ರಾಣೇಬೆನ್ನೂರು ತಾಲ್ಲೂಕು ಕೇಂದ್ರದಿಂದ ಕೇವಲ 6 ಕಿ.ಮೀ. ದೂರದಲ್ಲಿರುವಗುಡ್ಡದ ಅನ್ವೇರಿಯಲ್ಲಿ ಸುಮಾರು 135 ವರ್ಷಗಳ ಹಿಂದೆ ಶ್ರೀ ಶಿವಯೋಗೀಶ್ವರಮಹಾಸ್ವಾಮಿಗಳಿಂದ ಸ್ಥಾಪಿತವಾದ ಶ್ರೀ ವಿರಕ್ತಮಠವು ಅಸ್ತಿತ್ವದಲ್ಲಿದ್ದು ಈ ಭಾಗದ ಜನರಲ್ಲಿಧಾರ್ಮಿಕ ಪ್ರಜ್ಞೆಯನ್ನು ಬೆಳೆಸುವಲ್ಲಿ ಯಶಸ್ವಿಯಾಗಿದೆ.ಶ್ರೀಮಠದ ಕತೃಗುರುಗಳಾದ ಶ್ರೀ ಶಿವಯೋಗೀಶ್ವರ ಮಹಾಸ್ವಾಮಿಗಳುಶಿವಪೂಜಾನಿಷ್ಠರಾಗಿದ್ದು ದೇಶ ಸಂಚಾರ ಮಾಡಿ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿ, ಪುಣ್ಯಪುರುಷರ ದರ್ಶನ ಪಡೆದು ಗುಡ್ಡದ ಆನ್ವೇರಿಯಲ್ಲಿ ನೆಲೆನಿಂತು ಶ್ರೀಮಠ ಸ್ಥಾಪಿಸಿದ್ದಾರೆ. ಕೆಲಸಮಯದಲ್ಲಿಯೇ ಶ್ರೀಗಳ ಅನುಷ್ಠಾನ ಬಲದಿಂದ ಶ್ರೀಮಠವು ಹೆಸರನ್ನು ಸಂಪಾದಿಸಿತು.ಹಾಗೆಯೇ ಶ್ರೀಗಳು ಮಠದ ಕಟ್ಟಡವನ್ನು ನಿರ್ಮಿಸಿ ಧಾರ್ಮಿಕ ಆಚರಣೆಗಳನ್ನು ನಡೆಸುತ್ತಾಜನಾನುರಾಗಿಯಾಗಿ ಮಠವನ್ನು ಮುನ್ನಡೆಸಿದ್ದರು.ಶ್ರೀ ಶಿವಯೋಗೀಶ್ವರರು ಲಿಂಗೈಕ್ಯರಾದ ನಂತರ ಶ್ರೀಮಠವು ಬಹುಕಾಲ ಖಾಲಿಉಳಿಯಿತು. ಇದನ್ನು ಮನಗಂಡ ಭಕ್ತರು 1989ರಲ್ಲಿ ಶ್ರೀ ಶಿವಯೋಗೀಶ್ವರ ಸ್ವಾಮಿಗಳನ್ನುಲಿಂಗನಾಯ್ಕನ ಹಳ್ಳಿಯ ಗುರುಗಳಾಗಿದ್ದ ಶ್ರೀ ಚನ್ನವೀರ ಸ್ವಾಮಿಗಳಿಂದ ಅನುಗ್ರಹ ಪಡೆದುಪಟ್ಟಕ್ಕೆ ತಂದರು. ಶ್ರೀಗಳು ಪಟ್ಟಾಧಿಕಾರ ಪಡೆದ ದಿನದಿಂದಲೂ ಹೆಚ್ಚು ಕ್ರಿಯಾಶೀಲರಾಗಿಮಠದ ಕಾರ್ಯಗಳನ್ನು ಮುನ್ನಡೆಸುತ್ತಾ ಬಂದಿದ್ದು ಹಳೆಯ ಕಟ್ಟಡವನ್ನು ನವೀಕರಿಸಿಜೊತೆಯಲ್ಲಿಯೇ ಕಲಾಭವನ, ದಾಸೋಹ ಮಂದಿರಗಳನ್ನು ನಿರ್ಮಿಸಿದ್ದಾರೆ.