Shree Havagi Swami Samsthana Matha

Shree Havagi Swami Samsthana Matha Claimed

ಶ್ರೀ ಹಾವಗಿ ಸ್ವಾಮಿ ಸಂಸ್ಥಾನ ಮಠ

Average Reviews

Description

ಶ್ರೀ ಹಾವಗಿ ಸ್ವಾಮಿ ಸಂಸ್ಥಾನ ಮಠ

ಕರ್ತೃ ಪೂಜ್ಯ ಶ್ರೀ ಹಾವಗಿ ಮಹಾಸ್ವಾಮಿಗಳು

ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ಡೋಣಗಾಂವ ಗ್ರಾಮವು ಶ್ರೀ ಹಾವಗಿಸ್ವಾಮಿ ಸಂಸ್ಥಾನ ಮಠದಿಂದಾಗಿ ಈ ಭಾಗದಲ್ಲಿ ಪ್ರಸಿದ್ಧಿಯಾಗಿದೆ. ಕರ್ತೃ ಶ್ರೀ ಹಾವಗಿಸ್ವಾಮಿಗಳ ಮಹಿಮೆ ಅಪಾರ. ತಮ್ಮ ಪವಾಡಗಳಿಂದ ಹಾಗೂ ಆಚರಣೆಗಳಿಂದ ಜನಜನಿತರಾಗಿರುವ ಶ್ರೀಗಳು ಜನರ ಪಾಲಿನ ಆರಾಧ್ಯ ದೈವವಾಗಿದ್ದರು. ಶ್ರೀಗಳು ಭಕ್ತರ ಸಹಕಾರದೊಂದಿಗೆ ಶ್ರೀ ಹಾವಗಿ ಸ್ವಾಮಿ ಸಂಸ್ಥಾನ ಮಠವನ್ನು ಸ್ಥಾಪಿಸಿ ಅದರ ಮುಖೇನ ಹಲವಾರುಶಾಖಾಮಠಗಳನ್ನು ಸ್ಥಾಪಿಸಿದ್ದರು.ಆದರೆ ಶ್ರೀ ಹಾವಗಿ ಸ್ವಾಮಿಗಳ ಕಾಲಮಾನದ ಬಗ್ಗೆಯಾಗಲೀ ಶ್ರೀಮಠದ ಸ್ಥಾಪಿತಕಾಲಮಾನದ ಬಗ್ಗೆಯಾಗಲೀ, ನಂತರದ ಪಂಪರೆಯ ಬಗ್ಗೆಯಾಗಲಿ ನಿಖರ ದಾಖಲೆಗಳಕೊರತೆಯಿದೆ. ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ. ಗುರುಲಿಂಗ ಶಿವಾಚಾರ್ಯ ಸ್ವಾಮಿಗಳುಪುರಾತನ ಪರಂಪರೆಯ ಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸಿ 2003ರಲ್ಲಿಲಿಂಗೈಕ್ಯರಾಗಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಶಂಭುಲಿಂಗ ಶಿವಾಚಾರ್ಯ ಸ್ವಾಮಿಗಳು 1968ರಜೂನ್ 22ರಲ್ಲಿ ಜನಿಸಿದವರಾಗಿದ್ದು ಬಾಲ್ಯದಿಂದಲೇ ಆಧ್ಯಾತ್ಮಿಕತೆಯತ್ತ ಒಲವುಹೊಂದಿದವರು. ಎಡೆಯೂರು, ಶಿವಯೋಗ ಮಂದಿರ ಹಾಗೂ ಕಾಶಿಯ ಬನಾರಸ್ವಿಶ್ವವಿದ್ಯಾನಿಲಯಗಳಲ್ಲಿ ಆಧ್ಯಾತ್ಮ ಶಿಕ್ಷಣವನ್ನು ಪೂರ್ಣಗೊಳಿಸಿದ ಶ್ರೀಗಳು ಡೋಣಗಾಂಗ್ರಾಮಕ್ಕೆ ಆಗಮಿಸುತ್ತಾರೆ.2007ರಲ್ಲಿ ಶ್ರೀ ಹಾವಗಿ ಸ್ವಾಮಿ ಸಂಸ್ಥಾನ ಮಠದ ಪಟ್ಟಾಧಿಕಾರಕ್ಕೆ ಬರುವ ಶ್ರೀಗಳುಕಡಿಮೆ ಅವಧಿಯಲ್ಲಿಯೇ ಶ್ರೀಮಠವನ್ನು ಅಭಿವೃದ್ಧಿಗೊಳಿಸುವತ್ತ ಶ್ರಮಿಸುತ್ತಿದ್ದಾರೆ. ಪ್ರತಿಅಮವಾಸ್ಯೆಗಳಲ್ಲಿ ಪ್ರವಚನ ನಡೆಸುವ ಶ್ರೀಗಳು ಗಣೇಶ ಚೌತಿ ದಿನದಂದು ಶ್ರೀ ಹಾವಗಿಸ್ವಾಮಿ ಜಾತ್ರೆಯನ್ನು ವಿಜೃಂಭಣೆಯಿಂದ ನಡೆಸುತ್ತಾರೆ.ಶ್ರೀಮಠದ ಶಾಖಾಮಠಗಳು 108 ಇದ್ದವೆಂದು ಅವುಗಳಲ್ಲಿ ಪ್ರಸ್ತುತ 25ಶಾಖಾಮಠಗಳು ಶ್ರೀಗಳ ಅಧೀನದಲ್ಲಿವೆಯೆಂದು ತಿಳಿದುಬರುತ್ತಿದ್ದು ಅವುಗಳು ಕರ್ನಾಟಕಹಾಗೂ ಮಹಾರಾಷ್ಟ್ರಗಳಲ್ಲಿವೆ.

Swamiji

Swamiji Name :
ಶ್ರೀ ಷ.ಬ್ರ. ಶಂಭುಲಿಂಗ ಶಿವಾಚಾರ್ಯ ಸ್ವಾಮಿಗಳು
Date of Birth :
22-6-1968
Place :
ಮಣ್ಣೂರು, ಅಫ್ಜಲಪುರ ತಾ||
Pattadikara :
2007

Programs

ಪ್ರತಿ ಅಮವಾಸ್ಯೆಗೆ ವಿಶೇಷ ಪೂಜೆ, ಪ್ರವಚನ, ಪ್ರಸಾದ.
ಗಣೇಶ ಚೌತಿ ದಿನ ಪೂಜ್ಯ ಶ್ರೀ ಹಾವಗಿ ಸ್ವಾಮಿ ಜಾತ್ರೆ.
ಕಾರ್ತೀಕ ಮಾಸದಲ್ಲಿ ಭಕ್ತಮುನಿ ಮಾಳಪ್ಪಯ್ಯ ಮಂದಿರದಲ್ಲಿ ದೀಪಾವಳಿ ವಿಶೇಷ ಆಚರಣೆ.

Institutions

ಕಿರಿಯ / ಹಿರಿಯ ಪ್ರಾಥಮಿಕ ಶಾಲೆ

Full Address Kannada

ಶ್ರೀ ಹಾವಗಿ ಸ್ವಾಮಿ ಸಂಸ್ಥಾನ ಮಠ
ಡೋಣಗಾಂವ
ಔರಾದ್ ತಾ||, ಬೀದರ್ ಜಿ||

Map

Near by Places

ಸಂತಪೂರ - 20 ಕಿ.ಮೀ. ಔರಾದ್ - 8 ಕಿ.ಮೀ. ಬೀದರ್ - 70 ಕಿ.ಮೀ.

Statistic

136 Views
0 Rating
0 Favorite
0 Share
error: Content is protected !!