ಬಸವಕಲ್ಯಾಣ ಕ್ಷೇತ್ರವೆಂದರೆ ಲಿಂಗಾಯತ ಧರ್ಮೀಯರ ಶರಣಕ್ಷೇತ್ರ. ವಿಶ್ವಗುರುಬಸವಣ್ಣನವರು 12ನೇ ಶತಮಾನದಲ್ಲಿ ಬಸವಕಲ್ಯಾಣದಲ್ಲಿ 36 ವರ್ಷಗಳಿದ್ದು ಧಾರ್ಮಿಕ,ನೈತಿಕ, ಆಧ್ಯಾತ್ಮಿಕ, ಸಾಹಿತ್ಯಿಕವಾದ ಸಮತಾವಾದದ ಮಹಾಸೌಧವನ್ನು ಕಟ್ಟಿಕೊಟ್ಟವರು.ಅಂದು ಅವರು ಕಟ್ಟಿಕೊಟ್ಟ ಸಮಾಜವಾದದ ತಳಹದಿಯ ಮೇಲೆ ಇಂದು ಕೋಟ್ಯಾಂತರಜನರು ಅವರ ಅನುಯಾಯಿಗಳಾಗಿ ಬಸವತತ್ವವನ್ನು ಪಸರಿಸುತ್ತಾ ಬಂದಿದ್ದಾರೆ.ಯಾವುದೇ ಧರ್ಮಗಳು ತಮ್ಮ ಪ್ರವರ್ತಕನ ಕಾರ್ಯಕ್ಷೇತ್ರ ಮತ್ತು ಐಕ್ಯಕ್ಷೇತ್ರವನ್ನುಎರಡು ದಾರ್ಮಿಕ ಕ್ಷೇತ್ರಗಳನ್ನಾಗಿ ಗುರುತಿಸಿಕೊಂಡು ಶ್ರದ್ಧಾಭಕ್ತಿಯಿಂದ ವರ್ಷಕ್ಕೊಮ್ಮೆಅಲ್ಲಿಗೆ ಹೋಗಿ ತಮ್ಮ ಧಾರ್ಮಿಕ ಅನುಯಾಯಿತ್ವವನ್ನು ಸ್ವೀಕರಿಸುತ್ತಾರೆ. ಅದೇ ರೀತಿಯಲ್ಲಿಬಸವ ಪ್ರಣೀತ ಲಿಂಗಾಯತ ಧರ್ಮವು ಬಸವಣ್ಣನವರ ಪ್ರಮುಖ ಕ್ಷೇತ್ರಗಳನ್ನುಗುರುತಿಸಿಕೊಂಡಿದೆ. ಅವುಗಳೆಂದರೆ ಅವರ ತಪೋಭೂಮಿ, ಐಕ್ಯಕ್ಷೇತ್ರ ಕೂಡಲಸಂಗಮಮತ್ತು ಪುಣ್ಯಭೂಮಿ ಕಾರ್ಯಕ್ಷೇತ್ರ ಬಸವಕಲ್ಯಾಣ. ಈ ಎರಡೂ ಪ್ರತಿಯೊಬ್ಬ ಲಿಂಗಾಯತಧರ್ಮೀಯನಿಗೆ ಧಾರ್ಮಿಕ ಕ್ಷೇತ್ರಗಳಾಗಿ ಅಭಿವೃದ್ಧಿ ಹೊಂದಿವೆ.ಬಸವ ಧರ್ಮ ಪೀಠದ ಕರ್ತೃಗುರುಗಳಾದ ಶ್ರೀ ಮಹಾಜಗದ್ಗುರು ಲಿಂಗಾನಂದಮಹಾಸ್ವಾಮಿಗಳು ಈ ಎರಡೂ ಕ್ಷೇತ್ರಗಳಲ್ಲಿ ತಮ್ಮದೇ ಆದ ಕಾರ್ಯ ಚಟುವಟಿಕೆಗಳನ್ನುಹೊಂದಿ ಭಕ್ತರಿಗೆ ಸೂಕ್ತ ಮಾರ್ಗದರ್ಶನ ನೀಡಿದ್ದಾರೆ. ಅದೇರೀತಿ ನಂತರದ ಪೂಜ್ಯ ಶ್ರೀಮಹಾಜಗದ್ಗುರು ಮಾತೆ ಮಹಾದೇವಿ ಅಮ್ಮನವರು ಮುಂದುವರೆಸಿಕೊಂಡು ಬಂದಿದ್ದುಪೀಠವನ್ನು ಸರ್ವಾಂಗೀಣವಾಗಿ ಅಭಿವೃಧ್ಧಿಗೊಳಿಸಿದ್ದು ನಾಡಿನ ಪ್ರಮುಖ ಮಠಗಳಲ್ಲಿಒಂದಾಗಿ ಪರಿವರ್ತಿಸಿದ್ದಾರೆ.ಕರ್ನಾಟಕದ ಕಿರೀಟವಾದ ಬೀದರ ಜಿಲ್ಲೆಯು ಭೌಗೋಳಿಕವಾಗಿ ಸುಂದರವಾದತಾಣ ಅದರಲ್ಲಿಯೂ ಬಸವಕಲ್ಯಾಣ ಆಧ್ಯಾತ್ಮದ ಸಿರಿ ಸಂಪತ್ತಿನಿಂದ ಅನೇಕ ಶರಣರನ್ನುಒಗ್ಗೂಡಿಸಿದ ಪವಿತ್ರ ಕ್ಷೇತ್ರ. ಇಂತಹ ಬಸವಕಲ್ಯಾಣದಲ್ಲಿ ವಿಶ್ವದ ಪ್ರಪ್ರಥಮ ಮಹಿಳಾಜಗದ್ಗುರುಗಳಾದ ಮಾತೆ ಮಹಾದೇವಿಯವರು ತಮ್ಮ ಅನಂತ ವರ್ಷಗಳ ಸಂಕಲ್ಪದಿಂದಾಗಿಗುರುಗಳ ಕೃಪಾಶೀರ್ವಾದ ಬಲದಿಂದ, ಭಕ್ತರ ಸಹಕಾರದೊಂದಿಗೆ ಬಸವಕಲ್ಯಾಣದ ಮೇನ್ರೋಡ್ಗೆ ಹೊಂದಿಕೊಂಡಂತೆ 21 ಎಕರೆ ಜಮೀನು ಖರೀದಿಸಿ, ಇಲ್ಲಿ ಬಸವಧರ್ಮ ಪೀಠಮತ್ತು ಬಸವ ಮಹಾಮನೆ ಚಾರಿಟೇಬಲ್ ಟ್ರಸ್ಟ್ (ರಿ) ಎಂಬ ಧಾರ್ಮಿಕ ದತ್ತಿ ಸಂಸ್ಥೆಗಳನ್ನುಸ್ಥಾಪಿಸಿ ಅದರ ಅಡಿಯಲ್ಲಿ ಅನೇಕ ಯೋಜನೆಗಳನ್ನು ಹಾಕಿಕೊಂಡು ಸಾಕಾರಗೊಳಿಸುತ್ತಾಇದ್ದಾರೆ.ಅನೇಕ ಧಾರ್ಮಿಕ ನೇತಾರರು ಶೈಕ್ಷಣಿಕವಾಗಿ ಪ್ರಚಾರ ಮಾಡುವ ಸಂಘಸಂಸ್ಥೆಗಳನ್ನು ಕಟ್ಟಿದ್ದಾರೆ. ಆದರೆ ಮಾತೆ ಮಹಾದೇವಿಯವರು 12ನೇ ಶತಮಾನದ ಶರಣರಗತವೈಭವವನ್ನು ಪ್ರಚಾರ ಮಾಡುವ ಸಂಕಲ್ಪ ತೊಟ್ಟಿದ್ದಾರೆ. ಹಾಗಾಗಿಯೇ ಬಸವಧರ್ಮವನ್ನು ಮೊಟ್ಟಮೊದಲ ಬಾರಿಗೆ ದೇಶ-ವಿದೇಶಗಳಲ್ಲಿ ಸಂಚರಿಸಿ, ಪ್ರಚಾರ ಮಾಡಿದ ಕೀರ್ತಿಗೆಭಾಜನರಾಗಿದ್ದಾರೆ. ಹಾಗೂ ತಮ್ಮ ಬಸವಧರ್ಮ ಪೀಠದ ಮುಖಾಂತರ ನಾಡಿನುದ್ದಗಲಕ್ಕೂಲಿಂಗಾಯತ ಧರ್ಮದ ಪ್ರಸಾರ ಕಾರ್ಯ ಕೈಗೊಂಡಿದ್ದಾರೆ.