ಶ್ರೀಗಳು ಧರ್ಮನಿಷ್ಠರಾಗಿದ್ದು ಧಾರ್ಮಿಕ ಆಚರಣೆಗಳನ್ನು ನಡೆಸುವುದರೊಂದಿಗೆಪ್ರವಚನಕಾರರಾಗಿ ನಾಡಿನ ನಾನಾ ಭಾಗಗಳಲ್ಲಿ ಪುರಾಣ ಪ್ರವಚನಗಳನ್ನು ನಡೆಸಿಕೊಟ್ಟಿದ್ದಾರೆ. ಹಾಗೆಯೇ ಶಿವರಾತ್ರಿಗೆ ಮತ್ತು ಕಾರ್ತೀಕ ಮಾಸದಲ್ಲಿ ಶ್ರೀಗಳಿಂದ ಶ್ರೀಮಠದಲ್ಲಿಭಕ್ತರಿಗೆ ಧರ್ಮೋಪದೇಶ ಕಾರ್ಯಕ್ರಮವು ಜರುಗುತ್ತದೆ ಮತ್ತು ಬಸವಜಯಂತಿಯಲ್ಲಿಶ್ರೀಮಠದ ರಥೋತ್ಸವದೊಂದಿಗೆ ಸಾಮೂಹಿಕ ವಿವಾಹಗಳನ್ನು ಶ್ರೀಗಳು ನಡೆಸಿಕೊಡುತ್ತಾರೆ.ಶ್ರೀಗಳು ಈ ಎಲ್ಲಾ ಕಾರ್ಯಕ್ರಮಗಳಿಂದ ಹಾಗೂ ತಮ್ಮ ಪ್ರವಚನಗಳಿಂದ ಶ್ರೀಮಠದಭಕ್ತರನ್ನು ಸನ್ಮಾರ್ಗದತ್ತ ಮುನ್ನಡೆಸುತ್ತಿದ್ದಾರೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಶಿವಯೋಗೀಶ್ವರ ಸ್ವಾಮಿಗಳು
Date of Birth :
4-3-1963
Place :
ಮನ್ನೆರಾಳ, ಕುಷ್ಟಗಿ ತಾ||
Pattadikara :
11-5-1989
Photo :
Programs
ಪ್ರತಿ ಅಮವಾಸ್ಯೆಗೆ ವಿಶೇಷ ಪೂಜೆ.
ಶ್ರಾವಣ ಮಾಸದಲ್ಲಿ ವಿಶೇಷ ಪೂಜೆ.
ಬಸವ ಜಯಂತಿ ಆಚರಣೆ, ರಥೋತ್ಸವ, ಪ್ರವಚನ, ಶಿವದೀಕ್ಷೆ ಹಾಗೂ ಸಾಮೂಹಿಕ ವಿವಾಹಗಳು. ಕಾರ್ತೀಕ ಮಾಸದಲ್ಲಿ ದೀಪೋತ್ಸವ,
ಶ್ರೀ ಗುರುಗಳಿಂದ ಪ್ರವಚನ.
ಶಿವರಾತ್ರಿಗೆ ಜಾಗರಣೆ, ಲಿಂಗಪೂಜೆ, ಧರ್ಮೋಪದೇಶ ಕಾರ್ಯಕ್ರಮಗಳು.
Institutions
ಕಿರಿಯ / ಹಿರಿಯ ಪ್ರಾಥಮಿಕ ಶಾಲೆ
Photos
Full Address Kannada
ಶ್ರೀ ವಿರಕ್ತ ಮಠ, ಗುಡ್ಡದ ಆನ್ವೇರಿ
ದೇವರಗುಡ್ಡ ಪೋಸ್ಟ್ - 581 115
ರಾಣೆಬೆನ್ನೂರು ತಾ., ಹಾವೇರಿ ಜಿ.