Shree Hirematha Samsthana, Bhalki

Shree Hirematha Samsthana, Bhalki Claimed

ಶ್ರೀ ಹಿರೇಮಠ ಸಂಸ್ಥಾನ, ಭಾಲ್ಕಿ

Average Reviews

Description

ಶ್ರೀ ಹಿರೇಮಠ ಸಂಸ್ಥಾನ, ಭಾಲ್ಕಿ

ಕರ್ತೃ ಶ್ರೀ ಮ.ಘ.ಚ. ಚನ್ನಬಸವೇಶ್ವರ ಮಹಾಸ್ವಾಮಿಗಳು

ಕರ್ನಾಟಕದ ಇತಿಹಾಸದಲ್ಲಿ 12ನೇ ಶತಮಾನವೆಂದರೆ ಅದು ಪ್ರಮುಖಕಾಲಘಟ್ಟ. ಬಸವಣ್ಣನವರೊಳಗೂಡಿ ಸಾವಿರಾರು ಶರಣರು ಕ್ರಾಂತಿ ಮಾಡಿದ ಕಾಲ.ಬಸವಣ್ಣನ ವಚನಗಳ ಪ್ರಭಾವದಿಂದ, ಬೋಧನೆಯಿಂದ ಪ್ರಾರಂಭದಲ್ಲಿ ಬೀದರ್ನಸುತ್ತಮುತ್ತ ಅನೇಕ ಮಠಗಳು ಪ್ರಾರಂಭವಾಗಿವೆ. ಅಂದಿನ ಆ ಕಾಲದಲ್ಲಿಯೇ ಭಾಲ್ಕಿಯಹಿರೇಮಠವು ಸ್ಥಾಪಿಸ ಲ್ಪಟ್ಟಿದೆ ಎಂದು ಹೇಳಲಾಗುತ್ತದೆ. ಅಂದರೆ ಭಾಲ್ಕಿಯ ಹಿರೇಮಠಕ್ಕೆಎಂಟುನೂರು ವರ್ಷಗಳ ಇತಿಹಾಸವಿರುವುದು ತಿಳಿದುಬರುತ್ತದೆ.800 ವರ್ಷಗಳ ಹಿಂದೆ ಪರಮಪೂಜ್ಯ ಶ್ರೀ ಚನ್ನಬಸವೇಸ್ವರ ಪಟ್ಟದ್ದೇವರಿಂದಸ್ಥಾಪಿತಗೊಂಡ ಶ್ರೀಮಠವು ಇಂದು ನಾಡಿನ ಪ್ರಮುಖ ವೀರಶೈವ ಮಠಗಳಲ್ಲಿ ಒಂದಾಗಿದೆ.ಕರ್ತೃಗುರುಗಳು ಬಾಲ್ಯದಲ್ಲಿಯೇ ಆಧ್ಯಾತ್ಮ ಚಿಂತನೆಗಳನ್ನು ಮೈಗೂಡಿಸಿಕೊಂಡುಲೋಕಸಂಚಾರ ಮಾಡಿ ಭಾಲ್ಕಿಯಲ್ಲಿ ಮಠ ಸ್ಥಾಪಿಸಿದರು. ನಂತರ ಮತ್ತೆ ಸಂಚಾರಹೊರಟಿರಬಹುದಾದ ಶ್ರೀಗಳು ಈಗಿನ ಆಂಧ್ರಪ್ರದೇಶದ ಮೈನಳ್ಳಿಯಲ್ಲಿ ಲಿಂಗೈಕ್ಯರಾದರು.ಮೈನಳ್ಳಿಯಲ್ಲಿ ಇಂದಿಗೂ ಕರ್ತೃಗುರುಗಳ ಜಾತ್ರೆ ನಡೆಯುತ್ತಿದೆ.ಕರ್ತೃಗುರುಗಳ ನಂತರದ ಪರಂಪರೆಯ ಬಗ್ಗೆ ಸ್ಪಷ್ಟತೆಯಿಲ್ಲ. ಮುಂದೆ ಪೂಜ್ಯಶ್ರೀ ಮ.ಘ.ಚ. ಸಿದ್ದಬಸವ ಸ್ವಾಮಿಗಳು, ಶ್ರೀ ಷಣ್ಮುಖಯ್ಯ ಶಿವಾಚಾರ್ಯರು, ಶ್ರೀನೀಲಕಂಠಯ್ಯ ಶಿವಾಚಾರ್ಯರು, ಶ್ರೀ ಮ.