ಕರ್ತೃ – ಶ್ರೀ ಜಗದ್ಗುರು ಘನಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು
ಬಸವಕಲ್ಯಾಣದಲ್ಲಿ 12ನೇ ಶತಮಾನದಲ್ಲಿ ಸ್ಥಾಪನೆಯಾದ ‘ಅನುಭವ ಮಂಟಪ’ನಾಡಿನ ಸಂಸ್ಕøತಿಗೆ ಭದ್ರ ಬುನಾದಿಯನ್ನು ಹಾಕಿಕೊಟ್ಟಿದೆ. ಇಂತಹ ಪುಣ್ಯ ಭೂಮಿಯಲ್ಲಿಅಸ್ತಿತ್ವದಲ್ಲಿರುವ ಶ್ರೀ ಗವಿಮಠವು ತನ್ನ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಮೂಲಕ ಅಪಾರ ಭಕ್ತಬಳಗವನ್ನು ಹೊಂದಿದ್ದು ಸೂಕ್ತ ಮಾರ್ಗದರ್ಶನ ನೀಡುತ್ತಿದೆ.ಶ್ರೀ ಜಗದ್ಗುರು ಘನಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ಸಂಚಾರದಿಂದ ಬಸವಕಲ್ಯಾಣಕ್ಕೆ ಆಗಮಿಸಿ ಊರ ಒಳಗೆ ಸ್ಥಾಪಿಸಿದ್ದ ಶ್ರೀ ಗವಿಮಠವು ಕಾಲಕ್ರಮೇಣಪಟ್ಟಣದ ಹೊರಭಾಗದ ಕೆರೆಯ ದಡಕ್ಕೆ ಸ್ಥಳಾಂತರಗೊಂಡಿದೆ. ಕರ್ತೃಗುರುಗಳು ತಮ್ಮಧಾರ್ಮಿಕ ಆಚರಣೆಗಳಿಂದಾಗಿ ಭಕ್ತರಿಗೆ ಸನ್ಮಾರ್ಗ ತೋರುತ್ತಾ ಅವರ ಸಹಕಾರದೊಂದಿಗೆಶ್ರೀಮಠವನ್ನು ಸ್ಥಾಪಿಸಿ ಅಭಿವೃದ್ಧಿಗೊಳಿಸಿದ್ದರು.ಕರ್ತೃಗುರುಗಳ ನಂತರದ ಪರಂಪರೆಯ ಬಗ್ಗೆ ಸ್ಪಷ್ಟತೆಯಲ್ಲವಾದರೂಪರಂಪರೆಯ ಗುರುಗಳು ಶ್ರೀಮಠವನ್ನು ಅಭಿವೃದ್ಧಿಗೊಳಿಸಿರುವುದು ಕಂಡುಬರುತ್ತದೆ.ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ. ಕರಿಬಸಯ್ಯ ಸ್ವಾಮಿಗಳು ಶ್ರೀಮಠವನ್ನು ಸಮರ್ಥವಾಗಿಮುನ್ನಡೆಸಿದ್ದು 2005ರಲ್ಲಿ ಈಗಿನ ಶ್ರೀಗಳಿಗೆ ಪಟ್ಟಾಧಿಕಾರದ ಅನುಗ್ರಹ ನೀಡಿ ನಂತರ 2011ರನವೆಂಬರ್ 6ರಲ್ಲಿ ಲಿಂಗೈಕ್ಯರಾದರು.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯಸ್ವಾಮಿಗಳು ಹಿರಿಯ ಗುರುಗಳ ಮಾರ್ಗದರ್ಶನದಲ್ಲಿ ಪರಿಪಕ್ವಗೊಂಡಿದ್ದು ಶ್ರೀಮಠವನ್ನುಸರ್ವಾಂಗೀಣವಾಗಿ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಕಾರ್ಯತತ್ಪರರಾಗಿದ್ದಾರೆ. ಶ್ರೀಗಳು ಶ್ರೀರಂಭಾಪುರಿ ಪೀಠ, ಶಿವಯೋಗಮಂದಿರ, ಹೊನ್ನಾಳಿಯ ಶ್ರೀ ಕಲ್ಮಠ, ಮೈಸೂರಿನ ಸುತ್ತೂರುಮಠಗಳಲ್ಲಿ ಧಾರ್ಮಿಕ ಶಿಕ್ಷಣವನ್ನು ಪೂರೈಸಿದ ನಂತರ ಶ್ರೀಮಠದ ಪಟ್ಟಕ್ಕೆ ಬಂದಿದ್ದಾರೆ.ಪರಂಪರೆಯ ಆರು ಗುರುಗಳ ಗದ್ದುಗೆಗಳನ್ನು ಕಾಣಬಹುದಾಗಿದ್ದು ಅವುಗಳಲ್ಲಿನಾಲ್ಕು ಗದ್ದುಗೆಗಳು ಹೊರಗಿನ ಮಠದಲ್ಲಿಯೂ ಇನ್ನುಳಿದ ಎರಡು ಗದ್ದುಗೆಗಳು ಊರಒಳಗಿನ ಮಠದಲ್ಲಿ ಕಾಣಸಿಗುತ್ತವೆ. ಹಾಗೂ ಶ್ರೀಮಠದ ವತಿಯಿಂದ ಸಾಧಕರಿಗೆ ಪ್ರತಿವರ್ಷ’ಅಭಿನವ ಘನಲಿಂಗ ಶ್ರೀ’ ಎಂಬ ಪ್ರಶಸ್ತಿಯನ್ನು ನೀಡುತ್ತಾ ಬರಲಾಗುತ್ತಿದೆ.
Swamiji
Swamiji Name :
ಶ್ರೀ ಷ.ಬ್ರ. ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು
Date of Birth :
28-9-1986
Place :
ಬಸವಕಲ್ಯಾಣ,ಬೀದರ್ ಜಿ||
Pattadikara :
2005
Photo :
Programs
ಮಾರ್ಚ್ನಲ್ಲಿ ಶ್ರೀ ರೇಣುಕಾಚಾರ್ಯ ಜಯಂತಿ.
ಏಪ್ರಿಲ್ ತಿಂಗಳಲ್ಲಿ ಬಸವಜಯಂತಿ ಆಚರಣೆ.
ಪ್ರತಿ ವರ್ಷ ಸೆಪ್ಟೆಂಬರ್ 28ರಂದು ಶ್ರೀಗಳ ಹುಟ್ಟುಹಬ್ಬದ ಪ್ರಯುಕ್ತ ವರ್ದಂತಿ ಮಹೋತ್ಸವ.
ನೂಲು ಹುಣ್ಣಿಮೆ ದಿನ ‘ಶರಣರ ಪುಣ್ಯಸ್ಮರಣೋತ್ಸವ’ ಶ್ರಾವಣ ಮಾಸದಲ್ಲಿ ನಿತ್ಯ ‘ಸಿದ್ಧಾಂತ ಶಿಖಾಮಣಿ’ ಉಪನ್ಯಾಸ ಮಾಲೆ.
Photos
Full Address Kannada
ಶ್ರೀ ಗವಿಮಠ, ಅನುಭವ ಮಂಟಪ ತ್ರಿಪೂರಾಂತ,
ಬಸವಕಲ್ಯಾಣ - 585 327
ಬಸವಕಲ್ಯಾಣ ತಾ||, ಬೀದರ್ ಜಿ||