Shri Puttayya Virakta Matha

Shri Puttayya Virakta Matha Claimed

ಶ್ರೀ ಪುಟ್ಟಯ್ಯ ವಿರಕ್ತ ಮಠ

Average Reviews

Description

ಶ್ರೀ ಪುಟ್ಟಯ್ಯ ವಿರಕ್ತ ಮಠ

ಕರ್ತೃ – ಶ್ರೀ ಪೂಜ್ಯ ಅನ್ನದಾನೇಶ್ವರ ಮಹಾಸ್ವಾಮಿಗಳು

ರಾಣೆಬೆನ್ನೂರು ನಗರದ ದೊಡ್ಡಪೇಟೆಯಲ್ಲಿ ಸುಮಾರು 315 ವರ್ಷಗಳ ಹಿಂದೆಶ್ರೀ ಅನ್ನದಾನೇಶ್ವರ ಮಹಾಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಶ್ರೀ ಪುಟ್ಟಯ್ಯ ವಿರಕ್ತಮಠವು ಈ ಭಾಗದ ಜನರಲ್ಲಿ ಧಾರ್ಮಿಕ ಆಚರಣೆಗಳು ಹಾಗೂ ಸಾಮಾಜಿಕಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸುವ ಮೂಲಕ ಹೆಚ್ಚು ಪ್ರಚಲಿತಗೊಂಡಿದೆ.ಕತೃಗುರುಗಳ ನಂತರದ ಪರಂಪರೆಯ ಬಗ್ಗೆ ತಿಳಿದು ಬರುವುದಿಲ್ಲ. ಕಾರಣಮುಂದೆ ಬಂದ ಎಲ್ಲಾ ಗುರುಗಳು ಕರ್ತೃಗುರುಗಳಾದ ಶ್ರೀ ಅನ್ನದಾನೇಶ್ವರ ಸ್ವಾಮಿಗಳ ಹೆಸರಿನಿಂದಲೇ ಅಭಿದಾನ ಪಡೆದದ್ದು. ಇದನ್ನು ಮನಗಂಡ ನಂತರ ಬಂದ ಶ್ರೀ ರಾಚೋಟಿಸ್ವಾಮಿಗಳು ತಮ್ಮ ಹೆಸರನ್ನು ಕರ್ತೃಗುರುಗಳ ಹೆಸರಿನಿಂದ ಆಭಿದಾನ ಪಡೆಯುವುದನ್ನುಕೈಬಿಟ್ಟರು. ಇದರಿಂದಾಗಿ ನಂತರದ ಪರಂಪರೆಯ ಮಾಹಿತಿ ಲಭ್ಯವಾಗುತ್ತದೆ.ಶ್ರೀ ರಾಚೋಟಿಸ್ವಾಮಿಗಳು ಸದಾ ಸಂಚಾರಿಗಳಾಗಿದ್ದು, ಲೋಕಸಂಚಾರಮಾಡುತ್ತಾ ವೀರಶೈವ ಧರ್ಮದ ಬಗ್ಗೆ ಜನರಿಗೆ ಅರಿವು ಮೂಡಿಸುತ್ತಾ ಧರ್ಮವನ್ನು ಬೆಳೆಸಿದ್ದಾರೆ. ಹಾಗೆಯೇ ಇವರ ಕಾಲದಲ್ಲಿಯೇ ಶ್ರೀ ಮಠವು ಹೆಚ್ಚು ಪ್ರಚಾರಕ್ಕೆ ಬಂದಿದೆ. ನಂತರಬಂದ ಶ್ರೀ ಬಸವ ಸ್ವಾಮಿಗಳು ಹಿರಿಯ ಶ್ರೀಗಳು ಹಾಕಿಕೊಟ್ಟ ಹಾದಿಯಲ್ಲಿಯೇ ನಡೆದಿದ್ದುಮಠವನ್ನು ಹೆಚ್ಚು ಅಭಿವೃದ್ಧಿಗೊಳಿಸಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಗುರುಬಸವ ಸ್ವಾಮಿಗಳು 1992ರಲ್ಲಿ ಶ್ರೀ ಮಠದಅಧಿಕಾರವನ್ನು ಪಡೆದು ಮಠವನ್ನು ಮುನ್ನಡೆಸುತ್ತಿದ್ದಾರೆ. ಶ್ರೀಮಠದಲ್ಲಿ ಪ್ರತಿ ತಿಂಗಳು “ಶರಣಸಂಗಮ” ಹಾಗೂ “ಮನೆಯಲ್ಲಿ ಮಹಾಮನೆ” ಕಾರ್ಯಕ್ರಮಗಳನ್ನು ಶ್ರೀಗಳು ನಡೆಸಿಕೊಡುತ್ತಾರೆ. ಹಾಗೆಯೇ ಶ್ರೀಗಳು ಶೈಕ್ಷಣಿಕವಾಗಿ ಪ್ರತಿವರ್ಷ ಜೂನ್ನಲ್ಲಿ “ಅಕ್ಷರ ದಾಸೋಹ”ಕಾರ್ಯಕ್ರಮ ನಡೆಸಿಕೊಡುತ್ತಾರೆ.ಶ್ರೀಮಠದ ಪರಂಪರೆಯ ಗದ್ದುಗೆಗಳು ಹಲಗೇರಿ ಮಠ, ಮೂಡಲ ಮಠ ಹಾಗೂಕುರುಬಗೇರಿ ಮಠಗಳಲ್ಲಿವೆ ಎಂದು ಹೇಳಲಾಗಿದ್ದು ಇವುಗಳ ಅಭಿವೃದ್ಧಿ ಕೆಲಸಗಳು ನಡೆದಿವೆ.ಶ್ರೀಗಳು ಮಠದಲ್ಲಿ ಧಾರ್ಮಿಕ ಆಚರಣೆಗಳ ಜೊತೆಯಲ್ಲಿಯೇ ಸಾಮಾಜಿಕ, ಶೈಕ್ಷಣಿಕ ಹಾಗೂಧಾರ್ಮಿಕ ಚಿಂತನೆಯೊಂದಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದ್ದಾರೆ.

