Shree Murugha Matha, Madluru

Shree Murugha Matha, Madluru Claimed

ಶ್ರೀ ಮುರುಘಾ ಮಠ, ಮಡ್ಲೂರು

Average Reviews

Description

ಶ್ರೀ ಮುರುಘಾ ಮಠ, ಮಡ್ಲೂರು

ಕರ್ತೃ – ಶ್ರೀ ಮ.ನಿ.ಪ್ರ. ಮುರುಘೇಂದ್ರ ಮಹಾಸ್ವಾಮಿಗಳು

ಹಿರೇಕೆರೂರು ತಾಲ್ಲೂಕು ಕೇಂದ್ರದಿಂದ ಸುಮಾರು 22 ಕಿ.ಮೀ. ದೂರದಲ್ಲಿರುವಮಡ್ಲೂರು ಗ್ರಾಮದಲ್ಲಿ ಶ್ರೀ ಮುರುಘೇಂದ್ರ ಮಹಾಸ್ವಾಮಿಗಳು ಸ್ಥಾಪಿಸಿದ ಶ್ರೀ ಮುರುಘಾಮಠವು ಅಸ್ತಿತ್ವದಲ್ಲಿದ್ದು ತನ್ನ ಧಾರ್ಮಿಕ ಆಚರಣೆಗಳ ಮೂಲಕ ಪ್ರಚಲಿತದಲ್ಲಿದೆ. ಆದರೆಶ್ರೀ ಮಠದ ಪರಂಪರೆಯ ಬಗ್ಗೆ ನಿಖರವಾದ ಮಾಹಿತಿಗಳು ಲಭ್ಯವಿಲ್ಲ.ಶ್ರೀ ಮುರುಘೇಂದ್ರ ಸ್ವಾಮಿಗಳ ನಂತರದ ಪರಂಪರೆಯಲ್ಲಿ ಹಿಂದಿನ ಶ್ರೀಗಳಾದಶ್ರೀ ಸದಾಶಿವ ಸ್ವಾಮಿಗಳ ಬಗ್ಗೆ ಮಾಹಿತಿ ಲಭ್ಯವಾಗುತ್ತದೆ. ಶ್ರೀ ಸದಾಶಿವ ಸ್ವಾಮಿಗಳುಶ್ರೀಮಠವನ್ನು ಧಾರ್ಮಿಕವಾಗಿ ಮುನ್ನಡಿಸುವುದರೊಂದಿಗೆ ಶ್ರೀಮಠಕ್ಕೆ ಭಕ್ತಾದಿಗಳನ್ನುಸೆಳೆದಿದ್ದಾರೆ. ಹಾಗೆಯೇ ಈ ಗ್ರಾಮದಲ್ಲಿ ತಮ್ಮ ಉಪದೇಶಗಳ ಮೂಲಕ ಧಾರ್ಮಿಕ ಪ್ರಜ್ಞೆಬೆಳೆಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂತಹ ಪೂಜ್ಯ ಶ್ರೀಗಳು 1985ರಲ್ಲಿ ಲಿಂಗೈಕ್ಯರಾದನಂತರ ಮಠ ಕೆಲ ಕಾಲ ಖಾಲಿ ಉಳಿಯುತ್ತದೆ.ಈಗಿನ ಶ್ರೀಗಳಾದ ಶ್ರೀ ಮುರುಘರಾಜೇಂದ್ರ ಸ್ವಾಮಿಗಳು ಮೂಲ ಚಿಂಚೋಳಿತಾಲ್ಲೂಕು ಸುಲೇಪೇಟೆಯವರಾಗಿದ್ದು ಹಿರಿಯ ಶ್ರೀಗಳು ಲಿಂಗೈಕ್ಯರಾದ ನಂತರ 1989ರ ಮೇ16ರಲ್ಲಿ ಶ್ರೀಮಠದ ಅಧಿಕಾರವನ್ನು ವಹಿಸಿಕೊಂಡಿದ್ದಾರೆ. ಶ್ರೀಗಳು ಹಾವೇರಿಯ ಸಿಂಧಗಿಮಠದ ಶ್ರೀ ಕುಮಾರೇಶ್ವರ ಧಾರ್ಮಿಕ ಪಾಠಶಾಲೆಯಲ್ಲಿ ಅಧ್ಯಯನ ಮಾಡಿದ್ದಾರೆ.ಶ್ರೀಗಳು ಅಧಿಕಾರ ವಹಿಸಿಕೊಂಡ ನಂತರ ಮಠವನ್ನು ಸರ್ವಾಂಗೀಣವಾಗಿಅಭಿವೃದ್ಧಿ ಮಾಡುವತ್ತ ಗಮನ ಕೊಟ್ಟು ಮಠದ ಕರ್ತೃ ಗದ್ದುಗೆ ಹಾಗೂ ಶ್ರೀ ಸದಾಸಿವಸ್ವಾಮಿಗಳ ತೋರುಗದ್ದುಗೆ ನಿರ್ಮಿಸಿ ಮಂಟಪ ನಿರ್ಮಿಸಿದ್ದಾರೆ. ಹಾಗೂ ದಿನನಿತ್ಯಧಾರ್ಮಿಕ ಆಚರಣೆಗಳನ್ನು ನಡೆಸುತ್ತಾ ಬಂದಿದ್ದಾರೆ.ಶ್ರೀಗಳು ಪ್ರಖರ ಧಾರ್ಮಿಕ ಚಿಂತಕರಾಗಿದ್ದು ಶ್ರೀಮಠದಲ್ಲಿ ಭರತ ಹುಣ್ಣಿಮೆಯಿಂದ ಶಿವರಾತ್ರಿ ಅಮವಾಸ್ಯೆಯವರೆಗೆ ಶಿವಾನುಭವ ಗೋಷ್ಠಿಯನ್ನು ಆಯೋಜಿಸುತ್ತಾರೆ.ಹಾಗೆಯೇ ಭಕ್ತರಿಗೆ ಧಾರ್ಮಿಕ ಆಚರಣೆಗಳ ಮಹತ್ವವನ್ನು ತಿಳಿಸಿಕೊಡುತ್ತಾರೆ. ಶ್ರೀಗಳುಕಾಯಕಯೋಗಿಗಳಾಗಿದ್ದು ಮಠದ ಜಮೀನನ್ನು ಅಭಿವೃದ್ಧಿಪಡಿಸಿ ಶ್ರೀಮಠಕ್ಕೆ ಆರ್ಥಿಕವಾಗಿನೆರವಾಗುವಂತೆ ಮಾಡಿದ್ದಾರೆ.