ಘ.ಚ. ಗುರುಲಿಂಗ ಶಿವಾಚಾರ್ಯರುಮಠಾಧ್ಯಕ್ಷರಾಗಿ ಶ್ರೀಮಠದಲ್ಲಿ ಧಾರ್ಮಿಕ ಆಚರಣೆಗಳನ್ನು ನಡೆಸುತ್ತಾ ಭಕ್ತರನ್ನು ಸೂಕ್ತಮಾರ್ಗದರ್ಶನದಲ್ಲಿ ಮುನ್ನಡೆಸುತ್ತಾ ಸಮಾಜವನ್ನು ಧಾರ್ಮಿಕ ತಳಹದಿಯ ಮೇಲೆಮುನ್ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ಅಧಿಕಾರಕ್ಕೆ ಬಂದ ಡಾ. ಚನ್ನಬಸವ ಪಟ್ಟದದೇವರು ಶ್ರೀಮಠದ ಘನತೆಯನ್ನು ದಶದಿಕ್ಕುಗಳಿಗೆ ಹಬ್ಬುವಂತೆ ಮಾಡಿದರು.1890ರ ಡಿಸೆಂಬರ್ 22ರಂದು ಔರಾದ ತಾಲ್ಲೂಕಿನ ಕಮಲನಗರದಲ್ಲಿ ಜನಿಸಿದಶ್ರೀ ಚನ್ನಬಸವ ಪಟ್ಟದ ದೇವರು ತಮ್ಮ ಐದನೇ ವಯಸ್ಸಿನಲ್ಲಿಯೇ ತಂದೆತಾಯಿಯವರನ್ನುಕಳೆದುಕೊಂಡರು. ನಂತರ ಮುಧೋಳ(ಬಿ) ಸಂಸ್ಥಾನ ಮಠದ ಶ್ರೀ ಶಿವಲಿಂಗ ಸ್ವಾಮಿಗಳಕೃಪಾಶೀರ್ವಾದದಿಂದ ಬೆಳೆದು, ಔರಾದದ ಗಳಂಗಳಪ್ಪ ಶಾಲೆ, ಮುಧೋಳ ಹಾಗೂಶಿವಯೋಗಮಂದಿರದಲ್ಲಿ ಅಭ್ಯಸಿಸಿ ಹಾನಗಲ್ಲ ಕುಮಾರ ಸ್ವಾಮಿಗಳ ನೆಚ್ಚಿನ ಶಿಷ್ಯರೆನಿಸಿದ್ದರು.ಆನಂತರ 1924ರಲ್ಲಿ ಹಾನಗಲ್ಲ ಕುಮಾರ ಸ್ವಾಮಿಗಳ ದಿವ್ಯಸಾನಿಧ್ಯದಲ್ಲಿ ಕೆಳದಿಯಪಟ್ಟಾದ್ಯಕ್ಷ ಶ್ರೀ ರೇವಣ ಸಿದ್ದ ಮಹಾಸ್ವಾಮಿಗಳಿಂದ ಭಾಲ್ಕಿ ಹಿರೇಮಠದ ಪಟ್ಟಾಧಿಕಾರವನ್ನುಸ್ವೀಕರಿಸಿದ ಶ್ರೀ ಚನ್ನಬಸವ ಪಟ್ಟದ್ದೇವರು ಹಿರೇಮಠವನ್ನು ಸಮಾಜಮುಖಿಯಾಗಿಬೆಳೆಸಿದರು. ತಾವು ಅಭ್ಯಸಿಸಿದ ವಚನಧರ್ಮಸಾರ, ಶಿವಶರಣರ ಚರಿತ್ರೆಗಳಿಂದ ಪ್ರಭಾವಿತರಾಗಿದ್ದ ಶ್ರೀಗಳು ತಮ್ಮ ಜೀವನದುದ್ದಕ್ಕೂ ಬಸವಧರ್ಮದ ಪ್ರಸಾರವನ್ನು ಮಾಡಿದರು.