Shree Sharana Basavaeshwara Dasoha Matha

Shree Sharana Basavaeshwara Dasoha Matha Claimed

ಶ್ರೀ ಶರಣ ಬಸವೇಶ್ವರ ದಾಸೋಹ ಮಠ

Average Reviews

Description

ಶ್ರೀ ಶರಣ ಬಸವೇಶ್ವರ ದಾಸೋಹ ಮಠ

ಕರ್ತೃ – ಪೂಜ್ಯ ಶ್ರೀ ರೇವಣಸಿದ್ಧ ಶರಣರು

ಶಿಗ್ಗಾಂವ ತಾಲ್ಲೂಕು ಕೇಂದ್ರದಿಂದ 10 ಕಿ.ಮೀ. ದೂರದಲ್ಲಿರುವ ಸದಾಶಿವಪೇಟೆಯ ಮಧ್ಯಭಾಗದಲ್ಲಿ ಶ್ರೀ ರೇವಣಸಿದ್ಧ ಶರಣರಿಂದ 1981 ರಲ್ಲಿ ಸ್ಥಾಪಿತಗೊಂಡಿರುವಶ್ರೀ ಶರಣಬಸವೇಶ್ವರ ದಾಸೋಹ ಮಠವು ಈ ಭಾಗದ ಜನರಲ್ಲಿ ದಾಸೋಹದ ಜೊತೆಗೆಧಾರ್ಮಿಕತೆಯ ಮಹತ್ವವನ್ನು ಸಾರುತ್ತಾ ಬೆಳೆದು ಬಂದಿದೆ. ಶ್ರೀ ಮಠವು ಗುಲ್ಬರ್ಗದ ಶ್ರೀಶರಣಬಸವೇಶ್ವರ ಮಠದ ಸಂಪ್ರದಾಯದಂತೆ ಸ್ಥಾಪಿತಗೊಂಡಿದೆ.ಶ್ರೀ ರೇವಣಸಿದ್ದ ಶರಣರು ಮೂಲತಃ ಅಬ್ಬಿಗೆರೆಯ ಅರಳೆಲೆ ಮಠದಿಂದಸದಾಶಿವಪೇಟೆಗೆ ಬಂದು ನೆಲೆನಿಂತವರು. ಶ್ರೀಗಳು ಸಂಸಾರಿಗಳಾಗಿದ್ದೂ ಕೂಡ ತಮ್ಮಅಧ್ಯಾತ್ಮ ಸಾಧನೆಯ ಮೂಲಕ ಭಕ್ತರ ಸಹಕಾರದೊಂದಿಗೆ ಗುಲ್ಬರ್ಗದ ಶ್ರೀ ಶರಣಬಸವೇಶ್ವರಮಠದ ಸಂಪ್ರದಾಯದಂತೆ ಶ್ರೀಮಠವನ್ನು ಸ್ಥಾಪಿಸಿದ್ದಾರೆ.ಶ್ರೀಗಳು ಇಲ್ಲಿ ನೆಲೆನಿಂತ ಮೆಲೆ ಶಿವಾನುಭವ ಗೋಷ್ಠಿಗಳ ಮೂಲಕ ಮಠಕ್ಕೆಭಕ್ತರನ್ನು ಸೆಳೆದಿದ್ದಾರೆ. ಹಾಗೆಯೇ ಶ್ರೀಮಠದಲ್ಲಿ ಶರಣ ಬಸವೇಶ್ವರ ಮೂರ್ತಿ ಹಾಗೂಈಶ್ವರ ಮೂರ್ತಿಗಳನ್ನು ಸ್ಥಾಪಿಸಿ ಅವುಗಳ ನಿತ್ಯ ಪೂಜೆಗೆ ವ್ಯವಸ್ಥೆ ಮಾಡಿದ್ದಾರೆ. ಹಾಗೂಶ್ರೀಮಠದಲ್ಲಿ ಪ್ರತಿನಿತ್ಯ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಮೂಲಕಸುತ್ತಮುತ್ತಲಿನ ಗ್ರಾಮಗಳ ಜನರನ್ನು ಶ್ರೀಮಠಕ್ಕೆ ಸೆಳೆದಿದ್ದಾರೆ.ಈಗಿನ ಶ್ರೀಗಳಾದ ಪೂಜ್ಯ ಶ್ರೀ ಶಿವದೇವ ಶರಣರು ಹಿಂದಿನ ಶ್ರೀಗಳು ಹಾಕಿಕೊಟ್ಟಹಾದಿಯಲ್ಲಿಯೇ ಮುನ್ನಡೆದಿದ್ದು ಶ್ರೀಮಠದಲ್ಲಿ ಧಾರ್ಮಿಕ ಆಚರಣೆಗಳ ಜೊತೆಯಲ್ಲಿನಿತ್ಯದಾಸೋಹದ ವ್ಯವಸ್ಥೆಯನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ. ಹಾಗೆಯೇಮಠದ ಸರ್ವಾಂಗೀಣ ಅಭಿವೃದ್ಧಿಗೆ ಯೋಜನೆಯನ್ನು ಹಾಕಿಕೊಂಡು ಆ ನಿಟ್ಟಿನಲ್ಲಿ ಹೆಜ್ಜೆಹಾಕುತ್ತಿದ್ದಾರೆ.ಶ್ರೀಮಠದಲ್ಲಿ ಮಾಘಮಾಸದಲ್ಲಿ ರಥೋತ್ಸವ ಜರುಗುತ್ತಿದ್ದು ಆ ಸಂದರ್ಭದಲ್ಲಿ35 ದಿನಗಳವರೆಗೆ ಪುರಾಣ ಪ್ರವಚನಗಳನ್ನು ಆಯೋಜಿಸಲಾಗುತ್ತದೆ ಮತ್ತು ಸಾಮೂಹಿಕವಿವಾಹಗಳನ್ನು ನಡೆಸುತ್ತಾ ಬರಲಾಗಿದೆ. ಶ್ರಾವಣ ಮಾಸದಲ್ಲಿ ಶ್ರೀ ಹಿರಿಯ ಗುರುಗಳಪುಣ್ಯಸ್ಮರಣೆ ಕಾರ್ಯಕ್ರಮವು ನಡೆಯುತ್ತದೆ.

