ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ಬೆಲ್ದಾಳ ಎಂಬುವುದೊಂದು ಕುಗ್ರಾಮ.ಈ ಕುಗ್ರಾಮದಲ್ಲಿ ಶರಣ ಲಾಲಪ್ಪ ಮತ್ತು ಶರಣೆ ಲಕ್ಷ್ಮೀದೇವಿ ಎಂಬ ದಂಪತಿಯ ಅತೀ ಬಡಶಿವಭಕ್ತ ಕುಟುಂಬ. ಈ ದಂಪತಿಗೆ 1948ರ ಫೆಬ್ರವರಿ ಶಿವರಾತ್ರಿಯಂದು ಜನಿಸಿದ ಅನಘ್ರ್ಯರತ್ನವೇ ಪೂಜ್ಯ ಶ್ರೀ ಸಿದ್ದರಾಮ ಬೆಲ್ದಾಳ ಶರಣರು. ಮುಂದೆ ಶಿವಯೋಗ ಸಾಧಕರಾಗಿ,ಸಮಾಜ ಸೇವಾ ರತ್ನರಾಗಿ ದಲಿತೋದ್ಧಾರಕರಾಗಿ ನಾಡಿನಾದ್ಯಂತ ಮನೆ ಮಾತಾದವರು.ಹುಟ್ಟಿನಿಂದ ದಲಿತರಾದರೂ ತಮ್ಮ ಆಧ್ಯಾತ್ಮ ಸಾಧನೆಯಿಂದ ಜಂಗಮರೆನಿಸಿದರು.ತಂದೆ ತಾಯಿಯವರ ಶಿವಭಕ್ತಿ, ಭಜನೆ ಭಕ್ತಿ, ಅವರು ಹಾಡುವ ತತ್ವಪದಗಳು ಮತ್ತು ಅವರಬದುಕಿನ ಪ್ರೇರಣೆಗಳು ಶರಣರ ಮೇಲೆ ಗಾಢ ಪ್ರಭಾವ ಬೀರಿದವು. ಈ ಕಾರಣದಿಂದಾಗಿಶರಣರು ತಮ್ಮ ತಂದೆತಾಯಿಯವರನ್ನೇ ತಮ್ಮ ಮೊದಲ ಗುರುಗಳೆಂದು ಕರೆದುಕೊಂಡಿದ್ದಾರೆ. ಮುಂದೆ ನಿಜಗುಣ ಶಿವಯೋಗಿಗಳ ಮತ್ತು ವೇದಾಂತ ತತ್ವಜ್ಞಾನದತ್ತ ಗಮನಹರಿಸಿದಶರಣರು ತದನಂತರ ಬಸವಾದಿ ಶರಣರ ತತ್ವಗಳತ್ತ ಒಲವು ಬೆಳೆಸಿಕೊಂಡರು.ಶರಣರು ಬಸವಾದಿ ಶರಣರ ತತ್ವಗಳನು ಅಭ್ಯಸಿಸುತ್ತಾ ನಿಜಜೀವನದ ಅರಿವುಕಂಡವರು. ಮುಂದೆ ಅದುವೇ ಅವರ ಜೀವನದ ಉಸಿರಾಯಿತು. ಅಲ್ಲಿ ಆಧ್ಯಾತ್ಮಿಕ ಶಾಂತಿ,ಯೋಗ, ಶಿವಯೋಗ, ಆರ್ಥಿಕ, ಸಾಮಾಜಿಕ ಸಮಾನತೆ, ಮಾನವೀಯ ಮೌಲ್ಯಗಳ ನಿಧಿಕಂಡರು. ಹೀಗೆ ಕೇವಲ 19ರ ವಯಸ್ಸಿನಲ್ಲಿಯೇ ಶಿವಯೋಗ ಸಾಧನೆಯಲ್ಲಿ ತತ್ಪರತೆ, ಊರಹೊರಗಿನ ಗುಡ್ಡವೊಂದರಲ್ಲಿ ಪ್ರತಿದಿನ ಬೆಳಗಿನ ಮೂರಕ್ಕೆ ಶಿವಯೋಗ ಸಾಧನೆಯಲ್ಲಿತೊಡಗಿದ ಶರಣರು ಅಪ್ರತಿಮ ಶಿವಯೋಗಿಗಳೆನಿಸಿದರು.1974ರ ಜನವರಿ 14ರಂದು ಔರಾದ ನಗರದ ಅಮರೇಶ್ವರ ದೇವಾಲಯದಲ್ಲಿಪರಮಪೂಜ್ಯ ಭಾಲ್ಕಿ ಚನ್ನಬಸವ ಪಟ್ಟದ್ದೇವರ ಸಾನಿಧ್ಯದಲ್ಲಿ ಸಿದ್ಧರಾಮೇಶ್ವರ ಜಯಂತಿಆಚರಣೆ. ಆಗ ಭಾಲ್ಕಿ ಪೂಜ್ಯರನ್ನು ಕಾಣುವ ಹಂಬಲದಿಂದ ಹೋಗಿದ್ದ ಶರಣರು ಕೆಲವರಒತ್ತಾಯದಿಂದ ಶಿವಯೋಗ ಕುರಿತು ವೇದಿಕೆಯ ಮೇಲೆ 15 ನಿಮಿಷ ಭಾಷಣ ಮಾಡುತ್ತಾರೆ.ಅದರಿಂದ ಆನಂದಭರಿತರಾದ ಭಾಲ್ಕಿಪೂಜ್ಯರು ತಟ್ಟನೆದ್ದು ಅಪ್ಪಿಕೊಂಡು ಇಂದು ಸಿದ್ಧರಾಮಜಯಂತಿ. ಇಂದು ಈ ರೂಪದಲ್ಲಿ ಸಿದ್ಧರಾಮ ಸಿಕ್ಕ ಎಂದು ಆಶೀರ್ವಚನ ನೀಡಿದರು.ಮುಂದೆ ಶರಣರು ಶ್ರೀ ಸಿದ್ಧರಾಮ ಶರಣರೆಂದೇ ಪ್ರಖ್ಯಾತಿ ಗಳಿಸಿದರು. ಶರಣರಿಗೆ ಪೂಜ್ಯಭಾಲ್ಕಿ ಅಪ್ಪನವರ ಕೃಪೆಯಿಂದ, ಅವರ ಅಮೃತ ಹಸ್ತದಿಂದ 18ನೇ ಡಿಸೆಂಬರ್ 1974ರಂದುಬಸವಕಲ್ಯಾಣದ ಅನುಭವ ಮಂಟಪದಲ್ಲಿ ಲಿಂಗದೀಕ್ಷೆ, ಜಂಗಮದೀಕ್ಷೆ ನೀಡಲಾಯಿತು.ಈ ನಡುವೆ ತಂದೆ-ತಾಯಿಯವರ ಒತ್ತಾಯಕ್ಕೆ 15ನೇ ವರ್ಷದಲ್ಲೇ ವಿವಾಹವಾಗಿದ್ದ ಶ್ರೀಗಳ ಸಂಸಾರ ನೌಕೆಯೂ ಸಾಗುತ್ತಿತ್ತು. ಕೇವಲ 24ರಿಂದ 29 ವಯಸ್ಸಿನವರೆಗೆಅಲ್ಪ ಲೌಕಿಕ ಸತಿ-ಪತಿ ಭಾವದ ಬದುಕು ನಡೆಸಿದ ಶರಣರು ಆನಂತರ ಸತಿ-ಪತಿ ಭಾವಮೀರಿ ಉಭಯರೂ ಶಿವಯೋಗ ಸುಖಸಂಪನ್ನತೆಯಲ್ಲಿ ಮುನ್ನಡೆದರು. 1974ರಲ್ಲಿಜಂಗಮದೀಕ್ಷೆ ಪಡೆದ ಶರಣರು ಅದೇ ವರ್ಷ 20 ದಲಿತ ಬಡ ಮಕ್ಕಳನ್ನು ದತ್ತು ಪಡೆದುಸಾಕಿ ವಿದ್ಯಾಭ್ಯಾಸ ನೀಡುತ್ತಾ ಬಂದರು.1980ರಲ್ಲಿ ಅನೇಕರ ಒತ್ತಾಯದ ಮೇರೆಗೆ ಆಶ್ರಮ ಮಕ್ಕಳ ಸಹಿತ ಬಂದುಕೌಠಾ(ಬಿ) ಗ್ರಾಮದ ನದಿ ದಂಡೆಯ ಮೇಲೆ ಬಸವಯೋಗ ಕೇಂದ್ರ (ಆಶ್ರಮ) ಸ್ಥಾಪಿಸುವಶ್ರೀಗಳು ಶರಣ ತತ್ವ ಪ್ರಸಾರ ಮತ್ತು ಗ್ರಾಮೀಣ ಅಭಿವೃದ್ಧಿ ಸೇವಾಸಂಸ್ಥೆಯನ್ನು ಹುಟ್ಟುಹಾಕಿದರು. ಪರಮಪೂಜ್ಯ ಭಾಲ್ಕಿ ಅಪ್ಪಗಳವರ ಕೃಪೆಯಿಂದ ಪ್ರಾರಂಭಗೊಂಡ ಆಶ್ರಮವತಿಯಿಂದ ಮಾದಾರ ಚನ್ನಯ್ಯ ಪ್ರಸಾದ ನಿಲಯ, ಹರಳಯ್ಯ ಮಹಾವಿದ್ಯಾಲಯಪ್ರಾರಂಭವಾಗಿ ನೂರಾರು ಬಡಮಕ್ಕಳ ಆಶ್ರಯತಾಣವಾಗಿದೆ.1980ರಿಂದ ನಾಡಿನಾದ್ಯಂತ ಸಂಚಾರ ಹೊರಟ ಶರಣರು ಬಸವಾದಿ ಶರಣರತತ್ವಾಧಾರಿತ, ಆಧ್ಯಾತ್ಮಿಕ ತಳಹದಿಯ ಮೇಲೆ ಸಮಾಜ ಸುಧಾರಣೆಯ ಹಾದಿಯನ್ನು ತಮ್ಮಪ್ರವಚನಗಳ ಮೂಲಕ ಜನರಿಗೆ ಪ್ರಚುರಪಡಿಸಿದರು. ಹುಬ್ಬಳ್ಳಿ, ಧಾರವಾಡ, ದಾವಣಗೆರೆ,ಹಾವೇರಿ, ಬೆಳಗಾವಿ, ಗದಗ, ಕಲ್ಬುರ್ಗಿ ಮುಂತಾದ ಪ್ರಮುಖ ನಗರಗಳಲ್ಲಿ ಒಂದೊಂದುತಿಂಗಳವರೆಗೆ ಬಸವತತ್ವದ ಜಾಗೃತಿಯಲ್ಲಿ ಮೊದಲ್ಗೊಂಡು ದೇಶ ವಿದೇಶಗಳಲ್ಲಿ ಸಭೆ,ಸಮ್ಮೇಳನ, ಪ್ರವಚನಗಳ ಮೂಲಕ ಜನಜಾಗೃತಿಯಲ್ಲಿ ನಿರತರಾದರು. ಕಲ್ಯಾಣ ನಾಡಿನಶರಣ ಪರಿಷತ್ತಿನ ಅಧ್ಯಕ್ಷರಾಗಿ ಬೀದರ, ಜಹಿರಾಬಾದ, ದೆಹಲಿ, ಉದಯಗಿರಿ, ಸೇಡಂಮುಂತಾದೆಡೆಗಳಲ್ಲಿ ಜನರ ಸಹಕಾರದೊಂದಿಗೆ ರಾಷ್ಟ್ರಮಟ್ಟದ ಸಮ್ಮೇಳನಗಳನ್ನು ನಡೆಸಿದರು.ಹೀಗೆ ಪೂಜ್ಯ ಬೆಲ್ದಾಳ ಶರಣರ ಪರಿಚಯ ಮಾಡಿಕೊಡುವುದು ಸಾಗರವನ್ನುಕೈಯಲ್ಲಿ ಹಿಡಿಯಲು ಮಾಡಿದ ಪ್ರಯತ್ನದಂತೆ. ಅವರ ಶಿವಯೋಗ ಸಾಧನೆ, ಅವರಬದುಕು, ಬರಹ, ಅವರ ಚಿಂತನೆ ಇವೆಲ್ಲವೂ ತಿಳಿದುಕೊಂಡಷ್ಟು ಅಲ್ಪವೇ ಅನಿಸುತ್ತದೆ.ಬಸವತತ್ವವನ್ನೇ ಉಸಿರಾಗಿಸಿಕೊಂಡು ಬಸವಣ್ಣನವರ ಆದರ್ಶಗಳನ್ನೇ ಜನರಲ್ಲಿ ಬಿತ್ತುತ್ತಾಸಮಾಜವನ್ನು ಸರಿಯಾದ ದಿಕ್ಕಿನತ್ತ ಕೊಂಡೊಯ್ಯುತ್ತಿದ್ದಾರೆ ಪೂಜ್ಯ ಶ್ರೀ ಸಿದ್ಧರಾಮ ಬೆಲ್ದಾಳಶರಣರು. ಇವರ ಲೇಖನಿಯಿಂದ ಸುಮಾರು 17 ಕೃತಿಗಳು ಹೊರಬಂದಿದ್ದು ಎಲ್ಲವೂಸಮಾಜಕ್ಕೆ ದಾರಿದೀಪವಾಗಿವೆ. ಶ್ರೀಗಳ ಸಾಮಾಜಿಕ ಕಳಕಳಿಗೆ ಹಲವು ಪ್ರಶಸ್ತಿಗಳು ಸಂದಿವೆ.
