Shree Gangadhar Hirematha

Shree Gangadhar Hirematha Claimed

ಶ್ರೀ ಗಂಗಾಧರ ಹಿರೇಮಠ

Average Reviews

Description

ಶ್ರೀ ಗಂಗಾಧರ ಹಿರೇಮಠ

ಕರ್ತೃ ಪರಮಪೂಜ್ಯ ಶ್ರೀ ಗವೀಶ್ವರ ಸ್ವಾಮಿಗಳು

ಬೀದರ್ ಜಿಲ್ಲೆಯ ಆಲಿಯಂಬರ ಗ್ರಾಮದ ಮಧ್ಯಭಾಗದಲ್ಲಿ ಅಸ್ತಿತ್ವದಲ್ಲಿ ಇರುವಶ್ರೀ ಗಂಗಾಧರ ಹಿರೇಮಠವು ಶ್ರೀ ಉಜ್ಜಯಿನಿ ಪೀಠದ ಶಾಖಾಮಠವಾಗಿ ಪುತ್ರವರ್ಗದಪರಂಪರೆಯಲ್ಲಿ ಬೆಳೆದು ಬಂದಿದೆ. ಪ್ರಾಚೀನ ಕಾಲದ್ದಾದ ಶ್ರೀಮಠದ ಸ್ಥಾಪಕರೆಂದು ಪೂಜ್ಯಶ್ರೀ ಗವೀಶ್ವರ ಸ್ವಾಮಿಗಳನ್ನು ಗುರುತಿಸಲಾಗಿದ್ದು ಕಾಲಮಾನದ ಬಗ್ಗೆ ಸ್ಪಷ್ಟತೆಯಿಲ್ಲ.ಕತೃಗುರುಗಳ ನಂತರದ ಪರಂಪರೆಯಲ್ಲಿ 10 ಕ್ಕೂ ಅಧಿಕ ಶ್ರೀಗಳು ಅಧಿಕಾರನಡೆಸಿರುವುದು ಕಂಡುಬರುತ್ತದೆ. ಶ್ರೀಮಠದಲ್ಲಿ ಎರಡು ಗದ್ದುಗೆಗಳು ಹಾಗೂ ಊರಹೊರಗೆ 8 ಗದ್ದುಗೆಗಳು ಕಾಣಸಿಗುತ್ತಿದ್ದು ಪರಂಪರೆಯ ಬಗ್ಗೆ ನಿಖರ ಮಾಹಿತಿಗಳಕೊರತೆಯಿದೆ. ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ. ವಿಶ್ವನಾಥ ಶಿವಾಚಾರ್ಯ ಸ್ವಾಮಿಗಳು ಭಕ್ತರಸಹಕಾರದೊಂದಿಗೆ ಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸಿದ್ದು ಇವರು ಲಿಂಗೈಕ್ಯರಾದನಂತರ ಕೆಲಕಾಲ ಶ್ರೀಮಠವು ಖಾಲಿ ಉಳಿದಿದೆ.ಪ್ರಸ್ತುತ ಶ್ರೀಮಠದ ಮಠಾಧಿಪತಿಗಳಾದ ಶ್ರೀ ಷ.ಬ್ರ. ನಾಗಭೂಷಣ ಶಿವಾಚಾರ್ಯಸ್ವಾಮಿಗಳು 1988ರಲ್ಲಿ ಹೆಡಗಾಪುರ ಶ್ರೀಗಳ ಸಮ್ಮುಖದಲ್ಲಿ ಪಟ್ಟಾಧಿಕಾರ ಸ್ವೀಕರಿಸಿದರು.ಶ್ರೀಗಳು ಶಿವಯೋಗ ಮಂದಿರ ಹಾಗೂ ಕಾಶಿಯ ಬನಾರಸ್ ವಿಶ್ವವಿದ್ಯಾನಿಲಯಗಳಲ್ಲಿಸಂಸ್ಕøತ, ವೇದಾಧ್ಯಯನ ವ್ಯಾಸಂಗ ಮಾಡಿದ್ದು, ಕನ್ನಡ, ಹಿಂದಿ, ಇಂಗ್ಲೀಷ್, ಸಂಸ್ಕøತ,ನೇಪಾಳಿ ಭಾಷೆಗಳನ್ನು ಬಲ್ಲವರಾಗಿದ್ದಾರೆ. ಶ್ರೀಗಳು ‘ಶೈವ ದರ್ಶನ’ ಎಂಬ ವಿಷಯದಮೇಲೆ ಪ್ರಬಂಧ ಮಂಡಿಸಿ ಪಿಹೆಚ್.ಡಿ. ಪದವಿ ಪಡೆದಿದ್ದು ಇವರಿಗೆ ‘ಸಾಹಿತ್ಯರತ್ನ’ , ‘ಸಾಹಿತ್ಯಆಚಾರ್ಯ’, ‘ಆಯುರ್ವೇದ ರತ್ನ’ಗಳೆಂಬ ಬಿರುದುಗಳು ದೊರಕಿವೆ.ಹೀಗೆ ಅಪಾರ ಪಾಂಡಿತ್ಯವನ್ನು ಹೊಂದಿ ಭಕ್ತರಿಗೆ ತಮ್ಮ ಆಚರಣೆಗಳ ಮೂಲಕಸನ್ಮಾರ್ಗ ತೋರುತ್ತಿರುವ ಶ್ರೀ ನಾಗಭೂಷಣ ಶಿವಾಚಾರ್ಯರು ಶ್ರೀಮಠವನ್ನುಸರ್ವಾಂಗೀಣವಾಗಿ ಅಭಿವೃದ್ಧಿಗೊಳಿಸುವತ್ತ ಮುನ್ನಡೆದಿದ್ದಾರೆ. ಹಾಗೂ ಕೀರ್ತನೆ, ಭಜನೆ,ಪ್ರವಚನಗಳ ಮೂಲಕ ಧಾರ್ಮಿಕ ತತ್ವಗಳನ್ನು ಪ್ರಚುರಪಡಿಸುತ್ತಾ ವೀರಶೈವ ಧರ್ಮವನ್ನುಬೆಳೆಸುವಲ್ಲಿ ಶ್ರಮವಹಿಸುತ್ತಿದ್ದಾರೆ.

Swamiji

Swamiji Name :
ಶ್ರೀ ಷ.ಬ್ರ. ಡಾ. ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು
Date of Birth :
9-11-1958
Place :
ಆಲಿಯಂಬರ, ಬೀದರ್ ತಾ||
Pattadikara :
1988
Photo :

Programs

ಪ್ರತಿ ಅಮವಾಸ್ಯೆ ಹಾಗೂ ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ.
ಯುಗಾದಿ ನಂತರ ಲಿಂ. ಶ್ರೀ ಷ.ಬ್ರ. ವಿಶ್ವನಾಥ ಶಿವಾಚಾರ್ಯ ಸ್ವಾಮಿಗಳ ಪುಣ್ಯಾರಾಧನೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು.

Photos

Full Address Kannada

ಶ್ರೀ ಗಂಗಾಧರ ಹಿರೇಮಠ
ಅಲಿಯಂಬರ - 585 402
ಬೀದರ್ ತಾ||, ಜಿ||

Map

Near by Places

ಜನವಾಡ - 6 ಕಿ.ಮೀ.
ಬೀದರ್ - 17 ಕಿ.ಮೀ.
ಔರಾದ್ - 48 ಕಿ.ಮೀ.

Statistic

4 Views
0 Rating
0 Favorite
0 Share
error: Content is protected !!