Shree Gaddigeshwara Virakta Matha

Shree Gaddigeshwara Virakta Matha Claimed

ಶ್ರೀ ಗದಿಗೇಶ್ವರ ವಿರಕ್ತ ಮಠ

Average Reviews

Description

ಶ್ರೀ ಗದಿಗೇಶ್ವರ ವಿರಕ್ತ ಮಠ

ಕರ್ತೃ – ಶ್ರೀ ಮ.ನಿ.ಪ್ರ. ಗದುಗೇಶ್ವರ ಮಹಾಸ್ವಾಮಿಗಳು

ಶಿಗ್ಗಾಂವ ತಾಲ್ಲೂಕಿನ ಸದಾಶಿವ ಪೇಟೆಯು ತಾಲ್ಲೂಕು ಕೇಂದ್ರದಿಂದ 10 ಕಿ.ಮೀ.ದೂರದಲ್ಲಿದ್ದು ಈ ಗ್ರಾಮದಲ್ಲಿ ಶ್ರೀ ಗದಿಗೇಶ್ವರ ಸ್ವಾಮಿಗಳಿಂದ 15ನೇ ಶತಮಾನದಲ್ಲಿಸ್ಥಾಪಿತಗೊಂಡ ಶ್ರೀ ಗದಿಗೇಶ್ವರ ವಿರಕ್ತಮಠವು ಈ ಭಾಗದ ಜನರಲ್ಲಿ ಧಾರ್ಮಿಕ ಪ್ರಜ್ಞೆಯನ್ನುಬೆಳೆಸುವಲ್ಲಿ ಯಶಸ್ವಿಯಾಗಿದೆ.ಕತೃಗುರುಗಳಾದ ಶ್ರೀ ಗದಿಗೇಶ್ವರ ಮಹಾಸ್ವಾಮಿಗಳು ಕಲ್ಬುರ್ಗಿ ಗದ್ದಿಗೆ ಮಠದ ಶ್ರೀರೇವಣಸಿದ್ದೇಶ್ವರ ಸ್ವಾಮಿಗಳ ಪರಮ ಶಿಷ್ಯರಾಗಿದ್ದು ಗುರುಗಳ ಆಜ್ಞಾನುವರ್ತಿಗಳಾಗಿ ದೇಶಸಂಚಾರ ಮಾಡುತ್ತಾ ಗಂಗಿಭಾವಿಯಲ್ಲಿ ಅನುಷ್ಠಾನದಲ್ಲಿರುತ್ತಾರೆ. ಆ ಸಮಯದಲ್ಲಿ ಸದಾಶಿವಪೇಟೆಯ ಭಕ್ತರು ಶ್ರೀಗಳ ತಪೋನುಷ್ಠಾನ ಬಲಕ್ಕೆ ಮನಸೋಲುತ್ತಾರೆ.ಸದಾಶಿವಪೇಟೆಯ ಭಕ್ತರು ಶ್ರೀಗಳನ್ನು ಒಪ್ಪಿಸಿ ಹೊಸದಾಗಿ ನಿರ್ಮಾಣಗೊಂಡಿದ್ದಶ್ರೀ ವಿರಕ್ತಮಠಕ್ಕೆ ಶ್ರೀ ರೇವಣಸಿದ್ದೇಶ್ವರ ಸ್ವಾಮಿಗಳ ಸಮ್ಮುಖದಲ್ಲಿಯೇ ಪಟ್ಟಾಧಿಕಾರದಅನುಗ್ರಹವನ್ನು ಕೊಡಿಸುತ್ತಾರೆ. ಶ್ರೀ ರೇವಣಸಿದ್ದೇಶ್ವರ ಸ್ವಾಮಿಗಳು ಶ್ರೀ ಗದಿಗೇಶ್ವರರಿಗೆಅನುಗ್ರಹ ನೀಡಿ ಆಶೀರ್ವದಿಸಿ ಹೊರಡುತ್ತಾರೆ. ಸುಮಾರು 80 ವರ್ಷಗಳ ಕಾಲ ಶ್ರೀಮಠದಆಡಳಿತ ನಡೆಸಿದ ಶ್ರೀ ಗದಿಗೇಶ್ವರ ಮಹಾಸ್ವಾಮಿಗಳು ಜನರನ್ನು ಉದ್ಧರಿಸಿದ್ದಾರೆ.ತದನಂತರ ಶ್ರೀಮಠದ ಆಡಳಿತವನ್ನು ವಹಿಸಿಕೊಂಡ ಎಲ್ಲಾ ಗುರುಗಳು ತಮ್ಮಕಾಲಾವಧಿಯಲ್ಲಿ ಮಠದ ಧಾರ್ಮಿಕ ಆಚರಣೆಗಳನ್ನು ನಡೆಸುತ್ತಾ ಮಠದ ಭಕ್ತರಿಗೆ ಮಾರ್ಗದರ್ಶನ ನೀಡುತ್ತಾ ಮಠದ ಅಭಿವೃದ್ಧಿಯೊಂದಿಗೆ ಸಮಾಜದ ಏಳಿಗೆಗೆ ದುಡಿದಿದ್ದಾರೆ.ಹಿಂದಿನ ಶ್ರೀಗಳಾದ ಶ್ರೀ ಸಚ್ಚಿದಾನಂದ ಸ್ವಾಮಿಗಳು ಶ್ರೀಮಠದ ಆಡಳಿತವನ್ನು ನಡೆಸಿಕೊಂಡುಬಂದು, ಮಠಕ್ಕೆ ಹೆಚ್ಚಿನ ಸಂಖ್ಯೆಯ ಭಕ್ತರನ್ನು ತಮ್ಮ ಅನುಷ್ಠಾನ ಬಲದಿಂದ ಸೆಳೆದು ನಂತರಶ್ರೀಮಠದ ಶಾಖಾ ಮಠವಾದ ಚಂದಾಪುರದ ಶ್ರೀ ವಿರಕ್ತ ಮಠಕ್ಕೆ ಹೋಗಿ ನೆಲೆಸಿದ್ದರು.ಈಗಿನ ಶ್ರೀಗಳಾದ ಶ್ರೀ ಗದಿಗೇಶ್ವರ ಸ್ವಾಮಿಗಳು ಶಿವಯೋಗ ಮಂದಿರದಲ್ಲಿಧಾರ್ಮಿಕ ಅಭ್ಯಾಸ ನಡೆಸಿದವರು. ತಮ್ಮ ಪ್ರವಚನ ಕಲೆಯಿಂದ, ಆಯುರ್ವೇದ ಪಾಂಡಿತ್ಯದಿಂದ ಜನಪ್ರಿಯತೆ ಗಳಿಸಿದವರು. ಇಂತಹ ಶ್ರೀಗಳು 2000ದಲ್ಲಿ ಶ್ರೀಮಠದ ಅದಿಕಾರವಹಿಸಿಕೊಂಡು ಮಠವನ್ನು ಧಾರ್ಮಿಕ ಹಾಗೂ ಸಾಮಾಜಿಕ ನೆಲೆಗಟ್ಟಿನಲ್ಲಿ ಮುನ್ನಡೆಸಿದ್ದಾರೆ.

