ಶಿಗ್ಗಾಂವ ತಾಲ್ಲೂಕು ಕೇಂದ್ರದಿಂದ 12 ಕಿ.ಮೀ. ದೂರದಲ್ಲಿರುವ ಕಡಹಳ್ಳಿ ಮತ್ತುಶ್ಯಾಡಂಬಿ ಎಂಬ ಜೋಡಿ ಗ್ರಾಮಗಳ ನಡುವೆ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳಿಂದ1990ರಲ್ಲಿ ಸ್ಥಾಪಿತಗೊಂಡಿರುವ ಶ್ರೀ ಭೂ ಕೈಲಾಸ ಮಠವು ತನ್ನ ಧಾರ್ಮಿಕ ಆಚರಣೆಗಳಮೂಲಕ ಈ ಜೋಡಿ ಗ್ರಾಮಗಳ ಜನರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸುವಲ್ಲಿಯಶಸ್ವಿಯಾಗಿದೆ.ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಚಿಕ್ಕಂದಿನಿಂದಲೇ ಆಧ್ಯಾತ್ಮದ ಕಡೆಗೆ ಒಲವುಹೊಂದಿದವರಾಗಿದ್ದು ತಮ್ಮ ಆಧ್ಯಾತ್ಮ ಚಿಂತನೆಗಳಿಂದ ಧಾರವಾಡ ಮುರುಘಾಮಠದ ಶ್ರೀಮಹಾಂತ ಸ್ವಾಮಿಗಳ ಸಂಪರ್ಕಕ್ಕೆ ಬಂದು ಅವರ ಕೃಪಾಶೀರ್ವಾದ ಬಲದೊಂದಿಗೆ ಅವರಪರಮಶಿಷ್ಯರಾಗಿ ಬೆಳೆದರು. ಶ್ರೀಗಳು ನಾಡಿನ ಪ್ರಖ್ಯಾತ ಪುರಾಣ ಪ್ರವಚನಕಾರರಾಗಿ ನಾನಾಭಾಗಗಳಲ್ಲಿ ಪ್ರವಚನ ನೀಡುತ್ತಾ ಕಡಹಳ್ಳಿಗೆ ಬಂದವರಾಗಿದ್ದಾರೆ.ಶ್ರೀಗಳ ಧರ್ಮನಿಷ್ಠೆ ಹಾಗೂ ಅವರ ಪುರಾಣ ಪ್ರವಚನಗಳಿಂದ ಪ್ರಭಾವಿತರಾದಕಡಹಳ್ಳಿ ಮತ್ತು ಶ್ಯಾಡಂಬಿ ಗ್ರಾಮದ ಭಕ್ತರು ಶ್ರೀಗಳ ಅಪೇಕ್ಷೆ ಮೇರೆಗೆ 1990ರಲ್ಲಿ ಮಠಕಟ್ಟಿಸಿಕೊಟ್ಟರು. ಶ್ರೀಗಳು ಶ್ರೀಮಠದಲ್ಲಿ ನೆಲೆನಿಂತು ತಮ್ಮ ಧಾರ್ಮಿಕ ಆಚರಣೆಗಳ ಮೂಲಕಜೋಡಿ ಗ್ರಾಮದ ಭಕ್ತರನ್ನು ಮಠಕ್ಕೆ ಸೆಳೆದು ಅವರಿಗೆ ಧಾರ್ಮಿಕ ಮಾರ್ಗದರ್ಶನಮಾಡಿದ್ದಾರೆ. ಹಾಗೆಯೇ ಶ್ರೀಮಠವನ್ನು ಇನ್ನೂ ಅಭಿವೃದ್ಧಿಗೊಳಿಸಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಶಿವಯೋಗಿ ಸ್ವಾಮಿಗಳು 2011ರ ನವೆಂಬರ್ 23ರಲ್ಲಿಶ್ರೀಮಠದ ಅಧಿಕಾರ ವಹಿಸಿಕೊಂಡಿದ್ದು ಹಿರಿಯ ಗುರುಗಳು ಹಾಕಿಕೊಟ್ಟ ಹಾದಿಯಲ್ಲಿಯೇಸಾಗುತ್ತಿದ್ದಾರೆ. ಹಾಗೆಯೇ ಭಕ್ತರ ಸಹಕಾರದೊಂದಿಗೆ ಶ್ರೀಮಠದ ಅಭಿವೃದ್ಧಿಯ ಯೋಜನೆಯನ್ನು ಹಾಕಿಕೊಂಡಿದ್ದಾರೆ.ಶ್ರೀಮಠದಲ್ಲಿ ಶ್ರೀಗಳು ಪ್ರತಿನಿತ್ಯ ಧಾರ್ಮಿಕ ಆಚರಣೆಗಳ ಜೊತೆಯಲ್ಲಿ ಪ್ರತಿಅಮವಾಸ್ಯೆಗೆ ಶಿವಾನುಭವ ಗೋಷ್ಠಿಯನ್ನು ನಡೆಸಿಕೊಡುತ್ತಾರೆ. ಮತ್ತು ಮಾಘ ಶುದ್ಧಪಂಚಮಿಗೆ ಶ್ರೀಮಠದ ಜಾತ್ರೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ಶ್ರೀಮಠದಮುಂಭಾಗದಲ್ಲಿ ಬಾವಿ ಇದ್ದು ಅದಕ್ಕೆ ಶಿವತೀರ್ಥ ಎಂದು ನಾಮಕರಣ ಮಾಡಲಾಗಿದೆ.
ವಿಶೇಷತೆ:
ಮಠದ ಮುಂಭಾಗದಲ್ಲಿ “ಶಿವತೀರ್ಥ” ಎಂಬ ಬಾವಿಯಿದ್ದು ಮಠದ
ಧಾರ್ಮಿಕ ಕಾರ್ಯಗಳಿಗೆ ಈ ಪವಿತ್ರ ಜಲವನ್ನು ಉಪಯೋಗಿಸಲಾಗುತ್ತದೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಶಿವಂiÀÉೂೀಗಿ ಸ್ವಾಮಿಗಳು
Date of Birth :
14-1-1967
Place :
ಪಶುಪತಿ ಹಾಳ, ಕುಂದಗೋಳ ತಾ||
Pattadikara :
23-11-2011
Photo :
Programs
ಪ್ರತಿ ಅಮವಾಸ್ಯೆಗೆ ವಿಶೇಷ ಪೂಜೆ, "ಶಿವಾನುಭವ ಗೋಷ್ಠಿ".
ಪ್ರತಿ ಹಬ್ಬಗಳ ಆಚರಣೆ. ಮಾಘ ಶುದ್ಧ ಪಂಚಮಿ ಶ್ರೀಮಠದ ಜಾತ್ರೆ
Photos
Full Address Kannada
ಶ್ರೀ ಭೂ ಕೈಲಾಸ ಮಠ,
ಕಡಹಳ್ಳಿ ಶ್ಯಾಡಂಬಿ - 581 203
ಶಿಗ್ಗಾಂವ ತಾ., ಹಾವೇರಿ ಜಿ.