ಹಾವೇರಿ ಜಿಲ್ಲೆ ಸವಣೂರು ಪಟ್ಟಣದ ಹೊರವಲಯದಲ್ಲಿ ಸುಮಾರು 800ವರ್ಷಗಷ್ಟು ಪುರಾತನವಾದ ಇತಿಹಾಸವಿರುವ ಶ್ರೀ ರಾಚೋಟೇಶ್ವರ ಶಿವಯೋಗಿಗಳಿಂದಸ್ಥಾಪಿತಗೊಂಡಿದೆ ಎಂದು ಹೇಳಲಾದ ಶ್ರೀ ದೊಡ್ಡ ಹುಣಸೇಮರ ಕಲ್ಮಠವು ರಾಜ್ಯದಲ್ಲಿಯೇತನ್ನ ವಿಶೇಷತೆಗಳಿಂದಾಗಿ ಪ್ರಸಿದ್ಧಿಗೊಂಡಿದೆ.ಶ್ರೀಮಠದ ಪ್ರಮುಖ ಆಕರ್ಷಣೆಯೆಂದರೆ ದೊಡ್ಡ ಹುಣಸೇಮರಗಳು. ಈಮರಗಳು ಪ್ರಪಂಚದಲ್ಲಿ ಕೇವಲ ದಕ್ಷಿಣ ಆಫ್ರಿಕಾದ ಕಾಡುಗಳಲ್ಲಿ ಕಾಣಸಿಗುತ್ತಿದ್ದು, ಭಾರತದಸವಣೂರಿನಲ್ಲಿಯ ಶ್ರೀಮಠದ ಆವರಣದಲ್ಲಿರುವುದು ಅಚ್ಚರಿಯ ಸಂಗತಿ. ಇಲ್ಲಿ ಮೂರುದೊಡ್ಡ ಹುಣಸೇಮರಗಳಿದ್ದು ಅವುಗಳ ಸುತ್ತಳತೆ ಸುಮಾರು 50 ಅಡಿಯಿದ್ದು ಎತ್ತರಸುಮಾರು 60 ಅಡಿಗಳವರೆಗೆ ಬೆಳೆದಿವೆ. ಇಂತಹ ಅಪರೂಪದ ಮರಗಳು ಕಾಣಸಿಗುವುದುಅಪರೂಪವೆಂದು ಸಸ್ಯಶಾಸ್ತ್ರಜ್ಞರು ಅಭಿಪ್ರಾಯಪಡುತ್ತಾರೆ.ಕರ್ತೃಗುರುಗಳಾದ ಶ್ರೀ ರಾಚೋಟೇಶ್ವರ ಮಹಾಸ್ವಾಮಿಗಳ ಹೆಸರನ್ನೇ ಮುಂದಿನಎಲ್ಲಾ ಗುರುಗಳು ಅಭಿದಾನ ಪಡೆದಿದ್ದರಿಂದ ಶ್ರೀಮಠದ ಪರಂಪರೆಯ ಬಗ್ಗೆ ನಿಖರವಾದಮಾಹಿತಿಗಳು ಲಭ್ಯವಿಲ್ಲ. ಆದರೆ ಪರಂಪರೆಯಲ್ಲಿ ಬರುವ ಕೆಲ ಶ್ರೀಗಳ ಬಗ್ಗೆ ಮಾತ್ರ ಮಾಹಿತಿಮಠದಲ್ಲಿ ಲಭ್ಯವಿದೆ ಹಾಗಾಗಿ ಈಗಿನ ಶ್ರೀಗಳನ್ನು 12ನೆಯವರೆಂದು ಹೇಳಬಹುದು.ಈಗಿನ ಶ್ರೀಗಳಾದ ಶ್ರೀ ಚನ್ನಬಸವ ಸ್ವಾಮಿಗಳು 2000ದ ಮಾರ್ಚ್ 28ರಂದುಶ್ರೀಮಠದ ಅಧಿಕಾರವನ್ನು ವಹಿಸಿಕೊಂಡು ಪ್ರಾಚೀನ ಇತಿಹಾಸವುಳ್ಳ ಮಠವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಹಿಂದಿನ ಶ್ರೀಗಳು ಲಿಂಗೈಕ್ಯರಾದಾಗಲೇ ಉತ್ತರಾಧಿಕಾರಿಗಳಾಗಿನೇಮಕಗೊಂಡಿದ್ದ ಶ್ರೀ ಚನ್ನಬಸವ ಸ್ವಾಮಿಗಳು ವಿದ್ಯಾಭ್ಯಾಸವನ್ನು ಮುಂದುವರೆಸಿ ಸಂಸ್ಕøತದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ನಂತರ ಶ್ರೀಮಠಕ್ಕೆ ಆಗಮಿಸಿದ ಶ್ರೀಗಳುಮಠವನ್ನು ಅಭಿವೃದ್ಧಿಗೊಳಿಸಿದ ನಂತರ ಪಟ್ಟಾಧಿಕಾರ ವಹಿಸಿಕೊಂಡಿದ್ದಾರೆ.ಶ್ರೀಗಳು ಪ್ರಗತಿಪರರಾಗಿದ್ದು, ಸಾಮಾಜಿಕ ಪಿಡುಗುಗಳು ಹಾಗೂ ದುಶ್ಚಟಗಳಿಂದಜನರನ್ನು ದೂರವಿರುವಂತೆ ಮನಪರಿವರ್ತನೆ ಕಾರ್ಯದಲ್ಲಿ ನಿರತರಾಗಿದ್ದಾರೆ. ಹಾಗೆಯೇಸಮಾಜದಲ್ಲಿ ಧಾರ್ಮಿಕ ಮನೋಭಾವನೆಯನ್ನು ತಂದು ಅದರ ಮೂಲಕ ಸಮಾಜವುಒಗ್ಗೂಡಬೇಕೆಂಬುದು ಶ್ರೀಗಳ ಆಶಯ.
Swamiji
Swamiji Name :
ಶ್ರೀ ಮ.ನಿ.ಪ್ರ. ಚನ್ನಬಸವ ಸ್ವಾಮಿಗಳು
Date of Birth :
6-5-1968
Place :
ಸವಣೂರು, ಸವಣೂರು ತಾ||
Pattadikara :
28-3-2000
Photo :
Programs
ಫಾಲ್ಗುಣ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಸ್ಮರಣೆ ಹಾಗೂ "ಶರಣ ಸಂಸ್ಕøತಿ" ಉತ್ಸವ.
ಬಸವ ಜಯಂತಿ ಆಚರಣೆ. ಕಾರ್ತೀಕದಲ್ಲಿ ಕಾರ್ತಿಕೋತ್ಸವ.
Institutions
ಎಲ್.ಕೆ.ಜಿ. / ಯು.ಕೆ.ಜಿ. / ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢ ಶಾಲೆ.
ಪದವಿ ಪೂರ್ವ ಕಾಲೇಜು. ಡಿ.ಎಡ್. ಕಾಲೇಜು.
Photos
Full Address Kannada
ಶ್ರೀ ದೊಡ್ಡ ಹುಣಸೇಮರ ಕಲ್ಮಠ
ಸವಣೂರು - 581 118
ಸವಣೂರು ತಾ||, ಹಾವೇರಿ ಜಿ||