ಪರಮಪೂಜ್ಯ ಶ್ರೀ ಚನ್ನಮಲ್ಲೇಶ್ವರ ತ್ಯಾಗಿಗಳೆಂದರೆ ಈ ಭಾಗದ ದೊಡ್ಡ ಹೆಸರು.ಶ್ರೀಗಳು ಅಸಾಧ್ಯವಾದುದನ್ನು ಸಾಧ್ಯ ಮಾಡಿ ತೋರಿಸುವವರು. ಅತಿ ಕಡಿಮೆ ಅವದಿüಯಲ್ಲಿಯೇ ಇಟಗಾದ ಶ್ರೀ ಯೋಗಾಶ್ರಮವನ್ನು ತಮ್ಮ ಅನುಷ್ಠಾನ ಬಲದಿಂದ ಹಾಗೂ ಭಕ್ತರಸಹಕಾರದೊಂದಿಗೆ ಈ ಭಾಗದ ಪ್ರಮುಖ ಮಠಗಳಲ್ಲಿ ಒಂದಾಗಿ ಮಾಡಿದ್ದಾರೆ. ಇಂದುಶ್ರೀಮಠವು ಶ್ರೀ ರಂಭಾಪುರಿ ಪೀಠದ ಶಾಖಾಮಠವಾಗಿ ಮುಂದುವರೆಯುತ್ತಿದೆ.ಶ್ರೀ ಚನ್ನಮಲ್ಲೇಶ್ವರ ತ್ಯಾಗಿಗಳು ಮರಗುತ್ತಿಯ ಶ್ರೀ ಗುರು ವೇದಮೂರ್ತಿದಾನಯ್ಯ ಸ್ವಾಮಿಗಳ ಆಶೀರ್ವಾದದಿಂದ ಹುಟ್ಟಿದವರು. ಬಾಲ್ಯದಿಂದಲೂ ಆಧ್ಯಾತ್ಮಿಕತೆಯತ್ತಹೊರಳಿದ ಶ್ರೀಗಳು ಸಂಸಾರ ಬಂಧನಕ್ಕೆ ಒಳಗಾದರೂ ಕೆಲ ಕಾಲ ಮಾತ್ರ ಸಂಸಾರಸುಖವನ್ನು ಅನುಭವಿಸಿದರು. ತಮ್ಮ ಚಿಕ್ಕವಯಸ್ಸಿನಲ್ಲಿಯೇ ಅನುಷ್ಠಾನಾದಿಗಳನ್ನುಕೈಗೊಳ್ಳುತ್ತಾ ಲೋಕೋದ್ಧಾರಕ್ಕಾಗಿ ಶ್ರಮಿಸಿದರು.ಕೆಲಕಾಲ ನಿಡವಂಚಿಯಲ್ಲಿ ನೆಲೆನಿಂತು ಗುರುಭದ್ರೇಶ್ವರರ ಸ್ಮರಣೆಯೊಂದಿಗೆಪರಿಪಕ್ವಗೊಂಡರು. ಉದಗಿರಿಯ ಶ್ರೀ ಅಡಿವೆಪ್ಪ ಮಹಾರಾಜರಿಂದ 1973ರಲ್ಲಿ ದೀಕ್ಷೆ ಪಡೆದಶ್ರೀಗಳು 1974ರಲ್ಲಿ 9 ದಿನಗಳ ಕಾಲ ನಿಡವಂಚಿಯ ಭದ್ರೇಶ್ವರ ಚೌಕಿಮಠದಲ್ಲಿ ಸಮಾಧಿಅನುಷ್ಠಾನ ಕೈಗೊಂಡರು. ಅಲ್ಲಿಂದ ಮುಂದೆ ಇಟಗಾಕ್ಕೆ ಆಗಮಿಸಿದ ಶ್ರೀಗಳು ಊರ ಹೊರಗೆಶ್ರೀ ಯೋಗಾಶ್ರಮವನ್ನು 1973ರ ಆಗಸ್ಟ್ 25ರಲ್ಲಿ ಸ್ಥಾಪಿಸಿದರು.