Shree Rachoteshwara Viraktamatha

Shree Rachoteshwara Viraktamatha Claimed

ಶ್ರೀ ರಾಚೋಟೇಶ್ವರ ವಿರಕ್ತಮಠ

Average Reviews

Description

ಶ್ರೀ ರಾಚೋಟೇಶ್ವರ ವಿರಕ್ತಮಠ

ಕರ್ತೃ ಶ್ರೀ ಸದ್ಗುರು ರಾಚೋಟೇಶ್ವರ ಶಿವಯೋಗಿಗಳು

ಸದ್ಗುರು ಶ್ರೀ ರಾಚೋಟೇಶ್ವರ ಶಿವಯೋಗಿಗಳು ಎಂದರೆ ಬೀದರ್ ಜಿಲ್ಲೆಯಲ್ಲಿಬಹುದೊಡ್ಡ ಹೆಸರು. ತಮ್ಮ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಮೂಲಕಅಪಾರ ಸಂಖ್ಯೆಯ ಭಕ್ತರನ್ನು ಸಂಪಾದಿಸಿದ್ದ ಗುರುಗಳ ಕಾಲಮಾನದ ಬಗ್ಗೆ ಸ್ಪಷ್ಟತೆಯಿಲ್ಲ.ಸಉಮಾರು 250 ವರ್ಷಗಳ ಹಿಂದೆ ಜೀವಿಸಿದ್ದಿರಬಹುದಾದ ಶ್ರೀ ರಾಚೋಟೇಶ್ವರಶಿವಯೋಗಿಗಳೇ ಶ್ರೀ ರಾಚೋಟೇಶ್ವರ ವಿರಕ್ತಮಠದ ಕರ್ತೃಗುರುಗಳು.ಕರ್ತೃಗುರುಗಳಿಂದಾಗಿ ಪ್ರಚಲಿತಕ್ಕೆ ಬಂದಿದ್ದ ಶ್ರೀ ವಿರಕ್ತಮಠದ ಮುಂದಿನಗುರುಗಳಾಗಿ ಅಧಿಕಾರ ಸ್ವೀಕರಿಸಿದವರು ಶ್ರೀ ಸಿದ್ದರಾಮೇಶ್ವರ ಶಿವಯೋಗಿಗಳು ಹಾಗೂತದನಂತರ ಶ್ರೀ ಕರಿಬಸವೇಶ್ವರ ಶಿವಯೋಗಿಗಳು. ಇವರೀರ್ವರೂ ಶ್ರೀಮಠದ ಧಾರ್ಮಿಕಆಚರಣೆಗಳನ್ನು ಚುರುಕುಗೊಳಿಸಿ ಮುನ್ನಡೆಸಿದ್ದಾರೆ. ಸುಮಾರು 100 ವರ್ಷಗಳ ಹಿಂದೆಲಿಂಗೈಕ್ಯರಾದ ಶ್ರೀ ಕರಿಬಸವೆಶ್ವರ ಶಿವಯೋಗಿಗಳ ನಂತರ ಶ್ರೀಮಠವು ಸುಧೀರ್ಘವಾಗಿಖಾಲಿ ಉಳಿದಿದೆ.ಸುಧೀರ್ಘ ಕಾಲ ಖಾಲಿ ಉಳಿದಿದ್ದ ಶ್ರೀಮಠದ ಪಟ್ಟಕ್ಕೆ ಬಂದವರೇ ಈಗಿನಶ್ರೀಗಳಾದ ಶ್ರೀ ಹಾವಗಿ ಲಿಂಗೇಶ್ವರ ಮಹಾಸ್ವಾಮಿಗಳು. ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನುಹಳಿಯಂಬರದಲ್ಲಿ ಪೂರ್ಣಗೊಳಿಸಿದ ಶ್ರೀಗಳು ಮುಂದೆ ಶಹಾಪುರದ ಶ್ರೀ ಫಕೀರೇಶ್ವರಮಠ, ಹಾರನಹಳ್ಳಿಯ ಶ್ರೀ ಕೋಡಿ ಮಠ, ಶಿವಯೋಗ ಮಂದಿರಗಳಲ್ಲಿ ಆಧ್ಯಾತ್ಮವಿಷಯಗಳಲ್ಲಿ ಪರಿಪಕ್ವಗೊಂಡರು.2013ರ ಜನವರಿ 11ರಂದು ಶ್ರೀಮಠದ ಅಧಿಕಾರ ಸ್ವೀಕರಿಸಿದ ಶ್ರೀಗಳುಶ್ರೀಮಠವನ್ನು ಜೀರ್ಣಾಭಿವೃದ್ಧಿಗೊಳಿಸಿದ್ದಾರೆ. ಸದಾ ಚಟುವಟಿಕೆಯ ಕೇಂದ್ರವಾಗಿರುವಶ್ರೀಗಳು ಶ್ರೀಮಠದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಜನವರಿಯಲ್ಲಿ 11 ದಿನಗಳಕಾಲ ವಿವಿಧ ಧಾರ್ಮಿಕ ಆಚರಣೆಗಳೊಂದಿಗೆ ಶ್ರೀ ಸಿದ್ಧರಾಮೇಶ್ವರ ಜಾತ್ರೆ ಹಾಗೂ ಶ್ರಾವಣದಕೊನೇ ಸೋಮವಾರ ಶ್ರೀ ರಾಚೋಟೇಶ್ವರ ಜಾತ್ರೆಗಳನ್ನು ವಿಜೃಂಭಣೆಯಿಂದ ನಡೆಸುತ್ತಾಬಂದಿರುವ ಶ್ರೀಗಳು ಅಪಾರ ಸಂಖ್ಯೆಯ ಭಕ್ತರನ್ನು ಸಂಪಾದಿಸಿದ್ದಾರೆ.

Swamiji

Swamiji Name :
ಪೂಜ್ಯ ಶ್ರೀ ಹಾವಗಿ ಲಿಂಗೇಶ್ವರ ಮಹಾಸ್ವಾಮಿಗಳು
Date of Birth :
5-9-1981
Place :
ಧನೂರು, ಭಾಲ್ಕಿ ತಾ||
Pattadikara :
11-1-2013
Photo :

Programs

ಪ್ರತಿ ಸೋಮವಾರ ಶಿವಾನುಭವ ಗೋಷ್ಠಿ,
ಪ್ರವಚನ. ಪ್ರತಿ ಅಮವಾಸ್ಯೆಗೆ ಪ್ರವಚನ ಹಾಗೂ ಅನ್ನದಾಸೋಹ.
ಶ್ರಾವಣದ ಕೊನೆಯ ಸೋಮವಾರ ಶ್ರೀ ರಾಚೋಟೇಶ್ವರ ಜಾತ್ರಾ ಮಹೋತ್ಸವ.
ಜನವರಿ 1 ರಿಂದ 11ರವರೆಗೆ ಸಿದ್ಧರಾಮೇಶ್ವರ ಜಾತ್ರೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು.

Photos

Full Address Kannada

ಶ್ರೀ ರಾಚೋಟೇಶ್ವರ ವಿರಕ್ತಮಠ
ಹಲಬುರ್ಗ - 585 413
ಭಾಲ್ಕಿ ತಾ||, ಬೀದರ್ ಜಿ||

Map

Near by Places

ಹುಮನಾಬಾದ್ - 28 ಕಿ.ಮೀ.
ಬೀದರ್ - 80 ಕಿ.ಮೀ.
ಕಲಬುರ್ಗಿ - 90 ಕಿ.ಮೀ.

Statistic

2 Views
0 Rating
0 Favorite
0 Share
error: Content is protected !!