ಹಾವೇರಿ ಜಿಲ್ಲೆ ಹಿರೇಕೆರೂರು ತಾಲ್ಲೂಕಿನ ಚಿಕ್ಕೇರೂರು ಗ್ರಾಮವು ತಾಲ್ಲೂಕುಕೇಂದ್ರದಿಂದ ಸುಮಾರು 18 ಕಿ.ಮೀ ದೂರದಲ್ಲಿದ್ದು ಈ ಭಾಗದ ಪ್ರಮುಖ ವ್ಯಾಪಾರಿಕೇಂದ್ರವಾಗಿದೆ. ಇಲ್ಲಿ ಪುರಾತನ ಕಾಲದ್ದೆಂದು ಹೇಳಲಾದ ಶ್ರೀ ವಿರಕ್ತ ಮಠವು ಪೂಜ್ಯ ಶ್ರೀಕರ್ಪೂರ ಸ್ವಾಮಿಗಳಿಂದ ಸ್ಥಾಪಿತಗೊಂಡಿದ್ದು ಧಾರ್ಮಿಕ ಹಾಗೂ ಸಾಮಾಜಿಕಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ.ಶ್ರೀ ವಿರಕ್ತ ಮಠವು ಪುರಾತನ ಕಾಲದ್ದೆಂದು ಹೇಳಲಾದರೂ ಅದರ ಇತಿಹಾಸದಬಗ್ಗೆ ಹಾಗೂ ಪರಂಪರೆಯ ಬಗ್ಗೆ ನಿಖರವಾದ ಮಾಹಿತಿಗಳು ಲಭ್ಯವಿಲ್ಲ. ಶ್ರೀಮಠದಲ್ಲಿಪುರಾತನವಾದ ಗದ್ದುಗೆ ಇದ್ದು ಅದು ಮಠದ ಕರ್ತೃ ಶ್ರೀ ಕರ್ಪೂರ ಸ್ವಾಮಿಗಳದ್ದೆಂದುಹೇಳಲಾಗುತ್ತದೆ. ಆದರೆ ನಂತರದ ಗುರುಗಳ ಬಗ್ಗೆ ತಿಳಿದು ಬರುವುದಿಲ್ಲ.ಇಂತಹ ಪುರಾತನ ಹಿನ್ನೆಲೆಯುಳ್ಳ ಶ್ರೀಮಠಕ್ಕೆ ಶ್ರೀ ಚಂದ್ರಶೇಖರಮಹಾಸ್ವಾಮಿಗಳು 1971ರಲ್ಲಿ ಅಧಿಕಾರ ವಹಿಸಿಕೊಳ್ಳುತ್ತಾರೆ. ಶ್ರೀಗಳು ಮೂಲತಃಹಾವೇರಿಯಲ್ಲಿ ಶ್ರೀ ಸಿಂಧಗಿ ಪಟ್ಟಾಧ್ಯಕ್ಷರು ಸ್ಥಾಪಿಸಿರುವ ಕುಮಾರೇಶ್ವರ ಧಾರ್ಮಿಕಪಾಠಶಾಲೆಯಲ್ಲಿ ಅಭ್ಯಸಿಸಿ ಪೂಜ್ಯ ಶ್ರೀ ಸಿಂಧಗಿ ಪಟ್ಟಾದ್ಯಕ್ಷರ ಸೇವೆಯನ್ನುಮಾಡಿಕೊಂಡಿದ್ದವರು. ಇಂತಹ ಪೂಜ್ಯರನ್ನು ಕಂಡ ಚಿಕ್ಕೇರೂರಿನ ಭಕ್ತರು ಶತಮಾನದಿಂದಖಾಲಿ ಉಳಿದಿದ್ದ ಮಠಕ್ಕೆ ಅಧಿಕಾರಗೊಳ್ಳಬೇಕೆಂದು ಶ್ರೀಗಳನ್ನು ಒಪ್ಪಿಸಿ ಕರೆತಂದರು.ಶ್ರೀಮಠವು ಶತಮಾನಗಳ ಕಾಲ ಖಾಲಿ ಉಳಿದಿದ್ದರಿಂದ ಜೀರ್ಣಾವಸ್ಥೆಯಲ್ಲಿದ್ದುಶ್ರೀಗಳು ಅಧಿಕಾರ ವಹಿಸಿಕೊಂಡ ನಂತರ ಶ್ರೀಮಠದ ಕಟ್ಟಡವನ್ನು ಭಕ್ತರ ಸಹಕಾರದೊಂದಿಗೆನಿರ್ಮಿಸಿ, ಧಾರ್ಮಿಕ ಹಾಗೂ ಸಾಂಸ್ಕøತಿಕ ಚಟುವಟಿಕೆಗಳ ತಾಣವಾಗುವಂತೆ ಮಾಡಿದ್ದಾರೆ.ಹಾಗೆಯೇ ಕರ್ತೃ ಗುರುಗಳ ಗದ್ದುಗೆಯನ್ನು ನವೀಕರಿಸಿ ಪೂಜೆ ಮಾಡುತ್ತಿದ್ದಾರೆ.ಶ್ರೀಮಠದಲ್ಲಿ ನಿತ್ಯ ಧಾರ್ಮಿಕ ಆಚರಣೆಗಳ ಜೊತೆಯಲ್ಲಿ ಹಬ್ಬ ಹರಿದಿನಗಳಲ್ಲಿವಿಶೇಷ ಪೂಜೆ ಹಾಗೂ ಪುರಾಣ ಪ್ರವಚನಗಳ ವ್ಯವಸ್ಥೆಯಾಗಿರುತ್ತದೆ. ಶ್ರೀಗಳು ಭಕ್ತರಿಗೆವೀರಶೈವ ಧರ್ಮಾಚರಣೆಗಳನ್ನು ತಿಳಿಸಿಕೊಡುವ ಮೂಲಕ ಈ ಭಾಗದಲ್ಲಿ ವೀರಶೈವಧರ್ಮವು ಪ್ರಸರಣಗೊಳ್ಳುವಂತೆ ಮಾಡಿದ್ದಾರೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಚಂದ್ರಶೇಖರ ಮಹಾಸ್ವಾಮಿಗಳು
Place :
ಚಿಕ್ಕಮಲ್ಲೂರು, ಶಿಗ್ಗಾಂವ ತಾ||
Pattadikara :
31-1-1971
Photo :
Programs
ಪ್ರತಿ ಅಮವಾಸ್ಯೆಗೆ ವಿಶೇಷ ಪೂಜೆ ಮತ್ತು ದರ್ಶನ.
ಶ್ರಾವಣ ಮತ್ತು ಕಾರ್ತೀಕ ಮಾಸದಲ್ಲಿ ನಿತ್ಯ ವಿಶೇಷ ಪೂಜೆ, ಕಾರ್ಯಕ್ರಮ.
ಶಿವರಾತ್ರಿ ಮತ್ತು ಬಸವಜಯಂತಿಗಳಲ್ಲಿ ವಿಶೇಷ ಪೂಜೆ.