ರಾಣೆಬೆನ್ನೂರು ತಾಲ್ಲೂಕು ಕೇಂದ್ರದಿಂದ 14 ಕಿ.ಮೀ. ದೂರದಲ್ಲಿರುವಮುದೇನೂರು ಗ್ರಾಮದ ಹೊರವಲಯದ ತುಂಗಭದ್ರಾ ನದಿ ದಡದಲ್ಲಿ ಪ್ರಾಚೀನಪರಂಪರೆಯ ಶ್ರೀ ಹಿರೇಮಠವು ಶ್ರೀ ಮಹಾಂತ ದೇಶಿಕೇಂದ್ರ ಶಿವಾಚಾರ್ಯರಿಂದ ಸ್ಥಾಪಿತಗೊಂಡಿದ್ದು ಈ ಭಾಗದ ಜನರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸುವಲ್ಲಿ ಯಶಸ್ವಿಯಾಗಿದೆ.ಶ್ರೀಮಠವು ಶ್ರೀಶೈಲ ಶಾಖಾಮಠವಾಗಿದ್ದು ಪುತ್ರವರ್ಗದ ಪರಂಪರೆಯಲ್ಲಿ ಬೆಳೆದುಬಂದಿದೆ. ಶ್ರೀಮಠವು ಪ್ರಾಚೀನ ಕಾಲದ್ದೆಂದು ಹೇಳಲಾದರೂ ಮಠದ ಇತಿಹಾಸದ ಬಗ್ಗೆನಿಖರವಾದ ಮಾಹಿತಿಗಳು ಲಭ್ಯವಿಲ್ಲದಿರುವುದು ಬೇಸರದ ಸಂಗತಿ, ಹಾಗೆಯೇ ಶ್ರೀಮಠದಗುರುಪರಂಪರೆಯ ಬಗ್ಗೆಯೂ ನಿಖರವಾದ ಮಾಹಿತಿ ಲಭ್ಯವಿಲ್ಲ.1940ರಲ್ಲಿ ಶ್ರೀಶೈಲ ಪೀಠದ ಪಟ್ಟಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಲಿಂ||ಶ್ರೀಶೈಲ ಜಗದ್ಗುರು ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಮೊದಲುಮುದೇನೂರು ಶ್ರೀ ಹಿರೇಮಠದ ಪಟ್ಟಾಧಿಕಾರಿಗಳಾಗಿದ್ದವರು. ಇಂತಹ ಮಹನ್ ಚೇತನವನ್ನು ದೇಶಕ್ಕೆ ಹಾಗೂ ಧಾರ್ಮಿಕ ಪರಂಪರೆಗೆ ನೀಡಿದ ಶ್ರೇಯ ಶ್ರೀ ಹಿರೇಮಠಕ್ಕೆ ಸಲ್ಲಬೇಕು.ಶ್ರೀಗಳು ಶ್ರೀಶೈಲ ಪೀಠಕ್ಕೆ ಪಟ್ಟ ಹೊಂದಿದ ನಂತರ ಕೆಲಕಾಲ ಖಾಲಿ ಉಳಿದಿದ್ದಮಠದಲ್ಲಿ ಅನೇಕ ಸ್ವಾಮಿಗಳು ಧಾರ್ಮಿಕ ಕಾರ್ಯಗಳನ್ನು ನಡೆಸಿಕೊಂಡು ಬಂದಿದ್ದಾರೆ.ಆದರೆ ಪಟ್ಟಾಧಿಕಾರಿಗಳನ್ನು ನೇಮಿಸುವ ಪ್ರಯತ್ನಗಳು ವಿಫಲಗೊಂಡಿದ್ದರಿಂದ ಶ್ರೀಶೈಲಜಗದ್ಗುರು ಶ್ರೀ ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಮನನೊಂದುಕೊಂಡಿದ್ದರು.ಈಗಿನ ಶ್ರೀಗಳಾದ ಶ್ರೀ ಮಹಾಂತ ರಾಜೇಂದ್ರ ಶಿವಾಚಾರ್ಯರು 1993ರಲ್ಲಿಪಟ್ಟಕ್ಕೆ ಬಂದಿದ್ದು ಅಧಿಕಾರ ವಹಿಸಿಕೊಂಡ ನಂತರ ಕಾಲೇಜು ಶಿಕ್ಷಣವನ್ನು ಮುಂದುವರೆಸಿಸ್ನಾತಕೋತ್ತರ ಪದವೀಧರರಾಗಿ ದ್ದಾರೆ. ಹಾಗೆಯೇ ತಮ್ಮ ಸರಳತೆಯಿಂದ ಭಕ್ತರಿಗೆಧಾರ್ಮಿಕ ಆಚರಣೆಗಳ ಮಹತ್ವವನ್ನು ತಿಳಿಸಿಕೊಡುತ್ತಾ ಬಹುಬೇಗನೆ ಪ್ರಸಿದ್ಧಿಗೆ ಬಂದಶ್ರೀಗಳು ಪ್ರಸ್ತುತ ಉಜ್ಜಯಿನಿ ಪೀಠದ ಪಟ್ಟಾಧಿಕಾರಿಗಳಾಗಿ ಶ್ರೀಮದ್ ಉಜ್ಜಯಿನಿ ಸದ್ಧರ್ಮಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಸಿದ್ದಲಿಂಗ ಶಿವಾಚಾರ್ಯಭಗವತ್ಪಾದಗಳವರು ಎಂದು ಅಭಿದಾನ ಪಡೆದು ಪಟ್ಟಕ್ಕೆ ಬಂದಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ಮಹಾಂತ ರಾಜೇಂದ್ರ ಶಿವಾಚಾರ್ಯ ಸ್ವಾಮಿಗಳು
Date of Birth :
1977
Place :
ಮುದೇನೂರು, ರಾಣೆಬೆನ್ನೂರು ತಾ||
Pattadikara :
18-11-1993
Photo :
Programs
ಪ್ರತಿ ಅಮವಾಸ್ಯೆಗೆ ವಿಶೇಷ ಪೂಜೆ.
ಪ್ರತಿ ಹಬ್ಬಗಳ ಆಚರಣೆ.
Photos
Full Address Kannada
ಶ್ರೀ ಹಿರೇಮಠ
ಮುದೇನೂರು - 581 123
ರಾಣೆಬೆನ್ನೂರು ತಾ., ಹಾವೇರಿ ಜಿ.