ಶ್ರೀ ಚನ್ನಬಸವ ಪಟ್ಟದ್ದೇವರು ಸಮಾಜದ ಎಲ್ಲಾ ಮುಖಗಳನ್ನು ತಮ್ಮ ತೀಕ್ಷ್ಣಬುದ್ಧಿಯಿಂದ ಅವಲೋಕಿಸಿ ಸಮಾಜವನ್ನು ಧಾರ್ಮಿಕ ತಳಹದಿಯ ಮೇಲೆ ಮುನ್ನಡೆಸುವಪಣ ತೊಟ್ಟರು. ಹಿರೇಮಠದ ಪಟ್ಟದ್ದೇವರಾಗಿ ಆಚಾರ್ಯರ ಹಾಗೂ ಬಸವಾದಿ ಪ್ರಥಮರಪ್ರಗತಿಪರ ಚಿಂತನೆಗಳನ್ನು ಪ್ರಚುರಪಡಿಸಿ, ಈ ತತ್ವಕ್ಕನುಗುಣವಾಗಿ ನಡೆದು ಆಚಾರ ಮತ್ತುವಿಚಾರಗಳಲ್ಲಿ ಒಂದಾಗಿ ಮಠದ ಅಭಿವೃದ್ಧಿಯ ಜೊತೆಗೆ ಸಮಾಜವನ್ನು ಬೆಳೆಸಿದರು.ಶ್ರೀ ಚನ್ನಬಸವ ಪಟ್ಟದ್ದೇವರು ಸ್ವಾತಂತ್ರ್ಯ ಸಂಗ್ರಾಮ, ರಜಾಕಾರ ಚಳುವಳಿ,ಕರ್ನಾಟಕದ ಏಕೀಕರಣ ಹಾಗೂ ಕನ್ನಡ ಭಾಷೆಯಲ್ಲಿ ಶೈಕ್ಷಣಿಕ ಸೇವೆಗಾಗಿ ಅವಿರತಹೋರಾಡಿದರು. ಮಾತೃಭಾಷಾ ಶಿಕ್ಷಣದಿಂದ ವಂಚಿತರಾದ ಈ ಭಾಗದ ಜನರಿಗೆ ಕನ್ನಡಭಾಷೆಯಲ್ಲಿ ಶಿಕ್ಷಣ ಕೊಟ್ಟ ಮೊದಲ ಮಹಾಪುರುಷರು ಶ್ರೀಗಳು. ಮೋರಗಿಯಲ್ಲಿಪ್ರಥಮವಾಗಿ ಕನ್ನಡ ಪಾಠಶಾಲೆ ತೆರೆದ ಶ್ರೀಗಳು ಎಲ್ಲಾ ಅಡ್ಡಿ ಆತಂಕಗಳನ್ನು ನಿವಾರಿಸಿಮಕ್ಕಳಿಗೆ ಕನ್ನಡ ಕಲಿಸುವ ಕಾರ್ಯದಲ್ಲಿ ನಿರತರಾದರು. ಈ ಕಾರಣದಿಂದಾಗಿ ಬೀದರ್ಜಿಲ್ಲೆ ಕರ್ನಾಟಕ ರಾಜ್ಯದ ಭಾಗವಾಗಿ ಇದು ಕರ್ನಾಟಕದ ಶಿಖರಪ್ರಾಯವಾಗಿದೆ.ಶ್ರೀಗಳು ಕನ್ನಡ ಚಳುವಳಿಯಂತೆ ದಲಿತ ಚಳುವಳಿಗೆ ಧ್ವನಿಯಾದವರು.ಸಮಾಜದ ಅನಿಷ್ಠ ಪದ್ಧತಿಗಳನ್ನು ದೂರಮಾಡಲು ಶ್ರಮಿಸಿದರು. ಅಸ್ಪøಶ್ಯರನ್ನು ಸಮಾಜದಮುಖ್ಯವಾಹಿನಿಗೆ ತರದ ಹೊರತು ಸಮಾಜೋದ್ಧಾರ ಸಾಧ್ಯವಿಲ್ಲ ಎಂದು ನಂಬಿದ್ದವರು.ಇವರು ಮಾಡಿದ ಇನ್ನೊಂದು ಮಹತ್ವದ ಕಾರ್ಯವೆಂದರೆ ಬೆಲ್ದಾಳದ ಸಿದ್ದರಾಮರಿಗೆಲಿಂಗದೀಕ್ಷೆ ಕೊಟ್ಟದ್ದಲ್ಲದೆ ಜಂಗಮದೀಕ್ಷೆಯನ್ನೂ ಕೊಟ್ಟದ್ದು. ಮೂಲತಃ ಅಸ್ಪøಶ್ಯರಾಗಿದ್ದಬೆಲ್ದಾಳದ ಶರಣರು ಕೌಠಾದಲ್ಲಿ ಮಠ ಸ್ಥಾಪಿಸಿ ತನ್ಮೂಲಕ ಸಮಾಜದ ಅಸಮಾನತೆಯವಿರುದ್ಧ ಹೋರಾಡುತ್ತಿದ್ದಾರೆ.