Shree Odeyara Samsthana Matha

Shree Odeyara Samsthana Matha Claimed

ಶ್ರೀ ಒಡೆಯರ ಸಂಸ್ಥಾನ ಮಠ

Average Reviews

Description

ಶ್ರೀ ಒಡೆಯರ ಸಂಸ್ಥಾನ ಮಠ

ಕರ್ತೃ – ಪೂಜ್ಯ ಶ್ರೀ ಶಿವದೇವ ಮುನಿಗಳು 

ರಾಣೇಬೆನ್ನೂರು ತಾಲ್ಲೂಕು ಚೌಡಯ್ಯದಾನಪುರವು ಪುರಾತನ ಗ್ರಾಮವಾಗಿದ್ದುಈ ಗ್ರಾಮದಲ್ಲಿ ಸುಮಾರು 13ನೇ ಶತಮಾನದಲ್ಲೇ ಆರಂಭಗೊಂಡಿರಬಹುದಾದ ಶ್ರೀ ಕಾಶಿಶಾಖಾಮಠದ ಪುತ್ರವರ್ಗದ ಪರಂಪರೆಯ ಶ್ರೀ ಒಡೆಯರ ಸಂಸ್ಥಾನ ಮಠವು ಅಸ್ತಿತ್ವದಲ್ಲಿದೆ.ಓರಾಂಗಲ್ ಪ್ರದೇಶದಿಂದ ಚೌಡಯ್ಯ ದಾನಪುರಕ್ಕೆ 13ನೇ ಶತಮಾನದಲ್ಲಿದೇಶಸಂಚಾರಕ್ಕೆ ಬಂದ ಶ್ರೀ ಶಿವದೇವ ಮುನಿಗಳು ಇಲ್ಲಿನ ಪರಿಸರ ಹಾಗೂ ನೀರವತೆಗೆಮನಸೋತು ದೀರ್ಘಕಾಲ ಅನುಷ್ಠಾನಕ್ಕೆ ಕುಳಿತುಕೊಳ್ಳುತ್ತಾರೆ. ಆ ಸಮಯದಲ್ಲಿ ಇವರತಪೋನಿಷ್ಠತೆಗೆ ಬೆರಗಾದ ಗ್ರಾಮದ ಭಕ್ತರು ಶ್ರೀಗಳನ್ನು ಇಲ್ಲಿಯೇ ನೆಲೆಗೊಳ್ಳಬೇಕೆಂದುಕೋರಿ ಗುರುಗಳಿಗೆ ಮಠವನ್ನು ಕಟ್ಟಿಸಿಕೊಡುತ್ತಾರೆ. ಹಾಗೆಯೇ ಗುತ್ತಲದ ಅರಸರುಗುರುಗಳಿಗೆ ದತ್ತಿಕಾಣಿಕೆಗಳನ್ನು ಸಮರ್ಪಿಸಿ ಸಂಸ್ಥಾನ ಮಠವೆಂಬ ಮನ್ನಣೆ ನೀಡುತ್ತಾರೆ.ಶ್ರೀಗಳ ನಂತರ ಪರಂಪರೆಯಲ್ಲಿ ಶ್ರೀ ಗೋಮುನಿ ಶಿವಾಚಾರ್ಯ ಸ್ವಾಮಿಗಳುಪ್ರಮುಖರು. ಶ್ರೀಗಳು ಹೊನ್ನತ್ತಿಯ ಹೊನ್ನಮ್ಮಳಿಗೆ ಲಿಂಗಧಾರಣೆ ಮಾಡಿ ಸಂಸ್ಕಾರ ನೀಡಿಹೊನ್ನಮ್ಮ ದೇವಿಯಾಗಿ ರೂಪುಗೊಳ್ಳುವಂತೆ ಮಾಡಿದ್ದಾರೆ ಎಂದು ಭಕ್ತರು ಅಭಿಪ್ರಾಯಿಸುತ್ತಾರೆ. ನಂತರದ ಪರಂಪರೆಯ ಬಗ್ಗೆ ಮಾಹಿತಿಗಳ ಅಲಭ್ಯತೆಯಿಂದಾಗಿ ಶ್ರೀಮಠದನಿಖರವಾದ ಇತಿಹಾಸವನ್ನು ಗುರುತಿಸುವುದು ಕಷ್ಟಸಾಧ್ಯವಾಗಿದೆ.ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ. ವಿರೂಪಾಕ್ಷ ಶಿವಾಚಾರ್ಯ ಒಡೆಯರ್ರವರಿಂದಾಗಿ ಮಠ ಹೆಚ್ಚು ಪ್ರಚಲಿತತೆಗೆ ಬಂದಿದೆ. ಶ್ರೀಗಳು ಶಿವಪೂಜಾನಿಷ್ಠರಾಗಿದ್ದು ಮಠವನ್ನು ಧಾರ್ಮಿಕವಾಗಿ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿಪಡಿಸಿದ್ದಾರೆ. ಜೊತೆಯಲ್ಲಿಯೇಮಧ್ಯಪ್ರದೇಶದ ಇಂದೋರ್ನಲ್ಲಿರುವ ಶಾಖಾಮಠವನ್ನು ಅಭಿವೃದ್ಧಿಪಡಿಸಿ ಮುನ್ನಡೆಸಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಚಿತ್ರಶೇಖರ ಶಿವಾಚಾರ್ಯ ಒಡೆಯರು 1984ರನವೆಂಬರ್ 2005ರಲ್ಲಿ ಶ್ರೀ ಮಠಕ್ಕೆ ಪಟ್ಟಾಧಿಕಾರ ಹೊಂದಿ ಶ್ರೀಮಠವನ್ನು ಸಾಮಾಜಿಕವಾಗಿಗುರುತಿಸುವಂತೆ ಮಾಡಿದ್ದಾರೆ. ಶ್ರೀಗಳು ಶ್ರೀಮಠದಲ್ಲಿ ಕಟ್ಟಡದ ಅಭಿವೃದ್ಧಿ ಹಾಗೂಧಾರ್ಮಿಕ ಆಚರಣೆಗಳನ್ನು ನಡೆಸುತ್ತಿದ್ದಾರೆ. ಹಾಗೆಯೇ ವಿಶೇಷ ಸಂದರ್ಭಗಳಲ್ಲಿಅನ್ನದಾಸೋಹದ ವ್ಯವಸ್ಥೆಯಿರುತ್ತದೆ.

