Shree Haluswami Matha

Shree Haluswami Matha Claimed

ಶ್ರೀ ಹಾಲುಸ್ವಾಮಿ ಮಠ

Average Reviews

Description

ಶ್ರೀ ಹಾಲಸ್ವಾಮಿ ಮಠ

ಕರ್ತೃ – ಶ್ರೀ ಷ.ಬ್ರ. ಹಾಲಮಹಾಸ್ವಾಮಿಗಳು

ರಾಣೆಬೆನ್ನೂರು ತಾಲ್ಲೂಕು ಕೇಂದ್ರದಿಂದ 15 ಕಿ.ಮೀ. ದೂರದಲ್ಲಿರುವಮಣಕೂರು ಗ್ರಾಮದಲ್ಲಿ ಶ್ರೀಶೈಲ ಪೀಠದ ಶಾಖಾಮಠವಾದ ಪುತ್ರವರ್ಗದ ಪರಂಪರೆಯಶ್ರೀ ಹಾಲಸ್ವಾಮಿ ಮಠವು ಅಸ್ತಿತ್ವದಲ್ಲಿದೆ. ಶ್ರೀಮಠವು ಗೋವಿನಕೋವಿಯ ಶ್ರೀಹಾಲಮಹಾಸ್ವಾಮಿಗಳಿಂದ ಸ್ಥಾಪಿತಗೊಂಡಿದೆ ಎಂದು ತಿಳಿದು ಬರುತ್ತದೆ.ಕತೃಗುರುಗಳಾದ ಶ್ರೀ ಹಾಲಮಹಾಸ್ವಾಮಿಗಳ ನಂತರದ ಪರಂಪರೆಯ ಬಗ್ಗೆಹಾಗೂ ಶ್ರೀ ಮಠದ ನಿಖರವಾದ ಇತಿಹಾಸದ ಬಗ್ಗೆ ಮಾಹಿತಿಗಳು ಅಸ್ಪಷ್ಟವಾಗಿವೆ. ಈಗಈ ಪರಂಪರೆಯ ಬಗ್ಗೆ ಶೋಧಿಸುವ ಅಗತ್ಯವಿದೆ ಎಂದು ಈಗಿನ ಶ್ರೀಗಳುಅಭಿಪ್ರಾಯಪಡುತ್ತಾರೆ ಹಾಗೂ ಆ ನಿಟ್ಟಿನಲ್ಲಿ ಕ್ರಿಯಾಶೀಲರಾಗಿದ್ದಾರೆ.ಶ್ರೀಮಠದ ಪರಂಪರೆಯಲ್ಲಿ ಕಾಣಸಿಗುವ ಬಹುಮುಖ್ಯ ಶ್ರೀಗಳೆಂದರೆ ಶ್ರೀಬಸವರಾಜ ಶಿವಾಚಾರ್ಯ ಸ್ವಾಮಿಗಳು. ಶ್ರೀಗಳು ಶಿವಪೂಜಾನಿಷ್ಠರಾಗಿದ್ದು ಸದಾಸಂಚಾರದಲ್ಲಿ ತಮ್ಮ ಆಧ್ಯಾತ್ಮ ಸಾಧನೆಯಿಂದ ಜನರಿಗೆ ಉಪದೇಶ ನೀಡುತ್ತಾ ಕೊನೆಯಲ್ಲಿಮಣಕೂರಿನಲ್ಲಿ ನೆಲೆನಿಂತರು. ಅನೇಕ ವರ್ಷಗಳ ಕಾಲ ಖಾಲಿ ಉಳಿದಿದ್ದ ಮಠವನ್ನುನವೀಕರಿಸಿಕೊಂಡು ದಾರ್ಮಿಕ ಆಚರಣೆಗಳನ್ನು ಜಾರಿಗೆ ತಂದು ಬಹುಬೇಗನೆ ಭಕ್ತರನ್ನುಮಠಕ್ಕೆ ಸೆಳೆದರು. ಇಂತಹ ಮಹಾಮಹಿಮರು ಇಟಗಿಯಲ್ಲಿ ಲಿಂಗೈಕ್ಯರಾದರು.ಶ್ರೀ ಬಸವರಾಜ ಸ್ವಾಮಿಗಳ ನಂತರ ಮತ್ತೊಮ್ಮೆ ಮಠ ಖಾಲಿ ಉಳಿಯಿತು.ಸುಮಾರು ದಶಕಗಳ ಕಾಲ ಖಾಲಿ ಉಳಿದಿದ್ದ ಮಠಕ್ಕೆ 1993ರ ಫೆಬ್ರವರಿ 15ರಂದು ಈಗಿನಶ್ರೀಗಳಾದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ಪಟ್ಟಾಧಿಕಾರಕ್ಕೆ ಬರುತ್ತಾರೆ. ಬಹುದಿನಗಳಿಂದ ಖಾಲಿ ಉಳಿದು ಕಟ್ಟಡವು ಶಿಥಿಲಗೊಂಡಿದ್ದರಿಂದ ಊರಿನ ಇನ್ನೊಂದು ಸ್ಥಳದಲ್ಲಿಕಟ್ಟಡವನ್ನು ಕಟ್ಟಿ ಹಾಗೆಯೇ ಮೂಲ ಕಟ್ಟಡವನ್ನೂ ನವೀಕರಿಸಿ ಅಭಿವೃದ್ಧಿ ಕಾರ್ಯಗಳನ್ನುಕೈಗೆತ್ತಿಕೊಂಡಿದ್ದಾರೆ.ಶ್ರೀ ಮಠದಲ್ಲಿ ಕಾರ್ತೀಕ ಮಾಸದ ಕಾರ್ತೀಕೋತ್ಸವ, ಶ್ರಾವಣ ಮಾಸದಲ್ಲಿಮಾಸವಿಡೀ ವಿಶೇಷ ಪೋಜಾ ಕಾರ್ಯಕ್ರಮಗಳು ನಡೆಯುತ್ತಿದ್ದು ಶ್ರೀಮಠದ ಜಾತ್ರೆಯುಭರತ ಹುಣ್ಣಿಮೆಗೆ ನಡೆಯುತ್ತಿದೆ.