ಹೀಗೆ ಡಾ. ಶ್ರೀ ಚನ್ನಬಸವ ಪಟ್ಟದ್ದೇವರು, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕಹಾಗೂ ಸಾಹಿತ್ಯಿಕ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಿ ಭಾಲ್ಕಿ ಮಠವು ನಾಡಿನ ಪ್ರಮುಖ ಮಠಗಳಸಾಲಿಗೆ ನಿಲ್ಲುವಂತೆ ಮಾಡಿದರು. ಹೀಗೆ ಶ್ರೀಗಳು ಅಂತ್ಯೋದಯದಿಂದ ನವೋದಯದಕಡೆ ಸಮಾಜವನ್ನು ಬೆಳೆಸಿ 1985ರಲ್ಲಿ ಈಗಿನ ಶ್ರೀ ಬಸವಲಿಂಗ ಪಟ್ಟದ್ದೇವರಿಗೆ ಶ್ರೀಮಠದಪಟ್ಟಾಧಿಕಾರವನ್ನು ವಹಿಸಿಕೊಟ್ಟು ಶತಾಯುಷಿಗಳಾಗಿ ಸಾರ್ಥಕ ಜೀವನ ನಡೆಸಿ 1999ರಏಪ್ರಿಲ್ 22ರಂದು ಲಿಂಗೈಕ್ಯರಾದರು.ಭಾಲ್ಕಿ ಹಿರೇಮಠಕ್ಕೆ ಬಂದು ಗುರುಗಳ ಕೃಪಾಶೀರ್ವಾದದಲ್ಲಿ ಬೆಳೆದು ಅವರ ಸೇವೆಗೈಯುತ್ತಾಅವರ ಮಾರ್ಗದರ್ಶನದಲ್ಲಿ ಪರಿಪಕ್ವಗೊಂಡರು. 1978ರಲ್ಲಿ ಗುರುಗಳಿಂದ ಜಂಗಮದೀಕ್ಷೆಪಡೆದು ಶಿವಲಿಂಗ ದೇವರಾದ ಶಿವರಾಜರು 1985ರ ಜೂನ್ 2 ರಂದು ಭಾಲ್ಕಿ ಹಿರೇಮಠಕ್ಕೆಶ್ರೀ ಬಸವಲಿಂಗ ಪಟ್ಟದ್ದೇವರೆಂಬ ಅಭಿದಾನದೊಂದಿಗೆ ಪಟ್ಟಕ್ಕೆ ಬಂದರು.ಶ್ರೀ ಬಸವಲಿಂಗ ಪಟ್ಟದ್ದೇವರು ಗುರುಗಳಿಗೆ ತಕ್ಕ ಶಿಷ್ಯರಾಗಿ ಸಮಾಜದಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಗುರುಗಳು ಸ್ಥಾಪಿಸಿದ್ದ ಶಿಕ್ಷಣ ಸಂಸ್ಥೆಯನ್ನು ಉನ್ನತೀಕರಿಸಿದ ಶ್ರೀಗಳು ಶಾಂತಿವರ್ಧಕ ಶಿಕ್ಷಣ ಸಂಸ್ಥೆ ಹಾಗೂ 1992ರಲ್ಲಿ ತಾವೇ ಸ್ಥಾಪಿಸಿರುವಹಿರೇಮಠ ಸಂಸ್ಥಾನ ವಿದ್ಯಾಪೀಠ ಅಡಿಯಲ್ಲಿ ಸಮಾಜದ ಎಲ್ಲಾ ಸ್ಥರಗಳ ಮಕ್ಕಳಿಗೆ ಎಲ್ಲಾವಿಧದ ಶಿಕ್ಷಣವನ್ನು ನೀಡಿ ಸೇವೆಗೈಯುತ್ತಿದ್ದಾರೆ. ಹಾಗೂ ಶ್ರೀಮಠದಲ್ಲಿ ಶಿವಾನುಭವಗೋಷ್ಠಿಗಳ ಮೂಲಕ ಕ್ರಾಂತಿಕಾರಕ ವಿಚಾರಗಳನ್ನು ಮಂಡಿಸುತ್ತಿದ್ದಾರೆ.