Swamiji

Swamiji Name :
ಶ್ರೀ ಮ.ನಿ.ಪ್ರ. ಮುರುಘರಾಜೇಂದ್ರ ಸ್ವಾಮಿಗಳು
Date of Birth :
11-10-1969
Place :
ಸುಲೇಪೇಟೆ, ಚಿಂಚೋಳಿ ತಾ||
Pattadikara :
16-5-1989
Photo :

Programs

ಪ್ರತಿ ಅಮವಾಸ್ಯೆಗೆ ವಿಶೇಷ ಪೂಜೆ ಹಾಗೂ ದಾಸೋಹ.
ಶ್ರಾವಣ ಮಾಸದಲ್ಲಿ ವಿಶೇಷ ಪೂಜೆ.
ಭಾರತ ಹುಣ್ಣಿಮೆಯಿಂದ ಶಿವರಾತ್ರಿ ಅಮವಾಸ್ಯೆವರೆಗೆ "ಶಿವಾನುಭವ ಗೋಷ್ಠಿ".

Institutions

ಕಿರಿಯ ಪ್ರಾಥಮಿಕ ಶಾಲೆ

Photos

Full Address Kannada

ಶ್ರೀ ಮುರುಘಾ ಮಠ
ಮಡ್ಲೂರು - 581 120
ಹಿರೇಕೆರೂರು ತಾ., ಹಾವೇರಿ ಜಿ.

Map

Near by Places

ಚಿಕ್ಕೇರೂರು - 6 ಕಿ.ಮೀ.
ಹಂಸಭಾವಿ - 8 ಕಿ.ಮೀ.
ಹಿರೇಕೆರೂರು - 22 ಕಿ.ಮೀ.
ಹಾವೇರಿ - 30 ಕಿ.ಮೀ.

Statistic

16 Views
0 Rating
0 Favorite
0 Share
error: Content is protected !!