ಕರ್ತೃ ಪೂಜ್ಯ ಶ್ರೀ ವಿರೂಪಾಕ್ಷೇಶ್ವರ ಶಿವಾಚಾರ್ಯ ಸ್ವಾಮಿಗಳು
ಶ್ರೀ ಕಟ್ಟಿಮನಿ ಸಂಸ್ಥಾನ ಹಿರೇಮಠವು ಬೀದರ್ ಜಿಲ್ಲೆಯ ಪ್ರಭಾವಿ ಮಠಗಳಲ್ಲಿಒಂದಾಗಿದ್ದು ಶ್ರೀಮದ್ ರಂಭಾಪುರಿ ಪೀಠದ ಶಾಖಾಮಠವಾಗಿ ಅಪಾರ ಸಂಖ್ಯೆಯಭಕ್ತಬಳಗವನ್ನು ಹೊಂದಿದೆ. ಶ್ರೀಮಠದ ಕರ್ತೃಗುರುಗಳೆಂದು ಶ್ರೀ ವಿರೂಪಾಕ್ಷೇಶ್ವರಶಿವಾಚಾರ್ಯ ಮಹಾಸ್ವಾಮಿಗಳನ್ನು ಗುರುತಿಸಲಾಗಿದ್ದು ಶ್ರೀಮಠದ ಸ್ಥಾಪನೆಯ ನಿಖರಕಾಲಮಾನದ ಲಭ್ಯತೆಯಿಲ್ಲ.ಭಾಲ್ಕಿ ತಲ್ಲೂಕಿನ ಮೆಹಕರ್ ಗ್ರಾಮದಲ್ಲಿ ಮೂಲ ಮಠವನ್ನು ಹೊಂದಿರುವಶ್ರೀಮಠವು ಭಾಲ್ಕಿ ತಾಲ್ಲೂಕಿನ ಡೋಣಘಾಪುರ ಹಾಗೂ ಬಸವಕಲ್ಯಾಣ ತಾಲ್ಲೂಕಿನತಡೋಳದಲ್ಲಿ ಪ್ರಧಾನ ಶಾಖಾಮಠಗಳನ್ನು ಹೊಂದಿದೆ. ಶ್ರೀಮಠದ ಶ್ರೀಗಳು ಮೂರೂಮಠಗಳಲ್ಲಿ ಧಾರ್ಮಿಕ ಆಚರಣೆಗಳನ್ನು ಕೈಗೊಂಡು ಭಕ್ತರಲ್ಲಿ ಧಾರ್ಮಿಕ ಅರಿವನ್ನುಮೂಡಿಸುವಲ್ಲಿ ಶ್ರಮಿಸುತ್ತಿದ್ದಾರೆ.ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ. ರಾಚೋಟೇಶ್ವರ ಶಿವಾಚಾರ್ಯರು ಶ್ರೀಮಠದಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಿದ್ದು 1989ರಲ್ಲಿ ಲಿಂಗೈಕ್ಯರಾದರು. ಅದಾಗಿ 10ವರ್ಷಗಳ ನಂತರ ಶ್ರೀಮಠಕ್ಕೆ ಪಟ್ಟಾದಿಕಾರಗೊಂಡು ಬಂದವರೇ ಈಗಿನ ಶ್ರೀಗಳಾದ ಶ್ರೀಷ.ಬ್ರ. ರಾಜೇಶ್ವರ ಶಿವಾಚಾರ್ಯ ಸ್ವಾಮಿಗಳು. ಅಂದಿನಿಂದ ಶ್ರೀಮಠ ಹಾಗೂ ಶಾಖಾಮಠಗಳು ಸರ್ವಾಂಗೀಣವಾಗಿ ಅಭಿವೃದ್ಧಿ ಹೊಂದುತ್ತಿವೆ.ಪೀಠಂನಲ್ಲಿ ಸಂಸ್ಕøತ, ಶಾಸ್ತ್ರೀಯ ಗ್ರಂಥಗಳಆಳವಾದ ಅಧ್ಯಯನ ನಡೆಸಿ ಎಂ.ಎ.ಪದವಿ ಪಡೆದ ಶ್ರೀಗಳು ಬನ್ನಟ್ಟಿಯ ಶ್ರೀಗುರುಕುಲ ಆಶ್ರಮದ ಶ್ರೀ ಸಿದ್ದವೀರ ಸ್ವಾಮಿಗಳ ಶಿಷ್ಯರಾಗಿ ಪರಿಪಕ್ವಗೊಂಡರು. ಹಾಗೂ1999ರ ಏಪ್ರಿಲ್ 23ರಲ್ಲಿ ಗುರುಗಳಆಶೀರ್ವಾದದಿಂದ ಶ್ರೀ ಕಟ್ಟೀಮನಿ ಸಂಸ್ಥಾನ ಹಿರೇಮಠದ ಅಧಿಕಾರ ವಹಿಸಿಕೊಂಡರು.ಶ್ರೀ ರಾಜೇಶ್ವರ ಶಿವಾಚಾರ್ಯ ಸ್ವಾಮಿಗಳು ಅಧಿಕಾರಕ್ಕೆ ಬಂದಂದಿನಿಂದಶ್ರೀಮಠದ ಪ್ರಖ್ಯಾತಿ ಅಧಿಕಗೊಂಡಿದೆ. ಶ್ರೀಗಳು ಶ್ರೀಮಠವನ್ನು ಧಾರ್ಮಿಕವಾಗಿ ಅಲ್ಲದೆತಮ್ಮ ಸಾಮಾಜಿಕ ಚಟುವಟಿಕೆಗಳ ಮೂಲಕವೂ ಗುರುತಿಸುವಂತೆ ಮಾಡಿದ್ದು ಭಕ್ತರಿಗೆ ಸೂಕ್ತಮಾರ್ಗದರ್ಶನ ನೀಡುತ್ತಿದ್ದಾರೆ. ಹಾಗೂ ಶ್ರೀಗಳು ತಡೋಳದ ಶ್ರೀ ರಾಚೋಟೇಶ್ವರಯೋಗ ಮಂದಿರವನ್ನು ಹೆಚ್ಚು ಅಭಿವೃದ್ಧಿಗೊಳಿಸಿದ್ದು ಶ್ರೀಮಠವನ್ನು ಸಂಪೂರ್ಣವಾಗಿನವೀಕರಿಸುತ್ತಿದ್ದಾರೆ.