ಮಾತೆ ಮಹಾದೇವಿಯವರು ತಮ್ಮ ಯೋಜನೆಯ ಭಾಗವಾಗಿ ಬಸವಕಲ್ಯಾಣದಲ್ಲಿ ವಿಶ್ವದ ಜನರನ್ನು ಆಕರ್ಷಿಸುವ 24 ಅಡಿ ಪೀಠದ ಮೇಲೆ 108 ಅಡಿ ಬೃಹತ್ ಅಭಯಹಸ್ತದಿಂದ ಆಸೀನರಾದ ಬಸವೇಶ್ವರ ಪುತ್ಥಳಿಯನ್ನು ನಿರ್ಮಿಸಿದ್ದಾರೆ. ಈ ಮೂರ್ತಿಯಸುತ್ತಮುತ್ತ ಅನೇಕ ಶರಣರ ಕಾಯಕ ಚಿತ್ರವನ್ನು ಪ್ರದರ್ಶಿಸುವ ಶರಣ ಗ್ರಾಮವಂತೂತುಂಬಾ ಆಕರ್ಷಣೀಯವಾಗಿದೆ. ಹಾಗೂ ಇಡೀ ಏಷ್ಯಾದಲ್ಲೇ ಪ್ರಥಮವೆಂಬ ಹೆಗ್ಗಳಿಕೆಗೆಪಾತ್ರವಾಗಿರುವ ವಿಶಾಲವಾದ ಜಂಬಿಟ್ಟಿಗೆ ಗವಿಗಳು ಕೆತ್ತನೆಗೊಂಡಿವೆ. ಹೀಗೆ ಹತ್ತು ಹಲವುಕಾರ್ಯಯೋಜನೆ ಕೈಗೊಂಡು ಸಾಕಾರಗೊಳಿಸುವಲ್ಲಿ ಮಾತೆಯವರು ಯಶಸ್ವಿಯಾಗಿದ್ದಾರೆ.ಪೂಜ್ಯ ಮಾತೆಯವರು ಚಿಂತನಶೀಲರೂ, ಪ್ರಗತಿಪರರೂ ಆಗಿದ್ದು ಲಿಂಗಾಯತಸಮಾಜದವರಲ್ಲಿನ ಆಸ್ಮಿತೆಯನ್ನು ಬಡಿದೆಬ್ಬಿಸುತ್ತಿದ್ದಾರೆ. ಮಾತೆಯವರು ಕೂಡಲಸಂಗಮವನ್ನು ಕೇಂದ್ರವಾಗಿರಿಸಿಕೊಂಡು ದೇಶದಾದ್ಯಂತ ಬಸವ ಮಂಟಪಗಳು, ಮಹಾಮನೆಗಳನ್ನುಸ್ಥಾಪಿಸಿ ಆ ಮೂಲಕ ಲಿಂಗಾಯತ ಧರ್ಮದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.ಅವುಗಳಲ್ಲಿ ಮುಖ್ಯವಾಗಿ 4 ಪೀಠಗಳನ್ನು ಗುರುತಿಸಬಹುದು. ಬಸವಕಲ್ಯಾಣದ ಬಸವಮಹಾಮನೆ, ಧಾರವಾಡದ ಜಗನ್ಮಾತಾ ಅಕ್ಕಮಹಾದೇವಿ ಅನುಭಾವ ಪೀಠ, ಮಹಾರಾಷ್ಟ್ರಅಲ್ಲಮಗಿರಿಯ ಜಗದ್ಗುರು ಅಲ್ಲಮಪ್ರಭು ಯೋಗಪೀಠಗಳು ಪ್ರಮುಖವೆನಿಸಿವೆ.