ಹಾವೇರಿಯಿಂದ 30 ಕಿ.ಮೀ. ದೂರದಲ್ಲಿರುವ ನೆಗಳೂರು ಗ್ರಾಮದಮಧ್ಯಭಾಗದಲ್ಲಿ ಶ್ರೀ ಸಂಸ್ಥಾನ ಹಿರೇಮಠವು 12ನೇ ಶತಮಾನದ ಕೊನೆಯಲ್ಲಿ ಶ್ರೀಗುರುಶಾಂತ ಶಿವಾಚಾರ್ಯ ಸ್ವಾಮಿಗಳಿಂದ ಪ್ರಾರಂಭವಾಯಿತು ಎಂದು ಹೇಳಲಾಗಿದೆ.ಶ್ರೀಮಠವು ರಂಭಾಪುರಿ ಶಾಖಾಮಠವಾಗಿದ್ದು 850 ವರ್ಷಗಳ ಇತಿಹಾಸ ಇದೆಎಂದಾದರೂ ಪೂರ್ಣ ಇತಿಹಾಸ ಲಭ್ಯವಿಲ್ಲ.ಕರ್ತೃಗುರುಗಳಾದ ಶ್ರೀ ಗುರುಶಾಂತ ಶಿವಾಚಾರ್ಯ ಸ್ವಾಮಿಗಳು ಬಿಜಾಪುರದಕಡೆಯಿಂದ ಲೋಕಸಂಚಾರಕ್ಕೆ ಬಂದು ನೆಗಳೂರು ಸಮೀಪದ ಕಾಡಿನಲ್ಲಿ ಅನುಷ್ಠಾನಗೊಂಡಿದ್ದರು. ಈ ಸಮಯದಲ್ಲಿ ಪೇಶ್ವೆಯವರ ಹಾವಳಿಯಿಂದ ಹಾವನೂರಿನ ಒಂದನೆಯಹನುಮಂತ ದೇಸಾಯಿಗೆ ರಕ್ಷಣೆ ಒದಗಿಸಿದರು. ಇದರಿಂದ ಸಂತೃಪ್ತನಾಗಿದ್ದ ಹನುಮಂತದೇಸಾಯಿಯು ಶ್ರೀಮಠಕ್ಕೆ ಜಮೀನನ್ನು ದಾನವಾಗಿ ನೀಡಿ ಮಠದ ಕಟ್ಟಡ ನಿರ್ಮಾಣಕ್ಕೆಕಾರಣರಾಗಿದ್ದರು ಎಂದು ತಿಳಿದು ಬರುತ್ತದೆ.ಶ್ರೀಮಠದ ಗುರು ಪರಂಪರೆಯಲ್ಲಿ 37 ಜನ ಸ್ವಾಮಿಗಳು ಅಧಿಕಾರಕ್ಕೆಬಂದಿದ್ದಾರೆಂದು ಹೇಳಲಾದರೂ ಅವರ ಬಗ್ಗೆ ನಿಖರ ಮಾಹಿತಿಗಳು ಲಭ್ಯವಿಲ್ಲ. ಶ್ರೀಮಠದಗುರುಗಳೆಲ್ಲರೂ ಲೋಕಸಂಚಾರಿಗಳಾಗಿದ್ದು, ಹೋದಕಡೆಗೆಲ್ಲ ಶಾಖಾಮಠ ಸ್ಥಾಪಿಸಿ ಅಲ್ಲೇಲಿಂಗೈಕ್ಯರಾಗಿದ್ದಾರೆ ಎಂದು ಹೇಳಲಾಗಿದೆ. ಶ್ರೀಮಠದ ಹಿಂದಿನ ಸ್ವಾಮಿಗಳಾದ ಶ್ರೀಶಿವಾನಂದ ಶಿವಾಚಾರ್ಯ ಸ್ವಾಮಿಗಳು 1962ರಲ್ಲಿ ಪಟ್ಟಕ್ಕೆ ಬಂದು ಶ್ರೀಮಠವನ್ನುಆರ್ಥಿಕವಾಗಿ ಸದೃಢವಾಗಿರುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.ಹಿಂದಿನ ಶ್ರೀಗಳಾದ ಶ್ರೀ ಜೋಗೇಶ್ವರ ಸ್ವಾಮಿಗಳು ಮತ್ತು ಶ್ರೀ ಶಿವಯೋಗಿಸ್ವಾಮಿಗಳ ಕಾಲದಲ್ಲಿ ಮಠದ ಕಟ್ಟಡವು ಸವಿಸ್ತಾರವಾಗಿ ರೂಪುಗೊಂಡಿದೆ. ಈಗಿನ ಶ್ರೀಗಳುಅದರ ಜೊತೆಯಲ್ಲಿಯೇ ಶಾಖಾಮಠಗಳ ಅಭಿವೃದ್ಧಿ ಕಡೆಗೂ ಗಮನ ಹರಿಸಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಗುರುಶಾಂತ ಸ್ವಾಮಿಗಳು 2007ರಲ್ಲಿ ಪಟ್ಟಕ್ಕೆ ಬಂದುಮಠವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಹಾಗೆಯೇ ಮಠಕ್ಕೆ ಅಧಿಕ ಸಂಖ್ಯೆಯಲ್ಲಿಭಕ್ತರನ್ನು ತಮ್ಮ ಧಾರ್ಮಿಕ ಆಚರಣೆಗಳ ಮೂಲಕ ಸೆಳೆಯುತ್ತಿದ್ದಾರೆ.
Swamiji
Swamiji Name :
ಪೂಜ್ಯ ಶ್ರೀ ಷ.ಬ್ರ. ಗುರುಶಾಂತ ಶಿವಾಚಾರ್ಯ ಸ್ವಾಮಿಗಳು
Date of Birth :
14-6-1991
Place :
ನೆಗಳೂರು, ಹಾವೇರಿ ತಾ||
Pattadikara :
9-10-2007
Photo :
Programs
ಪ್ರತಿ ಅಮವಾಸ್ಯೆ ಶಿವಾನುಭವ ಗೋಷ್ಠಿ.
ಶ್ರೀ ರೇಣುಕಾಚಾರ್ಯ ಜಯಂತಿ ಆಚರಣೆ ಶ್ರಾವಣ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ. ಭಾದ್ರಪದ ದಶಮಿಯಲ್ಲಿ ಹುಂಬಲಿ ಕೊಟ್ಟ ದಿನ ಆಚರಣೆ.
ಕಾರ್ತೀಕ ಮಾಸದಲ್ಲಿ ದೀಪೋತ್ಸವ.
Institutions
ಸಂಸ್ಕøತ ವೇದ ಪಾಠಶಾಲೆ
Photos
Full Address Kannada
ಶ್ರೀ ಸಂಸ್ಥಾನ ಹಿರೇಮಠ
ನೆಗಳೂರು - 581 213
ಹಾವೇರಿ (ತಾ.) (ಜಿ.)