Swamiji

Swamiji Name :
ಶ್ರೀ ಷ.ಬ್ರ. ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು
Date of Birth :
18-12-1965
Place :
ಮಣಕೂರು, ರಾಣೆಬೆನ್ನೂರು ತಾ||
Pattadikara :
15-2-1993
Photo :

Programs

ಪ್ರತಿ ಅಮವಾಸ್ಯೆಗೆ ರುದ್ರಾಭಿಷೇಕ.
ಶ್ರಾವಣ ಮಾಸದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು.
ಭರತ ಹುಣ್ಣಿಮೆಗೆ ಶ್ರೀಮಠದ ಜಾತ್ರೆ.
ಕಾರ್ತೀಕ ಮಾಸದಲ್ಲಿ ದೀಪೋತ್ಸವ.

Photos

Full Address Kannada

ಶ್ರೀ ಹಾಲುಸ್ವಾಮಿ ಮಠ
ಮಣಕೂರು - 581 208
ರಾಣೆಬೆನ್ನೂರು ತಾ., ಹಾವೇರಿ ಜಿ.

Map

Near by Places

ಇಟಗಿ - 4 ಕಿ.ಮೀ.
ಹಲಗೇರಿ - 8 ಕಿ.ಮೀ.
ರಾಣೆಬೆನ್ನೂರು - 15 ಕಿ.ಮೀ.
ಹಾವೇರಿ - 34 ಕಿ.ಮೀ

Statistic

13 Views
0 Rating
0 Favorite
0 Share
error: Content is protected !!