್ಗೆ 15 ವರ್ಷಗಳ ಹಿಂದೆ ಲಿಂಗೈಕ್ಯರಾದರು.ಶ್ರೀ ಹೊನ್ನಲಿಂಗ ಸ್ವಾಮಿಗಳು ಹುಮನಾಬಾದ್ನಲ್ಲಿ ಬಿ.ಎ. ಪದವಿ ಪಡೆದಿದ್ದುಹುಬ್ಬಳ್ಳಿ ಮೂರುಸಾವಿರ ಮಠದಲ್ಲಿ ಧಾರ್ಮಿಕ ಶಿಕ್ಷಣ ಪಡೆದಿದ್ದಾರೆ. ಶ್ರೀಮಠದಲ್ಲಿ ಶ್ರೀಗಳುನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಯುಗಾದಿಯಲ್ಲಿ ಪಲ್ಲಕಿ ಉತ್ಸವದ ಜೊತೆಗೆ ಪ್ರವಚನ,ಕೀರ್ತನೆಗಳನ್ನು ನಡೆಸುತ್ತಾರೆ ಹಾಗೂ ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕವನ್ನುಮಾಡುತ್ತಿದ್ದು ಕೊನೆಯಲ್ಲಿ ಮಂಗಳ ಕಾರ್ಯಕ್ರಮ ನಡೆಯುತ್ತದೆ.

Swamiji

Swamiji Name :
ಶ್ರೀ ಮ.ನಿ.ಪ್ರ. ಹೊನ್ನಲಿಂಗ ಮಹಾಸ್ವಾಮಿಗಳು
Date of Birth :
25-9-1970
Place :
ಸುಣ್ಣನಕೇರಾ ಹುಮನಾಬಾದ್ ತಾ||
Pattadikara :
24-4-2014
Photo :

Programs

ಪ್ರತಿ ಅಮವಾಸ್ಯೆ ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ.
ಯುಗಾದಿಯಲ್ಲಿ ಪ್ರವಚನ, ಕೀರ್ತನ, ಪಲ್ಲಕ್ಕಿ ಉತ್ಸವ ಹಾಗೂ ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳು.
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ, ಕೊನೆಯಲ್ಲಿ ಮಂಗಳ ಕಾರ್ಯಕ್ರಮ.

Full Address Kannada

ಶ್ರೀ ವಿರಕ್ತಮಠ
ಸಿಂಧನಕೇರಾ -585 330
ಹುಮನಾಬಾದ್ ತಾ||, ಬೀದರ್ ಜಿ||

Map

Near by Places

ಹುಡುಗಿ - 3 ಕಿ.ಮೀ.
ಹುಮನಾಬಾದ್ - 10 ಕಿ.ಮೀ.
ಬಸವಕಲ್ಯಾಣ - 45 ಕಿ.ಮೀ.
ಬೀದರ್ - 55 ಕಿ.ಮೀ.

Statistic

35 Views
0 Rating
0 Favorite
0 Share
error: Content is protected !!