ಶ್ರೀಗಳು ಮೆಹಕರ್ ಶ್ರೀಮಠದ ಜೊತೆಯಲ್ಲಿ ತಡೋಳ ಹಾಗೂ ಡೋಣಘಾಪುರಶಾಖಾಮಠಗಳಲ್ಲಿ ಪ್ರಮುಖವಾಗಿ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡುಯಶಸ್ವಿಗೊಳಿಸುತ್ತಿದ್ದಾರೆ. ತಡೋಳದಲ್ಲಿ ಪ್ರತಿ ಶ್ರಾವಣ ಮಾಸದ ಎರಡನೇ ಸೋಮವಾರಲಿಂ. ಶ್ರೀ ರಾಚೋಟೇಶ್ವರ ಶಿವಾಚಾರ್ಯರ ಪುಣ್ಯಾರಾಧನೆಯನ್ನು ಆಚರಿಸಲಾಗುತ್ತಿದೆಹಾಗೂ ಶ್ರೀಗಳು ಶ್ರಾವಣದಲ್ಲಿ ಅನುಷ್ಠಾನದಲ್ಲಿರುತ್ತಾರೆ. ಮೆಹಕರ್ನಲ್ಲಿ ಮಾಘ ಮಾಸ ಶುದ್ಧಪಂಚಮಿ ಪೌರ್ಣಮಿ ದಿನ ಜಪಯಜ್ಞ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾರೆ. ಮತ್ತುಡೋಣಘಾಪುರದಲ್ಲಿ ಚೈತ್ರ ಶುದ್ಧ ನವಮಿ ಪೌರ್ಣಮಿ ದಿನ ಪ್ರಶಿಕ್ಷಣ ಶಿಬಿರವನ್ನುಆಯೋಜಿಸಲಾಗುತ್ತದೆ. ಶ್ರೀಮಠದ ವತಿಯಿಂದ ತಡೋಳದಲ್ಲಿ ವಿಶ್ವಶಾಂತಿ ಟ್ರಸ್ಟ್ ಮುಖೇನಅನೇಕ ಶಿಕ್ಷಣ ಸಂಸ್ಥೆಗಳು, ಮೆಹಕರ್ನಲ್ಲಿ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಶಾಲೆ ಮತ್ತುಡೋಣಘಾಪುರದಲ್ಲಿ ಶ್ರೀ ಡೋಣೇಶ್ವರ ಶಿಕ್ಷಣ ಸಂಸ್ಥೆಗಳು ನಡೆಸಲ್ಪಡುತ್ತಿವೆ.
Swamiji
Swamiji Name :
ಶ್ರೀ ಷ.ಬ್ರ. ರಾಜೇಶ್ವರ ಶಿವಾಚಾರ್ಯ ಸ್ವಾಮಿಗಳು
Date of Birth :
14-2-1968
Place :
ಗೋರಟ, ಬಸವಕಲ್ಯಾಣ ತಾ||
Pattadikara :
23-4-1999
Photo :
Programs
ಮಾಘ ಮಾಸ ಶುದ್ಧ ಪಂಚಮಿಯ ಪೌರ್ಣಿಮೆ ದಿನ ಜಪಯಜ್ಞ ಹಾಗೂ ಮಹಾರುದ್ರಾಭಿಷೇಕ.
ಶ್ರಾವಣದಲ್ಲಿ ನಿತ್ಯ ರುದ್ರಾಭಿಷೇಕ, ಅನುಷ್ಠಾನ ಹಾಗೂ 2ನೇ ಸೋಮವಾರ ಲಿಂ. ಶ್ರೀ ರಾಚೋಟೇಶ್ವರ ಶಿವಾಚಾರ್ಯಮಹಾಸ್ವಾಮಿಗಳ ಪುಣ್ಯಾರಾಧನೆ.
ಚೈತ್ರ ಶುದ್ಧ ನವಮಿ ಪೌರ್ಣಮಿ ದಿನ ವಿಶೇಷ ಪೂಜೆ, ಜಪ ಧ್ಯಾನ ಹಾಗೂ ಪ್ರಶಿಕ್ಷಣ ಶಿಬಿರ.
Institutions
ಶ್ರೀ ಕಟ್ಟಿಮನಿ ಸಂಸ್ಥಾನ ಹಿರೇಮಠ ಮೆಹಕರ್
ಕಿರಿಯ / ಹಿರಿಯಪ್ರಾಥಮಿಕ ಶಾಲೆ.
---------------------------------------------
ಶ್ರೀ ರಾಚೋಟೇಶ್ವರ ಯೋಗಮಂದಿರ ತಡೋಳ
ಶ್ರೀ ವಿಶ್ವಶಾಂತಿ ಟ್ರಸ್ಟ್
ಕಿರಿಯ / ಹಿರಿಯ ಪ್ರಾಥಮಿಕ ಶಾಲೆ.
ವಿದ್ಯಾರ್ಥಿ ನಿಲಯ