Shree Sharanagiri Nava Kalyana Matha

Shree Sharanagiri Nava Kalyana Matha Claimed

ಶ್ರೀ ಶರಣಗಿರಿ ನವ ಕಲ್ಯಾಣ ಮಠ

Average Reviews

Description

ಶ್ರೀ ಶರಣಗಿರಿ ನವಕಲ್ಯಾಣ ಮಠ

ಪೂಜ್ಯ ಶ್ರೀ ಮಾತೆ ಬಸವಾಂಜಲಿ ತಾಯಿಯವರು

ಬೀದರ್ ಜಿಲ್ಲಾ ಕೇಂದ್ರದಿಂದ ಕೇವಲ 4 ಕಿ.ಮೀ. ಅಂತರದಲ್ಲಿರುವ ಮಲ್ಕಾಪುರಗ್ರಾಮದ ಹೊರಭಾಗದ ಗುಡ್ಡದ ಮೇಲೆ ತೀರಾ ಇತ್ತೀಚೆಗೆ ಸ್ಥಾಪಿತಗೊಂಡಿರುವ ಶ್ರೀಶರಣಗಿರಿ ನವಕಲ್ಯಾಣ ಮಠವು ಕಡಿಮೆ ಅವಧಿಯಲ್ಲಿಯೇ ತನ್ನ ಕಾರ್ಯ ಚಟುವಟಿಕೆಗಳಮೂಲಕ ಪ್ರಚಲಿತದಲ್ಲಿದೆ. ಪೂಜ್ಯ ಶ್ರೀ ಬಸವಾಂಜಲಿ ತಾಯಿಯವರು ತಮ್ಮ ಧಾರ್ಮಿಕ,ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಈ ಭಾಗದ ಜನರಲ್ಲಿ ಧಾರ್ಮಿಕ ಪ್ರಜ್ಞೆಯನ್ನುಬೆಳೆಸುವಲ್ಲಿ ಶ್ರಮಿಸುತ್ತಿದ್ದಾರೆ.ಪೂಜ್ಯ ಶ್ರೀ ಮಾತೆ ಬಸವಾಂಜಲಿ ತಾಯಿಯವರು ತಮ್ಮ 18ನೇ ವಯಸ್ಸಿನಲ್ಲಿಯೇಸನ್ಯಾಸತ್ವ ಸ್ವೀಕರಿಸಿದವರು. ತದನಂತರ ಸಂಚಾರ ಕೈಗೊಂಡ ಮಾತೆಯವರು ಇಂಡಿ,ಹಿರೇರೂಗಿ, ಬೆಳಗಾಂಗಳಲ್ಲಿ ಮೂರು ವರ್ಷ ಆಧ್ಯಾತ್ಮಿಕ ಶಿಕ್ಷಣ ಪಡೆದರು ಹಾಗೂಸುಮಾರು 12 ವರ್ಷಗಳ ಕಾಲ ಬೀದರ್, ಹುಲಕುಂಟಿ ಮಠ, ಶ್ರೀಶೈಲ ಮತ್ತುಬನಶಂಕರಿಗಳಲ್ಲಿ ಅನುಷ್ಠಾನ ನಿರತರಾಗಿದ್ದರು. ಈ ನಡುವೆ ಬೀದರ್ನ ಭೂಮಿರೆಡ್ಡಿಕಾಲೇಜಿನಿಂದ ಬಿ.ಎ. ಪದವೀಧರರಾದ ಮಾತೆಯವರು ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಉನ್ನತ ಶಿಕ್ಷಣ ಪಡೆದರು.ತದನಂತರ ಮಾತೆಯವರು ಮಲ್ಕಾಪುರ ಭಾಗಕ್ಕೆ ಆಗಮಿಸಿ 2004ರಿಂದ ಇಲ್ಲಿನಊರ ಹೊರಗಿನ ಗುಡ್ಡದ ಮೇಲೆ ಧಾರ್ಮಿಕ ಆಚರಣೆಗಳನ್ನು ಕೈಗೊಂಡು 2007ರಲ್ಲಿಶ್ರೀಮಠದ ಸ್ಥಾಪನೆ ಮಾಡಿದರು. ನಂತರ 2010ರ ಮಾರ್ಚ್ 10 ರಲ್ಲಿ ಶ್ರೀಮಠಕ್ಕೆಪರಮಪೂಜ್ಯ ಚಿತ್ತರಗಿ ಡಾ. ವಿಜಯಮಹಾಂತ ಸ್ವಾಮಿಗಳಿಂದ ನಿರಂಜನ ಪಟ್ಟಾಭಿಷೇಕಅನುಗ್ರಹ ಪಡೆದು ಪೂರ್ಣ ಪ್ರಮಾಣದ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.ಪೂಜ್ಯ ಮಾತೆಯವರು ಶ್ರೀಕ್ಷೇತ್ರದಲ್ಲಿ ಪ್ರತಿವರ್ಷ ಮಾರ್ಚ್ನಲ್ಲಿ 3 ದಿನಗಳ ಕಾಲಬಸವ ತತ್ವ ಸಮ್ಮೇಳನ ಆಯೋಜಿಸುತ್ತಾ ಬಂದಿದ್ದು ಆ ಸಮಯದಲ್ಲಿ ವಿವಿಧ ಧಾರ್ಮಿಕ,ಸಾಮಾಜಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸುತ್ತಾರೆ. ಹಾಗೂ ನಾಡಿನಹರ-ಗುರು-ಚರಮೂರ್ತಿಗಳನ್ನು ಆಹ್ವಾನಿಸಿ ಅವರಿಗೆ ಸನ್ಮಾನ ನೀಡಿ ಗೌರವಿಸುತ್ತಾರೆ.

Swamiji

Swamiji Name :
ಪೂಜ್ಯ ಶ್ರೀ ಮಾತೆ ಬಸವಾಂಜಲಿ ತಾಯಿಯವರು
Date of Birth :
5-10-1954
Place :
ಆನಂದವಾಡಿ, ಭಾಲ್ಕಿ ತಾ||
Pattadikara :
10-3-2010
Photo :

Programs

ಪ್ರತಿ ಅಮವಾಸ್ಯೆಗೆ ವಿಶೇಷ ಕಾರ್ಯಕ್ರಮಗಳು.
ಪ್ರತಿ ವರ್ಷ ಮಾರ್ಚ್ನಲ್ಲಿ 3 ದಿನಗಳ ಕಾಲ ಬಸವ ತತ್ವ ಸಮ್ಮೇಳನ.

Photos

Full Address Kannada

ಶ್ರೀ ಶರಣಗಿರಿ ನವ ಕಲ್ಯಾಣ ಮಠ
ಮಲ್ಕಾಪುರ - 585 403
ಬೀದರ್ ತಾ|| ಜಿ||

Map

Near by Places

ಬೀದರ್ - 4 ಕಿ.ಮೀ.
ಭಾಲ್ಕಿ - 50 ಕಿ.ಮೀ.
ಔರಾದ್ - 50 ಕಿ.ಮೀ.

Statistic

4 Views
0 Rating
0 Favorite
0 Share
error: Content is protected !!