Shree Hiremtha, Sadalapura

Shree Hiremtha, Sadalapura Claimed

ಶ್ರೀ ಹಿರೇಮಠ, ಸದಲಾಪುರ

Average Reviews

Description

ಶ್ರೀ ಹಿರೇಮಠ, ಸದಲಾಪುರ

ಕರ್ತೃ ಶ್ರೀ ಷ.ಬ್ರ. ಗುರು ರಾಚೋಟೇಶ್ವರ ಶಿವಾಚಾರ್ಯರು

ಬಸವಕಲ್ಯಾಣ ತಾಲ್ಲೂಕಿನ ಸದಲಾಪುರ ಗ್ರಾಮದಲ್ಲಿ ಅಸ್ತಿತ್ವದಲ್ಲಿರುವ ಶ್ರೀಹಿರೇಮಠವು ಶ್ರೀಮದ್ ರಂಭಾಪುರಿ ಪೀಠದ ಶಾಖಾಮಠವಾಗಿ ಶಿಷ್ಯವರ್ಗದ ಪರಂಪರೆಯಲ್ಲಿ ಬೆಳೆದುಬಂದಿದೆ. ಶ್ರೀ ಷ.ಬ್ರ. ಗುರು ರಾಚೋಟೇಶ್ವರ ಮಹಾಸ್ವಾಮಿಗಳಿಂದ ಸ್ಥಾಪಿತಗೊಂಡಿದೆಯೆಂದು ಹೇಳಲಾಗುವ ಶ್ರೀ ಹಿರೇಮಠದ ಪೂರ್ವ ಇತಿಹಾಸದ ಬಗ್ಗೆ ನಿಖರವಾಗಿತಿಳಿದುಬರುವುದಿಲ್ಲ.ಶ್ರೀ ರಾಚೋಟೇಶ್ವರ ಮಹಾಸ್ವಾಮಿಗಳ ಕರ್ತೃತ್ವ ಶಕ್ತಿಯಿಂದಾಗಿ ಹಾಗೂ ಆನಂತರಬಂದಿರುವ ಪರಂಪರೆಯ ಗುರುಗಳ ಪ್ರಭೆಯಿಂದಾಗಿ ಶ್ರೀಮಠವು ಸುತ್ತಮುತ್ತಲಿನ ಗ್ರಾಮಗಳಜನರಲ್ಲಿ ಧಾರ್ಮಿಕ ಭಾವನೆಯನ್ನು ಬೆಳೆಸಿ ಧರ್ಮಜಾಗೃತಿಯನ್ನುಂಟು ಮಾಡುತ್ತಿದೆ. ಆದರೆಶ್ರೀಮಠದಲ್ಲಿ ಅಧಿಕಾರ ನಡೆಸಿದ್ದಾರೆಂದು ಹೇಳಲಾಗುವ ಹಿಂದಿನ 15 ಶ್ರೀಗಳ ಪೈಕಿಶ್ರೀಮಠದಲ್ಲಿ 6 ಗದ್ದುಗೆಗಳನ್ನು ಮಾತ್ರ ಕಾಣಬಹುದಾಗಿದ್ದು ಉಳಿದ ಗದ್ದುಗೆಗಳ ಬಗ್ಗೆ ತಿಳಿದುಬರುವುದಿಲ್ಲ.ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ. ಚನ್ನವೀರ ಶಿವಾಚಾರ್ಯ ಮಹಾಸ್ವಾಮಿಗಳುಮಹಾಮಹಿಮಪುರುಷರಾಗಿದ್ದು ತಮ್ಮ ಧಾರ್ಮಿಕ ಆಚರಣೆಗಳ ಮೂಲಕ ಅಪಾರ ಭಕ್ತಸಮೂಹವನ್ನು ಸಂಪಾದಿಸಿಕೊಂಡು ಅವರ ಸಹಕಾರದೊಂದಿಗೆ ಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸಿದ್ದು ಶ್ರೀಮಠವನ್ನು ಹೆಚ್ಚಿನ ರೀತಿಯಲ್ಲಿ ಪ್ರಚಲಿತಗೊಳಿಸಿದರು. ಶ್ರೀಗಳುಶ್ರೀಮಠದ ಅಭಿವೃದ್ಧಿಕಾರ್ಯಗಳಿಗೆ ಹೆಚ್ಚು ಒತ್ತು ನೀಡಿ 1994ರಲ್ಲಿ ಲಿಂಗೈಕ್ಯರಾದರು.ಪ್ರಸ್ತುತ 1994ರಲ್ಲಿ ಹಿಂದಿನ ಶ್ರೀಗಳ ಐಕ್ಯಾನಂತರ ಶ್ರೀಮಠದ ಪಟ್ಟಕ್ಕೆ ಬಂದ ಶ್ರೀಷ.ಬ್ರ. ಸಿದ್ದಲಿಂಗ ಶಿವಾಚಾರ್ಯ ಪಟ್ಟದೇವರು ಶ್ರೀಮಠದ ಅಧಿಕಾರವನ್ನು ಸಮರ್ಥವಾಗಿಮುನ್ನಡೆಸಿಕೊಂಡು ಬರುತ್ತಿದ್ದಾರೆ. 1961ರಲ್ಲಿ ಹುಮನಾಬಾದ್ ತಾಲ್ಲೂಕಿನಬೇನ್ಚಿಂಚೋಳಿ ಗ್ರಾಮದ ಸುಸಂಸ್ಕøತ ಕುಟುಂಬದಲ್ಲಿ ಜನಿಸಿದ ಶ್ರೀಗಳು ತಮ್ಮ ವಿದ್ಯಾಭ್ಯಾಸನಂತರ ಶ್ರೀಮಠಕ್ಕೆ ಆಗಮಿಸಿ ಶ್ರೀಮಠದ ಅಧಿಕಾರವನ್ನು ಸ್ವೀಕರಿಸಿದರು. ಶ್ರೀಮಠದಲ್ಲಿಧಾರ್ಮಿಕ ಆಚರಣೆಗಳನ್ನು ಚುರುಕುಗೊಳಿಸಿದ ಶ್ರೀಗಳು ಶ್ರೀಮಠದ ಅಭಿವೃದ್ಧಿ ಕಡೆಗೂಗಮನ ಹರಿಸಿದ್ದಾರೆ. ಶ್ರೀಮಠದಲ್ಲಿ ಪ್ರತಿ ವರ್ಷ ಶ್ರಾವಣ ಮಾಸದ ಚೌತಿಗೆ ಶ್ರೀ ಹಿರಿಯಗುರುಗಳ ಪುಣ್ಯಾರಾಧನೆಯನ್ನು ನಡೆಸಿಕೊಂಡು ಬರಲಾಗುತ್ತಿದೆ.

