15ನೇ ಶತಮಾನ ಎಂದರೆ ಕರ್ನಾಟಕದ ಧಾರ್ಮಿಕ ಇತಿಹಾಸದಲ್ಲಿ ಒಂದುಪ್ರಮುಖ ಕಾಲಘಟ್ಟ. ಪೂಜ್ಯ ಶ್ರೀ ಯಡೆಯೂರು ಸಿದ್ದಲಿಂಗೇಶ್ವರರು ನೂರೊಂದುವಿರಕ್ತರೊಡನೆ ಸಾವಿರಾರು ಶಿಷ್ಯರೊಡನೆ ಕರ್ನಾಟಕದ ಉದ್ದಗಲಕ್ಕೂ ಸಂಚರಿಸಿ ಅಲ್ಲಲ್ಲಿಅನುಷ್ಠಾನಗೊಂಡು ಮಠಗಳನ್ನು ಸ್ಥಾಪಿಸಿದ ಕಾಲ. ಹೀಗೆ ಸಿದ್ದಲಿಂಗೇಶ್ವರರ ನೂರೊಂದುವಿರಕ್ತರಲ್ಲೊಬ್ಬರಾಗಿರಬಹುದಾದ ಶ್ರೀ ಮ.ನಿ.ಪ್ರ. ನಿರಂಜನ ಸ್ವಾಮಿಗಳಿಂದ ಸ್ಥಾಪಿತಗೊಂಡಮಠವೇ ಠಾಣಾಕುಶನೂರಿನ ಶ್ರೀ ವಿರಕ್ತಮಠ.ಹೀಗೆ 15ನೇ ಶತಮಾನದಲ್ಲಿ ಸ್ಥಾಪಿತಗೊಂಡ ಶ್ರೀ ವಿರಕ್ತಮಠವು ಅಂದಿನಿಂದಇಂದಿನವರೆಗೂ ಹಲವಾರು ಶ್ರೀಗಳ ಮೂಲಕ ಸಾಗಿ ಬಂದಿದ್ದು ಬೀದರ್ ಜಿಲ್ಲೆಯ ಪ್ರಮುಖಮಠಗಳಲ್ಲಿ ಒಂದಾಗಿ ಬೆಳೆದಿದೆ. ಹಿಂದಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಕರಿಬಸವ ಸ್ವಾಮಿಗಳುಶ್ರೀಮಠವನ್ನು ಧಾರ್ಮಿಕ ಆಚರಣೆಗಳೊಂದಿಗೆ ಅಭಿವೃದ್ಧಿಪಡಿಸಲು ಶ್ರಮಿಸಿದ್ದು 1988ರಲ್ಲಿಲಿಂಗೈಕ್ಯರಾಗಿದ್ದಾರೆ. ನಂತರ 5 ವರ್ಷಗಳ ಕಾಲ ಶ್ರೀಮಠವು ಖಾಲಿ ಉಳಿಯಿತು.ತದನಂತರ ಶ್ರೀಮಠದ ಅಧಿಕಾರಕ್ಕೆ ಬಂದವರು ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ.ಸಿದ್ದಲಿಂಗ ಸ್ವಾಮಿಗಳು. 1993ರಲ್ಲಿ ಹುಲಸೂರು ಶ್ರೀಗಳ ಆಶೀರ್ವಾದದಿಂದ, ಅವರಿಂದಪಟ್ಟಾಧಿಕಾರದ ಅನುಗ್ರಹ ಪಡೆದ ಶ್ರೀಗಳು ಶ್ರೀಮಠವನ್ನು ಸರ್ವಾಂಗೀಣವಾಗಿಅಭಿವೃದ್ಧಿಗೊಳಿಸುತ್ತಿದ್ದಾರೆ. ಎಡೆಯೂರು ಸುಕ್ಷೇತ್ರದಲ್ಲಿ ಆಧ್ಯಾತ್ಮ ಶಿಕ್ಷಣವನ್ನು ಪಡೆದಿರುವಶ್ರೀಗಳು ಭಕ್ತರಲ್ಲಿ ಧಾರ್ಮಿಕ ಅರಿವನ್ನು ಮೂಡಿಸುವಲ್ಲಿ ಶ್ರಮವಹಿಸುತ್ತಿದ್ದಾರೆ.ಶ್ರೀಮಠದಲ್ಲಿ ಪ್ರತಿ ತಿಂಗಳು 5 ರಂದು ‘ಧರ್ಮ ಪ್ರಚಾರ’ ಕಾರ್ಯಕ್ರಮನಡೆಯುತ್ತಿದ್ದು ಸಮಾಜದಲ್ಲಿನ ಮೌಢ್ಯತೆಯ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಶ್ರಾವಣಮಾಸದಲ್ಲಿ ನಿತ್ಯ ಪುರಾಣ ಪ್ರವಚನಗಳನ್ನು ನಡೆಸಲಾಗುತ್ತಿದ್ದು ಬಸವಜಯಂತಿ,ಅಕ್ಕಮಹಾದೇವಿ ಜಯಂತಿ ಹಾಗೂ ಶ್ರೀ ಯಡೆಯೂರು ಸಿದ್ದಲಿಂಗೇಶ್ವರ ಜಯಂತಿಗಳನ್ನುಆಚರಿಸಲಾಗುತ್ತಿದೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಸಿದ್ಧಲಿಂಗ ಸ್ವಾಮಿಗಳು
Date of Birth :
1971
Place :
ಕೆ.ಕೆ. ಕೊಪ್ಪ, ಬೆಳಗಾಂ ತಾ||
Pattadikara :
1993
Photo :
Programs
ಪ್ರತಿ ತಿಂಗಳು 15ರಂದು ಧರ್ಮಪ್ರಚಾರ ಕಾರ್ಯಕ್ರಮ.
ಬಸವ ಜಯಂತಿ, ಅಕ್ಕಮಹಾದೇವಿ ಜಯಂತಿ ಮತ್ತು
ಯಡೆಯೂರು ಸಿದ್ಧಲಿಂಗೇಶ್ವರ ಸ್ವಾಮಿ ಜಯಂತಿ ಆಚರಣೆ.
ಶ್ರಾವಣ ಮಾಸದಲ್ಲಿ ನಿತ್ಯ ಪುರಾಣ ಪ್ರವಚನ.
Photos
Full Address Kannada
ಶ್ರೀ ವಿರಕ್ತಮಠ
ಠಾಣಾಕುಶನೂರು - 585 436
ಔರಾದ್ ತಾ|| ಬೀದರ್ ಜಿ||