ವಿಶೇಷತೆ:
‘ಬಸವ ಮಹಾಮನೆ ಸಂಸ್ಥೆ’ –
1986ರಲ್ಲಿ ಬಸವಕಲ್ಯಾಣದಲ್ಲಿ ಸ್ಥಾಪನೆ.
(ಇದು ಆಧ್ಯಾತ್ಮಿಕ ಸಂಸ್ಥೆಯಾಗಿದ್ದು ಇಲ್ಲಿ
ಯೋಗಿಗಳು ಹಾಗೂ ಸಾಧಕರು ಸಾಧನೆ ಮಾಡುತ್ತಾರೆ.)
‘ಅಂತರ ರಾಷ್ಟ್ರೀಯ ನೀಲಾಂಬಿಕಾ ಶಿವಯೋಗ ಕೇಂದ್ರ’ ಇದು ಮಹಿಳೆಯರಿಗೆ ಮಾತ್ರ.
ಶ್ರೀಗಳಿಗೆ ಸಂದಿರುವ ಪ್ರಶಸ್ತಿಗಳು
ಬಸವಶ್ರೀ ಪ್ರಶಸ್ತಿ,
ಫ.ಗು. ಹಳಕಟ್ಟಿ ಪ್ರಶಸ್ತಿ,
ಮೃತ್ಯುಂಜಯ ಪ್ರಶಸ್ತಿ,
ಕರ್ನಾಟಕ ರತ್ನ ಪ್ರಶಸ್ತಿ,
ಅನುಭವ ಮಂಟಪ ಪ್ರಶಸ್ತಿ,
ಕುಮಾರ ಕಕ್ಕಯ್ಯ ಪ್ರಶಸ್ತಿ
ಮುಂತಾದವು.
Swamiji
Swamiji Name :
ಪೂಜ್ಯ ಶ್ರೀ ಸಿದ್ದರಾಮ ಬೆಲ್ದಾಳ ಶರಣರು
Date of Birth :
ಫೆಬ್ರವರಿ 1948
Place :
ಬೆಲ್ದಾಳ, ಔರಾದ್ ತಾ||
Photo :
Programs
.
Institutions
ಶರಣ ತತ್ವ ಪ್ರಸಾರ ಮತ್ತು ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆ (1980).
ಮಾದಾರ ಚನ್ನಯ್ಯ ಪ್ರಸಾದ ನಿಲಯ (1981).
ಹರಳಯ್ಯ ಪ್ರೌಢಶಾಲೆ (1982)
ಹರಳಯ್ಯ ಪದವಿಪೂರ್ವ ಕಾಲೇಜು (1991)
ಹರಳಯ್ಯ ಪದವಿ ಕಾಲೇಜು (2006)
ಹರಳಯ್ಯ ಪ್ರಾಥಮಿಕ ಶಾಲೆ (2005)
Photos
Full Address Kannada
ಶ್ರೀ ಬಸವ ಯೋಗ ಕೇಂದ್ರ
ಕೌಠಾ (ಬಿ) - 585 421
ಔರಾದ್ ತಾ||, ಬೀದರ್ ಜಿ||