Swamiji

Swamiji Name :
ಶ್ರೀ ಮ.ನಿ.ಪ್ರ. ಗದಿಗೇಶ್ವರ ಸ್ವಾಮಿಗಳು
Date of Birth :
3-3-1958
Place :
ನಲ್ಲೂರು, ಚನ್ನಗಿರಿ ತಾ||
Pattadikara :
12-4-2000
Photo :

Programs

ಪ್ರತಿ ಅಮವಾಸ್ಯೆಗೆ ವಿಶೇಷ ಪೂಜೆ.
ಚೈತ್ರ ಶುದ್ಧ ನವಮಿಯಂದು ರಥೋತ್ಸವ, ಸಾಮೂಹಿಕ ವಿವಾಹಗಳು, ವಿವಿಧ ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು.
ಶ್ರಾವಣ ಮಾಸದಲ್ಲಿ ಪುರಾಣ ಶ್ರವಣ ಕಾರ್ಯಕ್ರಮ.
ನವರಾತ್ರಿಗೆ ಧಾರ್ಮಿಕ ಕಾರ್ಯಕ್ರಮಗಳು. ಕಾರ್ತೀಕ ಮಾಸದಲ್ಲಿ ದೀಪೋತ್ಸವ..

Photos

Full Address Kannada

ಶ್ರೀ ಗದಿಗೇಶ್ವರ ವಿರಕ್ತಮಠ
ಸದಾಶಿವ ಪೇಟೆ ನಾರಾಯಣಪುರ ಪೋಸ್ಟ್ - 581 203
ಶಿಗ್ಗಾಂವ ತಾ., ಹಾವೇರಿ ಜಿ.

Map

Near by Places

ಬಂಕಾಪುರ ಕ್ರಾಸ್ - 4 ಕಿ.ಮೀ.
ಶಿಗ್ಗಾಂವ - 10 ಕಿ.ಮೀ.
ಸವಣೂರು - 12 ಕಿ.ಮೀ.
ಹಾವೇರಿ - 24 ಕಿ.ಮೀ.

Statistic

130 Views
0 Rating
0 Favorite
0 Share
error: Content is protected !!