Shree Gangibhavi Matha

Shree Gangibhavi Matha Claimed

ಶ್ರೀ ಗಂಗಿಭಾವಿ ಮಠ

Average Reviews

Description

ಶ್ರೀ ಗಂಗಿಭಾವಿ ಮಠ

ಕರ್ತೃ – ಶ್ರೀ ಷ.ಬ್ರ. ಯೋಗಿರಾಜೇಂದ್ರ ಶಿವಾಚಾರ್ಯ ಸ್ವಾಮಿಗಳು

ಶಿಗ್ಗಾಂವ ತಾಲ್ಲೂಕು ಕೇಂದ್ರದಿಂದ ಕೇವಲ 8 ಕಿ.ಮೀ. ದೂರದಲ್ಲಿರುವಗಂಗಿಭಾವಿಯಲ್ಲಿ ಶ್ರೀ ಯೋಗಿರಾಜೇಂದ್ರ ಶಿವಾಚಾರ್ಯ ಸ್ವಾಮಿಗಳಿಂದ 1967ರಲ್ಲಿಸ್ಥಾಪಿತಗೊಂಡಿರುವ ಶ್ರೀ ಗಂಗಿಭಾವಿ ಮಠವು ರಂಭಾಪುರಿ ಶಾಖಾಮಠವಾಗಿ ಈ ಗ್ರಾಮದಭಕ್ತರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ.ಹಿಂದಿನ ರಂಭಾಪುರಿ ಪೀಠಾಧ್ಯಕ್ಷರಾದ ಶ್ರೀ ಪ್ರಸನ್ನರೇಣುಕ ವೀರಗಂಗಾಧರಶಿವಾಚಾರ್ಯ ಭಗವತ್ಪಾದಕರು ಗಂಗಿಭಾವಿಯಲ್ಲಿ ಅನುಷ್ಠಾನಗೊಂಡು ಈ ಸ್ಥಳವನ್ನುಜಾಗೃತಗೊಳಿಸಿದ್ದಾರೆ. ಇಂತಹ ಜಾಗೃತ ಸ್ಥಳದಲ್ಲಿ ಶ್ರೀ ಯೋಗಿ ರಾಜೇಂದ್ರ ಶಿವಾಚಾರ್ಯಸ್ವಾಮಿಗಳು ಸ್ವಪ್ರಯತ್ನದಿಂದ ಹಾಗೂ ಭಕ್ತರ ಸಹಕಾರದೊಂದಿಗೆ ಮಠವನ್ನು ಸ್ಥಾಪಿಸಿಧಾರ್ಮಿಕ ಆಚರಣೆಗಳನ್ನು ನಡೆಸತೊಡಗಿದರು.ಶ್ರೀ ಯೋಗಿ ರಾಜೇಂದ್ರ ಶಿವಾಚಾರ್ಯ ಸ್ವಾಮಿಗಳು ಶಿವಪೂಜಾನಿಷ್ಠರಾಗಿದ್ದುಪ್ರತಿನಿತ್ಯ ಧಾರ್ಮಿಕ ಆಚರಣೆಗಳು ಹಾಗೂ ಶ್ರೀ ರಂಭಾಪುರಿ ಜಗದ್ಗುರುಗಳ ಅನುಷ್ಠಾನದನೆರವಿನಿಂದ ಶ್ರೀಮಠಕ್ಕೆ ಅಧಿಕ ಸಂಖ್ಯೆಯ ಭಕ್ತರನ್ನು ಸೆಳೆದಿದ್ದಾರೆ. ಹಾಗೆಯೇ ಶ್ರೀಮಠದಆವರಣದಲ್ಲಿರುವ ಶ್ರೀ ರಾಮಲಿಂಗೇಶ್ವರ ದೇವಸ್ಥಾನವನ್ನು ಅಭಿವೃದ್ಧಿಗೊಳಿಸಿ ಜೊತೆಯಲ್ಲಿರಂಭಾಪುರಿ ಶ್ರೀಗಳು ಅನುಷ್ಠಾನಗೊಂಡ ಗವಿಯನ್ನು ಧಾರ್ಮಿಕ ಕೇಂದ್ರವನ್ನಾಗಿರೂಪಿಸಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಗುರುಬಸವ ಶಿವಾಚಾರ್ಯ ಸ್ವಾಮಿಗಳು ಹಿಂದಿನಗುರುಗಳು ಹಾಕಿಕೊಟ್ಟ ಹಾದಿಯಲ್ಲಿಯೇ ಶ್ರೀಮಠವನ್ನು ಮುನ್ನಡೆಸಿಕೊಂಡು ಬರುತ್ತಿದ್ದುಧಾರ್ಮಿಕ ಆಚರಣೆಗಳನ್ನು ಮುಂದುವರೆಸಿದ್ದಾರೆ. ಹಾಗೆಯೇ ಹಿಂದಿನ ಶ್ರೀಗಳ ಕಾಲದಲ್ಲಿಸ್ಥಾಪಿಸಲಾಗಿದ್ದ ಪಂಚಾಚಾರ್ಯರ ಮೂರ್ತಿಗಳಿಗೆ ನಿತ್ಯ ಪೂಜೆಯ ವ್ಯವಸ್ಥೆ ಮಾಡಿದ್ದಾರೆ.

Swamiji

Swamiji Name :
ಶ್ರೀ ಷ.ಬ್ರ. ಗುರು ಶಿವಬಸವ ಶಿವಾಚಾರ್ಯ ಸ್ವಾಮಿಗಳು
Photo :

Programs

ಪ್ರತಿ ಅಮವಾಸ್ಯೆಗೆ ಹಾಗು ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ.
ಮಕರ ಸಂಕ್ರಮಣದಂದು ಜಾತ್ರೆ. ಶ್ರಾವಣ ಮಾಸದಲ್ಲಿ ರುದ್ರಾಭಿಷೇಕ.

Full Address Kannada

ಶ್ರೀ ಗಂಗಿಭಾವಿ ಮಠ
ಗಂಗಿಭಾವಿ - 581 205
ಶಿಗ್ಗಾಂವ ತಾ||, ಹಾವೇರಿ ಜಿ||

Map

Near by Places

ಶಿಗ್ಗಾಂವ - 8 ಕಿ.ಮೀ.
ಹಾವೇರಿ - 40 ಕಿ.ಮೀ.
ಹುಬ್ಬಳ್ಳಿ - 40 ಕಿ.ಮೀ.

Statistic

78 Views
0 Rating
0 Favorite
0 Share
error: Content is protected !!