ಶ್ರೀ ಬಸವಲಿಂಗ ಪಟ್ಟದ್ದೇವರ ಸಾಧನೆಗಳನ್ನು ಅಳೆಯುವುದು ಸುಲಭ ಸಾಧ್ಯವಲ್ಲ.ಅನಾಥ ಮಕ್ಕಳ, ಬಾಲಕಾರ್ಮಿಕರ, ಅಬಲೆಯರ, ಹಿರಿಯರ, ಅಂಗವಿಕಲರ, ವ್ಯಸನಿಗಳ,ದಲಿತರ, ವಿದ್ಯಾರ್ಥಿಗಳ ಹೀಗೆ ಸಮಾಜದ ಎಲ್ಲಾ ವಿಧದ ಎಲ್ಲಾ ಸ್ಥರಗಳ ಜನರಅಭ್ಯುದಯಕ್ಕಾಗಿ ಶ್ರಮಿಸುತ್ತಿರುವ ಶ್ರೀಗಳಿಗೆ ಕಲ್ಯಾಣ ಬಸವ ಶ್ರೀ, ಸುವರ್ಣ ಕರ್ನಾಟಕ ರತ್ನಪ್ರಶಸ್ತಿ, ಗುಲಬರ್ಗಾ ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಪದವಿ, ರಮಣ ಶ್ರೀ,ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪದವಿ, ಸನ್ಮಾನಗಳು ಸಂದಿವೆ.ಶ್ರೀ ಬಸವಲಿಂಗ ಪಟ್ಟದ್ದೇವರು ಸಾಹಿತ್ಯ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ,ಸಾಂಸ್ಕøತಿಕ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ತಮ್ಮ ಛಾಪನ್ನು ಮೂಡಿಸಿ ಕರ್ನಾಟಕರತ್ನರೆನಿಸಿದ್ದಾರೆ. ತಮ್ಮ ಬಸವಜ್ಯೋತಿ ಸಂದೇಶಯಾತ್ರೆಯ ಮೂಲಕ ಕರ್ನಾಟಕದಹೊರಭಾಗದಲ್ಲೂ ಬಸವ ತತ್ವಗಳ ಪ್ರಸಾರದಲ್ಲಿ ತೊಡಗಿಕೊಂಡಿರುವ ಶ್ರೀಗಳು ತಮ್ಮಆಚಾರ-ವಿಚಾರಗಳ ಮೂಲಕ ನಾಡಿನ ಕಣ್ಮಣಿಗಳಲ್ಲಿ ಒಬ್ಬರೆನಿಸಿದ್ದಾರೆ. ಶ್ರೀಗಳು ಇತ್ತೀಚೆಗೆತಮ್ಮ ಉತ್ತರಾಧಿಕಾರಿಗಳನ್ನಾಗಿ ಪೂಜ್ಯ ಶ್ರೀ ಗುರುಬಸವ ದೇವರನ್ನು ನೇಮಕಗೊಳಿಸಿದ್ದುಕಿರಿಯ ಶ್ರೀಗಳು ಹಿರಿಯ ಗುರುಗಳ ಹಾದಿಯಲ್ಲಿಯೇ ಮುನ್ನಡೆಯುತ್ತಿದ್ದಾರೆ.

