ಕರ್ತೃ – ಶ್ರೀ ಮ.ನಿ.ಪ್ರ. ಸಿದ್ದಲಿಂಗೇಶ್ವರ ಮಹಾಸ್ವಾಮಿಗಳು
ಸವಣೂರು ತಾಲ್ಲೂಕಿನ ಹತ್ತಿ ಮತ್ತೂರು ಗ್ರಾಮವು ತಾಲ್ಲೂಕು ಕೇಂದ್ರದಿಂದ 12ಕಿ.ಮೀ.ದೂರದಲ್ಲಿದ್ದು ಇಲ್ಲಿ ಸುಮಾರು 300 ವರ್ಷಗಳ ಇತಿಹಾಸವಿರುವ ಶ್ರೀಸಿದ್ದಲಿಂಗೇಶ್ವರ ಮಹಾಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಶ್ರೀ ವಿರಕ್ತ ಮಠವು ಅಸ್ತಿತ್ವದಲ್ಲಿದ್ದು ಈ ಭಾಗದ ಜನರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ.ಹತ್ತಿ ಮತ್ತೂರು ಗ್ರಾಮದಲ್ಲಿ ಮಠ ಸ್ಥಾಪನೆಯಾಗುವ ಮೊದಲು ಶ್ರೀವಿರಕ್ತಮಠವು ಹಾವೇರಿ ತಾಲ್ಲೂಕು ಕರ್ಜಿಗಿಯಲ್ಲಿ ಮೂಲಮಠ ಇತ್ತೆಂದೂ ಹೇಳಲಾಗುತ್ತದೆ.ಕಾಲಾನಂತರ ಶ್ರೀ ಎರಡನೇ ರುದ್ರಮುನಿಸ್ವಾಮಿಗಳ ಕಾಲದಲ್ಲಿ ಶ್ರೀಮಠವು ಇಲ್ಲಿ ಸ್ಥಳಾಂತರಗೊಂಡಿದೆ ಎಂದು ಹೇಳಲಾಗುತ್ತಿದೆ. ಮೂಲಮಠವಾದ ಕರ್ಜಿಗೆಯ ಮಠವನ್ನುಶ್ರೀಮಠವೇ ನೋಡಿಕೊಂಡು ಬರುತ್ತಿದೆ.ಹಿಂದಿನ ಶ್ರೀಗಳಾದ ಶ್ರೀ ಎರಡನೇ ರುದ್ರಮುನಿ ಸ್ವಾಮಿಗಳು ಕರ್ಜಗಿಯಮೂಲಮಠದಲ್ಲೇ ಅಧಿಕಾರ ಪಡೆದು ಹತ್ತಿಮತ್ತೂರಿಗೆ ಸ್ಥಳಾಂತರಗೊಂಡು ಇಲ್ಲಿ ಕಟ್ಟಡವನ್ನುಕಟ್ಟಿ ಧಾರ್ಮಿಕ ಆಚರಣೆಗಳನ್ನು ಮುಂದುವರೆಸಿದರು. ಶ್ರೀಗಳು ಸುಮಾರು 6 ದಶಕಗಳಕಾಲ ಮಠವನ್ನು ಮುನ್ನಡೆಸಿ ಭಕ್ತ ಸಮೂಹವನ್ನು ಮಠದ ಕಡೆಗೆ ಸೆಳೆದಿದ್ದಾರೆ. ಇಂತಹಮಹಾಮಹಿಮರು 1984ರಲ್ಲಿ ಲಿಂಗೈಕ್ಯರಾದರು.ಶ್ರೀ ರುದ್ರಮುನಿ ಸ್ವಾಮಿಗಳ ನಂತರ 1988ರ ಮಾರ್ಚ್ 23ರಲ್ಲಿ ಶ್ರೀ ಮಠದಅಧಿಕಾರ ವಹಿಸಿಕೊಂಡ ಈಗಿನ ಶ್ರೀಗಳಾದ ಶ್ರೀ ನಿಜಗುಣ ಶಿವಯೋಗಿಗಳು ಹಿರಿಯಗುರುಗಳು ಹಾಕಿಕೊಟ್ಟ ಹಾದಿಯಲ್ಲಿಯೇ ಶ್ರೀ ಮಠವನ್ನು ಮುನ್ನಡೆಸಿದ್ದಾರೆ. ಶ್ರೀಮಠದಲ್ಲಿಧಾರ್ಮಿಕ ಕಾರ್ಯಗಳ ಜೊತೆಗೆ ಸಾಮಾಜಿಕವಾಗಿಯೂ ಗುರುತಿಸುವಂತೆ ಮಾಡಿದ್ದಾರೆ.ಶ್ರೀಮಠದ ಕರ್ತೃಗುರುಗಳು ಹಾಗೂ ಇನ್ನುಳಿದ ಮೂವರೂ ಗುರುಗಳಗದ್ದುಗೆಗಳು ಕರ್ಜಗಿಯ ಮೂಲಮಠದದಲ್ಲಿದ್ದು, ಶ್ರೀ ಎರಡನೇ ರುದ್ರಮುನಿ ಸ್ವಾಮಿಗಳಗದ್ದುಗೆ ಇಲ್ಲಿನ ಮಠದಲ್ಲಿದೆ. ಈ ಎಲ್ಲಾ ಗದ್ದುಗೆಗಳಿಗೂ ನಿತ್ಯ ಪೂಜೆಗಳು ನಡೆಯುತ್ತಿವೆ.ಹಾಗೆಯೇ ಜೇಷ್ಠಮಾಸದಲ್ಲಿ ಲಿಂ. ಶ್ರೀ ರುದ್ರಮುನಿ ಸ್ವಾಮಿಗಳ ಆರಾಧನೆ ನಡೆಯುತ್ತಿದ್ದುಶ್ರಾವಣ ಮಾಸದಲ್ಲಿ ನಿತ್ಯ ಪುರಾಣ ಪ್ರವಚನಗಳನ್ನು ಆಯೋಜಿಸಲಾಗುತ್ತದೆ.
Swamiji
Swamiji Name :
ಶ್ರೀ ಮ.ನಿ.ಪ್ರ. ನಿಜಗುಣ ಶಿವಯೋಗಿಗಳು
Date of Birth :
1-6-1965
Pattadikara :
23-3-1988
Photo :
Programs
ಪ್ರತಿ ಸೋಮವಾರ ವಿಶೇಷ ಕಾರ್ಯಕ್ರಮಗಳು.
ಜೇಷ್ಠ ಮಾಸದಲ್ಲಿ ಲಿಂ|| ಶ್ರೀ ರುದ್ರಮುನಿ ಮಹಾಸ್ವಾಮಿಗಳ ಆರಾಧನೆ.
ಶ್ರಾವಣ ಮಾಸದಲ್ಲಿ ನಿತ್ಯ ಪುರಾಣ ಪ್ರವಚನಗಳು.
ಕಾರ್ತೀಕದಲ್ಲಿ ಕಾರ್ತಿಕೋತ್ಸವ.
Institutions
ಶ್ರೀ ಸಿದ್ದಲಿಂಗೇಶ್ವರ ವಿದ್ಯಾಪೀಠ.
ಸಂಸ್ಕøತ ಪಾಠಶಾಲೆ.
ಕಿರಿಯ / ಹಿರಿಯ ಪ್ರಾಥಮಿಕ ಶಾಲೆ.
Photos
Full Address Kannada
ಶ್ರೀ ವಿರಕ್ತ ಮಠ
ಹತ್ತಿ ಮತ್ತೂರು - 581 118
ಸವಣೂರು ತಾ||, ಹಾವೇರಿ ಜಿ||