ಇನ್ನುಳಿದಂತೆ ನವದೆಹಲಿಯ ಬಸವ ಮಹಾಮನೆ, ಹೈದರಾಬಾದ್, ಬೀದರ್, ಬೆಂಗಳೂರು,ಚಿತ್ರದುರ್ಗ ಮುಂತಾದೆಡೆಗಳಲ್ಲಿ ಬಸವ ಮಂಟಪಗಳನ್ನು ಸ್ಥಾಪಿಸಲಾಗಿದೆ.ಬಸವಧರ್ಮಪೀಠವು ವರ್ಷವಿಡೀ ಚಟುವಟಿಕೆಗಳ ಕೇಂದ್ರ. ಇಲ್ಲಿ ಪ್ರತಿ ತಿಂಗಳುಹುಣ್ಣಿಮೆಯಂದು ‘ಶರಣ ಸಮಾಗಮ’ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡು ವಿವಿಧವಿಷಯಗಳ ಮೇಲೆ ಧರ್ಮಚಿಂತನಗೋಷ್ಠಿಯನ್ನು ಏರ್ಪಡಿಸಲಾಗುತ್ತದೆ ಹಾಗೂ ಪ್ರತಿರವಿವಾರ 5 ಗಂಟೆಗೆ ಸಾಮೂಹಿಕ ಪ್ರಾರ್ಥನೆ ಮತ್ತು ಶ್ರಾವಣ ಮಾಸದಲ್ಲಿ ಪ್ರತಿನಿತ್ಯ‘ಮನೆಮನೆಗೆ ಬಸವ ಜ್ಯೋತಿ’ ಎಂಬ ವಿನೂತನ ಕಾರ್ಯಕ್ರಮ ನಡೆಯುತ್ತವೆ. ಈ ಎಲ್ಲಾಕಾರ್ಯಕ್ರಮಗಳ ಜೊತೆಯಲ್ಲಿ ಪ್ರತಿ ವರ್ಷ ಅಕ್ಟೋಬರ್ ತಿಂಗಳಲ್ಲಿ ಮೂರು ದಿನಗಳ ಕಾಲ’ಕಲ್ಯಾಣ ಪರ್ವ’ವೆಂಬ ವಾರ್ಷಿಕ ಸಮಾವೇಶವನ್ನು ಹಮ್ಮಿಕೊಳ್ಳಲಾಗುತ್ತದೆ. ಕಲ್ಯಾಣಕ್ರಾಂತಿಯ ಹಾಗೂ ಆ ಸಮಯದಲ್ಲಿ ಬಲಿದಾನ ಮಾಡಿದ ಸಾವಿರಾರು ಶಿವಶರಣರಸ್ಮರಣೆಗಾಗಿ ಪ್ರತಿವರ್ಷ ಈ ಕಾರ್ಯಕ್ರಮ ನಡೆಯುತ್ತದೆ. ಉದ್ಘಾಟನಾ ಗೋಷ್ಠಿ, ಸಾಮೂಹಿಕಇಷ್ಟಲಿಂಗಾರ್ಚನೆ, ಸಮುದಾಯ ಪ್ರಾರ್ಥನೆ, ಶರಣರ ಸ್ಮರಣೆ, ಮೆರವಣಿಗೆ, ಪಥಸಂಚಲನಇವು ಕಲ್ಯಾಣ ಪರ್ವದ ಮುಖ್ಯ ಘಟ್ಟಗಳು. ಲಕ್ಷಾಂತರ ಜನ ಪಾಲ್ಗೊಳ್ಳುವ ಈಕಾರ್ಯಕ್ರಮದಲ್ಲಿ ಉತ್ತಮ ಜ್ಞಾನದಾಸೋಹದೊಡನೆ ಅನ್ನದಾಸೋಹವು ಅಚ್ಚುಕಟ್ಟಾಗಿಏರ್ಪಾಡಾಗಿರುತ್ತದೆ.