Shree Virakta Matha, Huvinashigli

Shree Virakta Matha, Huvinashigli Claimed

ಶ್ರೀ ವಿರಕ್ತ ಮಠ, ಹೂವಿನಶಿಗ್ಲಿ

Average Reviews

Description

ಶ್ರೀ ವಿರಕ್ತ ಮಠ, ಹೂವಿನಶಿಗ್ಲಿ

ಕರ್ತೃ – ಶ್ರೀ ಮ.ನಿ.ಪ್ರ. ನಿರಂಜನ ಮಹಾಸ್ವಾಮಿಗಳು ಊರ ಹೊರಗೆ ಮಠ

ಸವಣೂರು ತಾಲ್ಲೂಕು ಕೇಂದ್ರದಿಂದ 13 ಕಿ.ಮೀ ದೂರದಲ್ಲಿರುವ ಹೂವಿನಶಿಗ್ಲಿಗ್ರಾಮದಲ್ಲಿ ಪ್ರಾಚೀನ ಮಠವಾದ ಶ್ರೀ ವಿರಕ್ತಮಠವು ಅಸ್ತಿತ್ವದಲ್ಲಿದೆ. ಆದರೆ ಶ್ರೀಮಠದ ಮೂಲಗುರುಗಳು ಹಾಗೂ ನಂತರದ ಪರಂಪರೆಯ ಬಗ್ಗೆ ತಿಳಿದುಬರುವುದಿಲ್ಲವಾದ್ದರಿಂದ ಹಿಂದಿನಶ್ರೀಗಳಾದ ಶ್ರೀ ನಿರಂಜನ ಮಹಾಸ್ವಾಮಿಗಳನ್ನೇ ಕರ್ತೃಗುರುಗಳೆಂದು ಹೆಸರಿಸಬಹುದು.ಬೀದರ ಜಿಲ್ಲೆಯ ಔರಾದ ತಾಲ್ಲೂಕಿನ ಸೋನಾಳವೆಂಬ ಗ್ರಾಮದಿಂದ ದೇಶಸಂಚಾರ ಹೊರಟು ಬಂದ ಶ್ರೀ ನಿರಂಜನ ಮಹಾಸ್ವಾಮಿಗಳು ಹೂವಿನಶಿಗ್ಲಿಗೆ ಆಗಮಿಸಿದಾಗಇಲ್ಲಿನ ಪರಿಸರ ಹಾಗೂ ಜನರ ಭಕ್ತಿಗೆ ಮನಸೋತು ಹಾಗೂ ಈ ಗ್ರಾಮದಲ್ಲಿ ಜೀರ್ಣಾವಸ್ಥೆಯಲ್ಲಿದ್ದ ಮಠವನ್ನು ಕಂಡು ಇಲ್ಲಿಯೇ ನೆಲೆಗೊಳ್ಳುತ್ತಾರೆ. ಹಾಗೆಯೇ ಭಕ್ತರ ಸಹಕಾರದೊಂದಿಗೆ ಶ್ರಿ ಮಠದ ಜೀರ್ಣೋದ್ಧಾರ ಕೆಲಸವನ್ನು ಕೈಗೊಂಡರು.ಶ್ರೀ ನಿರಂಜನ ಮಹಾಸ್ವಾಮಿಗಳು ಧರ್ಮನಿಷ್ಠರು, ಕ್ರಿಯಾಶೀಲರೂ ಆಗಿದ್ದರು.ತಮ್ಮ ಕ್ರಿಯಾಶೀಲತೆಯಿಂದ ಶ್ರೀ ಮಠದ ಕೀರ್ತಿಯನ್ನು ನಾಡಿನಗಲಕ್ಕೂ ಪಸರಿಸಿದರು.ನಿತ್ಯವೂ ಬಸವತತ್ವವನ್ನು ಬಿತ್ತಿದರು. ವೈದ್ಯಶಾಸ್ತ್ರಗಳಿಂದ ಜನರ ಸಮಸ್ಯೆಗಳಿಗೆ ಉತ್ತರವಾದರು. ಜನರಲ್ಲಿ ಭಕ್ತಿಶ್ರದ್ಧೆಗಳನ್ನು ಮೂಡಿಸಿದರು. ಶ್ರೀಗಳು ಶಿಕ್ಷಣ ಪ್ರೇಮಿಗಳಾಗಿದ್ದು ಬಡಮಕ್ಕಳ ಶೈಕ್ಷಣಿಕ ಏಳಿಗೆಗಾಗಿ ಶ್ರೀ ಗುರುಕುಲ ಶಿಕ್ಷಣ ಸಂಸ್ಥೆ ಸ್ಥಾಪಿಸಿದರು.ಶ್ರೀಗಳು ಪ್ರತಿವರ್ಷ ಮಕರ ಸಂಕ್ರಾಂತಿಯಂದು ಜಾತ್ರಾ ಮಹೋತ್ಸವವನ್ನು ನಡೆಸಿನಾಡಿನ ಹರಗುರು ಚರಮೂರ್ತಿಗಳ ದರ್ಶನವನ್ನು ಜನರಿಗೆ ಮಾಡಿಸಿದರು. ಶ್ರೀಗಳು ತಮ್ಮಹುಟ್ಟೂರಾದ ಸೋನಾಳದಲ್ಲಿ ಮಠ ಸ್ಥಾಪಿಸಿ ಶಿಕ್ಷಣ ಸಂಸ್ಥೆ ಸ್ಥಾಪಿಸಿದರು. ಆಂಧ್ರದನಾಗೂರು, ಶಿರಹಟ್ಟಿ ತಾಲ್ಲೂಕಿನ ಕೊಂಚಿಗೇರಿ ಹಾಗೂ ಹಾವೇರಿ ತಾಲ್ಲೂಕಿನ ಸೋಮನಕಟ್ಟೆಗಳಲ್ಲಿ ಶಾಖಾಮಠಗಳನ್ನು ಸ್ಥಾಪಿಸಿ ಧರ್ಮ ಜಾಗೃತಿ ಕಾರ್ಯ ಕೈಗೊಂಡ ಶ್ರೀಗಳು 2009ರಡಿಸೆಂಬರ್ 21ರಂದು ಲಿಂಗೈಕ್ಯರಾದರು.ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಚನ್ನವೀರ ಮಹಾಸ್ವಾಮಿಗಳು 3-5-2011ರಲ್ಲಿಮಠದ ಅಧಿಕಾರ ವಹಿಸಿಕೊಂಡು ಹಿರಿಯ ಗುರುಗಳ ಹಾದಿಯಲ್ಲಿಯೇ ಮುನ್ನಡೆದಿದ್ದಾರೆ.ಶ್ರೀಗಳು ಧಾರ್ಮಿಕ ಆಚರಣೆಗಳೊಂದಿಗೆ ಶಾಖಾಮಠಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ.

