Shree Gurubasaveshwara Viraktamatha

Shree Gurubasaveshwara Viraktamatha Claimed

ಶ್ರೀ ಗುರುಬಸವೇಶ್ವರ ವಿರಕ್ತಮಠ

Average Reviews

Description

ಶ್ರೀ ಗುರುಬಸವೇಶ್ವರ ವಿರಕ್ತಮಠ

ಕರ್ತೃ – ಪೂಜ್ಯ ಶ್ರೀ ಗುರುಬಸಪ್ಪ ಶರಣರು

ಬಸವಕಲ್ಯಾಣ ತಾಲ್ಲೂಕಿನ ಬೇಲೂರ ಗ್ರಾಮದ ಮಧ್ಯಭಾಗದಲ್ಲಿ ಪೂಜ್ಯ ಶ್ರೀಗುರುಬಸಪ್ಪ ಶರಣರಿಂದ ಸ್ಥಾಪಿತಗೊಂಡಿರುವ ಶ್ರೀ ಗುರುಬಸವೇಶ್ವರ ವಿರಕ್ತಮಠವು ತನ್ನಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಚಟುವಟಿಕೆಗಳ ಮೂಲಕ ಈ ಭಾಗದಲ್ಲಿ ಧಾರ್ಮಿಕವಾತಾವರಣವನ್ನು ನೆಲೆಗೊಳಿಸಿದೆ.ಕರ್ತೃಗುರುಗಳಾದ ಪೂಜ್ಯ ಶ್ರೀ ಗುರುಬಸಪ್ಪ ಶರಣರಿಂದ ಪ್ರಾರಂಭವಾದಶ್ರೀಮಠದ ಪರಂಪರೆಯು ಇದುವರೆಗೂ 9 ಜನ ಶ್ರೀಗಳನ್ನು ಕಂಡಿದ್ದು ಇದೀಗ 10ನೇಶ್ರೀಗಳಾದ ಶ್ರೀ ಮ.ನಿ.ಪ್ರ. ಶಿವಕುಮಾರ ಸ್ವಾಮಿಗಳ ತನಕ ಮುಂದುವರೆದಿದೆ. ಕರ್ತೃಗುರುಗಳನಂತರ ಬಂದಿರುವ 8 ಜನ ಶ್ರೀಗಳ ಬಗ್ಗೆ ಹೆಚ್ಚಿನ ಮಾಹಿತಿಗಳು ಲಭ್ಯವಿಲ್ಲವಾದರೂಪರಂಪರೆಯಲ್ಲಿ ಬಂದಿರುವ ಎಲ್ಲಾ ಶ್ರೀಗಳು ಜಂಗಮೇತರರೇ ಅಗಿರುವುದು ವಿಶೇಷ.ಹಿಂದಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ವಿರೂಪಾಕ್ಷ ಶರಣರು ಶ್ರೀಮಠವನ್ನುಸಮರ್ಥವಾಗಿ ಮುನ್ನಡೆಸಿ ಸುಮಾರು 1935ರ ಸುಮಾರಿಗೆ ಲಿಂಗೈಕ್ಯರಾಗಿದ್ದು ಇವರಗದ್ದುಗೆಯೂ ಸೇರಿದಂತೆ 9 ಗದ್ದುಗೆಗಳಿವೆ. ಶ್ರೀಮಠದ ಮೂಲ ಮಠವು ಊರ ಹೊರಗಡೆಅಸ್ತಿತ್ವದಲ್ಲಿದ್ದು ಎರಡೂ ಮಠಗಳಲ್ಲಿ ಈ ಗದ್ದುಗೆಗಳು ಹಂಚಿಕೊಂಡಿವೆ.ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಶಿವಕುಮಾರ ಸ್ವಾಮಿಗಳು 2000ನೇಇಸವಿಯಲ್ಲಿ ಶ್ರೀಮಠದ ಅಧಿಕಾರ ವಹಿಸಿಕೊಂಡು ಬಂದ ನಂತರ ಶ್ರೀಮಠದ ಧಾರ್ಮಿಕಆಚರಣೆಗಳು ಚುರುಕುಗೊಂಡಿದ್ದು ಶ್ರೀಮಠವು ಅಭಿವೃದ್ಧಿಯತ್ತ ಮುನ್ನಡೆದಿದೆ. 1971ರಲ್ಲಿಜನಿಸಿದ ಶ್ರೀಗಳು ವಿಜಯಪುರದ ಜ್ಞಾನಯೋಗಾಶ್ರಮದಲ್ಲಿ ಬಿ.ಎ. ಪದವಿ ಪಡೆದಿದ್ದುನಂತರ ಚಿತ್ರದುರ್ಗ ಮುರುಘಾಮಠದಲ್ಲಿ ಬಸವತತ್ವ ಅಧ್ಯಯನ ಮಾಡಿದ್ದಾರೆ.ಶ್ರೀ ಮುರುಘಾ ಶರಣರಿಂದ ನಿರಂಜನ ದೀಕ್ಷೆ ಪಡೆದಿರುವ ಶ್ರೀಗಳನ್ನು ಶರಣರೇಶ್ರೀಮಠಕ್ಕೆ ನೇಮಕಗೊಳಿಸಿದ್ದಾರೆ. ಶ್ರೀಗಳು ಶರಣರ ಆಶೀರ್ವಾದ ಬಲದೊಂದಿಗೆ ಶ್ರೀಮಠವನ್ನು ಪರಂಪರೆಯ ಹಾದಿಯಲ್ಲಿ ಸಮರ್ಥವಾಗಿ ಮುನ್ನಡೆಸುತ್ತಿದ್ದು ಕಾರ್ತೀಕ ಮಾಸದಲ್ಲಿಕರ್ತೃ ಶ್ರೀ ಗುರುಬಸಪ್ಪ ಶರಣರ ಪುಣ್ಯಸ್ಮರಣೋತ್ಸವವನ್ನು ಆಯೋಜಿಸುತ್ತಾರೆ.

Swamiji

Swamiji Name :
ಶ್ರೀ ಮ.ನಿ.ಪ್ರ. ಶಿವಕುಮಾರ ಸ್ವಾಮಿಗಳು
Date of Birth :
22-7-1971
Place :
ಬೊದಾಂಬರಿ, ದೇವದುರ್ಗ ತಾ||
Pattadikara :
2000
Photo :

Programs

ಕಾರ್ತೀಕ ಮಾಸದಲ್ಲಿ ಕಾರ್ತಿಕೋತ್ಸವ ಹಾಗೂ ಕರ್ತೃಗುರುಗಳ ಪುಣ್ಯಸ್ಮರಣೋತ್ಸವ.
ಬಸವಜಯಂತಿ ಆಚರಣೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು.

Photos

Full Address Kannada

ಶ್ರೀ ಗುರುಬಸವೇಶ್ವರ ವಿರಕ್ತಮಠ
ಬೇಲೂರ - 585 327
ಬಸವಕಲ್ಯಾಣ ತಾ||, ಬೀದರ್ ಜಿ||

Map

Near by Places

ಬಸವಕಲ್ಯಾಣ - 10 ಕಿ.ಮೀ.
ಹುಮನಾಬಾದ್ - 30 ಕಿ.ಮೀ.
ಬೀದರ್ - 80 ಕಿ.ಮೀ.

Statistic

3 Views
0 Rating
0 Favorite
0 Share
error: Content is protected !!