Shree Hirematha (Ayyappa Swami Matha)

Shree Hirematha (Ayyappa Swami Matha) Claimed

ಶ್ರೀ ಹಿರೇಮಠ (ಅಯ್ಯಪ್ಪ ಸ್ವಾಮಿ ಮಠ)

Average Reviews

Description

ಶ್ರೀ ಹಿರೇಮಠ (ಅಯ್ಯಪ್ಪ ಸ್ವಾಮಿ ಮಠ)

ಕರ್ತೃ – ಶ್ರೀ ಷ.ಬ್ರ. ಗುರುಲಿಂಗ ಮುನಿಪುಂಗವ ಸ್ವಾಮಿಗಳು

ಬೀದರ್ ಜಿಲ್ಲೆ ಹುಮನಾಬಾದ್ ತಾಲ್ಲೂಕಿನ ಚಿಟಗುಪ್ಪಾ ಗ್ರಾಮದಲ್ಲಿ ಸುಮಾರು17-18ನೇ ಶತಮಾನದಲ್ಲಿ ಶ್ರೀ ಷ.ಬ್ರ. ಗುರುಲಿಂಗ ಮುನಿಪುಂಗವ ಮಹಾಸ್ವಾಮಿಗಳಿಂದಸ್ಥಾಪಿತಗೊಂಡಿರುವ ಶ್ರೀ ಹಿರೇಮಠವು ಅಸ್ತಿತ್ವದಲ್ಲಿದ್ದು ತನ್ನ ಧಾರ್ಮಿಕ ಆಚರಣೆಗಳಮೂಲಕ ಈ ಭಾಗದ ಜನರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸುತ್ತಿದೆ. ಶ್ರೀಮಠವುಉಜ್ಜಯಿನಿ ಪೀಠದ ಶಾಖಾ ಮಠವಾಗಿ ಪಂಚಪೀಠಗಳ ಪರಂಪರೆಯಲ್ಲಿ ಬೆಳೆದುಬಂದಿದೆ.ಆಂಧ್ರ ಪ್ರದೇಶದ ‘ಧಾಮಗುಂಡ’ ಕ್ಷೇತ್ರದಲ್ಲಿ ವಾಸಿಸುತ್ತಿದ್ದ ಶ್ರೀ ಗುರುಲಿಂಗಮುನಿಪುಂಗವ ಸ್ವಾಮಿಗಳನ್ನು ಅವರ ಶಿಷ್ಯ ಶ್ರೀ ವೀರ ಸಂಗ್ರಾಮ ದೇಸಾಯಿಯವರುಕರ್ನಾಟಕದ ದೇವಗಿರಿಗೆ ಕರೆತಂದರೆಂದು, ನಂತರ ‘ವೀರಭದ್ರಪುರ’ (ಚಾಂಗಲೇರಿ) ಯನ್ನುನಿರ್ಮಿಸಿ ಮಧ್ಯದಲ್ಲಿ ಮಠ ಕಟ್ಟಿಸಿ ತನ್ನ ಸರ್ವಸ್ವವನ್ನೆಲ್ಲಾ ಗುರುಗಳಿಗೆ ಅರ್ಪಿಸಿಧನ್ಯರಾದರೆಂದು ತಿಳಿದುಬರುತ್ತದೆ. ಅಂದಿನಿಂದ ಶ್ರೀಮಠದ ಗುರುಗಳು ಹಾಗೂ ದೇಸಾಯಿಮನೆತನದವರು ಶ್ರೀಮಠದ ಕಾರ್ಯಗಳನ್ನು ನೆರವೇರಿಸಿಕೊಂಡು ಬರುತ್ತಿದ್ದಾರೆ.ಶ್ರೀ ಗುರುಲಿಂಗ ಮುನಿಪುಂಗವರು ತಮ್ಮ ಉತ್ತರಾಧಿಕಾರಿಗಳನ್ನಾಗಿ ಶ್ರೀಗುರುಚನ್ನವೀರ ಶಿವಾಚಾರ್ಯರಿಗೆ ಪಟ್ಟಾಭಿಷೇಕವನ್ನು ಮಾಡಿದರೆಂದು ತಿಳಿದು ಬರುತ್ತಿದ್ದುಇವರ ಕಾಲ ಸುಮಾರು 1741. ನಂತರ ಶ್ರೀ ಗುರುಲಿಂಗ ಶಿವಾಚಾರ್ಯರು ಹೀಗೆ ಗತಿಸಿಮುಂದೆ ಶ್ರೀ ಗಉರು ಅಯ್ಯಪ್ಪ ಶಿವಾಚಾರ್ಯರು ಪಟ್ಟಕ್ಕೆ ಬಂದರೆಂದು ತಿಳಿದುಬರುತ್ತದೆ.ಶ್ರೀಗಳು ಮಹಾಮಹಿಮರಾಗಿದ್ದು, ದಾಸೋಹ ಮೂರ್ತಿಗಳಾಗಿ ಆಸಕ್ತರನ್ನು ಸನ್ಮಾರ್ಗದಲ್ಲಿಕೊಂಡೊಯ್ದು 1969ರಲ್ಲಿ ಲಿಂಗೈಕ್ಯರಾದರು.ನಂತರ 1970ರ ಮೇ 29ರಲ್ಲಿ ಈಗಿನ ರಾಜಮಾತಾ ಮಾತಾಬಾಯಿ ದೇಶಮುಖತಾಯಿಯವರು ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಗುರುಲಿಂಗ ಶಿವಾಚಾರ್ಯ ಸ್ವಾಮಿಗಳಿಗೆಪಟ್ಟಾಭಿಷೇಕ ಮಾಡಿಸಿ ಅಧಿಕಾರ ವಹಿಸಿಕೊಟ್ಟಿದ್ದಾರೆ. ಶ್ರೀಗಳು ಅನುಷ್ಠಾನ-ಪ್ರವಚನಾದಿಗಳನ್ನು ಮಾಡುತ್ತಾ ‘ಶಿವಯೋಗರತ್ನ’, ‘ಪುರಾಣರತ್ನ’ ಎಂಬ ಪದವಿಗಳಿಂದ ಪುರಸ್ಕøತರಾಗಿದ್ದಾರೆ. 1991ರಲ್ಲಿ ಶ್ರೀ ಗುರು ಅಯ್ಯಪ್ಪ ಸ್ವಾಮಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಅದರಅಡಿಯಲ್ಲಿ ಪದವಿ ಪೂರ್ವ ಕಾಲೇಜುಗಳನ್ನು ಪ್ರಾರಂಭಿಸಿದ್ದಾರೆ.