ಕೂಡಲ ಸಂಗಮದಲ್ಲಿ ಪ್ರತಿವರ್ಷ ಮಾತೆಯವರು ‘ಶರಣ ಮೇಳ’ವೆಂಬ ಬೃಹತ್ಕಾರ್ಯಕ್ರಮವನ್ನು ಆಯೋಜಿಸುತ್ತಾರೆ. ಪ್ರತಿವರ್ಷ ಜನವರಿ 11ರಿಂದ 15ರವರೆಗೆನಡೆಯುವ ‘ಶರಣ ಮೇಳ’ದಲ್ಲಿ ಲಕ್ಷೋಪಲಕ್ಷ ಜನರು ಪಾಲ್ಗೊಂಡು ಯಶಸ್ವಿಗೊಳಿಸುತ್ತಾರೆ.ಈ ಸಂದರ್ಭದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ಆಯೋಜನೆಗೊಂಡು ಲಕ್ಷಾಂತರ ಜನರ ಮನಸ್ಸನ್ನು ತಣಿಸುತ್ತವೆ.ಬಸವಕಲ್ಯಾಣ ಪೀಠದ ಆವರಣದಲ್ಲಿ ಬಸವ ಮಹಾಮನೆ (ಅತಿಥಿಗೃಹ), ಧ್ಯಾನಮಂಟಪ, ಚನ್ನಬಸವೇಶ್ವರ ಗ್ರಂಥ ಮಳಿಗೆ (ಗ್ರಂಥ ಭಂಡಾರ), ಅಕ್ಕನಾಗಲಾಂಬಿಕಾನಿರ್ಗತಿಕ ಮಕ್ಕಳ ಕುಟೀರ (ಅನಾಥಾಲಯ), ಮುಕ್ತಾಯಕ್ಕ ಮೆಟ್ರಿಕ್ ಪೂರ್ವ ಬಾಲಕಿಯರವಸತಿ ನಿಲಯ, ವೃದ್ಧಾಶ್ರಮ ಮುಂತಾದ ಸಂಸ್ಥೆಗಳನ್ನು ನಿರ್ವಹಿಸಲಾಗುತ್ತಿದೆ. ಹಾಗೆಯೇಸ್ಥಳೀಯವಾಗಿ ಕ್ರಾಂತಿ ಗಂಗೋತ್ರಿ ಮಹಿಳಾ ಸಂಘಟನೆ, ರಾಷ್ಟ್ರೀಯ ಬಸವದಳ,ಲಿಂಗಾಯತ ಧರ್ಮ ಮಹಾಸಭಾ ಸಂಘಟನೆಗಳು ಸೇವಾ ನಿರತವಾಗಿವೆ.ಈ ರೀತಿಯಾಗಿ ಮಾತೆ ಮಹಾದೇವಿಯವರು ಧಾರ್ಮಿಕವಾಗಿ, ಸಮಾಜಿಕವಾಗಿ,ಸಾಂಸ್ಕøತಿಕವಾಗಿ ಸಮಾಜಕ್ಕೆ ತಮ್ಮದೇ ಅದ ವಿಶಿಷ್ಟ ರೀತಿಯ ಸೇವೆ ಸಲ್ಲಿಸುತ್ತಿದ್ದು ಸದಾಚಟುವಟಿಕೆಯಿಂದಿರುತ್ತಾರೆ. ಹಾಗೂ ಅನಾಥ ಮಕ್ಕಳ, ವೃದ್ಧರ ಬಗ್ಗೆ ವಿಶೇಷ ಕಾಳಜಿಹೊಂದಿರುವ ಮಾತೆಯವರು, ಕೂಡಲಸಂಗಮ ಹಾಗೂ ಬಸವಕಲ್ಯಾಣ ಎರಡೂಕೇಂದ್ರಗಳಲ್ಲಿ ಸಾವಿರಕ್ಕೂ ಅಧಿಕ ಅನಾಥ ಮಕ್ಕಳ ಮತ್ತು ವೃದ್ಧರ ಆಶ್ರಯ ತಾಣಗಳನ್ನುಸ್ಥಾಪಿಸಿರುವುದು ಶ್ಲಾಘನೀಯ ಸಂಗತಿ.