ಶ್ರೀ ಯೋಗಾಶ್ರಮವನ್ನು ಸ್ಥಾಪಿಸಿದ ಶ್ರೀಗಳು ಈ ಮೂರೂವರೆ ದಶಕಗಳಲ್ಲಿಅದ್ಭುತವನ್ನು ಸಾಧಿಸಿದ್ದಾರೆ. ಶ್ರೀಮಠದಲ್ಲಿ ಕೋಟಿಲಿಂಗಮಂದಿರ ಹಾಗೂ 63 ಪುರಾತನಮಂದಿರ, ಶ್ರೀ ಗುರು ಚನ್ನಮಲ್ಲೇಶ್ವರ ಆಶ್ರಮ, ಗುರು ನಿಜಲಿಂಗ ಭದ್ರೇಶ್ವರ ದೇವಾಲಯ,ದಾಸೋಹ ಮಂದಿರ, ಕಲ್ಯಾಣ ಮಂಟಪ, 12 ಜ್ಯೋತಿಲಿಂಗ ಮಂದಿರ, ಭೂಕೈಲಾಸಮಂಟಪ, ಅನುಭವ ಮಂಟಪ, ನಂದಿಗುಡಿ ಹೀಗೆ ಸರ್ವಾಂಗೀಣ ಅಭಿವೃದ್ಧಿಯನ್ನುಕೈಗೊಂಡಿದ್ದಾರೆ. ಹೀಗೆ ಧಾರ್ಮಿಕ, ಸಾಮಾಜಿಕ, ಸಾಂಸ್ಕøತಿಕವಾಗಿ ಶ್ರೀಮಠವನ್ನುಬೆಳೆಸಿರುವ ಶ್ರೀಗಳು ಇತ್ತೀಚೆಗೆ 2015ರ ಫೆಬ್ರವರಿ 17ರಂದು ಶ್ರೀ ಶಿವಯೋಗೀಶ್ವರಮರಿದೇವರು ಪ್ರಭುಸ್ವಾಮಿಗಳನ್ನು ತಮ್ಮ ಉತ್ತರಾಧಿಕಾರಿಗಳನ್ನಾಗಿ ನೇಮಿಸಿದ್ದಾರೆ.
Swamiji
Swamiji Name :
ಪೂಜ್ಯ ಶ್ರೀ ಚನ್ನಮಲ್ಲೇಶ್ವರ ತ್ಯಾಗಿಗಳು
Date of Birth :
16-6-1952
Place :
ಖೇಣಿ ರಂಜೋಳಿ, ಬೀದರ್ ತಾ||
Photo :
Swamiji Name :
ಶ್ರೀ ಶಿವಯೋಗೀಶ್ವರ ಮರಿದೇವರು ಪ್ರಭುಸ್ವಾಮಿಗಳು
Place :
ನೇಸರ್ಗಿಸೋಮನಟ್ಟಿ, ಬೈಲಹೊಂಗಲ ತಾ||
Photo :
Programs
ಪ್ರತಿ ಹುಣ್ಣಿಮೆ ಚತುರ್ದಶಿಗೆ ತಿಂಗಳ ದರ್ಶಿಕೆ.
ಶಿವರಾತ್ರಿಗೆ ಶ್ರೀಮಠದ ಜಾತ್ರೆ. ಜೂನ್ನಲ್ಲಿ ಶ್ರೀಗಳ ಹುಟ್ಟುಹಬ್ಬ.
ಶ್ರಾವಣ ಮಾಸದಲ್ಲಿ ನಿತ್ಯ ಶ್ರೀಗಳ ಪಾದ ಪೂಜೆ.
ನವರಾತ್ರಿಗೆ ನಿತ್ಯ ಶ್ರೀದೇವಿ ಪುರಾಣ ಮತ್ತು ಭಜನೆ.
Photos
Full Address Kannada
ಶ್ರೀ ಯೋಗಾಶ್ರಮ ಚೌಕಿಮಠ
ಇಟಗಾ -585 412
ಹುಮನಾಬಾದ್ ತಾ||, ಬೀದರ್ ಜಿ||