Swamiji

Swamiji Name :
ಪೂಜ್ಯ ಶ್ರೀ ಶಿವದೇವ ಶರಣರು
Date of Birth :
1964
Place :
ಸದಾಶಿವ ಪೇಟೆ, ಶಿಗ್ಗಾಂವ ತಾ||
Photo :

Programs

ಪ್ರತಿ ಅಮವಾಸ್ಯೆಗೆ ವಿಶೇಷ ಪೂಜೆ.
ಮಾಘ ಮಾಸದಲ್ಲಿ ರಥೋತ್ಸವ ಪ್ರಯುಕ್ತ 35 ದಿನಗಳವರೆಗೆ ಪುರಾಣ ಪ್ರವಚನ ಮಹಾ ರುದ್ರಾಭಿಷೇಕ, ಸಾಮೂಹಿಕ ವಿವಾಹಗಳು ಹಾಗೂ ಕಾರ್ಯಕ್ರಮಗಳು ಶ್ರಾವಣ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಸ್ಮರಣೆ.

Photos

Full Address Kannada

ಶ್ರೀ ಶರಣ ಬಸವೇಶ್ವರ ದಾಸೋಹ ಮಠ ಸದಾಶಿವಪೇಟೆ,
ನಾರಾಯಣಪುರ ಪೋಸ್ಟ್ - 581 202
ಶಿಗ್ಗಾಂವ ತಾ., ಹಾವೇರಿ ಜಿ.

Map

Near by Places

ಬಂಕಾಪುರ ಕ್ರಾಸ್ - 4 ಕಿ.ಮೀ.
ಶಿಗ್ಗಾಂವ - 10 ಕಿ.ಮೀ.
ಸವಣೂರು - 12 ಕಿ.ಮೀ.
ಹಾವೇರಿ - 24 ಕಿ.ಮೀ.

Statistic

170 Views
0 Rating
0 Favorite
0 Share
error: Content is protected !!