Swamiji

Swamiji Name :
ಶ್ರೀ ಷ.ಬ್ರ. ಚಿತ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
5-11-1984
Place :
ಹಿರೇಬೆಂಡಿಗೇರಿ, ಶಿಗ್ಗಾಂವ ತಾ||
Pattadikara :
6-7-1964
Photo :

Programs

ಪ್ರತಿ ಅಮವಾಸ್ಯೆಗೆ ವಿಶೇಷ ಪೂಜೆ.
ಶ್ರಾವಣ ಮಾಸದಲ್ಲಿ ಕೊನೆಯ ಸೋಮವಾರದ ಹಿಂದಿನ ಶುಕ್ರವಾರ ಹೊನ್ನತ್ತಿಯ ಶ್ರೀ ಹೊನ್ನಮ್ಮ ದೇವಿಯು ತವರುಮನೆಯಾದ ಶ್ರೀಮಠಕ್ಕೆ ಆಗಮಿಸುವುದು.
ಸಂಕ್ರಾಂತಿಗೆ ಲಿಂ. ಶ್ರೀ ವಿರೂಪಾಕ್ಷ ಒಡೆಯರು ಹಾಗೂ ಅಂಬಿಗರ ಚೌಡಯ್ಯನವರ ಸ್ಮರಣೋತ್ಸವ, ಕಾರ್ಯಕ್ರಮಗಳು.

Institutions

ಕಿರಿಯ ಪ್ರಾಥಮಿಕ ಶಾಲೆ.

Photos

Full Address Kannada

ಶ್ರೀ ಒಡೆಯರ ಸಂಸ್ಥಾನ ಮಠ
ಚೌಡಯ್ಯ ದಾನಪುರ - 581 115
ರಾಣೆಬೆನ್ನೂರು ತಾ||, ಹಾವೇರಿ ಜಿ||

Map

Near by Places

ಹೊನ್ನತ್ತಿ - 8 ಕಿ.ಮೀ.
ಗುತ್ತಲ - 9 ಕಿ.ಮೀ.
ಕುರುವತ್ತಿ - 13 ಕಿ.ಮೀ.
ರಾಣೆಬೆನ್ನೂರು - 25 ಕಿ.ಮೀ.

Statistic

13 Views
0 Rating
0 Favorite
0 Share
error: Content is protected !!