Swamiji

Swamiji Name :
ಶ್ರೀ ಷ.ಬ್ರ. ಗುರುಲಿಂಗ ಶಿವಾಚಾರ್ಯ ಸ್ವಾಮಿಗಳು
Date of Birth :
8-9-1943
Place :
ಜಮಖಂಡಿ, ಬಾಗಲಕೋಟೆ ಜಿ||
Pattadikara :
1970
Photo :

Programs

ಪ್ರತಿ ಅಮವಾಸ್ಯೆ ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ, ಫಾಲ್ಗುಣ ಶುದ್ಧ ಸಪ್ತಮಿಗೆ ಲಿಂ. ಶ್ರೀ ಅಯ್ಯಪ್ಪ ಸ್ವಾಮಿಯವರ ಪುಣ್ಯಾರಾಧನೆ.
ಶ್ರೀ ಹಿರೇಮಠ (ಅಯ್ಯಪ್ಪ ಸ್ವಾಮಿ ಮಠ)

Institutions

ಪದವಿ ಪೂರ್ವ ಕಾಲೇಜು, ಪದವಿ ಪೂರ್ವ ವೃತ್ತಿಪರ ಶಿಕ್ಷಣ ಕಾಲೇಜು.

Photos

Full Address Kannada

ಶ್ರೀ ಹಿರೇಮಠ (ಅಯ್ಯಪ್ಪ ಸ್ವಾಮಿ ಮಠ)
ಚಿಟಗುಪ್ಪಾ - 585 412
ಹುಮನಾಬಾದ್ ತಾ||. ಬೀದರ್ ಜಿ||

Map

Near by Places

ಹುಡುಗಿ - 10 ಕಿ.ಮೀ.
ಹುಮನಾಬಾದ್ - 18 ಕಿ.ಮೀ.
ಬೀದರ್ - 40 ಕಿ.ಮೀ.

Statistic

54 Views
0 Rating
0 Favorite
0 Share
error: Content is protected !!