ವಿಶೇಷತೆ:
ಪ್ರತಿ ವರ್ಷ ಕೂಡಲಸಂಗಮದಲ್ಲಿ ಪೂಜ್ಯ ಮಾತೆಯವರು
ಜನವರಿ 11 ರಿಂದ 15ರವರೆಗೆ ಆಯೋಜಿಸುವ ‘ಶರಣ ಮೇಳ’ದಲ್ಲಿ
ಸುಮಾರು 7 ರಿಂದ 8 ಲಕ್ಷ ಜನರು ಪಾಲ್ಗೊಳ್ಳುತ್ತಾರೆ.
ವಿಶೇಷತೆ:
ಪೂಜ್ಯ ಮಾತೆ ಮಹಾದೇವಿ ಅಮ್ಮನವರಿಗೆ ಮಕ್ಕಳೆಂದರೆ ತುಂಬಾ ಪ್ರೀತಿ.
ಬಡ, ಅಸಹಾಯಕ ಮಕ್ಕಳಿಗೆ (ವಿದ್ಯಾರ್ಥಿಗಳಿಗೋಸ್ಕರ) ಕೂಡಲಸಂಗಮದಲ್ಲಿ
ಅನಾಥಾಶ್ರಮವನ್ನು ನಡೆಸಲಾಗುತ್ತಿದ್ದು ಸಾವಿರಕ್ಕೂ
ಅಧಿಕ ಮಕ್ಕಳು ಆಶ್ರಯ ಪಡೆದಿದ್ದಾರೆ.
Swamiji
Swamiji Name :
ಶ್ರೀ ಮಹಾ ಜಗದ್ಗುರು ಮಾತೆ ಮಹಾದೇವಿ ಅಮ್ಮನವರು
Date of Birth :
13-3-1947
Place :
ಸಾಸಲಹಟ್ಟಿ, ಚಿತ್ರದುರ್ಗ ತಾ||
Photo :
Programs
ಪ್ರತಿ ಹುಣ್ಣಿಮೆಗೆ ಶರಣ ಸಮಾಗಮ,
ಧರ್ಮಚಿಂತನಾ ಗೋಷ್ಠಿಗಳು.
ವಿಜೃಂಭಣೆಯ ಬಸವಜಯಂತಿ ಆಚರಣೆ, ವಿವಿಧ ಕಾರ್ಯಕ್ರಮಗಳು.
ಪ್ರತಿವರ್ಷ ಅಕ್ಟೋಬರ್‍ನಲ್ಲಿ 3 ದಿನಗಳ ಕಾಲ ಕಲ್ಯಾಣ ಪರ್ವ ಹಾಗೂ ವಿಶೇಷ
ಸಾಂಸ್ಕøತಿಕ ಕಾರ್ಯಕ್ರಮಗಳು, ಸಾಮೂಹಿಕ ಇಷ್ಟಲಿಂಗಾರ್ಚನೆ, ಸಮುದಾಯ ಪ್ರಾರ್ಥನೆ
ಮತ್ತು ಶರಣಾರ್ಥಿ (ಶರಣ ವಂದನೆ).
ಶ್ರಾವಣ ಮಾಸದಲ್ಲಿ ನಿತ್ಯ ಮನೆ ಮನೆಗೆ ಬಸವಜ್ಯೋತಿ ಕಾರ್ಯಕ್ರಮ.
ವರ್ಷದ ಕಾರ್ಯಕ್ರಮಗಳು