ಶಿಗ್ಗಾಂವ ತಾಲ್ಲೂಕಿನ ಧುಂಡಸಿ ಗ್ರಾಮವು ತಾಲ್ಲೂಕು ಕೇಂದ್ರದಿಂದ ಸುಮಾರು15 ಕಿ.ಮೀ. ದೂರದಲ್ಲಿದ್ದು, ಈ ಗ್ರಾಮದಲ್ಲಿ ಶ್ರೀ ಪರದೇಶಿ ಸ್ವಾಮಿಗಳಿಂದ ಸ್ಥಾಪಿತಗೊಂಡಿದೆಎಂದು ಹೇಳಲಾದ ಶ್ರೀ ವಿರಕ್ತಮಠವು ಸುಮಾರು 200 ವರ್ಷಗಳ ಹಿಂದೆ ಸ್ಥಾಪಿಸಲ್ಪಟ್ಟಿದೆ.ಶ್ರೀ ಪರದೇಶಿ ಸ್ವಾಮಿಗಳು ಶ್ರೀಮಠವನ್ನು ಸ್ಥಾಪಿಸಿ ಅದಕ್ಕೆ ಭಕ್ತರ ಸಹಕಾರದೊಂದಿಗೆ ಕಟ್ಟಡವನ್ನು ನಿರ್ಮಿಸಿ ಧಾರ್ಮಿಕ ಆಚರಣೆಗಳಿಗೆ ಅನುಕೂಲವಾಗುವಂತೆಮಾಡಿದ್ದಾರೆ. ಶ್ರೀಗಳು ತಮ್ಮ ಧಾರ್ಮಿಕ ಆಚರಣೆಗಳ ಜೊತೆಯಲ್ಲಿಯೇ “ಶಿವಾನುಭವಗೋಷ್ಠಿ” ಗಳನ್ನು ನಡೆಸುತ್ತಿದ್ದರು, ಮತ್ತು ತಮ್ಮ ಧಾರ್ಮಿಕ ಚಿಂತನೆಗಳ ಮೂಲಕ ಶ್ರೀಮಠಕ್ಕೆಹೆಚ್ಚಿನ ಭಕ್ತರನ್ನು ಸೆಳೆದು ಅವರಿಗೆ ಉತ್ತಮ ಮಾರ್ಗದರ್ಶನ ನೀಡಿದ್ದಾರೆ.ಶ್ರೀ ಪರದೇಶಿ ಸ್ವಾಮಿಗಳು ಭಕ್ತರಲ್ಲಿ ಧಾರ್ಮಿಕಪ್ರಜ್ಞೆಯನ್ನು ಜೀವಂತವಾಗಿರಿಸುವಲ್ಲಿ ಯಶಸ್ವಿಯಾಗಿದ್ದಲ್ಲದೇ ಶ್ರೀಮಠವನ್ನು ಸಾಮಾಜಿಕವಾಗಿ ಗುರುತಿಸುವಂತೆ ಮಾಡಿದ್ದಾರೆ.ಇಂತಹ ಪರಮಪೂಜ್ಯರು ಜೀವಂತ ಸಮಾಧಿ ಹೋದರೆಂದು ಮಠದ ಭಕ್ತರಿಂದ ತಿಳಿದುಬರುತ್ತದೆ. ಶ್ರೀ ಪರದೇಶಿ ಸ್ವಾಮಿಗಳ ನಂತರ ಬಂದ ಶ್ರೀ ಸಿದ್ದರಾಮ ಸ್ವಾಮಿಗಳು ಹಿರಿಯಗುರುಗಳು ಹಾಕಿಕೊಟ್ಟ ಹಾದಿಯಲ್ಲಿಯೇ ಮುನ್ನಡೆದಿದ್ದಾರೆ.ಶ್ರೀ ಸಿದ್ದರಾಮ ಸ್ವಾಮಿಗಳ ನಂತರ ಈಗಿನ ಶ್ರೀ ಕುಮಾರ ಸ್ವಾಮಿಗಳು ಮಠದಅಧಿಕಾರ ವಹಿಸಿಕೊಂಡಿದ್ದಾರೆ. ಶ್ರೀಗಳು ಶಿವಯೋಗ ಮಂದಿರದಲ್ಲಿ ಧಾರ್ಮಿಕ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ ಸುಮಾರು 40 ವರ್ಷಗಳ ಹಿಂದೆ ಶ್ರೀಮಠದ ಅಧಿಕಾರ ವಹಿಸಿಕೊಂಡಿದ್ದು, ಶ್ರೀಗಳು ಮಠಕ್ಕೆ ಬಂದ ನಂತರ ಶ್ರೀಮಠವು ಸರ್ವರೀತಿಯಲ್ಲಿ ಅಭಿವೃದ್ಧಿಕಂಡಿದೆ. ಮಠದಲ್ಲಿ ಧಾರ್ಮಿಕ ಆಚರಣೆಗಳ ಜೊತೆಯಲ್ಲಿಯೇ ಭಕ್ತರ ಸಹಕಾರ ದೊಂದಿಗೆಸಾಮಾಜಿಕವಾಗಿಯೂ ಗುರುತಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.ಶ್ರೀ ಕುಮಾರ ಸ್ವಾಮಿಗಳು ಶ್ರೀಮಠದ ಅಭಿವೃದ್ಧಿ ಕಾರ್ಯವನ್ನು ಕೈಗೊಂಡುಮಠದ ಆಸ್ತಿಗಳನ್ನು ಗುರುತಿಸಿ ಅವುಗಳನ್ನು ವಶಪಡಿಸಿಕೊಂಡು ಮಠವು ಆರ್ಥಿಕವಾಗಿಸಬಲಗೊಳ್ಳುವಂತೆ ಮಾಡಿದ್ದಾರೆ. ಹಾಗೆಯೇ ಶಿವರಾತ್ರಿಯಲ್ಲಿ ಶ್ರೀಮಠದ ಹಿರಿಯಗುರುಗಳ ಪುಣ್ಯಾರಾಧನೆಯನ್ನು ನಡೆಸಿಕೊಡುತ್ತಾರೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಕುಮಾರ ಸ್ವಾಮಿಗಳು
Place :
ಸೀತಿಕೊಂಡ, ಹಿರೇಕೆರೂರು ತಾ||
Photo :
Programs
ಪ್ರತಿ ಅಮವಾಸ್ಯೆ ಹಾಗೂ ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ.
ಶಿವರಾತ್ರಿ ನಂತರ ರಥೋತ್ಸವ.
ಶಿವರಾತ್ರಿಯಂದು ಹಿರಿಯ ಗುರುಗಳ ಪುಣ್ಯಾರಾಧನೆ.