ಕರ್ತೃ – ಶ್ರೀ ಷ.ಬ್ರ. ಮಹಾಂತೇಶ್ವರ ಶಿವಾಚಾರ್ಯ ಸ್ವಾಮಿಗಳು
ಶ್ರೀ ಷ.ಬ್ರ. ಮಹಾಂತೇಶ್ವರ ಶಿವಾಚಾರ್ಯ ಸ್ವಾಮಿಗಳಿಂದ ಸ್ಥಾಪಿತಗೊಂಡಿತೆಂದುಹೇಳಲಾಗುವ ಪ್ರಾಚೀನ ಇತಿಹಾಸವುಳ್ಳ ಶ್ರೀ ಮಹಾಂತೇಶ್ವರ ಸಂಸ್ಥಾನ ಹಿರೇಮಠವುಹುಮನಾಬಾದ್ ತಾಲ್ಲೂಕಿನ ಭೀಮಳಖೇಡದಲ್ಲಿ ಅಸ್ತಿತ್ವದಲ್ಲಿದ್ದು ಈ ಭಾಗದಲ್ಲಿ ಧಾರ್ಮಿಕವಾತಾವರಣವನ್ನು ನೆಲೆಗೊಳಿಸಿದೆ. ಶ್ರೀಮಠವು ಶ್ರೀಮದ್ ರಂಭಪುರಿ ಪೀಠದಶಾಖಾಮಠವಾಗಿ ಶಿಷ್ಯವರ್ಗದ ಪರಂಪರೆಯಲ್ಲಿ ಬೆಳೆದುಬಂದಿದೆ.ಪ್ರಾಚೀನ ಇತಿಹಾಸವನ್ನು ಹೊಂದಿರುವ ಶ್ರೀಮಠದ ಪರಂಪರೆ ಶ್ರೀಮಂತವಾಗಿದೆ.ಶ್ರೀ ಷ.ಬ್ರ. ಮಹಾಂತೇಶ್ವರ ಶಿವಾಚಾರ್ಯರಿಂದ ಪ್ರಾರಂಭಗೊಂಡ ಪರಂಪರೆ ಈಗಿನಕಿರಿಯ ಶ್ರೀಗಳ ತನಕ ಒಟ್ಟು 17 ಶ್ರೀಗಳನ್ನು ಕಂಡಿದೆ. ಪರಂಪರೆಯ 13ನೇ ಶ್ರೀಗಳಾದ ಶ್ರೀಷ.ಬ್ರ. ಎರಡನೇ ಮಹಾಂತೇಶ ಸ್ವಾಮಿಗಳು ಪವಾಡ ಪುರುಷರಾಗಿದ್ದು ಇವರ ಬಗೆಗಿನಜನಪದ ಕಥೆಗಳು ಜನಜನಿತಗೊಂಡಿವೆ ಹಾಗೂ 14ನೇ ಶ್ರೀಗಳಾದ ಶ್ರೀ ಷ.ಬ್ರ. ವೀರಭದ್ರಸ್ವಾಮಿಗಳು ತತ್ವಪದ ರಚನಾಕಾರರಾಗಿ ಹೆಸರಾಗಿದ್ದರು.ಈಗಿನ ಹಿರಿಯ ಶ್ರೀಗಳಾದ ಶ್ರೀ ಷ.ಬ್ರ. ಗುರುಪಾದ ಶಿವಾಚಾರ್ಯರು 1959ರಲ್ಲಿಶ್ರೀಮಠದ ಪಟ್ಟಕ್ಕೆ ಬಂದು ಸುಧೀರ್ಘ ಐದೂವರೆ ದಶಕಗಳ ಕಾಲ ಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸಿದ್ದಾರೆ. ಶ್ರೀಗಳು ಕಾಶಿಯಲ್ಲಿ ಅಭ್ಯಸಿಸಿದ ಸಂಸ್ಕøತ ಪಂಡಿತರಾಗಿದ್ದುಅನುಷ್ಠಾನಪ್ರಿಯರಾಗಿದ್ದಾರೆ. ಶ್ರೀಗಳು ಕರ್ನಾಟಕ, ಆಂಧ್ರ, ಮಹಾರಾಷ್ಟ್ರಗಳಲ್ಲಿ ಅನುಷ್ಠಾನಗಳನ್ನು ಮಾಡಿ ಅನುಷ್ಠಾನಮೂರ್ತಿಗಳೆಂದು ಹೆಸರು ಗಳಿಸಿದ್ದಾರೆ.ಶ್ರೀಗಳು 2003ರಲ್ಲಿ ಕಿರಿಯ ಶ್ರೀಗಳಾದ ಶ್ರೀ ಷ.ಬ್ರ. ಚಂದ್ರಶೇಖರ ಶಿವಾಚಾರ್ಯಸ್ವಾಮಿಗಳನ್ನು ಪಟ್ಟಕ್ಕೆ ತಂದಿದ್ದಾರೆ. ಶ್ರೀ ಚಂದ್ರಶೇಖರ ಶಿವಾಚಾರ್ಯರು ಗ್ರಾಮದ ಹೊರಭಾಗದಲ್ಲಿ ಮತ್ತೊಂದು ಕಟ್ಟಡ ನಿರ್ಮಿಸಿ ಮಠದ ಆಡಳಿತವನ್ನು ಸ್ಥಳಾಂತರಿಸಿಕೊಂಡಿದ್ದಾರೆಹಾಗೂ ಉಭಯ ಮಠಗಳಲ್ಲೂ ಕ್ಷೇತ್ರನಾಥ ವೀರಭದ್ರೇಶ್ವರ ದೇವಸ್ಥಾನಗಳಿವೆ. ಹಿರಿಯಶ್ರೀಗಳು ಊರ ಒಳಗಿನ ಮಠದಲ್ಲಿ ವಾಸ್ತವ್ಯವಿದ್ದು ಉಭಯ ಶ್ರೀಗಳು ಶ್ರೀಮಠದ ಭಕ್ತರಿಗೆಸನ್ಮಾರ್ಗ ತೋರುತ್ತಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ಗುರುಪಾದ ಶಿವಾಚಾರ್ಯ ಸ್ವಾಮಿಗಳು
Place :
ಗೋರಟ, ಬಸವಕಲ್ಯಾಣ ತಾ||
Pattadikara :
1959
Photo :
Swamiji Name :
ಶ್ರೀ ಷ.ಬ್ರ. ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು
Date of Birth :
10-5-1969
Place :
ಗೊಡಚಿ, ರಾಮದುರ್ಗ ತಾ||
Pattadikara :
2003
Photo :
Programs
ಪ್ರತಿ ಹುಣ್ಣಿಮೆಗೆ ಮುನ್ನ ಬರುವ ಚತುರ್ದಶಿಗೆ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು.
ಶಿವರಾತ್ರಿಗೆ ಶ್ರೀ ವೀರಭದ್ರೇಶ್ವರ ರಥೋತ್ಸವ.
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ ಮತ್ತು ಭಜನೆ.
Photos
Full Address Kannada
ಶ್ರೀ ಮಹಾಂತೇಶ್ವರ ಸಂಸ್ಥಾನ ಹಿರೇಮಠ
ಭೀಮಳಖೇಡ (ವಿಮಲಖೇಡ)
ಹುಮನಾಬಾದ್ ತಾ||, ಬೀದರ್ ಜಿ||