Swamiji

Swamiji Name :
ಶ್ರೀ ಮ.ನಿ.ಪ್ರ. ಚನ್ನವೀರ ಮಹಾಸ್ವಾಮಿಗಳು
Date of Birth :
15-1-1978
Place :
ಮರೋಳ, ಹಾವೇರಿ ತಾ||
Pattadikara :
13-5-2011
Photo :

Programs

ಪ್ರತಿ ಅಮವಾಸ್ಯೆಗೆ ವಿಶೇಷ ಪೂಜೆ.
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ.
ಕಾರ್ತೀಕದಲ್ಲಿ ಕಾರ್ತಿಕೋತ್ಸವ. ಪುಷ್ಯ ಮಾಸದಲ್ಲಿ ರಥೋತ್ಸವ, ಕಡುಬಿನೋತ್ಸವ, ಶಿವಾನುಭವ ಗೋಷ್ಠಿ, ಪ್ರವಚನ ಹಾಗೂ ಸಾಮೂಹಿಕ ವಿವಾಹಗಳು.

Institutions

ಶ್ರೀ ಗುರುಕುಲ ಶಿಕ್ಷಣ ಸಂಸ್ಥೆ. ಸಂಸ್ಕøತ, ವೇದ ಪಾಠಶಾಲೆ.
ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢ ಶಾಲೆ ವಿದ್ಯಾರ್ಥಿ ನಿಲಯ / ಅನಾಥಾಶ್ರಮ.

Photos

Full Address Kannada

ಶ್ರೀ ವಿರಕ್ತ ಮಠ
ಹೂವಿನಶಿಗ್ಲಿ- 581 118
ಸವಣೂರು ತಾ||, ಹಾವೇರಿ ಜಿ||

Map

Near by Places

ಲಕ್ಷೇಶ್ವರ - 3 ಕಿ.ಮೀ.
ಸವಣೂರು - 11 ಕಿ.ಮೀ.
ಹಾವೇರಿ - 13 ಕಿ.ಮೀ.

Statistic

10 Views
0 Rating
0 Favorite
0 Share
error: Content is protected !!