Swamiji

Swamiji Name :
ಶ್ರೀ ಮ.ನಿ.ಪ್ರ. ಗುರುಬಸವ ಸ್ವಾಮಿಗಳು
Date of Birth :
1979
Place :
ಉಪ್ಪಾರಗಟ್ಟೆ, ಹಗರಿಬೊಮ್ಮನಹಳ್ಳಿ ತಾ||
Pattadikara :
1-12-2000
Photo :

Programs

ಪ್ರತಿ ತಿಂಗಳು 1ನೇ ತಾರೀಖು "ಶರಣ ಸಂಗಮ" ಕಾರ್ಯಕ್ರಮ.
ಪ್ರತಿ ತಿಂಗಳು "ಮನೆಯಲ್ಲಿ ಮಹಾ ಮನೆ" ಬಸವ ಜಯಂತಿ ಆಚರಣೆ.
ಮಹಿಳಾ ದಿನಾಚರಣೆಯಂದು ಅಕ್ಕಮಹಾದೇವಿ ಜಯಂತಿ
ಪ್ರತಿ ವರ್ಷ ಜೂನ್ನಲ್ಲಿ "ಅಕ್ಷರ ದಾಸೋಹ" ಕಾರ್ಯಕ್ರಮ.
ಪ್ರತಿ ವರ್ಷ ನವೆಂಬರ್ 15ರಿಂದ ಡಿಸೆಂಬರ್ 1 ರವರೆಗೆ "ಶರಣರ ಚಿಂತನಾ ಗೋಷ್ಠಿ" ಕಾರ್ಯಕ್ರಮ.

Institutions

ಸಂಸ್ಕøತ ವೇದ ಪಾಠಶಾಲೆ.
ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢ ಶಾಲೆ.
ಶಿಕ್ಷಣ ಮಹಾವಿದ್ಯಾಲಯ.

Photos

Full Address Kannada

ಶ್ರೀ ಪುಟ್ಟಯ್ಯ ವಿರಕ್ತ ಮಠ,
ದೊಡ್ಡಪೇಟೆ ರಾಣೆಬೆನ್ನೂರು- 581 115
ರಾಣೆಬೆನ್ನೂರು ತಾ., ಹಾವೇರಿ ಜಿ.

Map

Near by Places

ಬಸ್ ಸ್ಟ್ಯಾಂಡ್ - 2 ಕಿ.ಮೀ.
ರೈಲ್ವೆ ಸ್ಟೇಷನ್ - 2 ಕಿ.ಮೀ.
ಹರಿಹರ - 25 ಕಿ.ಮೀ.
ಹಾವೇರಿ - 35 ಕಿ.ಮೀ.

Statistic

8 Views
0 Rating
0 Favorite
0 Share
error: Content is protected !!