ಬೀದರ್ ಜಿಲ್ಲೆಯ ಹುಡುಗಿ ಗ್ರಾಮದಲ್ಲಿ ಸುಮಾರು 200 ವರ್ಷಕ್ಕಿಂತಲೂ ಹೆಚ್ಚುಇತಿಹಾಸವಿರುವ ಶ್ರೀ ಮ.ನಿ.ಪ್ರ. ಚನ್ನಮಲ್ಲೇಶ್ವರ ಮಹಾಸ್ವಾಮಿಗಳಿಂದ ಸ್ಥಾಪಿತಗೊಂಡಿರುವಶ್ರೀ ವಿರಕ್ತಮಠವು ಅಸ್ತಿತ್ವದಲ್ಲಿದ್ದು ತನ್ನ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಮೂಲಕ ಭಕ್ತರಲ್ಲಿ ಧಾರ್ಮಿಕ ಅರಿವನ್ನು ಮೂಡಿಸುತ್ತಿದೆ. ಕರ್ತೃಗುರುಗಳ ಕಾಲಮಾನಹಾಗೂ ಶ್ರೀಮಠದ ಸ್ಥಾಪಿತ ಅವಧಿಯ ಬಗ್ಗೆ ನಿಖರವಾದ ಮಾಹಿತಿಗಳು ಲಭ್ಯವಿಲ್ಲ.ಕರ್ತೃಗುರುಗಳ ನಂತರ ಈರ್ವರು ಗುರುಗಳು ಶ್ರೀಮಠದಲ್ಲಿ ಧಾರ್ಮಿಕಆಚರಣೆಗಳನ್ನು ನಡೆಸಿದ್ದು, ಅವರ ನಂತರ ಹಿಂದಿನ ಗುರುಗಳಾದ ಶ್ರೀ ಮ.ನಿ.ಪ್ರ.ಗುರುಬಸವಲಿಂಗ ಮಹಾಸ್ವಾಮಿಗಳು ಅಧಿಕಾರಕ್ಕೆ ಬಂದರು. ಶ್ರೀಗಳು ಶ್ರೀಮಠದ ಧಾರ್ಮಿಕಆಚರಣೆಗಳೊಂದಿಗೆ ಸಾಮಾಜಿಕ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತಾ ಈ ಭಾಗದಜನರಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಪ್ರಜ್ಞೆಯನ್ನು ಜಾಗೃತಗೊಳಿಸುವಲ್ಲಿ ಯಶಕಂಡಿದ್ದರು. 1995ರಲ್ಲಿ ಈಗಿನ ಶ್ರೀಗಳನ್ನು ತಮ್ಮ ಉತ್ತರಾಧಿಕಾರಿಗಳನ್ನಾಗಿ ನೇಮಿಸಿಕೊಂಡಶ್ರೀಗಳು 1997ರಲ್ಲಿ ಲಿಂಗೈಕ್ಯರಾಗಿದ್ದಾರೆ.ಈಗಿನ ಶ್ರೀಗಳಾದ ಪೂಜ್ಯ ಶ್ರೀ ಚನ್ನಮಲ್ಲ ಸ್ವಾಮಿಗಳು 1984ರಲ್ಲಿ ಜನಿಸಿದವರಾಗಿದ್ದು ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ. ಪದವಿ ಪಡೆದಿದ್ದಾರೆ. ಹಾಗೂಶಿವಯೋಗ ಮಂದಿರ ಮತ್ತು ಹುಬ್ಬಳ್ಳಿಯ ಮೂರು ಸಾವಿರ ಮಠದಲ್ಲಿ ಆಧ್ಯಾತ್ಮ ಶಿಕ್ಷಣವನ್ನುಪಡೆದಿರುವ ಶ್ರೀಗಳು ಶ್ರೀಮಠಕ್ಕೆ ಮರಳಿ ಶ್ರೀಮಠದ ಧಾರ್ಮಿಕ ಹಾಗೂ ಸಾಮಾಜಿಕಚಟುವಟಿಕೆಗಳನ್ನು ಚುರುಕುಗೊಳಿಸಿದ್ದಾರೆ.ಶ್ರೀಮಠದಲ್ಲಿ ಪ್ರತಿವರ್ಷ ಫೆಬ್ರವರಿ 12 ರಂದು ಹಿಂದಿನ ಶ್ರೀಗಳಾದ ಲಿಂ. ಶ್ರೀಮ.ನಿ.ಪ್ರ. ಗುರುಬಸವಲಿಂಗ ಮಹಾಸ್ವಾಮಿಗಳ ಪುಣ್ಯಸ್ಮರಣೋತ್ಸವ ಕಾರ್ಯಕ್ರಮವನ್ನುಹಮ್ಮಿಕೊಳ್ಳುತ್ತಿದ್ದು, ದೀಪಾವಳಿಯಲ್ಲಿ ಧರ್ಮಸಭೆಯನ್ನು ಆಯೋಜಿಸಲಾಗುತ್ತಿದೆ. ಹಾಗೂಈ ಸಮಯದಲ್ಲಿ ಗ್ರಾಮಸ್ಥರಿಂದ ಪ್ರಸಾದ ವಿನಿಯೋಗ ನಡೆಯುತ್ತದೆ.
Swamiji
Swamiji Name :
ಪೂಜ್ಯ ಶ್ರೀ ಚನ್ನಮಲ್ಲ ಸ್ವಾಮಿಗಳು
Date of Birth :
1-6-1984
Place :
ಇಟಗಾ, ಹುಮನಾಬಾದ್ ತಾ||
Photo :
Programs
ಪ್ರತಿವರ್ಷ ಫೆಬ್ರವರಿ 12ರಂದು ಲಿಂ. ಶ್ರೀ ಮ.ನಿ.ಪ್ರ. ಗುರುಬಸವಲಿಂಗ ಮಹಾಸ್ವಾಮಿಗಳ ಪುಣ್ಯಾರಾಧನೆ. ದೀಪಾವಳಿಗೆ ವಿಶೇಷ ಪೂಜೆ, ಧರ್ಮ ಸಭೆ, ಗ್ರಾಮಸ್ಥರಿಂದ ಪ್ರಸಾದ.
Institutions
ಕಿರಿಯ ಪ್ರಾಥಮಿಕ ಶಾಲೆ
Photos
Full Address Kannada
ಶ್ರೀ ವಿರಕ್ತಮಠ
ಹುಡುಗಿ -585 329
ಹುಮನಾಬಾದ್ ತಾ||, ಬೀದರ್ ಜಿ||