Swamiji

Swamiji Name :
ಶ್ರೀ ಷ.ಬ್ರ. ಸಿದ್ಧಲಿಂಗ ಶಿವಾಚಾರ್ಯ ಪಟ್ಟದ ದೇವರು
Date of Birth :
1961
Place :
ಬೇನ್ಚಿಂಚೋಳಿ, ಹುಮನಾಬಾದ್ ತಾ||
Pattadikara :
1994
Photo :

Programs

ಪ್ರತಿ ಹುಣ್ಣಿಮೆ, ಅಮವಾಸ್ಯೆಗಳಲ್ಲಿ ವಿಶೇಷ ಪೂಜೆ.
ಶ್ರಾವಣ ಮಾಸದ ಚೌತಿಗೆ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ.
ಶ್ರೀ ರೇಣುಕಾಚಾರ್ಯ ಜಯಂತಿ ಆಚರಣೆ.

Photos

Full Address Kannada

ಶ್ರೀ ಹಿರೇಮಠ ಸದಲಾಪುರ,
ಎರಭಾಗ ಪೋಸ್ಟ್ - 585 331
ಬಸವಕಲ್ಯಾಣ ತಾ||, ಬೀದರ್ ಜಿ||

Map

Near by Places

ರಾಜೇಶ್ವರ - 5 ಕಿ.ಮೀ.
ಹುಮನಾಬಾದ್ - 10 ಕಿ.ಮೀ.
ಬೀದರ್ - 65 ಕಿ.ಮೀ.

Statistic

3 Views
0 Rating
0 Favorite
0 Share
error: Content is protected !!