ಬಸವಲಿಂಗ ಪಟ್ಟದ್ದೇವರು ಸ್ಥಾಪಿಸಿದ ಪ್ರಶಸ್ತಿಗಳು:-

ಚನ್ನಬಸವ ಪಟ್ಟದ್ದೇವರು ಪ್ರಶಸ್ತಿ:-

1. ಮಹಾರಾಷ್ಟ್ರದ ಮರಾಠಿ ಶರಣ ಸಾಹಿತ್ಯ.

2. ಆಂಧ್ರ ಪ್ರದೇಶದ ತೆಲುಗು ಶರಣ ಸಾಹಿತ್ಯ.

3. ಮಕ್ಕಳ ಸಾಹಿತ್ಯ.

4. ಬೀದರ್ ಜಿಲ್ಲೆಯ ಉತ್ತಮ ಗ್ರಂಥ ರಚನೆ.

5. ಬೀದರ್ ಜಿಲ್ಲೆಯ ಹಿರಿಯ ಸಾಹಿತಿಗಳು.

6. ಮನೆಗೊಂದು ವಚನ ಪ್ರವಚನ.

7. ಉತ್ತಮ ಓದುಗ.

8. ಡಾ. ಚನ್ನಬಸವ ಪಟ್ಟದ್ದೇವರು ಯುವಕ ಸಂಘ.

 ಸಂಗೀತ : ಶ್ರೀ ಸಿದ್ದರಾಮ ಜಂಬಲದಿನ್ನಿ ವಚನ ಸಂಗೀತ ಪ್ರಶಸ್ತಿ.

 ಕಾಯಕ ಪ್ರಶಸ್ತಿ

 ನಾಡೋಜ ಡಾ. ಜೆ.ಎಸ್. ಖಂಡೇರಾವ ಚಿತ್ರಕಲಾ ಪ್ರಶಸ್ತಿ.

 ಡಾ. ಜಿ.ವಿ. ವಿಸಾಜಿ ಸಾಹಿತ್ಯ ಪ್ರಶಸ್ತಿ, ಮುಂತಾದವುಗಳು.

ಬಸವಲಿಂಗ ಪಟ್ಟದ್ದೇವರು ಸ್ಥಾಪಿಸಿದ ಸಂಘಸಂಸ್ಥೆಗಳು:-

 1. ಅನುಭವ ಮಂಟಪ ಟ್ರಸ್ಟ್, ಸಂತಪೂರ. 2. ಭಾರತೀಯ ಬಸವ ಬಳಗ, ಭಾಲ್ಕಿ

 3. ಡಾ. ಚನ್ನಬಸವ ಪಟ್ಟದ್ದೇವರು ಜನಕಲ್ಯಾಣ ಟ್ರಸ್ಟ್, ಕಮಲನಗರ

 4. ಡಾ. ಚನ್ನಬಸವ ಪಟ್ಟದ್ದೇವರು ಅನುಭವ ಮಂಟಪ ಟ್ರಸ್ಟ್, ಔರಾದ್.

 5. ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್, ಕಾರಾಮುಂಗಿ

 6. ಡಾ. ಚನ್ನಬಸವ ಪಟ್ಟದ್ದೇವರು ಯುವಕ ಸಂಘ, ಹಿರೇಮಠ ಸಂಸ್ಥಾನ.

 7. ಡಾ. ಚನ್ನಬಸವ ಪಟ್ಟದ್ದೇವರು ಕನ್ನಡ ಸಂಘ, ಹಿರೇಮಠ ಸಂಸ್ಥಾನ.

 8. ಅಕ್ಕನ ಬಳಗ, ಭಾಲ್ಕಿ. 9. ಲಿಂಗಾಯತ ಸಮಾಜ ಬಸವ ಸಮಿತಿ ಟ್ರಸ್ಟ್, ಜಾಲನಾ.

10. ಡಾ. ಚನ್ನಬಸವ ಪಟ್ಟದ್ದೇವರು ಪತ್ತಿನ ಸಹಕಾರ ಸಂಘ, ಭಾಲ್ಕಿ.

11. ಶರಣ ಶಾಂತಿವರ್ಧಕ ಶಿಕ್ಷಣಸಂಸ್ಥೆ, ಹಣೆಗಾಂವ 12. ಡಾ. ಚನ್ನಬಸವ ಪಟ್ಟದ್ದೇವರು ಪ್ರತಿಷ್ಠಾನ, ಭಾಲ್ಕಿ.

13. ಮಲಕವ್ವ ಹೊನ್ನಪ್ಪ ಶಿವಮಠ ನಿಡಗುಂದಿ ದತ್ತಿನಿಧಿ ಸ್ಥಾಪನೆ, ಭಾಲ್ಕಿ.

14. ಆಂಧ್ರ ಪ್ರದೇಶ ಬಸವ ಪರಿಷತ್ತು, ಭಾಲ್ಕಿ 15. ಮಹಾರಾಷ್ಟ್ರ ಬಸವ ಪರಿಷತ್ತು, ಭಾಲ್ಕಿ.

16. ಅಕ್ಕಮಹಾದೇವಿ ಜನ ಕಲ್ಯಾಣ ಸಂಸ್ಥೆ, ಕಂದಗೂಳ. 17. ಶ್ರೀ ಬಸವೇಶ್ವರ ಸ್ಮಾರಕ ಟ್ರಸ್ಟ್, ಖಂಡಾಳ.

ಶ್ರೀಮಠದ ಪ್ರಕಾಶನ ಸಂಸ್ಥೆಗಳು:-

  • ಚನ್ನಬಸವ ಪಟ್ಟದ್ದೇವರ ಪ್ರತಿಷ್ಠಾನ.
  • ಬಸವಧರ್ಮ ಪ್ರಸಾರ ಸಂಸ್ಥೆ, ಭಾಲ್ಕಿ.
  • ಚನ್ನಬಸವ ಪಟ್ಟದ್ದೇವರು ಪ್ರತಿಷ್ಠಾನ, ಭಾಲ್ಕಿ.
  • ಮಹಾರಾಷ್ಟ್ರ ಬಸವ ಪರಿಷತ್ತು, ಭಾಲ್ಕಿ.
  • ಆಂಧ್ರ ಬಸವ ಪರಿಷತ್ತು, ಭಾಲ್ಕಿ.
  • ಬಸವಭಾರತಿ ಹಿಂದಿ ಪ್ರತಿಷ್ಠಾನ, ಭಾಲ್ಕಿ

Swamiji

Swamiji Name :
ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರು
Date of Birth :
25-8-1950
Place :
ನಾಗೂರು (ಬಿ), ನಾರಾಯಣ ಖೇಡ ತಾ|| (ಆಂಧ್ರ)
Pattadikara :
1-6-1985
Photo :

Programs

ಪ್ರತಿ ತಿಂಗಳ 22ರಂದು ಮತ್ತು ಹುಣ್ಣಿಮೆಗೆ ವಿಶೇಷ ಕಾರ್ಯಕ್ರಮಗಳು. ಪ್ರತಿ ತಿಂಗಳು 11ರಂದು ‘ಮಾಸಿಕ ಅನುಭವ ಮಂಟಪ’ ಏಪ್ರಿಲ್ ತಿಂಗಳಲ್ಲಿ ಶ್ರೀಮಠದ ಜಾತ್ರಾ ಮಹೋತ್ಸವ. ಡಿಸೆಂಬರ್ 22ರಂದು ಲಿಂ. ಶ್ರೀ ಡಾ. ಚನ್ನಬಸವ ಪಟ್ಟದ್ದೇವರ ಹುಟ್ಟುಹಬ್ಬ ಆಚರಣೆ.

Institutions

ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್, ಭಾಲ್ಕಿ. ಕಿರಿಯ/ಹಿರಿಯ ಪ್ರಾಥಮಿಕ ಶಾಲೆಗಳು (20ಕ್ಕೂ ಹೆಚ್ಚು). ಪ್ರೌಢ ಶಾಲೆಗಳು ( 10ಕ್ಕೂ ಹೆಚ್ಚು). ಕೈಗಾರಿಕಾ ತರಬೇತಿ ಕೇಂದ್ರಗಳು (ಐ.ಟಿ.ಐ.) ಪದವಿ ಪೂರ್ವ ಮಹಾವಿದ್ಯಾಲಯಗಳು. ಪದವಿ ಮಹಾ ವಿದ್ಯಾಲಯ. ಸಂಗೀತ ಪಾಠಶಾಲೆಗಳು. ಅಲ್ಲಮಪ್ರಭು ವಾಚನಾಲಯ. ವಿದ್ಯಾರ್ಥಿ ನಿಲಯಗಳು. ಅನಾಥ ಮಕ್ಕಳ ಕುಟೀರಗಳು.

Photos

Full Address Kannada

ಶ್ರೀ ಹಿರೇಮಠ ಸಂಸ್ಥಾನ
ಭಾಲ್ಕಿ - 585 328,
ಬೀದರ್ ಜಿ||

Map

Near by Places

ಬೀದರ್ - 40 ಕಿ.ಮೀ. ಬಸವಕಲ್ಯಾಣ - 40 ಕಿ.ಮೀ. ಔರಾದ್ - 45 ಕಿ.ಮೀ.

Statistic

12 Views
0 Rating
0 Favorite
0 Share
error: Content is protected !!